For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಯರ್ರಾಬಿರ್ರಿ ಕಾರು ಚಲಾಯಿಸಿದವನ ವಿರುದ್ಧ ಉರಿದು ಬಿದ್ದ ರಣ್ವೀರ್ ಸಿಂಗ್.!

  By Harshitha
  |

  ರಸ್ತೆಯಲ್ಲಿ ಕಸ ಬಿಸಾಕಿದವರಿಗೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ರೇಗಿದ ಘಟನೆ ನಿಮಗೆ ನೆನಪಿದೆ ತಾನೇ. ಇದೀಗ ಅಂಥದ್ದೇ ಮತ್ತೊಂದು ಘಟನೆ ಮುಂಬೈನಲ್ಲಿ ನಡೆದಿದೆ.

  ಈ ಬಾರಿ ಕಾಮನ್ ಮ್ಯಾನ್ ಮೇಲೆ ಉಗ್ರ ಪ್ರತಾಪ ತೋರಿರುವವರು ಬಾಲಿವುಡ್ ನಟ ರಣ್ವೀರ್ ಸಿಂಗ್. ಸದಾ ನಗು ನಗುತ್ತಾ ಜಾಲಿ ಮೂಡ್ ನಲ್ಲಿರುವ ರಣ್ವೀರ್ ಸಿಂಗ್ ಗೆ ಕೋಪ ಬಂದಿದೆ ಅಂದ್ರೆ ನಂಬಲು ಸಾಧ್ಯ ಇಲ್ಲ ಅಲ್ವಾ.?

  ನಂಬಲು ಕಷ್ಟ ಆದರೂ, ಇದೇ ಸತ್ಯ... ರಸ್ತೆಯಲ್ಲಿ ಯರ್ರಾಬಿರ್ರಿ ಕಾರು ಚಲಾಯಿಸಿ ಇನ್ನೊಬ್ಬರ ಜೀವಕ್ಕೆ ಆಪತ್ತು ತಂದವನ ವಿರುದ್ಧ ರಣ್ವೀರ್ ಸಿಂಗ್ ಗುಡುಗಿದ್ದಾರೆ.

  ದೀಪಿಕಾ ಕಡೆಯಿಂದ ಹೀಗೊಂದು ಎಡವಟ್ಟು: ಇದು ಯಾಕೆ ಬೇಕಿತ್ತು.? ದೀಪಿಕಾ ಕಡೆಯಿಂದ ಹೀಗೊಂದು ಎಡವಟ್ಟು: ಇದು ಯಾಕೆ ಬೇಕಿತ್ತು.?

  ಅಷ್ಟಕ್ಕೂ, ಆಗಿದ್ದೇನು ಅಂದ್ರೆ.. Rash ಡ್ರೈವಿಂಗ್ ಮಾಡುತ್ತ ಓರ್ವ ವ್ಯಕ್ತಿ ಇನ್ನೇನು ರಣ್ವೀರ್ ಸಿಂಗ್ ಕಾರಿಗೆ ಗುದ್ದಲು ಬಂದನಂತೆ. ಈ ಸಮಯದಲ್ಲಿ ಕುಪಿತಗೊಂಡು ಆ ಕಾರಿನ ಬಳಿ ಹೋದಾಗ, ಕಾರು ಚಾಲನೆ ಮಾಡುತ್ತಿದ್ದಾತ ಮೊಬೈಲ್ ಫೋನ್ ನಲ್ಲಿ ಬಿಜಿಯಾಗಿದ್ದನಂತೆ. ಇದನ್ನ ನೋಡಿದ್ಮೇಲೆ, ಸಿಟ್ಟಿನಿಂದ ರಣ್ವೀರ್ ಸಿಂಗ್ ಆತನ ಮೇಲೆ ಕೂಗಾಡಿದ್ದಾರೆ.

  ರಣ್ವೀರ್ ಕೂಗಾಡಿದ್ದನ್ನ ರೆಕಾರ್ಡ್ ಮಾಡಿ, ಆ ವಿಡಿಯೋನ ಯದ್ವಾತದ್ವಾ ಕಾರು ಚಾಲನೆ ಮಾಡಿದ ವ್ಯಕ್ತಿ ಟ್ವಿಟ್ಟರ್ ನಲ್ಲಿ ಶೇರ್ ಮಾಡಿ ರಣ್ವೀರ್ ಸಿಂಗ್ ಗೆ ಚಾಟಿಯೇಟು ಕೊಡುವ ಪ್ರಯತ್ನ ಮಾಡಿದರು.

  ಆದ್ರೆ, ನೆಟ್ಟಿಗರು ಮಾತ್ರ ರಣ್ವೀರ್ ಸಿಂಗ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಮೊಬೈಲ್ ಫೋನ್ ನಲ್ಲಿ ಬಿಜಿಯಾಗಿ ಟ್ರಾಫಿಕ್ ರೂಲ್ಸ್ ಮುರಿದ ವ್ಯಕ್ತಿ ವಿರುದ್ಧ ಟ್ವೀಟಿಗರು ಗರಂ ಆಗಿದ್ದಾರೆ.

  English summary
  Watch video: Ranveer Singh loses his Temper and scolds a man for Rash Driving. ವಿಡಿಯೋ: ಯರ್ರಾಬಿರ್ರಿ ಕಾರು ಚಲಾಯಿಸಿದವನ ವಿರುದ್ಧ ಉರಿದು ಬಿದ್ದ ರಣ್ವೀರ್ ಸಿಂಗ್.!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X