For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ವಿವೇಕ್ ಒಬೆರಾಯ್ ಹೃದಯಸ್ಪರ್ಶಿ ಬರಹ

  By Avani Malnad
  |

  ಸುಶಾಂತ್ ಸಿಂಗ್ ರಜಪೂತ್ ಎಂಬ ಅಪೂರ್ವ ನಟನನ್ನು ಕಳೆದುಕೊಂಡ ಬಾಲಿವುಡ್‌ನಲ್ಲಿ ಅಸಹನೀಯ ವಾತಾವರಣವೊಂದು ಸೃಷ್ಟಿಯಾಗಿದೆ. ಬದುಕಿದ್ದಾಗ ಸುಶಾಂತ್ ಜತೆ ಉತ್ತಮ ಒಡನಾಟ ಬೆಳೆಸದೆ ಅವರನ್ನು ನಿರ್ಲಕ್ಷಿಸಿದವರು, ಇಂದು ಸುಶಾಂತ್ ಸಾವಿನಿಂದ ಭಾರಿ ನಷ್ಟ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ ಎಂದು ಅನೇಕರು ಕಿಡಿಕಾರಿದ್ದಾರೆ.

  ಸುಶಾಂತ್ ಸಾವಿನ ಬಳಿಕ ವೈರಲ್ ಆಯ್ತು ಅಕ್ಷಯ್ ಕುಮಾರ್ ವಿಡಿಯೋ | Akshay Kumar | Sushanth Singh Rajput

  ಸುಶಾಂತ್ ಸಾವಿನ ನಂತರ ಅವರ ಅಂತ್ಯಸಂಸ್ಕಾರಕ್ಕೆ ಬಾಲಿವುಡ್‌ನ ಕೆಲವೇ ಮಂದಿ ತೆರಳಿದ್ದರು. ಯಾವ ಸ್ಟಾರ್ ಕಲಾವಿದರೂ ಹೋಗಿರಲಿಲ್ಲ ಎನ್ನುವುದು ಆಕ್ರೋಶವನ್ನು ಹೆಚ್ಚಿಸಿದೆ. ಸುಶಾಂತ್ ಅಂತಿಮ ಪಯಣದಲ್ಲಿ ಪಾಲ್ಗೊಂಡವರಲ್ಲಿ ವಿವೇಕ್ ಒಬೆರಾಯ್ ಒಬ್ಬರು. ವಿವೇಕ್ ಕೂಡ ಸುಶಾಂತ್ ಅವರಂತೆಯೇ ಬಾಲಿವುಡ್‌ನಲ್ಲಿ ಅವಕಾಶಗಳಿಂದ ವಂಚಿತರಾದವರು. ಅವಮಾನಗಳನ್ನು ಎದುರಿಸಿದವರು. ಅಂತ್ಯಸಂಸ್ಕಾರದ ಬಳಿಕ ವಿವೇಕ್ ಒಬೆರಾಯ್ ಬರೆದಿರುವ ಹೃದಯಸ್ಪರ್ಶಿ ಬರಹ ಇಲ್ಲಿದೆ. ಮುಂದೆ ಓದಿ...

  ಆರೇ ತಿಂಗಳಲ್ಲಿ ಏಳು ಪ್ರಮುಖ ಸಿನಿಮಾಗಳನ್ನು ಕಳೆದುಕೊಂಡಿದ್ದರು ಸುಶಾಂತ್ ಸಿಂಗ್!

  ಆತ್ಮಹತ್ಯೆ ಪರಿಹಾರವಾಗಲಾರದು

  ಆತ್ಮಹತ್ಯೆ ಪರಿಹಾರವಾಗಲಾರದು

  ಇಂದು ಸುಶಾಂತ್ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದು ಹೃದಯ ಛಿದ್ರವಾಗುವಂತೆ ಮಾಡಿತ್ತು. ನನ್ನ ಅನುಭವ ಹಂಚಿಕೊಂಡು ಆತನ ನೋವು ಕಡಿಮೆ ಮಾಡಲು ನಾನು ಸಹಾಯ ಮಾಡಬಹುದಾಗಿತ್ತು ಎನಿಸುತ್ತಿದೆ. ನನ್ನದೇ ಬದುಕಿನ ನೋವಿನ ಪಯಣದಲ್ಲಿ ಸಾಗಿದ್ದೆ. ಅದು ಬಹಳ ಗಾಢ ಮತ್ತು ಒಂಟಿಯಾಗಿರಬಹುದು, ಆದರೆ ಆತ್ಮಹತ್ಯೆ ಎಂದಿಗೂ ಪರಿಹಾರವಾಗಲಾರದು.

  ಪ್ರೀತಿಸುವುದು ಅರ್ಥವಾಗುತ್ತಿತ್ತು

  ಪ್ರೀತಿಸುವುದು ಅರ್ಥವಾಗುತ್ತಿತ್ತು

  ಇಂದು ಅವರ ಈ ದುರಂತ ಅಗಲುವಿಕೆಗೆ ದುಃಖಿಸುತ್ತಿರುವ ತನ್ನ ಕುಟುಂಬದವರು, ಸ್ನೇಹಿತರು ಮತ್ತು ಲಕ್ಷಾಂತರ ಅಭಿಮಾನಿಗಳ ಕುರಿತು ಯೋಚಿಸುವುದನ್ನು ಅವರು ನಿಲ್ಲಿಸಿದ್ದರು ಎನಿಸುತ್ತದೆ. ಅವರನ್ನು ಜನರು ಎಷ್ಟು ಪ್ರೀತಿಸುತ್ತಾರೆ ಎನ್ನುವುದು ಅವರಿಗೆ ಅರ್ಥವಾಗುತ್ತಿತ್ತು.

  ನೋವನ್ನು ಸಹಿಸಿಕೊಳ್ಳಲಾಗಲಿಲ್ಲ

  ನೋವನ್ನು ಸಹಿಸಿಕೊಳ್ಳಲಾಗಲಿಲ್ಲ

  ಇಂದು ಅವರ ತಂದೆಯನ್ನು ನೋಡಿದಾಗ ಅಂತ್ಯಸಂಸ್ಕಾರದಲ್ಲಿ ಬೆಂಕಿ ಹೊತ್ತಿಸುವಾಗ ಅವರ ಕಣ್ಣುಗಳಲ್ಲಿದ್ದ ನೋವನ್ನು ಸಹಿಸಿಕೊಳ್ಳಲಾಗಲಿಲ್ಲ. ಅವರ ಸಹೋದರಿ ಅಳುವುದನ್ನು ಕೇಳಿದಾಗ, ಮರಳಿ ಬರುವಂತೆ ಆತನನ್ನು ಬೇಡಿಕೊಳ್ಳುತ್ತಿದ್ದಾಗ ಆ ನೋವು ಎಷ್ಟು ಆಳವಾಗಿ ಘಾಸಿ ಮಾಡುತ್ತಿದೆ ಎಂಬುದನ್ನು ವಿವರಿಸಲು ಆಗುತ್ತಿಲ್ಲ...

  ಅರ್ಹರಿಗೆ ಮನ್ನಣೆ ಸಿಗಲಿ

  ಅರ್ಹರಿಗೆ ಮನ್ನಣೆ ಸಿಗಲಿ

  ತನ್ನನ್ನು ಕುಟುಂಬ ಎಂದು ಕರೆದುಕೊಳ್ಳುವ ಚಿತ್ರೋದ್ಯಮ ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಲಿದೆ ಎಂದು ಆಶಿಸುತ್ತೇನೆ. ನಾವು ಒಳಿತಿಗಾಗಿ ಬದಲಾಗಬೇಕಿದೆ. ಈ ಬಿ**ಅನ್ನು ಅಳಿಸಿ ಹೆಚ್ಚು ಕಾಳಜಿ ತೋರಿಸಬೇಕು, ಅಧಿಕಾರದ ಆಟವನ್ನು ಕಡಿಮೆ ಮಾಡಿ ಹೃದಯ ವೈಶಾಲ್ಯ ಮತ್ತು ಸಹಾನುಭೂತಿ ಹೊಂದಬೇಕಿದೆ. ಅಹಂಕಾರ ಕಡಿಮೆ ಮಾಡಿಕೊಂಡು ಅರ್ಹ ಪ್ರತಿಭಾವಂತರಿಗೆ ಮನ್ನಣೆ ನೀಡಬೇಕಿದೆ.

  ಇದು ಎಚ್ಚರಿಕೆಯ ಗಂಟೆ

  ಇದು ಎಚ್ಚರಿಕೆಯ ಗಂಟೆ

  ಈ ಕುಟುಂಬ ನಿಜವಾಗಿಯೂ ಒಂದು ಕುಟುಂಬವಾಗಬೇಕು. ಪ್ರತಿಭೆಗೆ ಪೋಷಣೆ ಸಿಗುವ ಸ್ಥಳವಾಗಬೇಕು ಅದನ್ನು ಹೊಸಕಿಹಾಕುವುದಲ್ಲ. ಒಬ್ಬ ಕಲಾವಿದನಿಗೆ ಮೆಚ್ಚುಗೆ ಅನುಭವ ಸಿಗುವ ಜಾಗವಾಗಬೇಕೇ ವಿನಾ ಅವಮಾನವಾಗುವುದಲ್ಲ. ಇದು ನಮ್ಮೆಲ್ಲರಿಗೂ ಎಚ್ಚರಿಕೆಯ ಗಂಟೆ.

  ನಮಗೆ ಅರ್ಹತೆ ಇರಲಿಲ್ಲ

  ನಮಗೆ ಅರ್ಹತೆ ಇರಲಿಲ್ಲ

  ಎಂದೆಂದಿಗೂ ನಗುತ್ತಿದ್ದ ಸುಶಾಂತ್ ಸಿಂಗ್ ರಜಪೂತ್ ಅವರನ್ನು ನಾನು ಮಿಸ್ ಮಾಡಿಕೊಳ್ಳಲಿದ್ದೇನೆ. ನೀವು ಅನುಭವಿಸಿದ ಎಲ್ಲ ನೋವನ್ನೂ ದೇವರು ದೂರ ಮಾಡಲಿ ಎಂದು ಪ್ರಾರ್ಥಿಸುತ್ತೇನೆ ನನ್ನ ಸಹೋದರ. ಈ ನಷ್ಟವನ್ನು ಭರಿಸುವ ಶಕ್ತಿ ನಿಮ್ಮ ಕುಟುಂಬಕ್ಕೆ ಸಿಗಲಿ. ನೀವೀಗ ಉತ್ತಮ ಜಾಗದಲ್ಲಿ ಇದ್ದೀರಿ ಎಂದುಕೊಳ್ಳುತ್ತೇನೆ. ಬಹುಶಃ ನಿಮ್ಮೊಂದಿಗೆ ಇರಲು ನಮಗೆ ಅರ್ಹತೆ ಇರಲಿಲ್ಲ.

  English summary
  Bollywood actor Vivek Oberoi who was present in Sushant Singh Rajput's funeral wrote an emotional note of his sad demise.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X