For Quick Alerts
  ALLOW NOTIFICATIONS  
  For Daily Alerts

  ಪತ್ರಕರ್ತರಿಗೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ವಿಶೇಷ ಮನವಿ

  |

  ಪತ್ರಕರ್ತರಿಗೆ ಅದರಲ್ಲೂ ಪಾಪಾರಾಟ್ಜಿಗಳಿಗೆ ತಾರಾ ದಂಪತಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ವಿಶೇಷ ಮನವಿ ಮಾಡಿದ್ದಾರೆ.

  ಸೆಲೆಬ್ರಿಟಿಗಳ ಚಿತ್ರಗಳನ್ನು ತೆರೆಯುವ ಪಾಪಾರಾಟ್ಜಿಗಳಿಗೆ ವಿಶೇಷ ಮನವಿ ಮಾಡಿರುವ ವಿರಾಟ್ ಹಾಗೂ ಅನುಷ್ಕಾ, 'ದಯವಿಟ್ಟು ನಮ್ಮ ಮಗಳ ಚಿತ್ರವನ್ನು ತೆಗೆಯಬೇಡಿ' ಎಂದು ಕೇಳಿಕೊಂಡಿದ್ದಾರೆ. 'ನಮ್ಮ ಖಾಸಗಿತನದ ಹಕ್ಕಿದೆ ಗೌರವ ಕೊಡಿ' ಎಂದು ವಿರಾಟ್-ಅನುಷ್ಕಾ ಹೇಳಿದ್ದಾರೆ.

  ಹೆಣ್ಣು ಮಗುವಿಗೆ ಜನ್ಮ ನೀಡಿದ ಅನುಷ್ಕಾ: ಸಂತಸ ಹಂಚಿಕೊಂಡ ಕೊಹ್ಲಿ

  ಈ ಸಂಬಂಧ ಅಧಿಕೃತ ಹೇಳಿಕೆಯನ್ನೇ ಈ ಜೋಡಿ ಬಿಡುಗಡೆ ಮಾಡಿದ್ದು, 'ಈ ಮೂರು ವರ್ಷಗಳಿಂದ ನಮ್ಮ ಬಗ್ಗೆ ತೋರಿಸಿದ ಪ್ರೀತಿಗೆ ಧನ್ಯವಾದಗಳು. ಪೋಷಕರಾಗಿ ನಾವು ನಿಮ್ಮಲ್ಲಿ ಒಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಹಾಗೂ ನಮ್ಮ ಮಗುವಿನ ಖಾಸಗಿತನದ ಹಕ್ಕನ್ನು ಗೌರವಿಸಿ' ಎಂದಿದ್ದಾರೆ ವಿರಾಟ್-ಅನುಷ್ಕಾ.

  'ನಮ್ಮನ್ನು ಒಳಗೊಂಡ ಎಲ್ಲಾ ಸುದ್ದಿಗಳು ನಿಮಗೆ ದೊರಕುವಂತೆ ನಾವು ವ್ಯವಸ್ಥೆ ಮಾಡುತ್ತೇವೆ. ಆದರೆ ನಮ್ಮ ಮಗುವಿನ ಬಗ್ಗೆ ಯಾವುದೇ ಚಿತ್ರಗಳು ಅಥವಾ ಸುದ್ದಿಗಳನ್ನು ಪ್ರಕಟ ಮಾಡದಿರುವಂತೆ ನಾವು ಮನವಿ ಮಾಡುತ್ತೇವೆ' ಎಂದಿದ್ದಾರೆ.

  ಖಾಸಗಿತನಕ್ಕೆ ಧಕ್ಕೆ: ಮಾಧ್ಯಮಗಳ ಮೇಲೆ ಅನುಷ್ಕಾ ಶರ್ಮಾ ಕಿಡಿ

  ವಿರಾಟ್ ಕೊಹ್ಲಿಯ ಸಹೋದರ ವಿಕಾಸ್ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಮಗುವಿನ ಪಾದದ ಆ ಚಿತ್ರ, ವಿರಾಟ್-ಅನುಷ್ಕಾ ಮಗಳ ಮೊದಲ ಚಿತ್ರ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಅದು ವಿರಾಟ್-ಅನುಷ್ಕಾರ ಮಗುವಿನ ಚಿತ್ರ ಅಲ್ಲ ಎಂದು ನಂತರ ವಿಕಾಸ್ ಸ್ಪಷ್ಟನೆ ನೀಡಿದರು.

  ಜನವರಿ 11 ರಂದು ಅನುಷ್ಕಾ ಗೆ ಹೆಣ್ಣು ಮಗು ಜನನವಾಗಿದೆ.

  English summary
  Virat Kohli and Anushka Sharma request Paparazzi to respect their child's privacy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X