For Quick Alerts
  ALLOW NOTIFICATIONS  
  For Daily Alerts

  ಬಾಲ್ ಕೋಟ್ ಏರ್ ಸ್ಟ್ರೈಕ್ ಬಗ್ಗೆ ಸಿನಿಮಾ ನಿರ್ಮಿಸಲಿದ್ದಾರೆ ಈ ನಟ

  |
  ಬರುತ್ತಿದೆ ಭಾರತದ ಹೀರೋ ಅಭಿನಂದನ್ ಸಿನಿಮಾ..? | FILMIBEAT KANNADA

  ಫೆಬ್ರವರಿ 14, 2019ರಂದು ಜಮ್ಮು ಕಾಶ್ಮೀರದ ಪುಲ್ವಾಮ ಬಳಿ ಭಾರತೀಯ ಸೇನೆ ಮೇಲೆ ಜೈಶ್-ಎ-ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ದಾಳಿಕೋರನೊಬ್ಬ ಕಾರಿನಿಂದ ದಾಳಿ ಮಾಡಿ ಸುಮಾರು 40 ಜನ ಯೋಧರ ಸಾವಿಗೆ ಕಾರಣವಾಗಿದ್ದ.

  ಅದಕ್ಕೆ ಪ್ರತಿಕಾರವಾಗಿ ಭಾರತೀಯ ಯೋಧರ ಪಾಕಿಸ್ತಾನದ ಬಾಲ್ ಕೋಟ್ ಮೇಲೆ ಏರ್ ಸ್ಟ್ರೈಕ್ ಮಾಡಿದ್ದರು. ಈ ದಾಳಿಯಲ್ಲಿ ಪಾಕ್ ನ ಹಲವು ಉಗ್ರರು ಅಸುನೀಗಿದ್ದಾರೆ ಎನ್ನಲಾಗಿದೆ. ಈ ಏರ್ ಸ್ಟ್ರೈಕ್ ನಲ್ಲಿ ಭಾರತೀಯಿ ವಿಂಗ್ ಕಮಾಂಡರ್ ಆಗಿದ್ದ ಅಭಿನಂದನ್ ಪಾಕಿಸ್ತಾನ ಸೈನಿಕರ ವಶಕ್ಕೆ ಸಿಕ್ಕಿಹಾಕಿಕೊಂಡಿದ್ದರು.

  ವಿಂಗ್ ಕಮಾಂಡರ್ ಅಭಿನಂದನ್ ನಿಜವಾದ ಹೀರೋ, ನಾವು ಡಮ್ಮಿ: ದರ್ಶನ್ ವಿಂಗ್ ಕಮಾಂಡರ್ ಅಭಿನಂದನ್ ನಿಜವಾದ ಹೀರೋ, ನಾವು ಡಮ್ಮಿ: ದರ್ಶನ್

  ನಂತರ ಪಾಕಿಸ್ತಾನದ ಜೊತೆ ಮಾತುಕತೆ ಮೂಲಕ ಭಾರತ ಸರ್ಕಾರ ಅಭಿನಂದನ್ ಅವರನ್ನ ವಾಪಸ್ ಕರೆಸುವಲ್ಲಿ ಯಶಸ್ವಿಯಾಗಿತ್ತು. ಏರ್ ಸ್ಟ್ರೈಕ್ ಮಾಡಿ ಪಾಕಿಸ್ತಾನಿಗಳ ಕೈಗೆ ಸಿಕ್ಕಿ, ದೇಶದ ಕುರಿತು ಯಾವುದೇ ಗೌಪ್ಯತೆ ಬಿಟ್ಟುಕೊಡದೆ ವಾಪಸ್ ಆದ ಅಭಿನಂದನ್ ಗೆ ಇಡೀ ದೇಶ ಸಲಾಂ ಹೇಳಿತ್ತು. ಈ ಘಟನೆ ಇತಿಹಾಸವಾಗಿ ಉಳಿದುಕೊಂಡಿದೆ.

  ಈ ಘಟನೆ ಬಗ್ಗೆ ಅನೇಕರು ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದೀಗ, ಬಾಲಿವುಡ್ ಸ್ಟಾರ್ ನಟ ವಿವೇಕ್ ಒಬೆರಾಯ್ ಅಧಿಕೃತವಾಗಿ ಏರ್ ಸ್ಟ್ರೈಕ್ ಕುರಿತಾದ ಚಿತ್ರವನ್ನ ತಾವೇ ನಿರ್ಮಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

  Vivek Oberoi Announced Balakot Air Strike Based Movie

  ಅಯ್ಯೋ! ಈ ಸಿನಿಮಾದ ರೀತಿಯೇ ಇದೆ ಅಭಿನಂದನ್ ಕಥೆ ಅಯ್ಯೋ! ಈ ಸಿನಿಮಾದ ರೀತಿಯೇ ಇದೆ ಅಭಿನಂದನ್ ಕಥೆ

  ವಿಂಗ್ ಕಮಾಂಡರ್ ಅಭಿನಂದನ್ ಅವರನ್ನ ಹೀರೋ ಆಗಿಸಿ ಈ ಸಿನಿಮಾ ಮಾಡಬಹುದು ಎಂಬ ನಿರೀಕ್ಷೆ ಇದೆ. ಈ ಬಗ್ಗೆ ಯಾವುದೇ ಸುಳಿವು ಬಿಟ್ಟು ಕೊಡದ ವಿವೇಕ್ ಒಬೆರಾಯ್ ಚಿತ್ರಕ್ಕೆ ನಾನು ಬಂಡವಾಳ ಹಾಕುತ್ತಿದ್ದೇನೆ ಎಂದು ಮಾತ್ರ ಘೋಷಿಸಿದ್ದಾರೆ. ಸದ್ಯದಲ್ಲೇ ನಿರ್ದೇಶಕ ಯಾರು ಮತ್ತು ಕಲಾವಿದರ ಹೆಸರನ್ನ ಬಹಿರಂಗಪಡಿಸಲಿದ್ದಾರಂತೆ.

  ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ 'ಬಾಲ್ ಕೋಟ್' ಹೆಸರಿನಲ್ಲಿ ಸಿನಿಮಾ ತಯಾರಾಗಲಿದೆಯಂತೆ. ದೆಹಲಿ ಮತ್ತು ಆಗ್ರಾದಲ್ಲಿ ಬಹುತೇಕ ಚಿತ್ರೀಕರಣ ನಡೆಯಲಿದ್ದು, ಮುಂದಿನ ವರ್ಷ ತೆರೆಗೆ ಬರಲಿದೆಯಂತೆ.

  English summary
  Bollywood actor Vivek oberoi announced movie on "Balakot Air Strike" And it will be releasing in Hindi, Tamil and Telugu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X