»   » ವಿದ್ಯಾ ಬಾಲನ್ ಈಗ ಶ್ರೀಮತಿ ಸಿದ್ಧಾರ್ಥ್ ರಾಯ್

ವಿದ್ಯಾ ಬಾಲನ್ ಈಗ ಶ್ರೀಮತಿ ಸಿದ್ಧಾರ್ಥ್ ರಾಯ್

Posted By:
Subscribe to Filmibeat Kannada

ಬಾಲಿವುಡ್ ತಾರೆ ಊ ಲಾ ಲಾ ಬೆಡಗಿ ವಿದ್ಯಾ ಬಾಲನ್ ಶುಕ್ರವಾರ (ಡಿ.14) ಗೃಹಸ್ಥಾಶ್ರಮಕ್ಕೆ ಅಡಿಯಿಟ್ಟರು. ಯುಟಿವಿ ಸಿಇಓ ಸಿದ್ಧಾರ್ಥ್ ರಾಯ್ ಕಪೂರ್ ಅವರನ್ನು ಕೈಹಿಡಿಯುವ ಮೂಲಕ ವಿದ್ಯಾ ದಾಂಪತ್ಯ ಜೀವನ ಆರಂಭವಾಗಿದೆ.

ಇವರಿಬ್ಬರ ಮದುವೆ ಶುಕ್ರವಾರ ಮುಂಜಾನೆ ಶುಭಮುಹೂರ್ತದಲ್ಲಿ ನೆರವೇರಿತು. ದಕ್ಷಿಣ ಹಾಗೂ ಪಂಜಾಬಿ ಸಂಪ್ರದಾಯದ ಪ್ರಕಾರ ನಡೆದ ಮದುವೆಗೆ ಕೇವಲ ಆಪ್ತರಷ್ಟೇ ಸಾಕ್ಷಿಯಾದರು. ಕಳೆದ ಎರಡು ದಿನಗಳಿಂದ ಸಂಗೀತ್ ಹಾಗೂ ಮೆಹಂದಿ ಸಂಭ್ರಮಗಳಲ್ಲಿ ವಿದ್ಯಾ ಬಾಲನ್ ನವವಧುವಾಗಿ ಕಂಗೊಳಿಸುತ್ತಿದ್ದರು.


ಶುಕ್ರವಾರ ಬೆಳಗಿನ ಜಾವ 4.45ಕ್ಕೆ ಇವರಿಬ್ಬರ ಮದುವೆ ನೆರವೇರಿದೆ. ಮುಂಬೈನ ಚೆಂಬೂರು ಪ್ರದೇಶದ ಶ್ರೀ ಸುಬ್ರಹ್ಮಣ್ಯ ಸಮಾಜ್ ಆಲಯದಲ್ಲಿ ಇವರಿಬ್ಬರು ಸರಳವಾಗಿ ಮದುವೆಯಾಗಿದ್ದಾರೆ. ದಕ್ಷಿಣ ಹಾಗೂ ಪಂಜಾಬಿ ಸಂಪ್ರದಾಯದಂತೆ ಮದುವೆ ನಡೆದಿದೆ. ಚೆನ್ನೈನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ಇನ್ನು ಸಿದ್ಧಾರ್ಥ್ ಬಗ್ಗೆ ಹೇಳಬೇಕೆಂದರೆ ಇವರಿಗೆ ಈಗಾಗಲೆ ಎರಡು ಮದುವೆಯಾಗಿದೆ. ಮೊದಲ ಪತ್ನಿ ಈತನ ಬಹುಕಾಲದ ಗೆಳತಿ. ಎರಡನೆಯವರು ಟಿವಿ ನಿರ್ಮಾಪಕಿ. ಎರಡನೆ ಪತ್ನಿಗೆ ಇನ್ನೂ ವಿಚ್ಚೇದನ ನೀಡಿಲ್ಲ ಎನ್ನಲಾಗಿದೆ. ಅದೇನು ಕಥೆನೋ ಏನೋ ಒಟ್ಟಿನಲ್ಲಿ ವಿದ್ಯಾರನ್ನು ಚೆನ್ನಾಗಿ ನೋಡಿಕೊಂಡರೆ ಅಷ್ಟೇ ಸಾಕು ಎಂಬುದು ಆಕೆಯ ಅಭಿಮಾನಿಗಳ ಹಾರೈಕೆ. (ಏಜೆನ್ಸೀಸ್)

English summary
Bollywood actor Vidya Balan and Siddharth Roy Kapur tied the nuptial knot Friday (14th Dec) morning at around 4.45am. The ceremony took place at Sri Subramaniam temple in Chembur, a suburb in Mumbai.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada