»   » ಯೂಟ್ಯೂಬ್‌ ನಂ.1 ಟ್ರೆಂಡಿಂಗ್‌ನಲ್ಲಿ ಅಮೀರ್ 'ಸೀಕ್ರೆಟ್ ಸೂಪರ್‌ಸ್ಟಾರ್' ಟ್ರೈಲರ್

ಯೂಟ್ಯೂಬ್‌ ನಂ.1 ಟ್ರೆಂಡಿಂಗ್‌ನಲ್ಲಿ ಅಮೀರ್ 'ಸೀಕ್ರೆಟ್ ಸೂಪರ್‌ಸ್ಟಾರ್' ಟ್ರೈಲರ್

Posted By:
Subscribe to Filmibeat Kannada

ಕೆಲದಿನಗಳ ಹಿಂದಷ್ಟೆ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಬಾಲಿವುಡ್ ಸಿನಿ ಪ್ರೇಮಿಗಳ ಕುತೂಹಲ ಕೆರಳಿಸಿದ್ದ ಅಮೀರ್ ಖಾನ್ ಅಭಿನಯದ 'ಸೀಕ್ರೆಟ್ ಸೂಪರ್‌ಸ್ಟಾರ್' ಟ್ರೈಲರ್ ಬಿಡುಗಡೆ ಆಗಿದೆ.

ಅಮೀರ್ ಖಾನ್ ಪ್ರಕಾರ ಬಾಲಿವುಡ್‌ನ ಸೂಪರ್ ಸ್ಟಾರ್ ಯಾರು?

'ಸೀಕ್ರೆಟ್ ಸೂಪರ್ ಸ್ಟಾರ್' ಚಿತ್ರದಲ್ಲಿ ಅಮೀರ್ ಖಾನ್ ರವರು ಮ್ಯೂಸಿಕ್ ಡೈರೆಕ್ಟರ್ ಆಗಿ ಶಕ್ತಿ ಕುಮಾರ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಲೀಡ್ ರೋಲ್ ನಲ್ಲಿ 'ದಂಗಲ್' ಚಿತ್ರದಲ್ಲಿ ಅಮೀರ್ ಖಾನ್ ರ ಮಗಳ ಪಾತ್ರದಲ್ಲಿ ನಟಿಸಿದ್ದ ಝೈರಾ ವಾಸಿಮ್ ಅಭಿನಯಿಸಿದ್ದಾರೆ. ಅಂದಹಾಗೆ ಚಿತ್ರವು ಬರೊಡಾ ಮೂಲದ 14 ವರ್ಷದ ಹುಡುಗಿಯೊಬ್ಬಳು ತಾನು ದೊಡ್ಡ ಗಾಯಕಿ ಆಗಬೇಕು ಎನ್ನುವ ಕನಸನ್ನು ನನಸು ಮಾಡಿಕೊಳ್ಳಲು ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾಳೆ ಎಂಬ ಕಥೆಯನ್ನು ಹೊಂದಿದೆ. ಝೈರಾ ವಾಸಿಮ್, 14 ವರ್ಷದ ಇನ್ಸಿಯಾ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

 Watch Aamir Khan starrer 'Secret Superstar' Trailer

ಅಂದಹಾಗೆ ನಿನ್ನೆಯಷ್ಟೆ ಬಿಡುಗಡೆ ಆಗಿರುವ 'ಸೀಕ್ರೆಟ್ ಸೂಪರ್‌ಸ್ಟಾರ್' ಚಿತ್ರದ ಟ್ರೈಲರ್ 21 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಪಡೆದಿದೆ. ಅಲ್ಲದೇ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ ಒಂದನೇ ಸ್ಥಾನದಲ್ಲಿದೆ.

'ದಂಗಲ್' ಜೋಡಿಯಿಂದ ಮತ್ತೊಂದು ಅದ್ಭುತ ಕಥೆಯ ಸಿನಿಮಾ

ಅದ್ವೈತ್ ಚಂದನ್ ರಚಿಸಿ-ನಿರ್ದೇಶನ ಮಾಡಿರುವ 'ಸೀಕ್ರೆಟ್ ಸೂಪರ್‌ಸ್ಟಾರ್' ಚಿತ್ರವನ್ನು 'ಅಮೀರ್ ಖಾನ್ ಪ್ರೊಡಕ್ಷನ್ಸ್' ಕಂಪನಿ ಅಡಿಯಲ್ಲಿ ಅಮೀರ್ ಖಾನ್, ಪತ್ನಿ ಕಿರಣ್ ರಾವ್, ಆಕಾಶ್ ಚಾವ್ಲಾ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರವು ದಿಪಾವಳಿಗೆ ಬಿಡುಗಡೆ ಆಗಲಿದೆ. ಈ ಚಿತ್ರದ ಟ್ರೈಲರ್ ಈ ಕೆಳಗಿನಂತಿದೆ ನೋಡಿ..

English summary
Bollywood Actor Aamir Khan starrer 'Secret Superstar' trailer released. This movie is directed by Advait Chandan, features Zaira Wasim, Meher Vij, Raj Arjun, Tirth Sharma, Kabir Sheikh and others.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada