»   » ಕಿಂಗ್ ಖಾನ್ ಶಾರುಖ್ 'ಫ್ಯಾನ್' ಟೀಸರ್ ಔಟ್

ಕಿಂಗ್ ಖಾನ್ ಶಾರುಖ್ 'ಫ್ಯಾನ್' ಟೀಸರ್ ಔಟ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನ ಕಿಂಗ್ ಶಾರುಖ್ ಅವರ ಬಹು ನಿರೀಕ್ಷಿತ 'ಫ್ಯಾನ್' ಚಿತ್ರಗಳ ಟೀಸರ್ ಗುರುವಾರ ಮಧ್ಯಾಹ್ನ ಅಭಿಮಾನಿಗಳ ಮುಂದೆ ಇಡಲಾಗಿದೆ. ಯಶ್ ರಾಜ್ ಬ್ಯಾನರ್ ನ ಈ ಚಿತ್ರದ ಟೀಸರ್ ಗೆ ಅಭಿಮಾನಿಗಳಿಂದ ಮುಕ್ತಕಂಠದ ಹೊಗಳಿಕೆ ಸಿಕ್ಕಿದೆ.

ಒಂದು ನಿಮಿಷದ ಟೀಸರ್ ನಲ್ಲಿ ಶಾರುಖ್ ಖಾನ್ ಅವರು ತಮ್ಮ ನಿವಾಸ ಮನ್ನತ್ ನ ಬಾಲ್ಕನಿಯಲ್ಲಿ ನಿಂತು ಅಭಿಮಾನಿಗಳತ್ತ ಕೈ ಬೀಸುವ ದೃಶ್ಯವಿದೆ. ಅಭಿಮಾನಿಯೊಬ್ಬಳ ಕೈ ಚುಂಬಿಸುತ್ತಾರೆ. ಅಸಂಖ್ಯ ಸಂಖ್ಯೆಯಲ್ಲಿ ಅಭಿಮಾನಿಗಳು 'ಐ ಲವ್ ಯೂ' ಎಂದು ಕೂಗುವುದು ಕೇಳಿಸುತ್ತದೆ.

2016ರ ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವನ್ನು ಬಾಂಡ್ ಬಾಜಾ ಬಾರಾತ್ ಚಿತ್ರ ಖ್ಯಾತಿಯ ಮನೀಶ್ ಶರ್ಮ ನಿರ್ದೇಶಿಸಿದ್ದಾರೆ. ಆದಿತ್ಯಾ ಚೋಪ್ರಾ ನಿರ್ಮಾಣದ ಈ ಚಿತ್ರದಲ್ಲಿ ಶಾರುಖ್ ಅವರು ಡಬ್ಬಲ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯಿದೆ. ಬಹುತೇಕ ದೆಹಲಿ, ಮುಂಬೈನಲ್ಲೇ ಶೂಟಿಂಗ್ ನಡೆಸಲಾಗಿದೆ.

ಫ್ಯಾನ್ ಚಿತ್ರದ ಟೀಸರ್ ಬಗ್ಗೆ ಟ್ವೀಟ್ ಮಾಡಿರುವ ಎಸ್ ಆರ್ ಕೆ ತನ್ನ ಅಭಿಮಾನಿಗಳ ಜೊತೆ ಟ್ವೀಟ್ ಮೂಲಕವೇ ಮಾತುಕತೆ ನಡೆಸಿದ್ದಾರೆ.

ಶಾರುಖ್ ಮನ್ನತ್ ಗೆ ಗ್ರಾಫಿಟಿ ಪ್ರಾಬ್ಲಂ

ಮುಂಬೈ ನಾಲ್ಕು ಅಂತಸ್ತಿನ ಮನ್ನತ್ ಎಂಬ ಬಂಗಲೆಯ ಗೋಡೆ ಮೇಲೆ ಇತ್ತೀಚೆಗೆ ಕೆಲ ಫ್ಯಾನ್ಸ್ ಗ್ರಾಫಿಟಿ ಕಲೆ ಮೂಲಕ ಸಂದೇಶಗಳನ್ನು ತಿಳಿಸಿದ್ದರು. ಅದರಲ್ಲಿ ಅಂಥ ಕೆಟ್ಟದ್ದಾಗಿ ಏನು ಬರೆದಿರಲಿಲ್ಲ. ಶಾರುಖ್ ಬಗ್ಗೆ ಅಭಿಮಾನವನ್ನು ವ್ಯಕ್ತಪಡಿಸಲಾಗಿತ್ತು.

ಶಾರುಖ್ ಬರುವ ತನಕ ಗೋಡೆ ಹಾಗೆ ಇರಲಿ

ಅದರೆ, ದಿಲ್ ವಾಲೆ ಶೂಟಿಂಗ್ ನಲ್ಲಿರುವ ಶಾರುಖ್ ತಮ್ಮ ಮನೆಗೆ ಹಿಂತಿರುಗಲು ಇನ್ನೂ 20ದಿನವಾದರೂ ಬೇಕು. ಅಲ್ಲಿ ತನಕ ಗೋಡೆ ತೊಳೆಯುವುದಿಲ್ಲ ಎಂದು ಸೆಕ್ಯುರಿಟಿ ಗಾರ್ಡ್ ಗಳು ಹೇಳಿದ್ದಾರೆ.

ಅಭಿಮಾನಿಗಳ ಜೊತೆ ಆಪ್ತ ಸಂವಾದ

ಅಭಿಮಾನಿಗಳ ಜೊತೆ ಆಪ್ತ ಸಂವಾದ ನಡೆಸಿದ ಕಿಂಗ್ ಖಾನ್ ಶಾರುಖ್.

ಫ್ಯಾನ್ ಚಿತ್ರದ ಟೀಸರ್ ನೋಡಿ

ಫ್ಯಾನ್ ಚಿತ್ರದ ಟೀಸರ್ ನೋಡಿ, ಮನ್ನತ್ ಬಳಿ ಅಭಿಮಾನಿಗಳ ದಂಡು, ಎರಡು ಕೈ ಚಾಚಿದ ಶಾರುಖ್ ಖಾನ್ ಫೇಮಸ್ ಪೋಸ್ ಎಲ್ಲವೂ ಕಾಣಬಹುದು.

English summary
Watch: Teaser of YRF's 'Fan'. The film produced by Yash Raj Films has been directed by Maneesh Sharma, of Band Baaja Baraat fame. And King Khan plays himself in the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada