For Quick Alerts
  ALLOW NOTIFICATIONS  
  For Daily Alerts

  ಚಿತ್ರ ನಿರ್ದೇಶನಕ್ಕೆ ಸ್ಕೆಚ್ ಹಾಕಿರುವ ವಿದ್ಯಾ ಬಾಲನ್

  |

  ನಟಿ ವಿದ್ಯಾ ಬಾಲನ್ ಈಗ ಬಾಲಿವುಡ್ ಹಾಟ್ ಸೆನ್ಸೇಷನ್. ಅವರು ನಿಂತರೂ ಕುಂತರೂ ಸುದ್ದಿಯೇ ಎಂಬುದು ಎಲ್ಲರಿಗೂ ಗೊತ್ತು. ಆದರೆ ಸುಮ್ಮನೆ ಕುಂತು ನಿಂತು ಸುದ್ದಿ ಮಾಡುವ ಜಾಯಮಾನದವರಲ್ಲ ವಿದ್ಯಾ ಬಾಲನ್. ಅವರು ಮಾಡಿದ ಕೆಲಸದ ಮೂಲಕವೇ ಸುದ್ದಿಯಾಗುವವರು. ನಟಿಸಿದ ಸಿನಿಮಾಗಳ ಮೂಲಕ ಎಲ್ಲರ ಗಮನಸೆಳೆಯುವವರು.

  ಹೌದು, ವಿದ್ಯಾ ಬಾಲ್ ಅಸಾಮಾನ್ಯ ನಟಿ. ನಟಿ ಸಿಲ್ಕ್ ಸ್ಮಿತಾರ ನೈಜಕಥೆಯನ್ನಾಧರಿಸಿದ 'ದಿ ಡರ್ಟಿ ಪಿಕ್ಚರ್'ನಲ್ಲಿ ನಟಿಸಿದ್ದಲ್ಲದೇ ಆ ಚಿತ್ರದ ನಟನೆಗಾಗಿ ಶ್ರೇಷ್ಠನಟಿ ರಾಷ್ಟ್ರೀಯ ಪ್ರಶಸ್ತಿ ಪಡೆದರು. ಅಷ್ಟರಲ್ಲಾಗಲೇ ಕಹಾನಿ ಎಂಬ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿ ಎಲ್ಲರ ಪ್ರಶಂಸೆ ಪಡೆದರು.

  ಚಿತ್ರದಿಂದ ಚಿತ್ರಕ್ಕೆ ಪಾತ್ರ ಹಾಗೂ ನಟನೆಯಲ್ಲಿ ವಿಭಿನ್ನತೆ ಹಾಗೂ ಪ್ರಬುದ್ಧತೆ ಮೆರೆಯುತ್ತಾ ಸಾಗುತ್ತಿರುವ ವಿದ್ಯಾ ಇತ್ತೀಚಿಗೆ ನಿರ್ದೇಶನಕ್ಕೆ ಹೊರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕಹಾನಿ ಚಿತ್ರದಲ್ಲಿನ ಅವರ ಅಭಿನಯಕ್ಕೆ ಕೊಲ್ಕತಾ ಪ್ರೇಕ್ಷಕರು ಮಾರು ಹೋಗಿದ್ದರು. ಅಲ್ಲಿ ಕಹಾನಿ ಭಾರೀ ಜನಪ್ರಿಯತೆ ಪಡೆಯಿತು.

  ಈ ಸಂಗತಿ ವಿದ್ಯಾ ಬಾಲನ್ ಮನ ಕಲಕಿದೆ. ತಮಗಾಗಿ ಮಿಡಿದ ಕೊಲ್ಕತಾ ಜನರ ಋಣವನ್ನು ತೀರಿಸಲು ಮುಂದಾಗಿದ್ದಾರೆ ವಿದ್ಯಾ. ತಮ್ಮನ್ನು ಅತಿಯಾಗಿ ಪ್ರೀತಿಸುವ ಅಲ್ಲಿನ ಜನರಿಗಾಗಿಯೇ ಒಂದು ಸಿನಿಮಾ ನಿರ್ದೇಶಿಸಿ ಕೊಲ್ಕತಾದ ಮಹತ್ವವನ್ನು ಜಗತ್ತಿಗೆ ತಿಳಿಸುವ ಮೂಲಕ ಕೃತಜ್ಞತೆ ಅರ್ಪಿಸುವ ಯೋಚನೆ ಮಾಡಿದ್ದಾರೆ ವಿದ್ಯಾ.

  ಹೀಗಾಗಿ ಸದ್ಯದಲ್ಲಿಯೇ ವಿದ್ಯಾ ಬಾಲನ್ ನಿರ್ದೇಶನದ ಕೊಲ್ಕತಾ ಕಥೆಯ ಚಿತ್ರ ಸಿದ್ಧವಾಗಲಿದೆ. ವಿದ್ಯಾ ಈಗಾಗಲೇ ನಿರ್ದೆಶನವನ್ನು ಕಲಿತದ್ದಾರೆ. ಅವರು ಅಂದುಕೊಂಡ ಎಲ್ಲವನ್ನೂ ಮಾಡಲು ಖಂಡಿತವಾಗಿಯೂ ಸಮರ್ಥರು ಎನ್ನುವುದು ವಿದ್ಯಾರನ್ನು ಹತ್ತಿರದಿಂದ ಬಲ್ಲವರ ಅಂಬೋಣ. ಆಲ್ ದಿ ಬೆಸ್ಟ್ ವಿದ್ಯಾ ಅನ್ನುತ್ತಿರುವ ಅವರ ಅಭಿಮಾನಿಗಳು ಬರಲಿರುವ ಅವರ ಕೊಲ್ಕತಾ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. (ಏಜೆನ್ಸೀಸ್)

  English summary
  Actress Vidya Balan directs a Movie soon. She wants to direct a movie for her Kolkata fans, where her Super Hit movie Kahaani came out. Her movie's subject will be the story of Kolkata City. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X