ಕರ್ನಾಟಕದ ಅಳಿಯ ವಿವೇಕ್ ಒಬೆರಾಯ್ ಮಾಡಿದ ಕೆಲಸಕ್ಕೆ ಒಂದು ಸಲ್ಯೂಟ್!
ಬಾಲಿವುಡ್ ನಟ ವಿವೇಕ್ ಓಬೆರಾಯ್ ರೀಲ್ ನಲ್ಲಿ ಮಾತ್ರ ಹೀರೋ ಅಲ್ಲ. ರಿಯಲ್ ಲೈಫ್ ನಲ್ಲೂ ಹೀರೋನೆ. ಕಳೆದ ಹಲವು ವರ್ಷಗಳಿಂದ ಸಮಾಜ ಸೇವೆ ಮಾಡುತ್ತಾ ಬಂದಿರುವ ವಿವೇಕ್ ಒಬೆರಾಯ್ ಈಗ ಮತ್ತೊಂದು ಹೃದಯ ಮುಟ್ಟುವಂತಹ ಕೆಲಸವನ್ನ ಮಾಡಿದ್ದಾರೆ. ಈ ಕೆಲಸಕ್ಕೆ ಪ್ರತಿಯೊಬ್ಬರು ಸಲ್ಯೂಟ್ ಮಾಡಲೇಬೇಕು.
ಹೌದು, ವಿವೇಕ್ ಒಬೆರಾಯ್ ಅವರ ಕಂಪನಿ ಕರ್ಮ್ ಇನ್ ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್, 25 ಸಿ.ಆರ್.ಪಿ.ಎಫ್ ಯೋಧರ ಕುಟುಂಬಗಳಿಗೆ 25 ಮನೆಗಳನ್ನು ದಾನ ಮಾಡಿದೆ.

ದೇಶಕ್ಕಾಗಿ ಪ್ರಾಣ ಅರ್ಪಿಸಿದ ಹುತಾತ್ಮ ಯೋಧರ ಕುಟುಂಬಕ್ಕೆ ಗೌರವಾರ್ಥವಾಗಿ 25 ಫ್ಲಾಟ್ ಗಳನ್ನು ಕೊಡುವುದಾಗಿ ವಿವೇಕ್ ಒಬೆರಾಯ್ ಕಂಪನಿ ಸಿ.ಆರ್.ಪಿ.ಎಫ್ ಅಧಿಕಾರಿಗಳಿಗೆ ಪತ್ರ ಬರೆದಿದೆ. ಈಗಾಗ್ಲೇ ನಾಲ್ಕು ಫ್ಲಾಟ್ ಗಳನ್ನು ವಿತರಣೆ ಮಾಡಲಾಗಿದೆ. ಉಳಿದ ಪಟ್ಟಿಯನ್ನು ಕೂಡ ಸದ್ಯದಲ್ಲೇ ರಿಲೀಸ್ ಮಾಡೋದಾಗಿ ಕಂಪನಿ ತಿಳಿಸಿದೆ.
ಮಾರ್ಚ್ 11ರಂದು ಚತ್ತೀಸ್ ಗಢದ ಸುಖ್ಮಾದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದರು. ರಸ್ತೆ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ದಾಳಿ ನಡೆಸಿ 25 ಯೋಧರನ್ನು ಮಾವೋವಾದಿಗಳು ಹತ್ಯೆ ಮಾಡಿದ್ದರು.
ಇತ್ತೀಚೆಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ 12 ಹುತಾತ್ಮ ಯೋಧರ ಕುಟುಂಬಸ್ಥರಿಗೆ ರೂ.1.08 ಕೋಟಿ ರೂ. ನೆರವು ನೀಡಿದ್ದರು.


Click it and Unblock the Notifications











