»   » ಲೇಡಿ ಜೇಮ್ಸ್ ಬಾಂಡ್ ನೆನೆದು ವಿದ್ಯಾ ಬಾಲನ್ ಥ್ರಿಲ್

ಲೇಡಿ ಜೇಮ್ಸ್ ಬಾಂಡ್ ನೆನೆದು ವಿದ್ಯಾ ಬಾಲನ್ ಥ್ರಿಲ್

Posted By:
Subscribe to Filmibeat Kannada

ಬಾಲಿವುಡ್ ರಂಭೆ ಮಲ್ಲು ಗೊಂಬೆ ವಿದ್ಯಾ ಬಾಲನ್ ತಮಗೆ ಅಂಟಿರುವ ಡರ್ಟಿ ಪಟ್ಟವನ್ನು ಕಿತ್ತೊಗೆಯುವ ಸಿದ್ಧತೆಯಲ್ಲಿದ್ದಾರೆ. ಈ ಬಾರಿ ಅವರು ಡಿಟೆಕ್ಟೀವ್ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ತಮ್ಮ ಮುಂದಿನ ಚಿತ್ರ 'ಬಾಬ್ಬಿ ಜಾಸೂಸ್' ಚಿತ್ರದಲ್ಲಿ ವಿದ್ಯಾ ಅವರದು ಲೇಡಿ ಬಾಂಡ್ ಪಾತ್ರವಂತೆ.

ಬಾರ್ನ್ ಫ್ರೀ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ದಿಯಾ ಮಿರ್ಜಾ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ತಾವು ಲೇಡಿ ಜೇಮ್ಸ್ ಬಾಂಡ್ ಪಾತ್ರವನ್ನು ಪೋಷಿಸುತ್ತಿದ್ದು ಸಖತ್ ಥ್ರಿಲ್ ಆಗಿದ್ದೇನೆ. ಭಾರತದ ಪ್ರಥಮ ಲೇಡಿ ಡಿಟೆಕ್ಟೀವ್ ಎಂಬ ಅಗ್ಗಳಿಕೆಗೆ ತಾವು ಪಾತ್ರವಾಗುತ್ತಿರುವುದು ಸಂತಸವಾಗಿದೆ ಎಂದಿದ್ದಾರೆ.


ಜೇಮ್ಸ್ ಬಾಂಡ್ ಎಂದರೆ 007 ಹಾಗೂ ಅವರ ಗನ್ ವಿಶೇಷ. ಆದರೆ ತಮ್ಮ ಚಿತ್ರದಲ್ಲಿ ಇದಕ್ಕಿಂತಲೂ ಭಿನ್ನ ಪ್ರಯತ್ನವನ್ನು ಮಾಡುತ್ತಿದ್ದೇವೆ. ಅದೇನು ಎಂಬುದು ಗೊತ್ತಾಗಬೇಕಾದರೆ ನೀವು ಚಿತ್ರವನ್ನು ಒಮ್ಮೆ ನೋಡಲೇಬೇಕು ಎನ್ನುತ್ತಾರೆ ವಿದ್ಯಾ ಬಾಲನ್.

ಲೇಡಿ ಡಿಟೆಕ್ಟೀವ್ ಪಾತ್ರ ಎಂದು ಹೇಳಿದಾಗ ನಾನು ತುಂಬಾನೇ ಭಾವೋದ್ವೇಗಕ್ಕೆ ಒಳಗಾದೆ. ಒಂದು ವೇಳೆ ನೀವು ಲೇಡಿ ಡಿಟೆಕ್ಟೀವ್ ನೋಡಬೇಕು ಎಂದರೆ ಸಿನಿಮಾ ನೋಡಿ ಎಂದಿದ್ದಾರೆ ವಿದ್ಯಾ. ನವೆಂಬರ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ತಮ್ಮ ಡಿಟೆಕ್ಟೀವ್ ಪಾತ್ರಕ್ಕಾಗಿ ವಿದ್ಯಾ ಬಾಲನ್ ಅವರು ದೇಹದ ತೂಕವನ್ನೂ ಕಡಿಮೆ ಮಾಡಿಕೊಂಡಿದ್ದಾರಂತೆ. ಎಲ್ಲಾ ಪಾತ್ರಗಳಲ್ಲೂ ತಮ್ಮದೇ ಆದಂತಹ ಛಾಪು ಮೂಡಿಸುತ್ತಿರುವ ವಿದ್ಯಾ ಬಾಲನ್ ಡಿಟೆಕ್ಟೀವ್ ರೋಲ್ ನಲ್ಲೂ ತಮ್ಮತನ ಮೆರೆಯಲಿದ್ದಾರೆ ಎಂಬ ನಿರೀಕ್ಷೆಗಳು ಇದ್ದೇ ಇವೆ. (ಏಜೆನ್ಸೀಸ್)

English summary
Bollywood actress Vidya Balan will be playing a detective in 'Bobby Jasoos'. she says thrilled to be lady James Bond. Vidya will be seen in Dia Mirza's home production film to be made under their banner Born Free Entertainment. 
 
Please Wait while comments are loading...