For Quick Alerts
  ALLOW NOTIFICATIONS  
  For Daily Alerts

  ರಣ್ಬೀರ್ ಕಪೂರ್ ಮೊದಲ ಸಂಭಾವನೆಯಿಂದ ಖರೀದಿ ಮಾಡಿದ ವಸ್ತುವೇನು?

  |

  ಚಾಕ್‌ಲೇಟ್ ಹೀರೋ ರಣ್ಬೀರ್ ಕಪೂರ್ 2007ರಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಸಾವರಿಯಾ' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ಅದಕ್ಕೂ ಮುಂಚೆ ಎರಡು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು.

  ರೋಮ್ಯಾಂಟಿಕ್ ಕಥೆ ಹೊಂದಿದ್ದ 'ಸಾವರಿಯಾ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತು. ಗಲ್ಲಾಪೆಟ್ಟಿಗೆಯಲ್ಲಿ ಸೋಲು ಕಂಡಿತು. ಸೋನಂ ಕಪೂರ್, ಸಲ್ಮಾನ್ ಖಾನ್, ರಾಣಿ ಮುಖರ್ಜಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

  ರಣ್ಬೀರ್ ಕಪೂರ್‌ಗೆ ಕೊರೊನಾ ಪಾಸಿಟಿವ್: ಖಚಿತಪಡಿಸಿದ ನೀತು ಕಪೂರ್

  ಈ ಚಿತ್ರಕ್ಕೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಜೊತೆ ನಿರ್ಮಾಣ ಸಹ ಮಾಡಿದ್ದರು. ಈ ಚಿತ್ರದಿಂದ ಸಿಕ್ಕ ಸಂಭಾವನೆಯಲ್ಲಿ ನಟ ರಣ್ಬೀರ್ ಕಪೂರ್ ತಾನು ಬಹಳ ಇಷ್ಟಪಟ್ಟಿದ್ದ ವಾಚ್ ಖರೀದಿಸಿದ್ದರಂತೆ.

  8.16 ಲಕ್ಷ ಮೌಲ್ಯದ ಉಬ್ಲೋಟ್ ಮೆಕ್ಸಿಕನ್ (Hublot Mexican) ವಾಚ್ ಖರೀದಿಸುವ ಮೂಲಕ ತನ್ನ ಬಹುಕಾಲದ ಆಸೆ ಈಡೇರಿಸಿಕೊಂಡಿದ್ದರಂತೆ.

  ವಾಚ್ ಅಂದ್ರೆ ರಣ್ಬೀರ್ ಕಪೂರ್‌ಗೆ ಮೊದಲಿನಿಂದಲೂ ಬಹಳ ಇಷ್ಟ. ತಾನು 13ನೇ ವಯಸ್ಸಿನಲ್ಲಿದ್ದಾಗ ತಂದೆ ರಿಷಿ ಕಪೂರ್ ಮತ್ತು ತಾಯಿ ನೀತು ಕಪೂರ್ 3.16 ಲಕ್ಷ ಮೌಲ್ಯದ ಟ್ಯಾಗ್ ಹ್ಯುವರ್ ಗ್ರ್ಯಾಂಡ್ ಪ್ರಿಕ್ಸ್ ವಾಚ್ (TAG Heuer Grand Prix) ಉಡುಗೊರೆಯಾಗಿ ನೀಡಿದ್ದರು.

  ರಣಬೀರ್ ಕಪೂರ್-ಆಲಿಯಾ ಗೆ ನಿಶ್ಚಿತಾರ್ಥ ಆಗಿಲ್ಲ: ಕುಟುಂಬದಿಂದ ಸ್ಪಷ್ಟನೆ

  ತಮ್ಮ ನೆಚ್ಚಿನ ನಟ ಅಮಿತಾಭ್ ಬಚ್ಚನ್ ಅವರಿಂದ 50 ಲಕ್ಷ ಮೌಲ್ಯದ ವಾಚ್ ಉಡುಗೊರೆಯಾಗಿ ಪಡೆದಿದ್ದರು ರಣ್ಬೀರ್ ಕಪೂರ್.

  ಅಂದ್ಹಾಗೆ, ರಣ್ಬೀರ್ ಈಗ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನಟಿಸಿದ್ದಾರೆ. ಆಲಿಯಾ ಭಟ್, ಅಮಿತಾಭ್ ಬಚ್ಚನ್, ನಾಗಾರ್ಜುನ ಸೇರಿದಂತೆ ಹಲವರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಶಂಶೇರಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

  ಯಾವ ಊರಿಗೆ ಯಾವಾಗ ಬರ್ತಾರೆ ಗೊತ್ತಾ ಪವರ್ ಸ್ಟಾರ್? | Yuvarathna | Puneeth Rajkumar | Filmibeat Kannada
  English summary
  What Bollywood actor Ranbir kapoor bought with his first remuneration?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X