For Quick Alerts
  ALLOW NOTIFICATIONS  
  For Daily Alerts

  ಜರ್ನಲಿಸ್ಟ್ ಕೇಳಿದ ಪ್ರಶ್ನೆಗೆ ಸಿಟ್ಟಿಗೆದ್ದ ವಿದ್ಯಾ ಬಾಲನ್.! ಆ ಪ್ರಶ್ನೆ ಏನು?

  By Bharath Kumar
  |
  ರಿಪೋರ್ಟರ್ ಕೇಳಿದ ಪ್ರಶ್ನೆಗೆ ವಿದ್ಯಾ ಬಾಲನ್ ಫುಲ್ ಗರಂ | FIlmibeat Kannada

  ಬಾಲಿವುಡ್ ನಟ-ನಟಿಯರು ವರದಿಗಾರರ ಮೇಲೆ ಕೋಪಗೊಳ್ಳುವುದು ಸಾಮಾನ್ಯ. ಕೆಲವೊಮ್ಮ ರಿಪೋರ್ಟರ್ ಗಳು ಕೇಳುವ ಪ್ರಶ್ನೆಗಳು ಹಾಗೆ, ಅವರ ತಾಳ್ಮೆಯನ್ನ ಪರೀಕ್ಷಿಸುವಂತಿರುತ್ತೆ. ಇದೀಗ, ಬಾಲಿವುಡ್ ನಟಿ ವಿದ್ಯಾ ಬಾಲನ್ ಜರ್ನಲಿಸ್ಟ್ ಒಬ್ಬರು ಕೇಳಿದ ಪ್ರಶ್ನೆಗೆ ಸಿಟ್ಟಿಗೆದ್ದು ಉತ್ತರ ಕೊಟ್ಟಿರುವ ಘಟನೆ ನಡೆದಿದೆ.

  ವಿದ್ಯಾ ಬಾಲನ್ ಅಭಿನಯದ 'ತುಮಾರಿ ಸುಲು' ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದ ಪ್ರಚಾರದಲ್ಲಿ ನಟಿ ಭಾಗಿಯಾಗಿದ್ದರು. ಈ ವೇಳೆ ವರದಿಗಾರರೊಬ್ಬರು ವಿದ್ಯಾ ಬಾಲನ್ ಅವರಿಗೆ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಪ್ರಶ್ನಿಸಿದ್ದಾರೆ. ಇದು ನಟಿಗೆ ಮುಜುಗರ ಉಂಟು ಮಾಡಿದ್ದಲ್ಲದೇ ಪಿತ್ತ ನೆತ್ತಿಗೇರಿಸಿದೆ. ನಂತರ ಸಮಾಧಾನವಾಗಿ ಉತ್ತರಿಸಿದ್ದಾರೆ.

  ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ: ವಿರೋಧ ವ್ಯಕ್ತಪಡಿಸಿದ ಬಾಲಿವುಡ್.!

  ಅಂದ್ಹಾಗೆ, ಆ ಜರ್ನಲಿಸ್ಟ್ ಕೇಳಿದ ಪ್ರಶ್ನೆ, ವಿದ್ಯಾ ಬಾಲನ್ ಅವರ ತೂಕಕ್ಕೆ ಸಂಬಂಧಿಸಿದ್ದು. ವಿದ್ಯಾ ಬಾಲನ್ ಮತ್ತು ವರದಿಗಾರನ ಸಂಭಾಷಣೆ ಹೇಗಿತ್ತು ಎಂದು ಅವರ ಮಾತಿನಲ್ಲೇ ನೀಡಲಾಗಿದೆ ಓದಿ....

  ಡಿಸೆಂಬರ್‌ನಲ್ಲಿ ಬಿಗ್‌ಬಿ '102 ನಾಟ್ ಔಟ್'ಗೆ ವಿದ್ಯಾಬಾಲನ್ ಚಿತ್ರ ಸವಾಲ್

  ವರದಿಗಾರ: ಮಹಿಳಾ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನೀವು ಇನ್ಮುಂದೆಯೂ ಇಂಥಹ ಚಿತ್ರಗಳಲ್ಲಿಯೇ ನಟಿಸ್ತೀರಾ? ಇಲ್ಲ ತೂಕ ಇಳಿಸಿಕೊಳ್ತಿರಾ.?

  ವಿದ್ಯಾ ಬಾಲನ್: ಮಹಿಳಾ ಪ್ರಧಾನ ಚಿತ್ರಕ್ಕೂ ತೂಕ ಇಳಿಸಿಕೊಳ್ಳುವುದಕ್ಕು ಏನ್ ಸಂಬಂಧ?

  ವರದಿಗಾರ: ಅಂದ್ರೆ, ನೀವು ಮುಂದೆ ಗ್ಲಾಮರ್ ಚಿತ್ರ ಮಾಡಲು ತೂಕ ಇಳಿಸಿಕೊಳ್ತೀರಾ ಅಂತ?

  ವಿದ್ಯಾ ಬಾಲನ್: ನಾನು ಮಾಡುತ್ತಿರುವ ಪಾತ್ರ ನನಗೆ ಖುಷಿ ನೀಡಿದೆ. ನಿಮ್ಮಂತ ಜನರು ನಿಮ್ಮ ದೃಷ್ಟಿಕೋನ ಬದಲಾಯಿಸಿಕೊಂಡರೇ ಒಳ್ಳೆಯದು.

  ಹೀಗೆಂದು ಹೇಳುವ ಮೂಲಕ ನಟಿ ವಿದ್ಯಾ ಬಾಲನ್ ಪರೋಕ್ಷವಾಗಿ ವರದಿಗಾರನಿಗೆ ಟಾಂಗ್ ಕೊಟ್ಟಿದ್ದಾರೆ.

  English summary
  When a reporter asked Vidya Balan if she plans to lose weight, the actress said, that people like him should lose that mindset.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X