»   » ಜಿಯಾ ಖಾನ್ ಬರೆದ ಮರಣಪತ್ರದಲ್ಲಿ ಏನಿದೆ?

ಜಿಯಾ ಖಾನ್ ಬರೆದ ಮರಣಪತ್ರದಲ್ಲಿ ಏನಿದೆ?

Posted By:
Subscribe to Filmibeat Kannada

ಚಿಕ್ಕ ವಯಸ್ಸಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ತಾರೆ ಜಿಯಾ ಖಾನ್ ಅವರ ಸಾವು ಮುಂಬೈ ಪೊಲೀಸರನ್ನು ಕೂಡ ಸಾಕಷ್ಟು ಕಾಡಿತ್ತು. ಇದು ಆತ್ಮಹತ್ಯೆಯಾ, ಕೊಲೆಯಾ? ಎಂಬ ಬಗ್ಗೆ ಅವರಿಗೆ ಹಲವಾರು ಅನುಮಾನಗಳಿದ್ದವು. ಜೂ.3ರಂದು ತಮ್ಮ ಅಪಾರ್ಟ್ಮೆಂಟಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ದೇಹ ದೊರೆತಿತ್ತು. ಅವರ ಬಳಿ ಡೆತ್ ನೋಟ್ ಸಿಗದ ಕಾರಣ ಪೊಲೀಸರನ್ನು ಸಾಕಷ್ಟು ಗೊಂದಲಕ್ಕೀಡು ಮಾಡಿತ್ತು.

ಆದರೆ, ಈಗ ಜೀವನದಲ್ಲಿ ಮೇಲೆ ಬರಲಾಗದೆ, ಪ್ರೀತಿಯಲ್ಲಿ ಜಯಿಸಲಾಗದೆ ಸಾಕಷ್ಟು ನೊಂದಿದ್ದ ನಫೀಸಾ ಅಲಿಯಾಸ್ ಜಿಯಾ ಖಾನ್ ಅವರು ಕೈಯಲ್ಲಿ ಬರೆದಿರುವ ಆರು ಪುಟಗಳ ಮರಣಪತ್ರ ದೊರೆತಿದ್ದು, ಪೊಲೀಸರಿಗೆ ಆಕೆಯ ಸಾವಿನ ಬಗ್ಗೆ ಸ್ಪಷ್ಟ ಚಿತ್ರಣ ದೊರಕಿದಂತಾಗಿದೆ. ಆಕೆ ಸತ್ತು ಮೂರು ದಿನಗಳ ನಂತರ ವ್ಯಾಲೆಟ್ ಬಾಕ್ಸಲ್ಲಿ ಜಿಯಾಳ ತಂಗಿಗೆ ಆ ಮರಣಪತ್ರ ದೊರೆತಿದೆ. ಅದನ್ನು ಅವರು ಪೊಲೀಸರ ವಶಕ್ಕೆ ನೀಡಿದ್ದಾರೆ.

ಈ ಸಾವಿಗೆ ಅವರು ತಾವು ಅತಿಯಾಗಿ ಪ್ರೀತಿಸುತ್ತಿದ್ದ ಸೂರಜ್ ಪಂಚೋಲಿ (ಆದಿತ್ಯ ಪಂಚೋಲಿ ಮಗ) ಅವರನ್ನೇ ಹೊಣೆಗಾರರನ್ನಾಗಿ ಮಾಡಿದ್ದಾರೆ. "ನಿನಗಾಗಿ ಎಲ್ಲವನ್ನೂ ಧಾರೆಯೆರೆದೆ, ಆದರೆ ನೀನು ನನ್ನ ಸಂತೋಷವನ್ನು ಕಿತ್ತುಕೊಂಡೆ. ನನ್ನ ಭವಿಷ್ಯ ಮತ್ತು ನನ್ನ ಜೀವನವನ್ನೇ ಸಂಪೂರ್ಣ ನಾಶ ಮಾಡಿದೆ. ನೀನು ನನ್ನ ಪ್ರೀತಿಯನ್ನು ಗೌರವಿಸಲೇ ಇಲ್ಲ. ಹೀಗೆ ಮಾಡಿ ನನ್ನ ಮುಖಕ್ಕೆ ಬಾರಿಸಿದೆ. ನನ್ನ ವಿಶ್ವಾಸ, ಆತ್ಮಗೌರವ ಸತ್ತುಹೋಗಿದೆ" ಎಂದು ಅವರು ಬರೆದಿರುವ ಪತ್ರದ ಕೊನೆಯ ಭಾಗದಲ್ಲಿ ಬರೆದಿದ್ದಾರೆ.

ಜಿಯಾ ಬರೆದ ಮರಣಪತ್ರದಲ್ಲಿ ಏನಿದೆ?

ಪ್ರೀತಿಸುತ್ತಲೇ ನಾನು ನನ್ನನ್ನು ಕಳೆದುಕೊಂಡೆ

"ಇದನ್ನು ನಿನಗೆ ಹೇಗೆ ಹೇಳಬೇಕೆಂದು ತಿಳಿಯುತ್ತಿಲ್ಲ. ನನಗೆ ಕಳೆದುಕೊಳ್ಳುವುದಂಥಾದ್ದು ಏನು ಇಲ್ಲ. ಏಕೆಂದರೆ ನಾನೀಗ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ನಾನು ಅಂತರ್ಯದಲ್ಲೇ ಕುಸಿದುಹೋಗಿದ್ದೇನೆ. ಇದು ನಿನಗೆ ಗೊತ್ತಿಲ್ಲದಿರಬಹುದು. ಆದರೆ, ನಿನ್ನನ್ನು ಪ್ರೀತಿಸುತ್ತಲೇ ನಾನು ನನ್ನನ್ನು ಕಳೆದುಕೊಂಡೆ, ತೀವ್ರವಾಗಿ ಘಾಸಿಗೊಂಡೆ."

ನಾನು ಆಂತರ್ಯದಲ್ಲಿಯೇ ಸತ್ತು ಹೋಗಿದ್ದೇನೆ

"ಪ್ರತಿದಿನ ನೀನು ನನ್ನ ಹಿಂಸಿಸಿದೆ. ನನಗೆ ಬೆಳಿಗ್ಗೆ ಏಳುವುದಕ್ಕೇ ಇಷ್ಟವಿಲ್ಲ, ನನಗೆ ಬೆಳಕಾಗುವುದೂ ಬೇಕಾಗಿಲ್ಲ. ಹಿಂದೆ ನಿನ್ನ ಪ್ರೀತಿಸುತ್ತ ನಿನ್ನಲ್ಲಿ ನನ್ನ ಜೀವನವನ್ನು ಮತ್ತು ಭವಿಷ್ಯವನ್ನು ಕಂಡೆ. ಆದರೆ, ನೀನು ನನ್ನ ಕನಸನ್ನೆಲ್ಲ ನುಚ್ಚುನೂರು ಮಾಡಿದೆ. ನಾನು ಆಂತರ್ಯದಲ್ಲಿಯೇ ಸತ್ತು ಹೋಗಿದ್ದೇನೆ."

ಗರ್ಭಿಣಿಯಾಗುವ ಭಯವಿದ್ದರೂ ಸಮರ್ಪಿಸಿಕೊಂಡೆ

"ನಿನಗೆ ತೋರಿದ ಕಾಳಜಿಯಷ್ಟು ನಾನು ಯಾರಿಗೂ ತೋರಿಲ್ಲ, ನನ್ನ ಬಗ್ಗೆಯೂ ಕಾಳಜಿ ತೋರಿಲ್ಲ. ಮೋಸ ಮತ್ತು ಸುಳ್ಳುಗಳನ್ನೇ ಹೇಳುತ್ತ ನೀನು ನನ್ನ ಪ್ರೀತಿಯನ್ನು ನನಗೇ ಮರಳಿಸಿದೆ. ನಾನೆಲ್ಲಿ ಗರ್ಭಿಣಿಯಾಗುತ್ತೇನೋ ಎಂಬ ಭಯವಿದ್ದರೂ ನಿನಗೆ ನನ್ನನ್ನು ನಾನೇ ಸಮರ್ಪಿಸಿಕೊಂಡೆ. ಅದರ ನೋವು ನನಗೇ ಗೊತ್ತು. ಆದರೆ, ನೀನು ನನ್ನ ಆತ್ಮವನ್ನು ಸಾಯಿಸಿಬಿಟ್ಟೆ. ನನಗೆ ಊಟ, ನಿದ್ದೆ, ವಿಚಾರ, ಸಾಮಾನ್ಯ ಕೆಲಸ ಯಾವುದನ್ನೂ ಮಾಡಲಾಗುತ್ತಿಲ್ಲ. ಎಲ್ಲದರಿಂದ ದೂರ ಓಡಿಹೋಗುತ್ತಿದ್ದೇನೆ. ವೃತ್ತಿಯ ಬಗ್ಗೆ ಮೋಹ ಹೊರಟುಹೋಗಿದೆ."

ನಮ್ಮಿಬ್ಬರನ್ನು ಆ ವಿಧಿ ಯಾಕೆ ಒಂದುಗೂಡಿಸಿತೋ?

"ಮೊದಲು ಭೇಟಿಯಾದಾಗ ಮಹತ್ವಾಕಾಂಕ್ಷೆ, ಶಿಸ್ತು ನನ್ನನ್ನು ಸೆಳೆದಿತ್ತು. ನಿನ್ನ ಮೋಹದಲ್ಲಿ ಬಿದ್ದುಬಿಟ್ಟೆ. ನಿನ್ನ ಪ್ರೀತಿ ನನ್ನಲ್ಲಿ ಹೆಚ್ಚಿನ ಸಾಧನೆ ಮಾಡಲು ಹುಮ್ಮಸ್ಸು ನೀಡುತ್ತದೆ ಅಂದುಕೊಂಡಿದ್ದೆ. ನಮ್ಮಿಬ್ಬರನ್ನು ಆ ವಿಧಿ ಯಾಕೆ ಒಂದುಗೂಡಿಸಿತೋ? ನಿನ್ನಿಂದಾದ ನೋವು, ಅತ್ಯಾಚಾರ, ದೌರ್ಜನ್ಯ, ಹಿಂಸೆ ಯಾವುದಕ್ಕೂ ನಾನು ಅರ್ಹಳಲ್ಲ. ಕೊನೆಗೆ ತಿಳಿದಿದ್ದೇನೆಂದರೆ, ಅಲ್ಲಿ ಪ್ರೀತಿಯೂ ಇರಲಿಲ್ಲ, ಬದ್ಧತೆಯೂ ಇರಲಿಲ್ಲ. ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ನನ್ನನ್ನು ಘಾಸಿಗೊಳಿಸಿದೆ."

ಬೇಕಿದ್ದರೆ ರಕ್ತದಲ್ಲಿ ಬರೆದುಕೊಡುತ್ತೇನೆ

"ಪಾರ್ಟಿ ಮತ್ತು ಹುಡುಗಿಯರೇ ನಿನ್ನ ಜೀವನವಾಗಿದೆ. ನಾನಿನ್ನು ಭೂಮಿಯ ಮೇಲಿದ್ದರೆ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಲೇ ಇರುತ್ತೇನೆ. ಆದ್ದರಿಂದ 10 ವರ್ಷಗಳ ವೃತ್ತಿಬದುಕಿಗೆ ಗುಡ್ ಬೈ ಹೇಳುತ್ತಿದ್ದೇನೆ. ನೀನು ನನಗೆ ಮೋಸ ಮಾಡಿದೆ. ನಾನು ಯಾರೊಂದಿಗೂ ಹೋಗಿಲ್ಲ. ಕಾರ್ತಿಕ್ ಎಂಬ ವ್ಯಕ್ತಿಯನ್ನು ಭೇಟಿಯಾಗಿಲ್ಲ. ನಿನ್ನನ್ನು ನಾನು ಪ್ರೀತಿಸಿದಷ್ಟು ಯಾವ ಹುಡುಗಿಯೂ ಪ್ರೀತಿಸಲ್ಲ. ಬೇಕಿದ್ದರೆ ರಕ್ತದಲ್ಲಿ ಬರೆದುಕೊಡುತ್ತೇನೆ."

ಇಷ್ಟವಿಲ್ಲದಿದ್ದರೂ ಗರ್ಭಪಾತ ಮಾಡಿಸಿಕೊಂಡೆ

"ನಿನಗಾಗಿ ಯಾವತ್ತೂ ಒಳ್ಳೆಯದನ್ನು ಬಯಸಿದೆ. ನನ್ನಲ್ಲಿದ್ದ ಅಲ್ಪಹಣವನ್ನು ನಿನಗಾಗಿ ವ್ಯಯಿಸಲು ಸಿದ್ಧವಿದ್ದೆ. ಗೋವಾ ಪ್ರವಾಸ ನಿನ್ನ ಹುಟ್ಟುಹಬ್ಬಕ್ಕಾಗಿ ನಾನು ನೀಡಿದ ಗಿಫ್ಟ್. ನೀನು ನನಗೆ ಮೋಸ ಮಾಡುತ್ತಿದ್ದುದು ತಿಳಿದಿದ್ದರೂ ನಿನಗಾಗಿ ನನ್ನ ಸಮಯ ಹಣ ಮೀಸಲಿಟ್ಟೆ. ನನ್ನನ್ನು ಮತ್ತಷ್ಟು ಘಾಸಿಮಾಡಿದಾಗ ಇಷ್ಟವಿಲ್ಲದಿದ್ದರೂ ಗರ್ಭಪಾತ ಮಾಡಿಸಿಕೊಂಡೆ. ಆದರೆ, ನೀನು ನನ್ನ ಹುಟ್ಟುಹಬ್ಬದ ಸಂಭ್ರಮ ಹಾಳುಮಾಡಿದೆ. ಪ್ರೇಮಿಗಳ ದಿನದಂದೂ ನನ್ನಿಂದ ದೂರವಿದ್ದೆ."

ಭವಿಷ್ಯ, ಜೀವನ ಸರ್ವನಾಶ ಮಾಡಿದೆ

"ನಿನಗಾಗಿ ಎಲ್ಲವನ್ನೂ ಧಾರೆಯೆರೆದೆ, ಆದರೆ ನೀನು ನನ್ನ ಸಂತೋಷವನ್ನು ಕಿತ್ತುಕೊಂಡೆ. ನನ್ನ ಭವಿಷ್ಯ ಮತ್ತು ನನ್ನ ಜೀವನವನ್ನೇ ಸಂಪೂರ್ಣ ನಾಶ ಮಾಡಿದೆ. ನೀನು ನನ್ನ ಪ್ರೀತಿಯನ್ನು ಗೌರವಿಸಲೇ ಇಲ್ಲ. ಹೀಗೆ ಮಾಡಿ ನನ್ನ ಮುಖಕ್ಕೆ ಬಾರಿಸಿದೆ. ನನ್ನ ವಿಶ್ವಾಸ, ಆತ್ಮಗೌರವ ಸತ್ತುಹೋಗಿದೆ"

ನಾನೀಗ ಚಿರನಿದ್ರೆಗೆ ಜಾರುತ್ತಿದ್ದೇನೆ

"ಮದುವೆಯಾಗುವುದಾಗಿ ವಾಗ್ದಾನ ನೀಡಿದ್ದೆ. ಅದು ನಿನಗೆ ಬೇಕಾಗೇ ಇರಲಿಲ್ಲ. ನನಗೆ ನೀನು ಮತ್ತು ನಿನ್ನ ಸಂತೋಷ ಬೇಕಾಗಿದ್ದರೆ, ನಿನಗೆ ಬೇಕಾಗಿದ್ದುದು ಪಾರ್ಟಿ ಮತ್ತು ಹೆಂಗಸರು. ನನಗೆ ಅಳುವೊಂದನ್ನು ಬಿಟ್ಟು ನೀನು ಬೇರೇನನ್ನೂ ನೀಡಿಲ್ಲ. ಇನ್ನು ಏನೂ ಉಳಿದಿಲ್ಲ. ಛಿದ್ರವಾದ ಕನಸುಗಳು ಮತ್ತು ಖಾಲಿತನವನ್ನೆಲ್ಲ ಬಿಟ್ಟು ನನ್ನಲ್ಲೇನೂ ಉಳಿದಿಲ್ಲ. ನೀನು ಜೊತೆಯಾಗಿದ್ದಾಗಲೂ ನಾನು ಒಂಟಿಯಾಗಿದ್ದೆ. ನಾನೀಗ ಚಿರನಿದ್ರೆಗೆ ಜಾರುತ್ತಿದ್ದೇನೆ, ಇನ್ನೆಂದೂ ಏಳುವುದಿಲ್ಲ."

ಇತರರು ಬರೆದ ಮರಣಪತ್ರಗಳು : ಕನ್ನಡ ನಟಿ ಹೇಮಶ್ರೀ | ಚೌಳಿ ಮಠದ ಶ್ರೀಗಳು | ದಾದಿ ಜೆಸಿಂತಾ

English summary
What is there in 6 page death note written by bollywood actress Jiah Khan, who committed suicide on June 3 at her apartment in Mumbai? In the death note, which was recovered after 3 days of her death, she has blamed her live-in partner Suraj Pancholi.
Please Wait while comments are loading...