»   » ನಾಟ್ಯ ಮಯೂರಿ ಸೋನಾಕ್ಷಿ ಸಿನ್ಹಾ ಖತರ್ನಾಕ್ ಡಾನ್ಸ್

ನಾಟ್ಯ ಮಯೂರಿ ಸೋನಾಕ್ಷಿ ಸಿನ್ಹಾ ಖತರ್ನಾಕ್ ಡಾನ್ಸ್

Posted By:
Subscribe to Filmibeat Kannada

ಸೋನಾಕ್ಷಿ ಸಿನ್ಹಾ ಅಂದ್ರೆ, ಬರೀ ಚೂಡಿದಾರ ಹಾಕೊಂಡು, ಇಲ್ಲಾ ಸೀರೆಯುಟ್ಟುಕೊಂಡು ಪಟಪಟ ಅಂತ ಮಾತಾಡುವ ಹುಡುಗಿಯಲ್ಲ. ಕೊಂಚ ಗ್ಲಾಮರಸ್ ಕೂಡ ಹೌದು ಅನ್ನೋದು ಅಕ್ಷಯ್ ಕುಮಾರ್ ಮತ್ತು ಪ್ರಭುದೇವ ಜೊತೆ ಕುಣಿದು ಕುಪ್ಪಳಿಸಿದಾಗಲೇ ಗೊತ್ತಾಗಿದ್ದು.

ಸೋನಾಕ್ಷಿ ಒಳ್ಳೆಯ ಡ್ಯಾನ್ಸರ್ ಅಂತ 'ರೌಡಿ ರಾಥೋರ್' ನಲ್ಲಿ ಪ್ರಭುದೇವ ಎಲ್ಲರಿಗೂ ತೋರಿಸಿಕೊಟ್ಟಿದ್ದರು. ಬಲೂನ್ ನಂತಿದ್ದ ಸೋನಾಕ್ಷಿ ಈಗ ತೂಕ ಇಳಿಸಿ ಬಳಕುವ ಬಳ್ಳಿಯಾದ್ಮೇಲೆ ಅವರ ವನುಪು ವಯ್ಯಾರ ಇನ್ನೂ ಜೋರಾಗಿರ್ಬೇಕಲ್ವಾ? ದಕ್ಷಿಣದಲ್ಲಿ 'ಲಿಂಗಾ' ಚಿತ್ರವನ್ನು ಮುಗಿಸಿಬಂದಿರುವ ಸೋನಾಕ್ಷಿ, ಬಾಲಿವುಡ್ ನ 'ತೇವರ್' ಚಿತ್ರದಲ್ಲಿ ಬಿಜಿಯಾಗಿದ್ದಾರೆ.

Watch video of Sonakshi Sinha's Radha Nachegi from Tevar

'ತೇವರ್' ಚಿತ್ರದಲ್ಲಿ 'ರಾಧಾ' ಆಗಿರುವ ಸೋನಾಕ್ಷಿಯ ನೃತ್ಯ ವೈಭವನ್ನು ಒಮ್ಮೆ ನೋಡಿದರೆ ನೀವೇ ಕಣ್ಣರಳಿಸುತ್ತೀರಾ. ಮಿರ ಮಿರ ಮಿಂಚುವ ಬಿಳಿ ಲಹೆಂಗಾ-ಚೋಲಿ ತೊಟ್ಟು ಕುಣಿದುಕುಪ್ಪಳಿಸುವ 'ರಾಧಾ'ಳನ್ನ ನೋಡುತ್ತಿದ್ದರೆ ಎಂಥವ್ರು ಕೂತಲ್ಲೇ ತಲೆದೂಗುತ್ತಾರೆ. ಹಾಗಿದೆ ಸೋನಾಕ್ಷಿಯ ನಾಟ್ಯ.

ಸಾಜಿದ್-ವಾಜಿದ್ ಹಾಕಿರುವ ತಾಳಕ್ಕೆ ನೃತ್ಯ ನಿರ್ದೇಶಕ ರೋಮೋ ಡಿ ಸೋಜ ಹೇಳಿಕೊಟ್ಟಂತೆ, ಸೋನಾಕ್ಷಿ ಅಚ್ಚುಕಟ್ಟಾಗಿ ಹೆಜ್ಜೆಹಾಕಿದ್ದಾರೆ. ಆ ಮೂಲಕ ಸೋನಾಕ್ಷಿಯ ಡಾನ್ಸ್ ಬಗ್ಗೆ ಆಡಿಕೊಳ್ಳುತ್ತಿದ್ದವರ ಬಾಯಿಗೆ ಬೀಗಹಾಕಿದಂತಾಗಿದೆ.

ಬರೋಬ್ಬರಿ 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಕಿರುವ ಅದ್ದೂರಿ ಸೆಟ್ ನಲ್ಲಿ 'ರಾಧಾ' ನರ್ತಿಸಿದ್ದಾಳೆ. ಅಚ್ಚರಿ ಅಂದ್ರೆ, ಸೋನಾಕ್ಷಿ ಹಾಕಿರುವ ಕಾಸ್ಟ್ಯೂಮ್ ಬೆಲೆ 75 ಲಕ್ಷ ರೂಪಾಯಿ. ಟಾಲಿವುಡ್ ನ ಬ್ಲಾಕ್ ಬಸ್ಟರ್ 'ಒಕ್ಕಡು' ಚಿತ್ರದ ರೀಮೇಕ್ ಆಗಿರುವ 'ತೇವರ್' ಚಿತ್ರವನ್ನ ಇಷ್ಟು ಅದ್ದೂರಿಯಾಗಿ ನಿರ್ಮಾಣ ಮಾಡಿರುವುದು ಬೋನಿ ಕಪೂರ್.

ಅಪ್ಪ ನಿರ್ಮಿಸುತ್ತಿರುವ 'ತೇವರ್'ನಲ್ಲಿ ಮಗ ಅರ್ಜುನ್ ಕಪೂರ್ ನಾಯಕನಾಗಿದ್ರೆ, ಆತನ ಹೃದಯಕ್ಕೆ ಬಾಣ ಬಿಡುವ ಹುಡುಗಿ ಸೋನಾಕ್ಷಿ. ಅರ್ಜುನ್ ಕಪೂರ್ ಗೆ ಮಾತ್ರವಲ್ಲದೆ, 'ರಾಧಾ' ಆಗಿ ಹೆಜ್ಜೆ ಹಾಕುವ ಮೂಲಕ ಸೋನಾಕ್ಷಿ ಎಲ್ಲರ ಹೃದಯಕ್ಕೂ ಲಗ್ಗೆ ಇಟ್ಟಿದ್ದಾರೆ. ಸೋನಾಕ್ಷಿಯ 'ರಾಧಾ ನಾಚ್' ಇಲ್ಲಿದೆ ನೋಡಿ ವೀಡಿಯೋದಲ್ಲಿ. (ಏಜೆನ್ಸೀಸ್)

English summary
Sonakshi Sinha's brand new sizzling number Radha Nachegi from the movie Tevar video is out. Sonakshi Sinha looks stunning and shows off her dancing skills. Check out the video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada