»   » ಶ್ರೀದೇವಿ ದುಬೈಗೆ ಹೋಗಿದ್ದು ಮೋಹಿತ್ ಮದುವೆಗೆ.! ಅಷ್ಟಕ್ಕೂ, ಯಾರೀ ಮೋಹಿತ್.?

ಶ್ರೀದೇವಿ ದುಬೈಗೆ ಹೋಗಿದ್ದು ಮೋಹಿತ್ ಮದುವೆಗೆ.! ಅಷ್ಟಕ್ಕೂ, ಯಾರೀ ಮೋಹಿತ್.?

Posted By:
Subscribe to Filmibeat Kannada
ಶ್ರೀದೇವಿ ದುಬೈಗೆ ಹೋಗಿದ್ದು ಮೋಹಿತ್ ಮದುವೆಗೆ.! ಯಾರೀ ಮೋಹಿತ್.? | Filmibeat Kannada

ಯಾರೂ ಊಹಿಸದ, ಯಾರೂ ನಿರೀಕ್ಷೆ ಮಾಡದ ಸುದ್ದಿ ಶನಿವಾರ ಮಧ್ಯರಾತ್ರಿ ಹೊರಬಿತ್ತು. ಬಾಲಿವುಡ್ ನ ಬೆಳದಿಂಗಳ ಬಾಲೆ, ಚೆಲುವಾಂತ ಚೆಲುವೆ ಶ್ರೀದೇವಿ ದುಬೈನಲ್ಲಿ ಶನಿವಾರ ರಾತ್ರಿ ಇಹಲೋಕ ತ್ಯಜಿಸಿದರು.

ಅಷ್ಟಕ್ಕೂ, ಶ್ರೀದೇವಿ ತಮ್ಮ ಕುಟುಂಬದ ಸಮೇತ ದುಬೈಗೆ ಹಾರಿದ್ದು ಮೋಹಿತ್ ಮಾರ್ವಾ ಮದುವೆಯಲ್ಲಿ ಪಾಲ್ಗೊಳ್ಳೋಕೆ. ಮೋಹಿತ್ ಮಾರ್ವಾ ಮದುವೆ ಮುಗಿದ ಬಳಿಕ ದುಬೈನಲ್ಲೇ ಉಳಿದುಕೊಂಡಿದ್ದ ಶ್ರೀದೇವಿ ಶನಿವಾರ ರಾತ್ರಿ ಮೃತಪಟ್ಟರು.

ಅಸಲಿಗೆ, ಈ ಮೋಹಿತ್ ಮಾರ್ವಾ ಯಾರು.? ಆತನ ಹಿನ್ನಲೆ ಏನು.? ಎಂಬ ಪ್ರಶ್ನೆ ಹಲವರಿಗೆ ಕಾಡಿರಬಹುದು. ಅದಕ್ಕೆ ಉತ್ತರ ಇಲ್ಲಿದೆ. ಓದಿರಿ..

ಯಾರು ಎಷ್ಟೇ ಅನುಮಾನ ಪಟ್ಟರೂ, ಶ್ರೀದೇವಿ ಸಾವಿನ ಕೇಸ್ ದುಬೈನಲ್ಲಿ ಕ್ಲೋಸ್ ಆಗಿದೆ!

ಯಾರೀ ಮೋಹಿತ್ ಮಾರ್ವಾ.?

ಮೋಹಿತ್ ಮಾರ್ವಾ.... ಕಪೂರ್ ಕುಟುಂಬದ ಕುಡಿ. ಮೋಹಿತ್ ತಾಯಿ ರೀನಾ ಕಪೂರ್ ಬಾಲಿವುಡ್ ನ ಖ್ಯಾತ ನಿರ್ಮಾಪಕ ಸುರೀಂದರ್ ಕಪೂರ್ ಪುತ್ರಿ. ರೀನಾ ಕಪೂರ್ ಹಾಗೂ ಸಂದೀಪ್ ಮಾರ್ವಾ ದಂಪತಿಯ ಪುತ್ರನೇ ಈ ಮೋಹಿತ್ ಮಾರ್ವಾ.

ಬೋನಿ ಕಪೂರ್ ಸಹೋದರಿ ಪುತ್ರ ಮೋಹಿತ್

ಖ್ಯಾತ ನಿರ್ಮಾಪಕ ಸುರೀಂದರ್ ಕಪೂರ್ ಗೆ ನಾಲ್ವರು ಮಕ್ಕಳು. ಬೋನಿ ಕಪೂರ್, ಅನಿಲ್ ಕಪೂರ್, ಸಂಜಯ್ ಕಪೂರ್ ಹಾಗೂ ರೀನಾ ಕಪೂರ್. ಹೀಗಾಗಿ ಮೋಹಿತ್ ಮಾರ್ವಾ, ಬೋನಿ ಕಪೂರ್ ಹಾಗೂ ಶ್ರೀದೇವಿಗೆ ಸೋದರ ಅಳಿಯ.

ಮೋಹಿತ್ ವಿದ್ಯಾಭ್ಯಾಸ

ಡಾನ್ ಬಾಸ್ಕೋ ಶಾಲೆ, ದೆಹಲಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಮೋಹಿತ್ ಮಾರ್ವಾ, ಏಷಿಯನ್ ಅಕಾಡೆಮಿ ಆಫ್ ಫಿಲ್ಮ್ & ಟೆಲಿವಿಷನ್ ಸೇರಿ ಫಿಲ್ಮ್ ಮೇಕಿಂಗ್ ಬಗ್ಗೆ ಪರಿಣತಿ ಪಡೆದರು. ನ್ಯೂಯಾರ್ಕ್ ನ ಲೀ ಸ್ಟ್ರಾಸ್ ಬರ್ಗ್ ಆಕ್ಟಿಂಗ್ ಸ್ಕೂಲ್ ನಲ್ಲಿ ನಟನೆಯ ತರಬೇತಿ ಪಡೆದಿದ್ದಾರೆ ಮೋಹಿತ್.

ಮೋಹಿತ್ ಚಿತ್ರ ಜೀವನ

ಬಾಲಿವುಡ್ ನ ಖ್ಯಾತ ನಿರ್ದೇಶಕ ವಿಕ್ರಮ್ ಭಟ್ ಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಮೋಹಿತ್ ಮಾರ್ವಾ, 'ದಿ ಆಡಿಷನ್', 'ಸ್ಟ್ರೇಂಜರ್ಸ್ ಇನ್ ದಿ ನೈಟ್', 'ಲವ್ ಶಾಟ್ಸ್' ಹಾಗೂ 'ದಿ ಬಿಗ್ ಡೇಟ್' ಎಂಬ ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಬಾಲಿವುಡ್ ನಲ್ಲಿ ಮಿಂಚಿದ ಮೋಹಿತ್

2014 ರಲ್ಲಿ ಬಿಡುಗಡೆ ಆದ 'ಫಗ್ಲಿ' ಚಿತ್ರದಲ್ಲಿ ಮೋಹಿತ್ ಮಿಂಚಿದ್ದಾರೆ. 'ರಾಗ್ ದೇಶ್'ನಲ್ಲಿನ ಮೋಹಿತ್ ಪರ್ಫಾಮೆನ್ಸ್ ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

ಬೆಸ್ಟ್ ಡ್ರೆಸ್ಡ್ ಮ್ಯಾನ್

'ನೋಯ್ಡಾ ಫಿಲ್ಮ್ ಸಿಟಿ' ಸ್ಥಾಪಕ ಸಂದೀಪ್ ಮಾರ್ವಾ ಪುತ್ರನಾಗಿರುವ ಮೋಹಿತ್ ಗೆ ಜಿ.ಕ್ಯೂ ಇಂಡಿಯಾ ಕಡೆಯಿಂದ 2014 ರಲ್ಲಿ 'ಬೆಸ್ಟ್ ಡ್ರೆಸ್ಡ್ ಮ್ಯಾನ್ ಇನ್ ಬಾಲಿವುಡ್' ಎಂಬ ಮನ್ನಣೆಗೆ ಪಾತ್ರವಾದರು.

ಕಳೆದ ವಾರ ಮದುವೆ ಆದ ಮೋಹಿತ್

33 ವರ್ಷದ ಮೋಹಿತ್ ಕಳೆದ ವಾರ ಅನಿಲ್ ಅಂಬಾನಿ ಪತ್ನಿ ಟೀನಾ ಮುನಿಮ್ ಸಂಬಂಧಿ ಅಂತರಾ ಮೋತಿವಾಲಾ ಅವರನ್ನ ವಿವಾಹವಾದರು. ಇದೇ ವಿವಾಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಶ್ರೀದೇವಿ ದುಬೈಗೆ ತೆರಳಿದ್ದರು. ಖುಷಿ ಖುಷಿಯಾಗಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶ್ರೀದೇವಿ, ದುಬೈನಿಂದ ಜೀವಂತವಾಗಿ ತಾಯ್ನಾಡಿಗೆ ವಾಪಸ್ ಬರಲೇ ಇಲ್ಲ.

ಶ್ರೀದೇವಿಯ ಕಟ್ಟಕಡೆಯ ವಿಡಿಯೋ ಮತ್ತು ಫೋಟೋ: ಖುಷಿಖುಷಿಯಾಗಿದ್ದ ನಟಿ ಇನ್ನಿಲ್ಲ!

English summary
Who is Mohit Marwah, how is he related to Bollywood Actress Sridevi.? Sridevi died after she took part in Mohit Marwah wedding Dubai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada