For Quick Alerts
  ALLOW NOTIFICATIONS  
  For Daily Alerts

  ದಿಶಾ ಸಾವಿನ ಕೆಲ ನಿಮಿಷಗಳ ಮುಂಚೆ ಏನಾಗಿತ್ತು: ಗೆಳೆಯ ಬಿಚ್ಚಿಟ್ಟ ಮಾಹಿತಿ

  |

  ಸುಶಾಂತ್ ಸಿಂಗ್ ಸಾವನ್ನಪ್ಪುವ ಕೆಲವೇ ದಿನಗಳ ಹಿಂದೆ ಸುಶಾಂತ್‌ ಸಿಂಗ್‌ ನ ಮಾಜಿ ವ್ಯವಸ್ಥಾಪಕಿ ಆಗಿದ್ದ ದಿಶಾ ಸಾಲಿಯಾನ್ ಎಂಬ ಯುವತಿ ಸ್ನೇಹಿತನ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ದಳು.

  Rachita Ram ಇತ್ತೀಚಿನ ಫೋಟೋಶೂಟ್‌ನ ತೆರೆ ಹಿಂದಿನ ದೃಶ್ಯ | Filmibeat Kannada

  ಜೂನ್ 9 ರಂದು ಮುಂಬೈನ ಮಲಾಡ್‌ನಲ್ಲಿನ ಕಟ್ಟಡವೊಂದರ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳು ದಿಶಾ. ಅದಾದ ಕೆಲವೇ ದಿನಗಳ ಬಳಿಕ ಅಂದರೆ ಜೂನ್ 14 ರಂದು ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದರು.

  ದಿಶಾ ಸಾಲಿಯಾನ್ ಆತ್ಮಹತ್ಯೆ: ಆಘಾತಕಾರಿ ಸಂಗತಿಗಳನ್ನು ತೆರೆದಿಟ್ಟ ಪೋಸ್ಟ್ ಮಾರ್ಟಂ ವರದಿ

  ದಿಶಾ ಸಾವಿನ ಬಳಿಕ ಸುಶಾಂತ್ ಸಾಕಷ್ಟು ಗೊಂದಲದಲ್ಲಿ, ಆತಂಕದಲ್ಲಿದ್ದರು ಎನ್ನಲಾಗಿತ್ತು, ಈ ಇಬ್ಬರ ಸಾವಿಗೆ ಪರಸ್ಪರ ಸಂಬಂಧ ಕಲ್ಪಿಸಲಾಗಿತ್ತು. ದಿಶಾ ಳದ್ದು ಆತ್ಮಹತ್ಯೆಯಲ್ಲ ಕೊಲೆ ಎಂಬ ವಾದವೂ ಇದೆ. ಈ ನಡುವೆ ದಿಶಾ ಸಾಯುವ ಕೆಲವೇ ನಿಮಿಷಗಳ ಮುಂಚೆ ನಡೆದಿದ್ದೇನೆ ಎಂಬುದನ್ನು ಅವರ ಸ್ನೇಹಿತರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಭಾವಿ ಪತಿ ಮನೆಯಲ್ಲಿ ದಿಶಾ ಪಾರ್ಟಿ

  ಭಾವಿ ಪತಿ ಮನೆಯಲ್ಲಿ ದಿಶಾ ಪಾರ್ಟಿ

  ಜೂನ್ 9 ರಂದು ದಿಶಾ, ತನ್ನ ಭಾವಿ ಪತಿ ಮನೆಯಲ್ಲಿ ಇತರ ಗೆಳೆಯರೊಂದಿಗೆ ಸೇರಿ ಪಾರ್ಟಿ ಮಾಡುತ್ತಿದ್ದರು. ಅಂದು ರಾತ್ರಿ ದಿಶಾ ತುಸು ಹೆಚ್ಚೇ ಕುಡಿದಿದ್ದರಂತೆ. ಕುಡಿದು, 'ನನ್ನನ್ನು ಯಾರೂ ಪ್ರೀತಿಸುವುದಿಲ್ಲ, ಗೆಳೆಯರೆಲ್ಲಾ ಮೋಸ ಮಾಡಿದ್ದಾರೆ. ಯಾರನ್ನೂ ನಂಬಲಾಗುವುದಿಲ್ಲ' ಎಂದೆಲ್ಲಾ ಮಾತನಾಡುತ್ತಿದ್ದರಂತೆ.

  ಸುಶಾಂತ್ ಆತ್ಮಹತ್ಯೆ ಪರಿಣಾಮ ಪ್ರಭಾಸ್‌ಗೆ ಆಯ್ತು ದೊಡ್ಡ ನಷ್ಟ!

  ರೂಮ್‌ಗೆ ಹೋಗಿ ಬಾಗಿಲು ಹಾಕಿಕೊಂಡ ದಿಶಾ

  ರೂಮ್‌ಗೆ ಹೋಗಿ ಬಾಗಿಲು ಹಾಕಿಕೊಂಡ ದಿಶಾ

  ಪಾರ್ಟಿಯಲ್ಲಿದ್ದ ಗೆಳೆಯರೊಬ್ಬರು, 'ಪಾರ್ಟಿಯ ಮೂಡು ಹಾಳುಮಾಡಬೇಡ' ಎಂದು ಬೈದಿದ್ದಾರೆ. ಇದರಿಂದ ಸಿಟ್ಟಾದ ದಿಶಾ ರೂಮ್‌ನಲ್ಲಿ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಕೆಲ ಸಮಯದ ನಂತರ ಗೆಳೆಯರು ರೂಂ ಬಾಗಿಲು ತೆರೆಯಲು ಯತ್ನಿಸಿದ್ದಾರೆ ಆದರೆ ದಿಶಾ ಬಾಗಿಲು ತೆಗೆದಿಲ್ಲ.

  ರೂಮ್‌ನ ಕಿಟಕಿಯಿಂದ ಕೆಳಗೆ ಹಾರಿದ ದಿಶಾ

  ರೂಮ್‌ನ ಕಿಟಕಿಯಿಂದ ಕೆಳಗೆ ಹಾರಿದ ದಿಶಾ

  ಕೊನೆಗೆ ಎಲ್ಲರೂ ಸೇರಿ ಬಾಗಿಲು ಮುರಿದಿದ್ದಾರೆ. ಅಷ್ಟರಲ್ಲೇ ದಿಶಾ ರೂಮ್‌ನ ಕಿಟಕಿಯಿಂದ ಕೆಳಗೆ ಹಾರಿಬಿಟ್ಟಿದ್ದಾರೆ. ಕೂಡಲೇ ಗೆಳೆಯರು ಕೆಳಗೆ ಬಂದಿದ್ದಾರೆ, ಆಗಿನ್ನೂ ದಿಶಾ ಬದುಕಿದ್ದರಂತೆ, ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಪ್ರಾಣ ಹೋಗಿದೆ.

  ಸಾವಿಗೂ ಮುನ್ನ ಸುಶಾಂತ್ ಗೂಗಲ್ ಮಾಡಿದ್ದೇನು? ತನಿಖೆಯ ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ಮುಂಬೈ ಪೊಲೀಸರು

  ವಾಟ್ಸ್‌ಆಪ್ ಗ್ರೂಫ್‌ನಲ್ಲಿ ಹಂಚಿಕೊಂಡಿರುವ ಗೆಳೆಯರು

  ವಾಟ್ಸ್‌ಆಪ್ ಗ್ರೂಫ್‌ನಲ್ಲಿ ಹಂಚಿಕೊಂಡಿರುವ ಗೆಳೆಯರು

  ಇದೆಲ್ಲ ಮಾಹಿತಿಯನ್ನು ದಿಶಾ ಜೊತೆಗೆ ಅಂದು ಪಾರ್ಟಿಯಲ್ಲಿದ್ದ ಗೆಳೆಯರೇ ವಾಟ್ಸ್‌ಆಪ್‌ ಗ್ರೂಪ್‌ ಗಳಲ್ಲಿ ಹಂಚಿಕೊಂಡಿದ್ದಾರೆ. ಪೊಲೀಸರಿಗೂ ಇದೇ ಹೇಳಿಕೆಯನ್ನು ನೀಡಿದ್ದಾರೆ. ಆದರೆ ದಿಶಾಳ ಪೋಸ್ಟ್‌ ಮಾರ್ಟಮ್‌ ವರದಿಯ ಬಗ್ಗೆ ಮಹಾರಾಷ್ಟ್ರ ಮಾಜಿ ಸಿಎಂ ನಾರಾಯಣ ರಾಣೆ ಅನುಮಾನ ವ್ಯಕ್ತಪಡಿಸಿದ್ದಾರೆ.

  English summary
  Sushant Singh's former manager Disha Salian died on June 09 night in Mumbai. Her friend said what happened that night.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X