»   » ಬಾಲಿವುಡ್ 'ದೃಶ್ಯಂ'ನಲ್ಲಿ ಅಜಯ್ ದೇವ್ಗನ್ ಕಮಾಲ್

ಬಾಲಿವುಡ್ 'ದೃಶ್ಯಂ'ನಲ್ಲಿ ಅಜಯ್ ದೇವ್ಗನ್ ಕಮಾಲ್

Posted By:
Subscribe to Filmibeat Kannada

ಮಾಲಿವುಡ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅಭೂತಪೂರ್ವ ಯಶಸ್ಸು ದಾಖಲಿಸಿದ ಸಿನಿಮಾ 'ದೃಶ್ಯಂ'. ಎರಡು ವರ್ಷಗಳ ಹಿಂದೆಯಷ್ಟೇ, ರಿಲೀಸ್ ಆದ 'ದೃಶ್ಯಂ' ಮಾಲಿವುಡ್ ಗಲ್ಲಪೆಟ್ಟಿಗೆಯನ್ನ ಚಿಂದಿ ಉಡಾಯಿಸಿತ್ತು. ಕೇಬಲ್ ಚಾನೆಲ್ ನಡೆಸುವ ಸಾಮಾನ್ಯ ರೈತನಾಗಿ ಮೋಹನ್ ಲಾಲ್ ಅಭಿನಯಿಸಿದ 'ದೃಶ್ಯಂ' ಮಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಟ್ ಮಾಡಿದ್ದು ಬರೋಬ್ಬರಿ 15 ಕೋಟಿ. ಮಾಲಿವುಡ್ ಮಟ್ಟಿಗೆ ಇದು ಹಿಸ್ಟ್ರಿ.

ಇದೇ ಹಿಸ್ಟ್ರಿ ರಿಪೀಟ್ ಆಗಿದ್ದು ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ನಲ್ಲಿ. ಕನ್ನಡದ ಅವತರಣಿಕೆಯಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ತೆಲುಗು ಅವತರಣಿಕೆಯಲ್ಲಿ ವಿಕ್ಟರಿ ವೆಂಕಟೇಶ್ ಅಭಿನಯಿಸಿ ಕಲೆಕ್ಷನ್ ನಲ್ಲಿ ದಾಖಲೆ ಮಾಡಿದ್ದರು. [ಚಿತ್ರ ವಿಮರ್ಶೆ: ರೋಚಕ ರವಿಚಂದ್ರನ್ 'ದೃಶ್ಯ' ವೈಭವ]

ಈಗ ಈ 'ದೃಶ್ಯಂ' ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದೆ. ಅಜಯ್ ದೇವ್ಗನ್ ಮತ್ತು ಶ್ರಿಯಾ ಶರಣ್ ಮುಖ್ಯಭೂಮಿಕೆಯಲ್ಲಿರುವ 'ದೃಶ್ಯಂ' ಹಿಂದಿ ವರ್ಷನ್ ಟ್ರೈಲರ್ ರಿಲೀಸ್ ಆಗಿದೆ ನೋಡಿ...

Watch Hindi movie Drishyam trailer

ಹೆಸರಿಗೆ ರೀಮೇಕ್ ಆದರೂ, ಚಿತ್ರದ ಲೊಕೋಷನ್ಸ್ ಮಾತ್ರ ಕಣ್ಣುಕೋರೈಸುವಂತಿದೆ. ಅಜಯ್ ದೇವ್ಗನ್ ಮತ್ತು ಶ್ರಿಯಾ ಶರಣ್ ಕೆಮಿಸ್ಟ್ರಿ ಕೂಡ ಟ್ರೈಲರ್ ನ ಹೈಲೈಟ್. ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿ ತಬೂ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ.

ನಿಶಿಕಾಂತ್ ಕಾಮತ್ ನಿರ್ದೇಶಿಸಿರುವ 'ದೃಶ್ಯಂ' ಸಿನಿಮಾ ಜೂನ್ 31ರಂದು ತೆರೆಗೆ ಬರಲಿದೆ. ದಕ್ಷಿಣದ ಮೂರು ಭಾಷೆಗಳಲ್ಲಿ ಹಿಟ್ ಆಗಿರುವ 'ದೃಶ್ಯಂ' ಬಾಲಿವುಡ್ ನಲ್ಲಿ ಧೂಳೆಬ್ಬಿಸುತ್ತಾ ಅಂತ ಕಾದು ನೋಡ್ಬೇಕು.

English summary
Makers of the movie 'Drishyam' starring Ajay Devgan have released the much awaited trailer. 'Drishyam', features Ajay Devgan, Tabu and Shriya Saran in lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada