»   » ಒಬ್ಬಂಟಿಯಾಗಿ 3 ದಿನ ಶ್ರೀದೇವಿ ದುಬೈ ಹೋಟೆಲ್ ನಲ್ಲಿದಿದ್ದೇಕೆ? ಸ್ಫೋಟಕ ರಹಸ್ಯ ಬಹಿರಂಗ!

ಒಬ್ಬಂಟಿಯಾಗಿ 3 ದಿನ ಶ್ರೀದೇವಿ ದುಬೈ ಹೋಟೆಲ್ ನಲ್ಲಿದಿದ್ದೇಕೆ? ಸ್ಫೋಟಕ ರಹಸ್ಯ ಬಹಿರಂಗ!

Posted By:
Subscribe to Filmibeat Kannada
ಶ್ರೀದೇವಿ 3 ದಿನಗಳ ಕಾಲ ಒಬ್ಬಂಟಿಯಾಗಿ ದುಬೈ ನಲ್ಲಿ ಇದ್ದಿದ್ಯಾಕೆ? | Filmibeat Kannada

ಬೋನಿ ಕಪೂರ್ ಹಾಗೂ ಶ್ರೀದೇವಿ ಸಂಬಂಧಿ ಮೋಹಿತ್ ಮಾರ್ವಾ ಮದುವೆ ನಡೆದಿದ್ದು ಫೆಬ್ರವರಿ 20 ಮಂಗಳವಾರ ದುಬೈನಲ್ಲಿ. ಶ್ರೀದೇವಿ ಕೊನೆಯುಸಿರೆಳೆದಿದ್ದು ಫೆಬ್ರವರಿ 24 ಶನಿವಾರ. ಮಧ್ಯ ಮೂರು ದಿನಗಳ ಕಾಲ ಶ್ರೀದೇವಿ ದುಬೈನಲ್ಲಿನ ಹೋಟೆಲ್ ವೊಂದರಲ್ಲಿ ತಂಗಿದ್ದರು.

ಮೋಹಿತ್ ಮಾರ್ವಾ ಮದುವೆ ಮುಗಿದ್ಮೇಲೆ, ಶ್ರೀದೇವಿ ದುಬೈನಲ್ಲೇ ಒಬ್ಬಂಟಿಯಾಗಿ ಉಳಿದುಕೊಂಡರೆ, ಪತಿ ಬೋನಿ ಕಪೂರ್ ಮಾತ್ರ ಭಾರತಕ್ಕೆ ವಾಪಸ್ ಬರುತ್ತಾರೆ.

ಅಷ್ಟಕ್ಕೂ, ಮದುವೆ ಮುಗಿದರೂ ಶ್ರೀದೇವಿ ದುಬೈನಲ್ಲೇ ಉಳಿದುಕೊಂಡಿದ್ದು ಯಾಕೆ.? ಮೂರು ದಿನಗಳ ಕಾಲ ಹೋಟೆಲ್ ರೂಮ್ ನಿಂದ ಹೊರಗೆಲ್ಲೂ ಶ್ರೀದೇವಿ ಬರಲೇ ಇಲ್ಲ. ಇದಕ್ಕೆ ಕಾರಣ ಏನು ಎಂಬ ಅನುಮಾನ ನಿಮ್ಮ ತಲೆಯಲ್ಲೂ ಮೂಡಿರಬಹುದು.

ಈ ಅನುಮಾನಕ್ಕೆ ಈಗ ಕ್ಲಾರಿಟಿ ಸಿಕ್ಕಿದೆ. ದುಬೈನಲ್ಲಿ ಶ್ರೀದೇವಿ ಉಳಿದುಕೊಂಡ್ಮೇಲೆ ಏನೇನಾಯ್ತು ಎಂಬುದರ ಬಗ್ಗೆ ಬೋನಿ ಕಪೂರ್ ಮೌನ ಮುರಿದಿದ್ದಾರೆ. ಇದನ್ನ ಚಿತ್ರ ವಿಶ್ಲೇಷಕ ಕೋಮಲ್ ನೆಹ್ತಾ ತಮ್ಮ ಬ್ಲಾಗ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಾದ್ರೆ, ಮೂರು ದಿನ ಶ್ರೀದೇವಿ ದುಬೈ ಹೋಟೆಲ್ ನಿಂದ ಯಾಕೆ ಕದಲಲಿಲ್ಲ.? ಮುಂದೆ ಓದಿರಿ...

ದುಬೈನಲ್ಲೇ ಶ್ರೀದೇವಿ ಉಳಿದುಕೊಂಡಿದ್ದು ಏಕೆ.?

ತಮ್ಮ ಚೊಚ್ಚಲ ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಿದ್ದ ಕಾರಣ, ಮೋಹಿತ್ ಮಾರ್ವಾ ಮದುವೆಯಲ್ಲಿ ಜಾಹ್ನವಿ ಕಪೂರ್ ಪಾಲ್ಗೊಳ್ಳಲಿಲ್ಲ. ಹೀಗಾಗಿ, ಮಗಳಿಗಾಗಿ ದುಬೈನಲ್ಲಿ ಶಾಪಿಂಗ್ ಮಾಡಲು ಶ್ರೀದೇವಿ ಪ್ಲಾನ್ ಮಾಡಿದ್ದರು. ಶಾಪಿಂಗ್ ಮಾಡುವ ಸಲುವಾಗಿ ಮದುವೆ ಮುಗಿದರೂ, ದುಬೈನಲ್ಲೇ ಉಳಿದುಕೊಂಡರು.

ಶ್ರೀದೇವಿ ರೂಮಿನಲ್ಲಿ ಆ ದಿನ ಏನಾಯ್ತು.? ಕೋಮಲ್ ನೆಹ್ತಾ ಬಿಚ್ಚಿಟ್ಟ ಅಸಲಿ ಕಥೆ.!

ಬೋನಿ ಕಪೂರ್ ಭಾರತಕ್ಕೆ ವಾಪಸ್ ಬಂದಿದ್ದು ಯಾಕೆ.?

ಫೆಬ್ರವರಿ 22 ರಂದು ಲಕ್ನೌದಲ್ಲಿ ಬೋನಿ ಕಪೂರ್ ಗೊಂದು ಮೀಟಿಂಗ್ ಇತ್ತು. ಮೀಟಿಂಗ್ ನಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಇದ್ದ ಕಾರಣ, ಭಾರತಕ್ಕೆ ಬೋನಿ ಕಪೂರ್ ಫ್ಲೈಟ್ ಹತ್ತಿದರು.

'ಸೌಂದರ್ಯದ ಸಿರಿದೇವಿ' ಶ್ರೀದೇವಿ ಹಠಾತ್ ನಿಧನ: ಕಾಡುವ 5 ಪ್ರಶ್ನೆಗಳು

ಶಾಪಿಂಗ್ ಯಾಕೆ ಮಾಡಲಿಲ್ಲ.?

ಮಗಳು ಜಾಹ್ನವಿಗೆ ಫೋನ್ ಮಾಡಿ ಏನೇನು ಶಾಪಿಂಗ್ ಮಾಡಬೇಕು ಅಂತ ಫೋನ್ ನಲ್ಲೇ ಲಿಸ್ಟ್ ಮಾಡಿಕೊಂಡಿದ್ದರಂತೆ ಶ್ರೀದೇವಿ. ಫೆಬ್ರವರಿ 21 ರಂದು ಶಾಪಿಂಗ್ ಮಾಡುವ ಪ್ಲಾನ್ ನಲ್ಲಿದ್ದರು ಶ್ರೀದೇವಿ. ಆದ್ರೆ, ಅದಕ್ಕೂ ಮುನ್ನವೇ ತಮ್ಮ ಫೋನ್ ನ ಎಲ್ಲೋ ಇಟ್ಟು ಶ್ರೀದೇವಿ ಮರೆತು ಬಿಟ್ಟಿದ್ದಾರೆ. ಹೀಗಾಗಿ ಅವರಿಗೆ ಶಾಪಿಂಗ್ ಮಾಡಲು ಸಾಧ್ಯ ಆಗಲಿಲ್ಲ.

3 ದಿನ ಹೋಟೆಲ್ ರೂಮ್ ನಲ್ಲೇ ಲಾಕ್ ಆಗಿದ್ರಾ ಶ್ರೀದೇವಿ? ಇದೇನಿದು ಆಘಾತಕಾರಿ ಸುದ್ದಿ?

ಹೋಟೆಲ್ ರೂಮ್ ಬಿಟ್ಟು ಯಾಕೆ ಹೊರಗೆ ಬರಲಿಲ್ಲ.?

ಶ್ರೀದೇವಿ ಬಳಿ ಮೊಬೈಲ್ ಫೋನ್ ಇಲ್ಲದ ಕಾರಣ, ಹೋಟೆಲ್ ರೂಮ್ ಬಿಟ್ಟು ಬೇರೆಲ್ಲೂ ಹೋಗಿಲ್ಲ. ಫೆಬ್ರವರಿ 21, 22 ಹಾಗೂ 23 ರಂದು ಹೋಟೆಲ್ ರೂಮ್ ನಲ್ಲೇ ರಿಲ್ಯಾಕ್ಸ್ ಮಾಡಿದ್ದಾರೆ ಶ್ರೀದೇವಿ.

ಶ್ರೀದೇವಿ ಬದುಕಿನ ಕಹಿ ಸತ್ಯ ಅನಾವರಣ ಮಾಡಿದ ರಾಮ್ ಗೋಪಾಲ್ ವರ್ಮಾ

ಜಾಹ್ನವಿಗೆ ಶುರು ಆಗಿತ್ತು ಆತಂಕ

ಒಬ್ಬಂಟಿಯಾಗಿ ಇರುವುದು ಶ್ರೀದೇವಿಗೆ ಅಭ್ಯಾಸ ಇಲ್ಲ. ಹೀಗಾಗಿ, ಪಾಸ್ ಪೋರ್ಟ್ ಸೇರಿದಂತೆ ಮುಖ್ಯವಾದ ದಾಖಲೆಗಳನ್ನ ಅಮ್ಮ ಎಲ್ಲಿ ಕಳೆದುಕೊಂಡು ಬಿಡುತ್ತಾರೋ ಎಂಬ ಆತಂಕ ಪುತ್ರಿ ಜಾಹ್ನವಿಗೆ ಕಾಡಿತ್ತು.

ಫೆಬ್ರವರಿ 24 ಬೆಳಗ್ಗೆ...

ಫೆಬ್ರವರಿ 24 ಬೆಳಗ್ಗೆ ಬೋನಿ ಕಪೂರ್ ಹಾಗೂ ಶ್ರೀದೇವಿ ನಡುವೆ ದೂರವಾಣಿ ಸಂಭಾಷಣೆ ನಡೆದಿದೆ. ಆಗ ''ಪಾಪಾ (ಬೋನಿಯನ್ನ ಶ್ರೀದೇವಿ ಕರೆಯುತ್ತಿದ್ದದ್ದು ಹೀಗೆ) ನಿಮ್ಮನ್ನ ಮಿಸ್ ಮಾಡಿಕೊಳ್ತಿದ್ದೇನೆ'' ಎಂದು ಶ್ರೀದೇವಿ ಹೇಳಿದ್ದಾರೆ. ಪತ್ನಿಗೆ ಸರ್ಪ್ರೈಸ್ ನೀಡಲು ಬೋನಿ ಕಪೂರ್ ದುಬೈಗೆ ಅಂದೇ ಫ್ಲೈಟ್ ಹತ್ತಿದ್ದಾರೆ.

ಸರ್ ಪ್ರೈಸ್ ಮತ್ತು ಶಾಕ್

ಪತ್ನಿಗೆ ಸರ್ ಪ್ರೈಸ್ ನೀಡಲು ದುಬೈಗೆ ಹಾರಿದ್ದ ಬೋನಿ ಕಪೂರ್, ರಾತ್ರಿಗೆ ಡಿನ್ನರ್ ಹಾಗೂ ಮಾರನೇ ದಿನ ಜಾಹ್ನವಿಗಾಗಿ ಶಾಪಿಂಗ್ ಮಾಡಲು ಪ್ಲಾನ್ ಮಾಡಿದ್ದರು. ಆದ್ರೆ, ಪತಿಯನ್ನ ನೋಡಿದ ಸಂತಸದಲ್ಲಿ, ಡಿನ್ನರ್ ಗಾಗಿ ರೆಡಿ ಆಗಲು ಬಾತ್ ರೂಮ್ ಗೆ ಹೋಗಿದ್ದ ಶ್ರೀದೇವಿ ಬಾತ್ ಟಬ್ ನಲ್ಲಿ ಬಿದ್ದು ಪ್ರಾಣ ಕಳೆದುಕೊಂಡರು.

English summary
Why did Bollywood Actress Sridevi stayed back at Dubai even after Mohit Marwah's wedding.? Read the article to know the answer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada