twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್ ಮಂದಿ ನಿದ್ದೆಗೆಡಿಸಲಿರುವ ಕನ್ನಡದ 'ಸರಕು'

    By ಜೇಮ್ಸ್ ಮಾರ್ಟಿನ್
    |

    ಕೋಟಿಗಟ್ಟಲೆ ಸುರಿದು ಸಿನಿಮಾ ನಿರ್ಮಿಸುತ್ತಿರುವ ಕನ್ನಡದ ನಿರ್ಮಾಪಕರಿಗೆ ಶಾಕ್ ನೀಡಿ ಕನ್ನಡದ ಚಿತ್ರರಂಗ ಇತಿಹಾಸದಲ್ಲೇ ಹೊಸ ಮುನ್ನುಡಿ ಬರೆದ '6-5=2' ಅನ್ನೋ ಹಾರರ್ ಸಿನಿಮಾ ಈಗ ಪಕ್ಕದ ರಾಜ್ಯಗಳಲ್ಲೂ ಸದ್ದು ಮಾಡುತ್ತಿದೆ. ಚಿತ್ರ ನಿರ್ದೇಶಕ ಅಶೋಕ್ ಹಾಗೂ ಅವರ ತಂಡ ಚಿತ್ರವನ್ನು ಡಬ್ ಮಾಡಿ ತೆಲುಗು, ತಮಿಳಿನಲ್ಲಿ ರಿಲೀಸ್ ಮಾಡುವ ಉತ್ಸಾಹದಲ್ಲಿದ್ದಾರೆ. ಈ ನಡುವೆ ಚಿತ್ರದ ಹಿಂದಿ ರಿಮೇಕ್ ತೆರೆಗೆ ಬರಲು ಸಿದ್ಧವಾಗಿದ್ದು, ಚಿತ್ರದ ಟ್ರೇಲರ್ ಪ್ರೇಕ್ಷಕರ ಸಮ್ಮುಖಕ್ಕೆ ಬಂದಿದೆ.

    ಕನ್ನಡದಲ್ಲಿ ಅತಿ ಕಡಿಮೆ ಪ್ರಚಾರ, ಸ್ಟಾರ್ ನಟ ನಟಿ, ನಿರ್ದೇಶಕರಿಲ್ಲದೆ, ಎಲ್ಲೂ ಪ್ರಚಾರ ಪಡೆದುಕೊಳ್ಳದ ಸಿನಿಮಾ ಥಿಯೇಟರ್ ನಲ್ಲಿ ಒಂದು ವಾರ ಇರೋದೇ ಕಷ್ಟ ಅಂದುಕೊಂಡಿದ್ದರು. ಆದರೆ ಆಗಿದ್ದೇ ಬೇರೆ. ಹೊಸಬರ ಚಿತ್ರಕ್ಕೆ ಪ್ರೇಕ್ಷಕ ಫಿದಾ ಆಗಿಬಿಟ್ಟ. ವಿಡಿಯೋ ತುಣುಕೊಂದನ್ನು ಇಟ್ಟುಕೊಂಡು ಕಥೆ ಹೇಳಿದ ರೀತಿಯನ್ನು ಮೆಚ್ಚಿಕೊಂಡ. ['6-5=2' ವಿಮರ್ಶೆ: ಮೀಟರ್ ಇರುವವರಿಗೆ ಮಾತ್ರ]

    Watch 6-5=2 Hindi Horror movie trailer

    6-5=2 ಸಸ್ಪೆನ್, ಥ್ರಿಲ್ ರಿಯಲ್ ಕಥೆಯೋ ಅಲ್ಲವೋ ಜನಕ್ಕೆ ಒಳ್ಳೆ ಅನುಭವವಂತೂ ನೀಡಿತು. ಗಾಂಧಿನಗರ ಮಂದಿಯ ಲೆಕ್ಕಾಚಾರ ತಲೆಕೆಳಗು ಮಾಡಿದ್ದ ಚಿತ್ರ ಈಗ ಬಾಲಿವುಡ್ ಮಂದಿ ನಿದ್ದೆಗೆಡಿಸಲು ಸಿದ್ಧವಾಗಿದೆ. ಹಿಂದಿಯಲ್ಲಿ ಹಾರರ್ ಚಿತ್ರಗಳ ಹವಾ ಸ್ವಲ್ಪ ಹೆಚ್ಚಾಗೇ ಇರುವುದರಿಂದ ಈ ಚಿತ್ರವನ್ನು ಅಲ್ಲಿ ಜನ ಹೇಗೆ ಸ್ವೀಕರಿಸುತ್ತಾರೋ ಎಂಬ ಕುತೂಹಲ ಚಿತ್ರವನ್ನು ಮುಂಬೈಗೆ ಕರೆದೊಯ್ದಿರುವ ಮಾರ್ಸ್ ಫಿಲಂ ಸಂಸ್ಥೆಯ ಭರತ್ ಅವರಿಗೂ ಇದೆ.

    ಪಶ್ಚಿಮ ಘಟ್ಟದಲ್ಲಿ ಬರೋ ಗುಂಡ್ಯ ಅರಣ್ಯ ಪ್ರದೇಶಕ್ಕೆ ಬಂದು ನಾಪತ್ತೆಯಾಗೋ ಟ್ರೆಕ್ಕಿಂಗ್ ಕ್ರೇಜಿ ಮೈಂಡ್ ಗಳ ಕಥೆ. ಟ್ರೆಕ್ಕಿಂಗ್ ಗೆ ಹೋದ ಆರು ಜನರಲ್ಲಿ ಕೊನೆಗೆ ಐದು ಜನರು ಸತ್ತು ಒಬ್ಬರು ಮಾತ್ರ ಉಳಿದುಕೊಳ್ಳೋ ಕಥೆ ಇದು. 2010 ಅಕ್ಟೋಬರ್ ನಲ್ಲಿ ಆ ಸ್ಥಳಕ್ಕೆ ಬಂದಾಗ ಮಾತ್ರ ಅವರ ಗ್ರಹಚಾರ ಕೆಟ್ಟಿತ್ತು. ಮಳೆಕಾಟ, ದಾರಿ ತಪ್ಪಿದ ಮಕ್ಕಳಾಗಿ ಪರದಾಟ ನಡೆಸಿದ ಚಿತ್ರಣವೇ ಈ ಚಿತ್ರದ ಮೂಲ ಕಥಾವಸ್ತು. ಹೊಸ ಕ್ರೇಜ್ ಹುಟ್ಟು ಹಾಕಿದ್ದ ತಂಡದ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸುತ್ತಾ ಹಿಂದಿ ಭಾಷೆಗೆ ರಿಮೇಕ್ ಆಗಿರುವ 6-5=2 ಚಿತ್ರದ ಟ್ರೇಲರ್ ಇಲ್ಲಿದೆ ನೋಡಿ...

    <iframe width="640" height="360" src="//www.youtube.com/embed/cHvfe8Rdu98" frameborder="0" allowfullscreen></iframe>

    English summary
    Watch 6-5=2 Hindi Horror movie trailer. This movie is remake of the Kannada hit film 6-5=2, which made some noise at the box office, enough to ensure it's Hindi remake. It's genre is found footage/Horror, a film similar to The Blair Witch Project.
    Friday, May 23, 2014, 18:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X