»   » ಮಿ.ಎಕ್ಸ್- ಅದೃಶ್ಯ ಮಾನವನಾದ ಕಿಸ್ಸಿಂಗ್ ಸ್ಟಾರ್

ಮಿ.ಎಕ್ಸ್- ಅದೃಶ್ಯ ಮಾನವನಾದ ಕಿಸ್ಸಿಂಗ್ ಸ್ಟಾರ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನ ಸೀರಿಯಲ್ ಕಿಸ್ಸರ್ ಇಮ್ರಾನ್ ಹಶ್ಮಿ ಆಗಾಗ ಭೂತ ಪ್ರೇತಗಳ ಚಿತ್ರಗಳಲ್ಲೂ ಕಾಣಿಸಿಕೊಂಡು ಇಮೇಜ್ ಚೇಂಜ್ ಮಾಡಲು ಯತ್ನಿಸುವುದ್ ಎಲ್ಲರಿಗೂ ಗೊತ್ತೇ ಇದೆ. ಈಗ ಇಮ್ರಾನ್ ಹಶ್ಮಿ ತಮ್ಮ ಮುಂದಿನ ಚಿತ್ರದಲ್ಲಿ ಅದೃಶ್ಯ ಮಾನವನಾಗಿ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಕ್ರಮ್ ಭಟ್ ಅವರ ನಿರ್ಮಾಣದ ಮುಂದಿನ 3ಡಿ ಚಿತ್ರ ಮಿ.ಎಕ್ಸ್ ನಲ್ಲಿ ಇಮ್ರಾನ್ ಹಶ್ಮಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡಾ. ವಿಕ್ರಮ್ ಸಿನ್ಹಾಲ್ ಹಾಗೂ ಮಿ,ಎಕ್ಸ್ ಪಾತ್ರದಲ್ಲಿ ಇಮ್ರಾನ್ ಹಶ್ಮಿ ಕಾಣಿಸಿಕೊಳ್ಳುತ್ತಿದ್ದರೆ ಇಮ್ರಾನ್ ಪ್ರೇಯಸಿಯಾಗಿ ಅಮಿರಾ ದಸ್ತೂರ್ ಮಿಲ್ಲಿ ಅರೋರಾ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

Watch Mr. X Trailer: Emraan Hashmi As Invisible Man

ಮಹೇಶ್ ಭಟ್, ವಿಕ್ರಮ್ ಭಟ್ ಹಾಗೂ ಮುಖೇಶ್ ಭಟ್ ಪ್ರೊಡೆಕ್ಷನ್ ನಿಂದ ಬಂದಿರುವ ಈ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ. ಅದೃಶ್ಯನಾಗಿ ಮಾನವ ಸೇಡು ತೀರಿಸಿಕೊಳ್ಳಲು ಹವಣಿಸುವ ಕಥೆಯನ್ನು ಶಗುಫ್ತಾ ರಫೀಕ್ ಬರೆದಿದ್ದಾರೆ.

ಹಳೆ ಹಿಂದಿ ಚಿತ್ರಗಳನ್ನು ಮೆಲಕು ಹಾಕುವವರಿಗೆ ನೆನಪಿದ್ದರೆ ಮಹೇಶ್ ಭಟ್ ಅವರ ತಂದೆ ನಾನಾಭಾಯಿ ಭಟ್ ಅವರು 1957ರಲ್ಲಿ ಮಿ.ಎಕ್ಸ್ ಹೆಸರಿನ ಚಿತ್ರ ತೆಗೆದು ಅಶೋಕ್ ಕುಮಾರ್ ಅವರನ್ನು ನಾಯಕರನ್ನಾಗಿಸಿದ್ದರು. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮಹೇಶ್ ಭಟ್ ಟ್ವೀಟ್ ಮಾಡಿ ಇಮ್ರಾನ್ ಹಶ್ಮಿ ಅಭಿಮಾನಿಗಳಿಗೆ ಈ ಚಿತ್ರದಲ್ಲಿ ಅಚ್ಚರಿ ಕಾದಿದೆ ಎಂದಿದ್ದಾರೆ.

ಜಿಸ್ಮ್ 2 ನಲ್ಲಿ ಸನ್ನಿ ಲಿಯೋನ್ ಜೊತೆ ನಟಿಸಿದ್ದ ಅರುಣೋದಯ್ ಸಿಂಗ್ ಕೂಡಾ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಏ.17ಕ್ಕೆ ಚಿತ್ರ ಬಿಡುಗಡೆಗೊಳ್ಳಲು ಸಿದ್ಧವಾಗಿದೆ. ಸದ್ಯಕ್ಕೆ ಚಿತ್ರದ ಭಯಾನಕ ಟ್ರೈಲರ್ ನೋಡಿ ಆನಂದಿಸಿ.. ಅಂದ ಹಾಗೆ, ಇಂಗ್ಲೀಷ್ ಜರ್ಮನ್ ಸೈನ್ಸ್ ಥ್ರಿಲ್ಲರ್ ಹಾಲೋಮನ್ ನೆನಪಾದರೆ ಮಹೇಶ್ ಭಟ್ ಗೆ ಒಂದು ಟ್ವೀಟ್ ಮಾಡಿ ಬಿಡಿ.

English summary
Emraan Hashmi's much awaited movie Mr. X trailer is finally out. An upcoming thriller movie directed by Vikram Bhatt and written by Shagufta Rafique will be in 3D.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada