For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಚಿತ್ರಗಳಿಗೆ ರೆಹಮಾನ್ ಏಕೆ ಸಂಗೀತ ನೀಡುವುದಿಲ್ಲ?: ಕಾರಣ ಬಹಿರಂಗ

  |

  ಅನೇಕ ಖ್ಯಾತನಾಮರ ಸಿನಿಮಾಗಳಿಗೆ ಸಂಗೀತ ದಿಗ್ಗಜ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ಅವರ ಸಂಗೀತದ ಬಹುತೇಕ ಹಾಡುಗಳು ಹಿಟ್ ಆಗಿವೆ. ಈ ನಡುವೆ ರೆಹಮಾನ್ ಬಾಲಿವುಡ್‌ ಕುರಿತು ಮಾತನಾಡಿದ್ದಾಗಲೀ, ವಿವಾದಗಳಿಗೆ ಸಿಲುಕಿದ್ದಾಗಲೀ ಇರಲಿಲ್ಲ. ಆದರೆ ಈಗ ಅವರು ಬಾಲಿವುಡ್ ವಿರುದ್ಧ ದನಿ ಎತ್ತಿದ್ದಾರೆ.

  ದರ್ಶನ್ ಅಭಿಮಾನಿಗಳು ಫುಲ್ ಹ್ಯಾಪಿ | Roberrt Poster | Filmibeat Kannada

  ತಮ್ಮ ವಿರುದ್ಧ ಗುಂಪೊಂದು ಬಾಲಿವುಡ್‌ನಲ್ಲಿ ತಮ್ಮ ಕುರಿತು ಇಲ್ಲ ಸಲ್ಲದ ರೂಮರ್‌ಗಳನ್ನು ಹರಡಿಸುತ್ತಿದೆ. ಇದರಿಂದಾಗಿ ತಮಗೆ ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಅಷ್ಟೇನೂ ಒಳ್ಳೆಯ ಅವಕಾಶಗಳು ಬರುತ್ತಿಲ್ಲ ಎಂದು ಬಹಿರಂಗಪಡಿಸಿದ್ದಾರೆ.

  ಬಾಲಿವುಡ್‌ನಲ್ಲಿ ತಮ್ಮ ವಿರುದ್ಧ ಒಂದು ಗ್ಯಾಂಗ್ ಇದೆ: ಎ.ಆರ್. ರೆಹಮಾನ್ ಹೇಳಿದ ಸ್ಫೋಟಕ ಸಂಗತಿ

  ರೆಹಮಾನ್ ಈ ಹೇಳಿಕೆ ಸಂಚಲನ ಮೂಡಿಸಿದೆ. ರೆಹಮಾನ್‌ರಂತಹ ಸಂಗೀತ ನಿರ್ದೇಶಕರನ್ನು ಬಳಸಿಕೊಳ್ಳುವ ಅರ್ಹತೆಯೇ ಬಾಲಿವುಡ್‌ಗೆ ಇಲ್ಲ ಎಂದು ಕೆಲವರು ಹೇಳಿದ್ದರೆ, ಬಾಲಿವುಡ್ ಅವರೊಂದಿಗೆ ನಡೆದುಕೊಂಡ ರೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ.

  ಹಳೆಯ ವಿಡಿಯೋ ವೈರಲ್

  ಹಳೆಯ ವಿಡಿಯೋ ವೈರಲ್

  ಬಹುತೇಕರಿಗೆ ತಿಳಿದಿರುವ ಸಂಗತಿಯೆಂದರೆ ಬಾಲಿವುಡ್‌ನ ಪ್ರಭಾವಿ ನಟ ಸಲ್ಮಾನ್ ಖಾನ್, ಎ.ಆರ್. ರೆಹಮಾನ್ ಬಗ್ಗೆ ಅಷ್ಟೇನೂ ಒಲವು ಹೊಂದಿಲ್ಲ. ಅನೇಕ ನಟರ ಚಿತ್ರಗಳಿಗೆ ಸಂಗೀತ ನೀಡಿರುವ ರೆಹಮಾನ್, ಇದುವರೆಗೂ ಸಲ್ಮಾನ್ ಖಾನ್ ಚಿತ್ರಕ್ಕೆ ಸಂಗೀತ ನೀಡಿಲ್ಲ. ಅಭಿಮಾನಿಗಳು ಈ ಇಬ್ಬರ ನಡುವಿನ ಮಾತುಕತೆಯ ಹಳೆಯ ವಿಡಿಯೋವೊಂದನ್ನು ಹುಡುಕಿ ತೆಗೆದಿದ್ದಾರೆ. ಸಲ್ಮಾನ್ ಖಾನ್ ಚಿತ್ರಕ್ಕೆ ರೆಹಮಾನ್ ಇದುವರೆಗೂ ಏಕೆ ಸಂಗೀತ ನೀಡಿಲ್ಲ ಎನ್ನುವುದು ಇದರಲ್ಲಿ ಬಹಿರಂಗವಾಗಿದೆ.

  ಜೈ ಹೋ ಚಿತ್ರದ ವಿವಾದ

  ಜೈ ಹೋ ಚಿತ್ರದ ವಿವಾದ

  2014ರಲ್ಲಿ 'ಜೈಹೋ' ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಎ.ಆರ್. ರೆಹಮಾನ್ ಮತ್ತು ಸಲ್ಮಾನ್ ಖಾನ್ ಹಕ್ಕು ಸ್ವಾಮ್ಯದ ವಿವಾದವೊಂದರಲ್ಲಿ ಮುಖಾಮುಖಿಯಾಗಿದ್ದರು. 2008ರಲ್ಲಿ ತಮಗೆ ಆಸ್ಕರ್ ತಂದುಕೊಟ್ಟ 'ಸ್ಲಂ ಡಾಗ್ ಮಿಲಿಯನೇರ್' ಚಿತ್ರಕ್ಕೆ 'ಜೈ ಹೋ' ಹಾಡನ್ನು ಸಂಯೋಜಿಸಿದ್ದ ರೆಹಮಾನ್ ಅವರ ಬಳಿ ಶೀರ್ಷಿಕೆ ಇದ್ದಿದ್ದರಿಂದ 'ಜೈ ಹೋ' ಚಿತ್ರ ಕೃತಿಚೌರ್ಯ ಮಾಡಿದೆ ಎಂದು ಆರೋಪಿಸಲಾಗಿತ್ತು.

  ವೇದಿಕೆಯಲ್ಲಿ ಸಲ್ಮಾನ್-ರೆಹಮಾನ್

  ವೇದಿಕೆಯಲ್ಲಿ ಸಲ್ಮಾನ್-ರೆಹಮಾನ್

  ಎಆರ್ ರೆಹಮಾನ್ ಮತ್ತು ಸಲ್ಮಾನ್ ಖಾನ್ ಅವರು ಕೆಲವು ವರ್ಷಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಇಬ್ಬರೂ ಒಟ್ಟಿಗೆ ವೇದಿಕೆ ಮೇಲೆ ನಿಂತಿದ್ದಾಗ ರೆಹಮಾನ್ ಸಾಧಾರಣ ಸಂಗೀತ ನಿರ್ದೇಶಕ ಎಂದಿದ್ದರು.

  ನನಗೂ ಆ ಅನುಭವ ಆಗಿದೆ: ನೋವಿನ ಸಂಗತಿ ಹಂಚಿಕೊಂಡ ರಘು ದೀಕ್ಷಿತ್

  ಸಲ್ಮಾನ್‌ಗೆ 'ಕೈ' ಕೊಡದ ರೆಹಮಾನ್

  ಸಲ್ಮಾನ್‌ಗೆ 'ಕೈ' ಕೊಡದ ರೆಹಮಾನ್

  ಸಲ್ಮಾನ್ ಖಾನ್ ಹೀಗೆ ಹೇಳಿದಾಗ ವೇದಿಕೆಯಲ್ಲಿದ್ದ ಎಲ್ಲರೂ ಜೋರಾಗಿ ನಗುತ್ತಾರೆ. ರೆಹಮಾನ್ ಕೂಡ ನಕ್ಕಂತೆ ಮಾಡುತ್ತಾರೆ. ಸಲ್ಮಾನ್ ಅವರ ಕೈ ಹಿಡಿದು ಇದು ತಮಾಷೆಗೆ ಎಂದು ತೋರಿಸಲು ಪ್ರಯತ್ನಿಸಿದರೂ ಅತ್ತ ಗಮನ ಕೊಡದ ರೆಹಮಾನ್, ತಮ್ಮ ಕೈಗಳನ್ನು ಕೋಟ್ ಜೇಬಿನೊಳಗೆ ಗಟ್ಟಿಯಾಗಿ ಇರಿಸಿಕೊಂಡಿರುವುದು ವಿಡಿಯೋದಲ್ಲಿ ಕಾಣಿಸಿದೆ. ಇದಕ್ಕೆ ಮತ್ತೊಂದು ವಿಡಿಯೋವನ್ನು ಜೋಡಿಸಲಾಗಿದ್ದು, ಅದರಲ್ಲಿ ರೆಹಮಾನ್ ಕಾರ್ಯಕ್ರಮದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.

  ಇಷ್ಟಪಡುವ ಸಿನಿಮಾ ಮಾಡಲಿ

  ಇಷ್ಟಪಡುವ ಸಿನಿಮಾ ಮಾಡಲಿ

  ಸಲ್ಮಾನ್ ಖಾನ್ ಜತೆ ಮತ್ತೆ ಒಂದುಗೂಡಿ ಯಾವಾಗ ಸಿನಿಮಾ ಮಾಡುತ್ತೀರಿ? ಎಂದು ಪತ್ರಕರ್ತರೊಬ್ಬರ ಪ್ರಶ್ನೆಗೆ, 'ನಾನು ಇಷ್ಟಪಡುವಂತಹ ಸಿನಿಮಾವನ್ನು ಅವರು ಮಾಡಲಿ' ಎಂದು ತೀಕ್ಷ್ಣವಾಗಿ ಉತ್ತರಿಸಿದ್ದರು. ಸಲ್ಮಾನ್ ಖಾನ್ ಅವರಂತೆಯೇ ತಾವು ಕೂಡ ತಮಾಷೆ ಮಾಡಿದ್ದು, ಆದರೆ ಅಭಿಮಾನಿಗಳು ಗಂಭೀರವಾಗಿ ತೆಗೆದುಕೊಂಡಿದ್ದರು ಎಂದು ರೆಹಮಾನ್ ನಂತರ ಸ್ಪಷ್ಟೀಕರಣ ನೀಡಿದ್ದರು.

  ಬಾಲಿವುಡ್ ನಲ್ಲಿ ಯಾರು ನನಗೆ ಅವಕಾಶ ನೀಡಿಲ್ಲ: ಸತ್ಯ ಬಹಿರಂಗ ಪಡಿಸಿದ ಆಸ್ಕರ್ ವಿಜೇತ

  English summary
  AR Rahman has recently revealed that a gang in bollywood spreading false rumours about him. He never composed music to Salman Khan films. Here is the reason.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X