»   » ಲೈಂಗಿಕ ಕಿರುಕುಳ ದೂರು ದಾಖಲಿಸಿದ ಪ್ರೀತಿ ಜಿಂಟಾ

ಲೈಂಗಿಕ ಕಿರುಕುಳ ದೂರು ದಾಖಲಿಸಿದ ಪ್ರೀತಿ ಜಿಂಟಾ

Posted By:
Subscribe to Filmibeat Kannada

ತನ್ನ ಮಾಜಿ ಪ್ರಿಯಕರ ನೆಸ್ ವಾಡಿಯಾ ವಿರುದ್ಧ ಬಾಲಿವುಡ್ ನ ಡಿಂಪಲ್ ಬ್ಯೂಟಿ ಪ್ರೀತಿ ಜಿಂಟಾ ಲೈಂಗಿಕ ಕಿರುಕುಳ ದೂರು ದಾಖಲಿದ್ದಾರೆ. ದಕ್ಷಿಣ ಮುಂಬೈನ ವಾಂಖೆಡೆ ಮೈದಾನದಲ್ಲಿ ವಾಡಿಯಾ ಅವರು ತಮಗೆ ಲೈಂಗಿಕ ಕಿರುಕುಳ, ನಿಂದನೆ ಹಾಗೂ ಬೆದರಿಕೆ ಒಡ್ಡಿದ್ದಾರೆ ಎಂದು ಜಿಂಟಾ ಆರೋಪಿಸಿದ್ದಾರೆ.

ಇವರಿಬ್ಬರೂ ಕಿಂಗ್ಸ್ ಇಲೆವನ್ ಪಂಜಾಬ್ ಕ್ರಿಕೆಟ್ ತಂಡದ ಸಹ ಮಾಲೀಕರಾಗಿದ್ದು, ಇದೀಗ ಜಿಂಟಾ ಅವರು ಲೈಂಗಿಕ ಕಿರುಕುಳ ಆರೋಪ ಮಾಡಿರುವ ಕಾರಣ ಸುದ್ದಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಮೂವತ್ತೊಂಬತ್ತರ ಹರೆಯದ ಪ್ರೀತಿ ಅವರು ಗುರುವಾರ (ಜೂ.12) ರಾತ್ರಿ ಪೋಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. [ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸಿ ಸಿಕ್ಕಿಬಿದ್ದ ತಾರೆಗಳು]

ಮೇ.30ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನೆಸ್ ವಾಡಿಯಾ (44) ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಪ್ರೀತಿ ತಿಳಿಸಿದ್ದಾರೆ. ಅಂದು ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸೆಣೆಸಾಟ ನಡೆಯುತ್ತಿತ್ತು. ಜೋಡಿ ಹಕ್ಕಿಗಳಂತೆ ಹಾರಾಡಿಕೊಂಡಿದ್ದ ಇವರಿಬ್ಬರು ಈಗ ಹಾವು ಮುಂಗಿಸಿಯಂತಾಗಿದ್ದಾರೆ. ಇದಕ್ಕೆಲ್ಲಾ ಏನು ಕಾರಣ? ಸ್ಲೈಡ್ ನಲ್ಲಿ ಮತ್ತಷ್ಟು ವಿವರಗಳು...

ಬ್ರೇಕ್ ಕೆ ಬಾದ್ ನಡೆದದ್ದೇನು?

ಇದು ಬ್ರೇಕ್ ಕೆ ಬಾದ್ ನಡೆದ ಮಾಜಿ ಪ್ರೇಮಿಗಳ ವಿಷಯ...ಕಿಂಗ್ಸ್ ಇಲವೆನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಮ್ಯಾಚ್ ನಡೆಯುತ್ತಿರಬೇಕಾದರೆ... ಗರ್ ವಾರೆ ಪೆವಿಲಿಯನ್ ಗೆ ಬಂದ ವಾಡಿಯಾ ಅಲ್ಲಿಯೇ ಇದ್ದ ಜಿಂಟಾ ಅವರ ಹತ್ತಿರ ಬಂದು ಅಸಭ್ಯವಾಗಿ ನಡೆದುಕೊಂಡದ್ದಷ್ಟೇ ಅಲ್ಲದೆ, ಎಲ್ಲರೆದಿರುಗೂ ತಮ್ಮನ್ನು ನಿಂದಿಸಿದ್ದಾಗಿ ಜಿಂಟಾ ಹೇಳಿಕೊಂಡಿದ್ದಾರೆ.

ವಾಡಿಯಾ ವಿರುದ್ಧ ದಾಖಲಾಗಿರುವ ಕೇಸ್

ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು, ವಾಡಿಯಾ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದು ಭಾರತೀಯ ದಂಡ ಸಂಹಿತೆ ಸೆಕ್ಷನ್ 354 (ಹಲ್ಲೆ ನಡೆಸಿ ಮಹಿಳೆಯ ಗೌರವಕ್ಕೆ ಧಕ್ಕೆ ಉಂಟು ಮಾಡಿದ), ಸೆಕ್ಷನ್ 504 (ಉದ್ದೇಶ ಪೂರ್ವಕವಾಗಿ ಶಾಂತಿ ಕದಡುವುದು), ಸೆಕ್ಷನ್ 506 (ಬೆದರಿಕೆ) ಹಾಗೂ ಸೆಕ್ಷನ್ 509 (ಮಹಿಳೆಯ ಜತೆ ಅಶ್ಲೀಲವಾಗಿ ಮಾತನಾಡುವುದು) ಪ್ರಕಾರ ದೂರು ದಾಖಲಿಸಿಕೊಳ್ಳಲಾಗಿದೆ.

ಒಂದು ಕಾಲದಲ್ಲಿ ಅಂಟಿಕೊಂಡೇ ಓಡಾಡುತ್ತಿದ್ದ ಜೋಡಿ

ತಮ್ಮ ಹಳೆಯ ಗೆಳೆತನ ಮುರಿದುಬಿದ್ದಿದ್ದರೂ ಪ್ರೀತಿ ಜಿಂಟಾ ಜೊತೆ ನೆಸ್ ವಾಡಿಯಾ ಈಗ ಈ ರೀತಿಯಾಗಿ ನಡೆದುಕೊಳ್ಳಲು ಕಾರಣ ಏನು ಎಂಬುದು ಗೊತ್ತಾಗಿಲ್ಲ. ಒಂದು ಕಾಲದಲ್ಲಿ ಅಂಟಿಕೊಂಡೇ ಓಡಾಡುತ್ತಿದ್ದ ಇವರು ಐದು ವರ್ಷಗಳ ಹಿಂದೆ ಬ್ರೇಕ್ ಅಪ್ ಆಗಿದ್ದರು.

ಪ್ರೀತಿಯ ಆರೋಪಕ್ಕೆ ನೆಸ್ ವಾಡಿಯಾ ಶಾಕ್

ಪ್ರೀತಿ ಜಿಂಟಾ ದೂರು ದಾಖಲಿಸುತ್ತಿದ್ದಂತೆ ಶಾಕ್ ಆಗಿರುವ ನೆಸ್ ವಾಡಿಯಾ, ಇದೆಲ್ಲಾ ಸಂಪೂರ್ಣ ಸುಳ್ಳು, ಆಧಾರರಹಿತ ಎಂದಿದ್ದಾರೆ. ಪ್ರೀತಿ ಜಿಂಟಾ ಈ ಮಟ್ಟಕ್ಕೆ ಇಳಿಯಬಾರದು ಎಂದೂ ಎಚ್ಚರಿಸಿದ್ದಾರೆ. ಸದಾ ತನ್ನ ಬಾಡಿಗಾರ್ಡ್ಸ್ ನಡುವೆ ಇರುವ ಪ್ರೀತಿ ಜಿಂಟಾ ಅವರ ಬಳಿಗೆ ಹೋಗುವುದು ಅಸಾಧ್ಯವಾದ ಕೆಲಸ. ಇದೆಲ್ಲಾ ನೆಸ್ ವಾಡಿಯಾಗೆ ಸಾಧ್ಯವಾಗಿರಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಹೊರಗಿನಿಂದಲೇ ದೂರು ನೀಡಿದ ಜಿಂಟಾ

ಪ್ರೀತಿ ಜಿಂಟಾ ಗುರುವಾರ (ಜೂ.12) ಕೊಟ್ಟ ಹೇಳಿಕೆಗಳನ್ನು ರೆಕಾರ್ಡ್ ಮಾಡಿಕೊಂಡು ಬಳಿಕ ಅದನ್ನು ಶುಕ್ರವಾರ (ಜೂ.13) ಎಫ್ಐಆರ್ ಆಗಿ ಬದಲಾಯಿಸಲಾಗಿದೆ. ಹೇಳಿಕೆ ನೀಡಿದಾಗ ಅವರು ನಗರದಿಂದ ಹೊರಗಿದ್ದರು, ಅಲ್ಲಿಂದ ವಾಪಸ್ ಆದ ಬಳಿಕ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೇಸ್ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು

ಈ ಕೇಸನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಸದ್ಯಕ್ಕೆ ಸಾಕ್ಷ್ಯಾಧಾರಗಳನ್ನು ಕಲೆಹಾಕಲು ಮುಂದಾಗಿದ್ದಾರೆ. ಪ್ರೀತಿ ಜಿಂಟಾ ಕೇಸ್ ತನಿಖೆ ಆರಂಭವಾಗಿದೆ. ಇನ್ನೊಂದು ಇಂಟರೆಸ್ಟಿಂಗ್ ಸಂಗತಿ ಎಂದರೆ ಇವರಿಬ್ಬರೂ ಒಂದು ಕಾಲದಲ್ಲಿ ಜೋಡಿ ಹಕ್ಕಿಗಳಂತೆ ವಿಹರಿಸಿದವರು.

ಇಷ್ಟಕ್ಕೆಲ್ಲಾ ಕಾರಣವಾಗಿದ್ದು ಮತ್ತೊಂದು ಸಂಬಂಧ?

ಬಳಿಕ ಇಬ್ಬರ ನಡುವೆ ಮನಸ್ತಾಪ ಬಂದು ದೂರವಾಗಿದ್ದರು. ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಸಹ ಮಾಲೀಕರಾದ ಮೇಲೆ ಎರಡು ತಿಂಗಳ ಹಿಂದಷ್ಟೇ ಮತ್ತೆ ಹತ್ತಿರವಾಗಿದ್ದರು. ಆದರೆ ವಾಡಿಯಾ ಮತ್ತೊಬ್ಬರ ಜೊತೆ ಸಂಬಂಧ ಬೆಸೆಯುತ್ತಿರುವುದು ಜಿಂಟಾ ಕೋಪಕ್ಕೆ ಕಾರಣವಾಗಿದೆ. ಈಗ ಅದು ಮತ್ತೊಂದು ಸ್ವರೂಪದಲ್ಲಿ ಪ್ರಕಟವಾಗಿದೆ ಎನ್ನುತ್ತವೆ ಮೂಲಗಳು.

English summary
Bollywood actress Preity Zinta has filed a molesttaion case against her ex boyfriend Ness Wadia on Saturday. Preity has accused her ex-boyfriend and industrialist Ness Wadia of allegedly molesting her.
Please Wait while comments are loading...