For Quick Alerts
  ALLOW NOTIFICATIONS  
  For Daily Alerts

  ಜಾಹ್ನವಿ ಪಾಲಿಗೆ ಶ್ರೀದೇವಿ ಕೆಟ್ಟ ತಾಯಿ ಆಗಿದ್ದ ಸಂದರ್ಭ ಇದು.!

  By Bharath Kumar
  |

  ಭಾರತೀಯ ಚಿತ್ರರಂಗ ಕಂಡ ಎವರ್ ಗ್ರೀನ್ ನಟಿ, ಅತಿಲೋಕ ಸುಂದರಿ ಶ್ರೀದೇವಿ. ಈ ಹೆಸರು ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ಅಚ್ಚಳಿಯದ ಹಾಗೆ ನಿಂತಿದೆ ಹಾಗೂ ಮುಂದೆಯೂ ನಿಲ್ಲುತ್ತದೆ. ಇದರಲ್ಲಿ ಎರಡು ಮಾತಿಲ್ಲ. ಈಗ ಇವರ ಮಗಳು ಜಾಹ್ನವಿ ಕಪೂರ್ 'ದಢಕ್' ಚಿತ್ರದ ಮೂಲಕ ಬಣ್ಣದ ಲೋಕದಲ್ಲಿ ಮಿಂಚಲು ಸಿದ್ಧವಾಗಿದ್ದಾರೆ.

  ಅಂದ್ಹಾಗೆ, ಶ್ರೀದೇವಿಯನ್ನ ತೆರೆಮೇಲೆ ನೋಡಲು ಜಾಹ್ನವಿ ತುಂಬಾ ಇಷ್ಟಪಡ್ತಿದ್ದರು. ಶ್ರೀದೇವಿಯ ಬಹುತೇಕ ಸಿನಿಮಾಗಳನ್ನ ಮಗಳು ಚಿತ್ರಮಂದಿರದಲ್ಲಿ ನೋಡಿದ್ದಾರೆ. ಹೀಗಿರುವಾಗ ಒಂದು ಸಂದರ್ಭದಲ್ಲಿ ಶ್ರೀದೇವಿ ಮಗಳ ಪಾಲಿಗೆ ಕೆಟ್ಟ ತಾಯಿ ಆಗಿದ್ದರು.

  ತಾಯಿಯ ಮೇಲೆ ಮುನಿಸಿಕೊಂಡಿದ್ದ ಮೂರು ದಿನ ಶ್ರೀದೇವಿ ಬಳಿ ಮಾತನಾಡಿರಲಿಲ್ಲವಂತೆ. ಅಷ್ಟಕ್ಕೂ, ಶ್ರೀದೇವಿಯ ಮೇಲೆ ಮಗಳಿಗೆ ಕೋಪ ಬಂದಿದ್ದೇಕೆ.? ಶ್ರೀದೇವಿಯನ್ನ ಕೆಟ್ಟ ತಾಯಿ ಎಂದು ಮಗಳು ಹೇಳಿದ್ದೇಕೆ.? ಮುಂದೆ ಓದಿ......

  'ಸದ್ಮಾ' ಚಿತ್ರ ನೋಡಿ ಬೇಸರಗೊಂಡಿದ್ದ ಮಗಳು

  'ಸದ್ಮಾ' ಚಿತ್ರ ನೋಡಿ ಬೇಸರಗೊಂಡಿದ್ದ ಮಗಳು

  ಕಮಲ್ ಹಾಸನ್ ಮತ್ತು ಶ್ರೀದೇವಿ ಅಭಿನಯಿದಿದ್ದ 'ಸದ್ಮಾ' ಚಿತ್ರವನ್ನ ನೋಡಿ ಜಾಹ್ನವಿ ಕಪೂರ್ ಅಮ್ಮನ ಮೇಲೆ ಮುನಿಸಿಕೊಂಡಿದ್ದರಂತೆ. ಆಗ ಜಾಹ್ನವಿ ವಯಸ್ಸು 6 ವರ್ಷವಾಗಿತ್ತಂತೆ. ಕಮಲ್ ಮತ್ತು ಶ್ರೀದೇವಿ ನಡುವಿನ ದೃಶ್ಯಗಳನ್ನ ನೋಡಿ 'ನೀವು ಕೆಟ್ಟ ಅಮ್ಮ' ಎಂದು ಮೂರು ದಿನ ಮಾತು ಬಿಟ್ಟಿದ್ದರಂತೆ.

  ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಗ್ಗೆ ನಿಮಗೆಷ್ಟು ಗೊತ್ತು.? ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಗ್ಗೆ ನಿಮಗೆಷ್ಟು ಗೊತ್ತು.?

  ಜಾಹ್ನವಿ ಸಿನಿಮಾಗೆ ಬರೋದು ಇಷ್ಟವಿರಲಿಲ್ಲ

  ಜಾಹ್ನವಿ ಸಿನಿಮಾಗೆ ಬರೋದು ಇಷ್ಟವಿರಲಿಲ್ಲ

  ಅಂದ್ಹಾಗೆ, ಶ್ರೀದೇವಿಗೆ ತಮ್ಮ ಮಗಳು ಜಾಹ್ನವಿ ಕಪೂರ್ ಸಿನಿಮಾ ಇಂಡಸ್ಟ್ರಿಗೆ ಬರೋದು ಇಷ್ಟವೇ ಇರಲಿಲ್ಲ. 'ದಢಕ್' ಚಿತ್ರಕ್ಕೂ ಮೊದಲು 'ಸ್ಟೂಡೆಂಟ್ ಆಫ್ ದಿ ಇಯರ್-2' ಸಿನಿಮಾದಲ್ಲಿ ನಟಿಸುವ ಅವಕಾಶ ಬಂದಿತ್ತು. ಇದನ್ನ ಶ್ರೀದೇವಿ ನಿರಾಕರಿಸಿದ್ದರು. ಮಗಳನ್ನ ಬೇರೆಯದ್ದೇ ರೀತಿಯಲ್ಲಿ ನೋಡುವ ಆಸೆ ಹೊಂದಿದ್ದರು.

  ಮಗಳು ಮದುವೆಗೆ ಯೋಚಿಸಿದ್ದರು

  ಮಗಳು ಮದುವೆಗೆ ಯೋಚಿಸಿದ್ದರು

  ''ಜಾಹ್ನವಿಯ ಅಮ್ಮನಾಗಿ ಅವಳಿಗೆ ಮದುವೆ ಮಾಡಿಸಿ, ಅವಳ ಸುಖಕರ ಜೀವನವನ್ನ ನೋಡಲು ನಾನು ಬಯಸಿದ್ದೆ'' ಎಂದು ಸ್ವತಃ ಶ್ರೀದೇವಿ ಹೇಳಿಕೊಂಡಿದ್ದರು. ''ಆದ್ರೆ, ಅವಳಿಗೆ ನಟಿಸುವ ಆಸೆ. ಅವಳ ಸಂತೋಷಕ್ಕಿಂತ ನನಗೆ ಬೇರೆಯದ್ದು ಬೇಕಾಗಿಲ್ಲ ಅನಿಸಿತು. ಜಾಹ್ನವಿಗೆ ತಾಯಿಯಾಗಿ ನನಗೆ ಹೆಮ್ಮೆ ಇದೆ'' ಎಂದು ಶ್ರೀದೇವಿ ಹೇಳಿದ್ದರು.

  ಬಿಗ್ ಬ್ರೇಕಿಂಗ್: ಶ್ರೀದೇವಿ ಸಾವಿನ ಹಿಂದೆ ದಾವೂದ್ ಇಬ್ರಾಹಿಂ ಕೈವಾಡ.!ಬಿಗ್ ಬ್ರೇಕಿಂಗ್: ಶ್ರೀದೇವಿ ಸಾವಿನ ಹಿಂದೆ ದಾವೂದ್ ಇಬ್ರಾಹಿಂ ಕೈವಾಡ.!

  ನಾನು ಪ್ರಮೋಟ್ ಮಾಡುತ್ತಿರಲಿಲ್ಲ

  ನಾನು ಪ್ರಮೋಟ್ ಮಾಡುತ್ತಿರಲಿಲ್ಲ

  ''ಸಾಮಾನ್ಯವಾಗಿ ನಾನು ಪ್ರೀಮಿಯರ್ ಶೋ ಸಿನಿಮಾಗಳಿಗೆ ಅಥವಾ ಖಾಸಗಿ ಪಾರ್ಟಿಗಳಿಗೆ ಹೋಗುವಾಗ ನನ್ನ ಮಗಳನ್ನ ಕರೆದುಕೊಂಡು ಹೋಗುತ್ತಿದೆ. ಆ ವೇಳೆ ಸ್ವತಃ ನಾನೇ ನನ್ನ ಮಗಳನ್ನ ಪ್ರಮೋಟ್ ಮಾಡ್ತಿದ್ದೀನಿ ಎಂದು ಅನೇಕರು ತಿಳಿದುಕೊಂಡರು. ಆದ್ರೆ, ಅದು ನನ್ನ ಉದ್ದೇಶವಾಗಿರಲಿಲ್ಲ. ನನ್ನ ಮಕ್ಕಳ ಜೊತೆ ನಾನು ಹೋದಾಗ ನನಗೆ ಅದು ಹೆಮ್ಮೆ ತರುತ್ತಿತ್ತು. ಆದ್ರೆ, ನೋಡುಗರಿಗೆ ತಪ್ಪು ಸಂದೇಶ ನೀಡುತ್ತಿತ್ತು'' ಎಂದು ಶ್ರೀದೇವಿ ಸಂದರ್ಶನವೊಂದರಲ್ಲಿ ಮಾತನಾಡಿದ್ದರು.

  'ದಡಕ್' ನೋಡುವ ಬಯಕೆ ಇತ್ತು

  'ದಡಕ್' ನೋಡುವ ಬಯಕೆ ಇತ್ತು

  ಜಾಹ್ನವಿ ಕಪೂರ್ ಅಭಿನಯದ ಚೊಚ್ಚಲ ಸಿನಿಮಾ 'ದಢಕ್' ಸಿನಿಮಾ ಇದೇ ವಾರ (ಜುಲೈ 20) ತೆರೆಕಾಣುತ್ತಿದೆ. ಈ ಚಿತ್ರವನ್ನ ಸ್ವತಃ ಶ್ರೀದೇವಿ ಕೂಡ ಇಷ್ಟಪಟ್ಟು ಒಪ್ಪಿಕೊಂಡಿದ್ದರು. ಮಗಳನ್ನ ತೆರೆಮೇಲೆ ನೋಡುವ ಮಹಾದಾಸೆ ಅವರಿಗಿತ್ತು. ಆದ್ರೆ, ಅದು ಆಗಲಿಲ್ಲ. ಅಕಾಲಿಕವಾಗಿ ಸಾವನ್ನಪ್ಪಿದರು. ಬಟ್, ಅಮ್ಮನ ಆರ್ಶೀವಾದಿಂದ ಮಗಳು ಮೊದಲ ಸಿನಿಮಾ ಮಾಡಿ ಅಗ್ನಿಪರೀಕ್ಷೆಗೆ ಸಿದ್ಧವಾಗಿದ್ದಾರೆ. ಈ ವಾರ ಶ್ರೀದೇವಿ ಪುತ್ರಿ ಭವಿಷ್ಯ ನಿರ್ಧಾರವಾಗಲಿದೆ.

  ಶ್ರೀದೇವಿ ಮಗಳ 'ದಡಕ್' ಟ್ರೈಲರ್ ನೋಡಿದ ಬಿಟೌನ್ ಫುಲ್ ಖುಷ್ಶ್ರೀದೇವಿ ಮಗಳ 'ದಡಕ್' ಟ್ರೈಲರ್ ನೋಡಿದ ಬಿಟೌನ್ ಫುಲ್ ಖುಷ್

  English summary
  Janhvi kapoor loved watching her mother on-screen but one movie of hers had affected the little girl so much that she stopped talking to Sridevi. Not just that, after watching the sadma film, the star kid also felt that she is not a good person.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X