»   » ನ್ಯೂಯಾರ್ಕ್ ನಲ್ಲಿ ಪ್ರತ್ಯಕ್ಷವಾದ ವಿರಾಟ್ ಮತ್ತು ಅನುಷ್ಕಾ ಶರ್ಮಾ

ನ್ಯೂಯಾರ್ಕ್ ನಲ್ಲಿ ಪ್ರತ್ಯಕ್ಷವಾದ ವಿರಾಟ್ ಮತ್ತು ಅನುಷ್ಕಾ ಶರ್ಮಾ

Posted By:
Subscribe to Filmibeat Kannada

ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಕ್ರಿಕೆಟ್ ಸರಣಿ ನಂತರ ಬ್ರೇಕ್ ಪಡೆದುಕೊಂಡಿರುವ ವಿರಾಟ್ ಕೊಹ್ಲಿ, ತಮ್ಮ ಪ್ರೇಯಸಿ ಜೊತೆ ನ್ಯೂಯಾರ್ಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ನ್ಯೂಯಾರ್ಕ್ ನಗರದಲ್ಲಿ ಓಡಾಡುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನ್ಯೂಯಾರ್ಕ್ ನಗರದಲ್ಲಿ ತಾವಿಬ್ಬರು ಒಟ್ಟಿಗೆ ಇರುವ ಫೋಟೋವನ್ನ ಸ್ವತಃ ವಿರಾಟ್ ಕೊಹ್ಲಿ ತಮ್ಮ Instagram ನಲ್ಲಿ ಅಪ್ ಲೌಡ್ ಮಾಡಿದ್ದಾರೆ.

ಕುಂಬ್ಳೆ - ಕೊಹ್ಲಿ ಕಿತ್ತಾಟಕ್ಕೆ ಕಾರಣವಾಗಿದ್ದು 'ಅನುಷ್ಕಾ ಶರ್ಮ' ಅಂತೆ.!

Virat Kohli Enjoys Break With Anushka Sharma

ಜುಲೈ 15 ರಂದು ನ್ಯಾಯಾರ್ಕ್ ನಲ್ಲಿ ಐಫಾ ಅವಾರ್ಡ್ 2017 ಕಾರ್ಯಕ್ರಮ ನಡೆಯಲಿದೆ. ಹೀಗಾಗಿ, ಮೂರ್ನಾಲ್ಕು ದಿನ ಮುಂಚೆಯೇ ಅನುಷ್ಕಾ ಶರ್ಮಾ ನ್ಯೂಯಾರ್ಕ್ ಗೆ ತೆರಳಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಸರಣೆ ಮುಗಿದ ಬೆನ್ನಲ್ಲೆ, ವಿರಾಟ್ ಕೊಹ್ಲಿ ಕೂಡ ರಿಲ್ಯಾಕ್ಸ್ ಮಾಡಲು ಪ್ರೇಯಸಿಗೆ ಜೊತೆಯಾಗಿದ್ದಾರೆ.

ಸುಮಾರು ನಾಲ್ಕೈದು ವರ್ಷಗಳಿಂದ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪ್ರೀತಿ ಮಾಡುತ್ತಿದ್ದು, ಇತ್ತೀಚೆಗೆ ಕೆಲವು ಮಾಧ್ಯಮಗಳು ಇವರಿಬ್ಬರ ಲವ್ ಬ್ರೇಕ್ ಅಪ್ ಆಗಿದೆ ಎಂದು ವರದಿ ಮಾಡಿದ್ದವು. ಆದ್ರೆ, ಇದ್ಯಾವುದಕ್ಕೂ ತಲೆ ಕೆಡಸಿಕೊಳ್ಳದ ಜೋಡಿಗಳು ಆರಾಮಗಿ ಎಂಜಾಯ್ ಮಾಡ್ತಿದ್ದಾರೆ.

ಅನುಷ್ಕಾ ಶರ್ಮಾ ಮುಖ ನೋಡಿ ಭಯಗೊಂಡ ಬಾಲಿವುಡ್

ಸದ್ಯ, ಅನುಷ್ಕಾ 'ಜಬ್ ಹ್ಯಾರಿ ಮೆಟ್ ಸೇಜಲ್' ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರ ಆಗಸ್ಟ್ 4ಕ್ಕೆ ರಿಲೀಸ್ ಆಗಲಿದೆ. ಇನ್ನು ಜುಲೈ 26ರಿಂದ ಶ್ರೀಲಂಕಾ ವಿರುದ್ಧ ಕ್ರಿಕೆಟ್ ಸರಣಿ ಆರಂಭವಾಗುತ್ತಿದ್ದು, ಕೊಹ್ಲಿ ಕೂಡ ಅಭ್ಯಾಸಕ್ಕೆ ಇಳಿಯಬೇಕಿದೆ.

English summary
Bollywood Actress Anushka Sharma is perhaps in New York to attend that upcoming IIFA awards, where she has been joined by Virat Kohli

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada