For Quick Alerts
  ALLOW NOTIFICATIONS  
  For Daily Alerts

  ಚಳಿಜ್ವರ ತಾಳಲಾರದೆ ಬಿಪಾಶಾ ಆಸ್ಪತ್ರೆಗೆ ದಾಖಲು

  By Rajendra
  |

  ಬಾಲಿವುಡ್‍ನ ಬಟ್ಟಲಗಣ್ಣಿನ ಚೆಲುವೆ ಬಿಪಾಶಾ ಬಸು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಚಳಿಜ್ವರದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಮೇಲೆ ಈಗ ಆರಾಮವಾಗಿದ್ದೇನೆ ಆದರೆ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದಿದ್ದಾರೆ.

  ಮೂವತ್ತಮೂರರ ಹರೆಯದ ಈ ಚೆಲುವೆ ಈ ಬಗ್ಗೆ ಟ್ವಿಟಿಸಿದ್ದು, "ವೈರಲ್ ಜ್ವರದಿಂದ ತೀವ್ರ ಬಳಲಿಕೆಯಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದೆ. ಈಗ ಪರ್ವಾಗಿಲ್ಲ" ಎಂದು ತಮ್ಮ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.

  ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಹಾರರ್ ಹಾಗೂ ರೋಮ್ಯಾಂಟಿಕ್ ಚಿತ್ರ 'ರಾಜ್ 3' ಚಿತ್ರದಲ್ಲಿ ಬಿಪಾಶಾ ಅಭಿನಯಿಸಿದ್ದರು. ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿರುವ ಅವರು ಚೇತರಿಸಿಕೊಂಡ ಬಳಿಕ 'ರಾಜ್ 3' ಚಿತ್ರದ ಗೆಲುವಿನ ಸಂಭ್ರಮ ಆಚರಿಸಿಕೊಳ್ಳಲಿದ್ದಾರಂತೆ.

  "ರಾಜ್ 3" ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತಪಡಿಸಿದ ತಮ್ಮ ಅಭಿಮಾನಿಗಳಿಗೆ ಕೃತಜ್ಞತೆಗಳನ್ನೂ ತಿಳಿಸಿದ್ದಾರೆ. ಶೀಘ್ರದಲ್ಲೇ ಚೇತರಿಸಿಕೊಂಡು ಈ ಚಿತ್ರದ ಸಕ್ಸಸನ್ನು ಸೆಲಬ್ರೇಟ್ ಮಾಡುತ್ತೇನೆ ಎಂದಿದ್ದಾರೆ.

  ಈ ಚಿತ್ರದಲ್ಲಿ ಬಿಪಾಶಾ ಬಸು ಹಾಟ್ ಸನ್ನಿವೇಶಗಳಲ್ಲಿ ಅಭಿನಯಿಸಿದ್ದರು. ಕಿಸ್ಸರ್ ಬಾಯ್ ಇಮ್ರಾನ್ ಹಶ್ಮಿ ಮಸಾಲೆ ದೃಶ್ಯಗಳ ಪ್ರೇಕ್ಷಕರ ಕಣ್ಣಿಗೆ ಹಬ್ಬ ಉಂಟು ಮಾಡಿದ್ದವು. 2002ರಲ್ಲಿ ತೆರೆಕಂಡ ರಾಜ್ ಹಾಗೂ 2009ರ ಸೂಪರ್ಹಿಟ್ ಚಿತ್ರ ರಾಜ್-2ನ ಮುಂದುವರಿದ ಭಾಗವಾಗಿ ರಾಜ್-3 ಬಿಡುಗಡೆಯಾಗಿದೆ. (ಏಜೆನ್ಸೀಸ್)

  English summary
  Raaz 3 actress Bipasha Basu tweets, "For people who are worried about me getting hospitalised. Just want to tell you that right now am feeling much better. Acute exhaustion and viral fever!"

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X