For Quick Alerts
  ALLOW NOTIFICATIONS  
  For Daily Alerts

  ಮಾಡೆಲ್‌ಗಳ ಸರಣಿ ಸಾವಿಗೆ ಬೆಚ್ಚಿ ಬಿದ್ದ ಕೊಲ್ಕತ್ತ: ಎರಡು ವಾರದಲ್ಲಿ ಮೂವರು ಸಾವು!

  |

  ಪಶ್ಚಿಮ ಬಂಗಾಳ ರಾಜ್ಯದಲ್ಲಿ ಮಾಡೆಲ್‌ಗಳ ಸರಣಿ ಸಾವಾಗುತ್ತಿದೆ. ಕೇವಲ ಎರಡು ವಾರದಲ್ಲಿ ಮೂರು ಮಂದಿ ಮಾಡೆಲ್‌ಗಳು ಅನುಮಾನ್ಪದವಾಗಿ ಸಾವನ್ನಪ್ಪಿದ್ದಾರೆ.

  ಹನ್ನೆರಡು ದಿನದ ಹಿಂದೆ ಬೆಂಗಾಲಿ ಟಿವಿ ಲೋಕದಲ್ಲಿ ಚಿರಪರಿಚಿತ ನಟಿಯಾಗಿದ್ದ ಪಲ್ಲವಿ ಡೇ ಸಾವನ್ನಪ್ಪಿದರು. ಕೊಲ್ಕತ್ತದ ಗರ್ಫಾದಲ್ಲಿರುವ ಅವರ ಅಪಾರ್ಟ್‌ಮೆಂಟ್‌ನಲ್ಲಿ ಪಲ್ಲವಿ ಡೇಯ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯಿತು. ನಟಿಯ ಸಾವಿನ ಬಗ್ಗೆ ಬೆಂಗಾಳಿ ಸಿನಿಮಾ ಹಾಗೂ ಟಿವಿ ಲೋಕ ಶೋಕ ವ್ಯಕ್ತಪಡಿಸಿತ್ತು.

  ಅದಾದ ಹತ್ತು ದಿನದ ಬಳಿಕ ಜನಪ್ರಿಯ ಮಾಡೆಲ್ ಬಿದಿಶಾ ಡಿ ಮಜುಂಧಾರ್ ಸಾವನ್ನಪ್ಪಿದರು. ಕೊಲ್ಕತ್ತದ ಡಂಡಂ ಬಳಿಯ ನಗೇರ್ ಬಜಾರ್‌ನಲ್ಲಿದ್ದ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಅವರ ಮೃತದೇಹ ಪತ್ತೆಯಾಯಿತು. ಬಿದಿಶಾ ಡಿ ಮಜುಂಧಾರ್ ಶವದ ಬಳಿ ಆತ್ಮಹತ್ಯೆ ಪತ್ರವೊಂದು ಪತ್ತೆಯಾಗಿತ್ತಾದರೂ, ಆ ಪತ್ರ ಗೊಂದಲಮಯವಾಗಿದೆ ಎಂದು ಪೊಲೀಸರು ಹೇಳಿದ್ದರು.

  ಇದೀಗ ಬಂಗಾಳದ ಮತ್ತೊಬ್ಬ ಪ್ರಖ್ಯಾತ ಮಾಡೆಲ್ ಮಂಜುಶಾ ನಿಯೋಗಿ ಸಾವನ್ನಪ್ಪಿದ್ದಾರೆ. ಕೋಲ್ಕತ್ತದ ಪುತೌಲಿ ಏರಿಯಾದಲ್ಲಿನ ಅವರ ನಿವಾಸದಲ್ಲಿ ಮಂಜುಶಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಿದಿಶಾ ಡಿ ಮಜುಂಧಾರ್ ಸಾವನ್ನಪ್ಪಿದ ಎರಡೇ ದಿನದ ಅಂತರದಲ್ಲಿ ಮಂಜುಶಾ ನಿಯೋಗಿ ಸಾವನ್ನಪ್ಪಿದ್ದಾರೆ.

  ಮಂಜುಶಾ ನಿಯೋಗಿ ಪುತೌಲಿ ಏರಿಯಾದಲ್ಲಿ ತಮ್ಮ ಕುಟುಂಬದೊಟ್ಟಿಗೆ ವಾಸವಾಗಿದ್ದರು. ಎರಡು ದಿನದ ಹಿಂದೆ ಮೃತಪಟ್ಟ ಬಿದಿಶಾ ಡಿ ಮಜುಂಧಾರ್ ಮಂಜುಶಾಳ ಆತ್ಮೀಯ ಗೆಳತಿಯಾಗಿದ್ದಳು. ಮಂಜುಶಾ ತಾಯಿ ಹೇಳಿರುವಂತೆ, ಬಿದಿಶಾ ಸಾವನ್ನಪ್ಪಿದ ಬಳಿಕ ಮಂಜುಶಾ ಬಹಳ ಬೇಸರಗೊಂಡಿದ್ದಳು, ಖಿನ್ನತೆ ಅನುಭವಿಸಿದ್ದಳು. ಬಿದಿಶಾ ಸಾವನ್ನಪ್ಪಿದಾಗಿನಿಂದಲೂ ಮಂಜುಶಾ, ತನ್ನ ತಾಯಿಯ ಬಳಿ ಬಿದಿಶಾ ಬಗ್ಗೆಯೇ ಮಾತನಾಡುತ್ತಿದ್ದಳಂತೆ. ಈಗ ಬಿದಿಶಾ ಹೋದ ಜಾಗಕ್ಕೇ ಮಂಜುಶಾ ಸಹ ಹೋಗಿದ್ದಾರೆ.

  ಬೆಂಗಾಲಿ ಗ್ಲಾಮರ್ ಲೋಕದಲ್ಲಿ ಆಗುತ್ತಿರುವ ಈ ಸರಣಿ ಸಾವು ಕುತೂಹಲದ ಜೊತೆಗೆ ಆತಂಕ ಮೂಡಿಸಿವೆ. ಕಳೆದ ಹನ್ನೆರಡು ದಿನದಲ್ಲಿ ಮೂವರು ಮಾಡೆಲ್‌ಗಳು ಸಾವನ್ನಪ್ಪಿದ್ದು ಪೊಲೀಸರಿಗೂ ಆತಂಕ ತಂದಿದೆ. ಮೂರೂ ಪ್ರಕರಣದ ತನಿಖೆಯನ್ನು ಪೊಲೀಸರು ಮಾಡುತ್ತಿದ್ದಾರೆ.

  English summary
  Three models died in last 12 days in Kolkata. First Tv actress Pallavi Dey died, then Bidisha died now Manjusha Niyogi died.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X