For Quick Alerts
  ALLOW NOTIFICATIONS  
  For Daily Alerts

  ವಿರಾಟ್ ಕೊಹ್ಲಿ ಸ್ಲಾಮ್ ಬುಕ್ ಪತ್ತೆ! ಮೆಚ್ಚಿನ ವ್ಯಕ್ತಿ ಯಾರಾಗಿದ್ದರು ಗೊತ್ತೆ?

  |

  ಶಾಲೆ, ಕಾಲೇಜಿನ ಕೊನೆಯ ದಿನಗಳಲ್ಲಿ ಗೆಳೆಯರಿಂದ ಸ್ಲಾಮ್ ಬುಕ್ ಬರೆಸುಕೊಳ್ಳುವ ಅಭ್ಯಾಸ ಹಳೆಯದು. ಬಹುತೇಕರು ಸ್ಲಾಮ್ ಬುಕ್ ಬರೆದೇ ಇರುತ್ತಾರೆ.

  ಹುಟ್ಟಿದ ದಿನಾಂಕ, ಇಷ್ಟದ ಬಣ್ಣ, ಇಷ್ಟದ ವ್ಯಕ್ತಿ, ನಾಯಕ, ನಾಯಕಿ, ಚಲನಚಿತ್ರ, ಮುಂದೆ ಏನಾಗಬೇಕೆಂದುಕೊಂಡಿದ್ದಾರೆ ಹೀಗೆ ಹಲವು ವಿಷಯಗಳನ್ನು ಸ್ಲಾಮ್ ಬುಕ್‌ನಲ್ಲಿ ತುಂಬಲಾಗುತ್ತದೆ. ಇದನ್ನು ಜತನದಿಂದ ಕಾಪಾಡಿಕೊಳ್ಳಲಾಗುತ್ತದೆ. ಶಾಲೆ, ಕಾಲೇಜು ದಿನದ ಆಪ್ತ ನೆನಪನ್ನು ತರುತ್ತದೆ ಈ ಸ್ಲಾಮ್ ಬುಕ್.

  ಕನ್ನಡಿಗರ ಮನಸ್ಸು ಗೆದ್ದ ವಿರಾಟ್ ಪತ್ನಿ ಅನುಷ್ಕಾ ಶರ್ಮಾಕನ್ನಡಿಗರ ಮನಸ್ಸು ಗೆದ್ದ ವಿರಾಟ್ ಪತ್ನಿ ಅನುಷ್ಕಾ ಶರ್ಮಾ

  ಭಾರತೀಯ ಕ್ರಿಕೆಟ್ ತಂಡದ ನಾಯಕ, ವಿಶ್ವದ ಪ್ರಸ್ತುತ ಅಗ್ರಗಣ್ಯ ಕ್ರಿಕೆಟಿಗ ವಿರಾಟ್ ಕೋಹ್ಲಿ ಸಹ ತಾವು ವಿದ್ಯಾರ್ಥಿಯಾಗಿದ್ದಾಗ ಸ್ಲಾಮ್ ಬುಕ್ ಬರೆದುಕೊಟ್ಟಿದ್ದಾರೆ. ಕೊಹ್ಲಿ ಬರೆದುಕೊಟ್ಟಿದ್ದ ಸ್ಲಾಮ್ ಪುಸ್ತಕವನ್ನು ಅವರ ಆಪ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಶಲಜ್ ಸೋಂಧಿ ಎಂಬುವರು ಚಿತ್ರ ಹಂಚಿಕೊಂಡಿದ್ದಾರೆ

  ಶಲಜ್ ಸೋಂಧಿ ಎಂಬುವರು ಚಿತ್ರ ಹಂಚಿಕೊಂಡಿದ್ದಾರೆ

  ಶಲಜ್ ಸೋಂಧಿ ಎಂಬುವರು ವಿರಾಟ್ ಬರೆದಿರುವ ಸ್ಲಾಮ್ ಬುಕ್‌ನ ಹಾಳೆಯ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು. ಇದೀಗ ಸಖತ್ ವೈರಲ್ ಆಗಿದೆ. ಮೆಚ್ಚಿನ ವ್ಯಕ್ತಿ, ಬಣ್ಣ, ವಿಳಾಸ, ಏನಾಗಬೇಕೆಂದುಕೊಂಡಿದ್ದಾರೆ ಎಲ್ಲವನ್ನೂ ಬರೆದಿದ್ದಾರೆ ವಿರಾಟ್.

  ವಿರಾಟ್ ನೆಚ್ಚಿನ ವ್ಯಕ್ತಿ ಯಾರು?

  ವಿರಾಟ್ ನೆಚ್ಚಿನ ವ್ಯಕ್ತಿ ಯಾರು?

  ನೆಚ್ಚಿನ ವ್ಯಕ್ತಿ ಯಾರು ಎಂಬಲ್ಲಿ, ಹೃತಿಕ್ ರೋಷನ್ ಎಂದು ಬರೆದಿದ್ದಾರೆ ವಿರಾಟ್ ಕೊಹ್ಲಿ. 90-2000 ದಲ್ಲಿ ಹೃತಿಕ್ ರೋಷನ್ ಎಲ್ಲರ ನೆಚ್ಚಿನ ನಟರಾಗಿದ್ದರು. ಅವರ ಅಭಿನಯ, ಅಂದ, ಕುಣಿತಕ್ಕೆ ಮಾರುಹೋಗದವರೇ ಇರಲಿಲ್ಲ. ಇದಕ್ಕೆ ವಿರಾಟ್ ಸಹ ಹೊರತಾಗಿರಲಿಲ್ಲ.

  ಇದೇನಿದು ವಿರುಷ್ಕಾ ಡೈವೋರ್ಸ್?: ಟ್ರೆಂಡ್ ಆಗುತ್ತಿದೆ ಕೊಹ್ಲಿ-ಅನುಷ್ಕಾ ವಿಚ್ಚೇದನದ ಸುದ್ದಿ!ಇದೇನಿದು ವಿರುಷ್ಕಾ ಡೈವೋರ್ಸ್?: ಟ್ರೆಂಡ್ ಆಗುತ್ತಿದೆ ಕೊಹ್ಲಿ-ಅನುಷ್ಕಾ ವಿಚ್ಚೇದನದ ಸುದ್ದಿ!

  ಕೊಹ್ಲಿ ಜೀವನದ ಗುರಿ ಏನು?

  ಕೊಹ್ಲಿ ಜೀವನದ ಗುರಿ ಏನು?

  ಜೀವನದ ಗುರಿ ಏನು ಎಂಬಲ್ಲಿ, ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಆಡಬೇಕು ಎಂದು ಬರೆದಿದ್ದಾರೆ ವಿರಾಟ್. ಮೆಚ್ಚಿನ ಸಂದರ್ಭ ಯಾವುದು ಎಂಬುದಕ್ಕೆ, ಕ್ರಿಕೆಟ್ ಕೋಚಿಂಗ್‌ಗೆ ಸೇರಿದ ಸಂದರ್ಭ ಎಂದು ಬರೆದಿದ್ದಾರೆ.

  ವಿರಾಟ್ ಕೊಹ್ಲಿ ಆತ್ಮೀಯ ಸ್ನೇಹಿತ ಯಾರು?

  ವಿರಾಟ್ ಕೊಹ್ಲಿ ಆತ್ಮೀಯ ಸ್ನೇಹಿತ ಯಾರು?

  ಮೆಚ್ಚಿನ ಬಣ್ಣ ಕಪ್ಪು, ಆತ್ಮೀಯ ಗೆಳೆಯ ಪಿಯೂಷ್ ಎಂದು ಬರೆದಿರುವ ವಿರಾಟ್, ತಮ್ಮ ದೆಹಲಿ ಮನೆ ವಿಳಾಸ, ಲ್ಯಾಂಡ್‌ಲೈನ್ ದೂರವಾಣಿ ಸಂಖ್ಯೆ, ಹುಟ್ಟಿದ ದಿನಾಂಕ, ರಾಶಿ ಎಲ್ಲವನ್ನೂ ಬರೆದಿದ್ದಾರೆ. ಈ ಸ್ಲಾಮ್ ಬುಕ್‌ನ ಚಿತ್ರ ಇದೀಗ ಭಾರಿ ವೈರಲ್ ಆಗಿದೆ.

  ಅನುಷ್ಕಾ ಶರ್ಮಾಗೆ ಡೈವೋರ್ಸ್ ಕೊಡಿ: ವಿರಾಟ್ ಕೊಹ್ಲಿಗೆ ಬಿಜೆಪಿ ಶಾಸಕನ ಸಲಹೆ!ಅನುಷ್ಕಾ ಶರ್ಮಾಗೆ ಡೈವೋರ್ಸ್ ಕೊಡಿ: ವಿರಾಟ್ ಕೊಹ್ಲಿಗೆ ಬಿಜೆಪಿ ಶಾಸಕನ ಸಲಹೆ!

  English summary
  Virat Kohli written slam book when he was student. Pic of the slam book got viral on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X