Just In
Don't Miss!
- News
ಪಶ್ಚಿಮ ಬಂಗಾಳದಲ್ಲಿ ಮತ್ತೆ ಮತ್ತೆ ಮೊಳಗಿದ 'ಗೋಲಿ ಮಾರೋ' ಘೋಷಣೆ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Sports
ಐಪಿಎಲ್ 2021: ಬೆಂಗಳೂರಿಗೆ ಬಂದ ಹರ್ಷಲ್ ಪಟೇಲ್, ಡೇನಿಯಲ್ ಸ್ಯಾಮ್ಸ್!
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಮೀರ್ ಖಾನ್ ಸಿನಿಮಾದಲ್ಲಿ ನಟಿಸುವ ಅವಕಾಶ ಕಳೆದುಕೊಂಡ ವಿಜಯ್ ಸೇತುಪತಿ
ನಟ ಅಮೀರ್ ಖಾನ್ ಸಿನಿಮಾದಲ್ಲಿ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಈ ಅವಕಾಶ ಕಳೆದುಕೊಂಡಿದ್ದಾರೆ ವಿಜಯ್ ಸೇತುಪತಿ ಎಂಬ ವರದಿಗಳು ಬಾಲಿವುಡ್ ಅಂಗಳದಿಂದ ಬರುತ್ತಿವೆ.
ಫಾರೆಸ್ಟ್ ಗಂಪ್ ಸಿನಿಮಾದ ಹಿಂದಿ ರೀಮೇಕ್ 'ಲಾಲ್ ಸಿಂಗ್ ಚಡ್ಡಾ' ಸಿನಿಮಾದಲ್ಲಿ ನಟ ಅಮೀರ್ ಖಾನ್ ಜೊತೆಗೆ ವಿಜಯ್ ಸೇತುಪತಿ ನಟಿಸಬೇಕಿತ್ತು. ಈ ಕುರಿತು ಮಾತುಕತೆ ಸಹ ಆಗಿತ್ತು, ಆದರೆ ಈಗ ಹಠಾತ್ತನೆ ವಿಜಯ್ ಸೇತುಪತಿ ಲಾಲ್ ಸಿಂಗ್ ಚಡ್ಡಾ ಸಿನಿಮಾದಿಂದ ಹಿಂದೆ ಸರಿದಿದ್ದಾರೆ.
ವಿಜಯ್ ಸೇತುಪತಿ, ಅಮೀರ್ ಖಾನ್ ಸಿನಿಮಾದಿಂದ ಹಿಂದೆ ಸರಿಯಲು ಕಾರಣ ಕೊರೊನಾ. ಹೌದು, ಕೊರೊನಾ ಲಾಕ್‌ಡೌನ್ ಕಾರಣದಿಂದ ವಿಜಯ್ ಸೇತುಪತಿ ಅವರ ಶೆಡ್ಯೂಲ್ ನಲ್ಲಿ ಭಾರಿ ಬದಲಾವಣೆ ಆಗಿದ್ದು, ಸೇತುಪತಿ ಹಾಗೂ ಲಾಲ್ ಸಿಂಗ್ ಚಡ್ಡಾ ಸಿನಿಮಾಗಳ ಶೆಡ್ಯೂಲ್ ಹೊಂದಿಕೆ ಆಗುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ವಿಜಯ್ ಸೇತುಪತಿ ಸಿನಿಮಾದಿಂದ ಹೊರಬರುತ್ತಿದ್ದಾರೆ.
ವಿಜಯ್ ಸೇತುಪತಿ ಹಲವಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ದಿನವೊಂದಕ್ಕೆ ಮೂರು-ನಾಲ್ಕು ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರಂತೆ. ಒಂದೊಮ್ಮೆ ಅಮೀರ್ ಖಾನ್ ಸಿನಿಮಾದಲ್ಲಿ ನಟಿಸಿದರೆ ಬೇರೆ ಸಿನಿಮಾಗಳಿಗೆ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಸಿನಿಮಾದಿಂದ ಹೊರಬಂದಿದ್ದಾರೆ ವಿಜಯ್ ಸೇತುಪತಿ.
ಮತ್ತೊಂದು ವರದಿ ಹೇಳುವಂತೆ. ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟಿಸಲು ತೂಕ ಕಡಿಮೆ ಮಾಡಿಕೊಳ್ಳುವಂತೆ ವಿಜಯ್ ಸೇತುಪತಿಗೆ ಸೂಚಿಸಿದ್ದರಂತೆ ನಿರ್ದೇಶಕ ಅದ್ವೈತ್. ಆದರೆ ವಿಜಯ್ ಸೇತುಪತಿ ತೂಕ ಇಳಿಸಿಕೊಳ್ಳಲಿಲ್ಲವಾದ್ದರಿಂದ ಸಿನಿಮಾದಿಂದ ಅನಿವಾರ್ಯವಾಗಿ ಹೊರ ಬರಬೇಕಾಗಿದೆ ಎನ್ನಲಾಗುತ್ತಿದೆ.