twitter
    For Quick Alerts
    ALLOW NOTIFICATIONS  
    For Daily Alerts

    ದಿಲೀಪ್ ಕುಮಾರ್ 'ಟ್ರ್ಯಾಜಿಡಿ ಕಿಂಗ್' ಆಗಿದ್ದರ ಹಿಂದಿದೆ ರೋಚಕ ಕಥೆ

    |

    ಬಾಲಿವುಡ್ ಖ್ಯಾತ ನಟ, ಟ್ರ್ಯಾಜಿಡಿ ಕಿಂಗ್ ಎಂದೇ ಪ್ರಖ್ಯಾತಿಗಳಿಸಿದ್ದ ದಿಲೀಪ್ ಕುಮಾರ್ ಇನ್ನು ನೆನಪು ಮಾತ್ರ. 98 ವರ್ಷದ ನಟ ದಿಲೀಪ್ ಕುಮಾರ್ ಇಂದು (ಜುಲೈ 7) ಇಹಲೋಕ ತ್ಯಜಿಸಿದರು. ಬ್ರಿಟಿಷ್ ಭಾರತದಿಂದ ಅಭಿನಯ ಪ್ರಾರಂಭಿಸಿ ಇದುವರೆಗೂ ಜೀವಂತವಾಗಿದ್ದ ಏಕೈಕ ನಟ ದಿಲೀಪ್ ಕುಮಾರ್.

    ಫಿಲ್ಮ್ ಫೇರ್ ಪ್ರಶಸ್ತಿ ಗೆದ್ದ ಮೊದಲ ನಟ ಎನ್ನುವ ಖ್ಯಾತಿ ಕೂಡ ದಿಲೀಪ್ ಕುಮಾರ್ ಹೆಸರಿನಲ್ಲಿದೆ. ಬರೋಬ್ಬರಿ 8 ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಗಿನ್ನಿಸ್ ದಾಖಲೆಯನ್ನು ಮಾಡಿದರು. 1944 'ಜ್ವಾರ್ ಭಾಟಾ' ಸಿನಿಮಾ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ ದಿಲೀಪ್ ನಂತರ ಭಾರತೀಯ ಸಿನಿಮಾರಂಗ ಆರಾಧಿಸುವ ನಾಯಕನಾಗಿ ಹೊರಹೊಮ್ಮಿದರು.

    ಭಾರತೀಯ ಸಿನಿಮಾರಂಗಕ್ಕೆ ಅನೇಕ ಅದ್ಭುತ ಸಿನಿಮಾಗಳನ್ನು ನೀಡಿರುವ ದಿಲೀಪ್ ಕುಮಾರ್ 'ಟ್ರ್ಯಾಜಿಡಿ ಕಿಂಗ್' ಎಂದು ಗುರುತಿಸಿಕೊಂಡಿದ್ದರ ಹಿಂದಿದೆ ರೋಚಕ ಕಥೆ. 50ರ ದಶಕದಲ್ಲಿ ಪ್ರಸಿದ್ಧ ನಟನಾಗಿ ಹೊರಹೊಮ್ಮುವ ಜೊತೆಜೊತೆಗೆಯೇ ಟ್ರ್ಯಾಜಿಡಿ ಕಿಂಗ್ ಎನ್ನುವ ಮತ್ತೊಂದು ಹೆಸರು ದಿಲೀಪ್ ಕುಮಾರ್ ಜೊತೆ ಸೇರಿಕೊಂಡಿತು. ಇದಕ್ಕೆ ಕಾರಣ ಅವರು ನಿರ್ವಹಿಸಿದ ಪಾತ್ರಗಳು.

    Why was Dilip Kumar known as the Tragedy King? Here is the story


    50ರ ದಶಕದ ಸಮಯದಲ್ಲಿ ದಿಲೀಪ್ ಕುಮಾರ್ ಅನೇಕ ಗಂಭೀರ ಪಾತ್ರಗಳನ್ನು ನಿರ್ವಹಿಸಿದರು. ಆ ಪಾತ್ರಗಳೇ ನಂತರ ದುರಂತ ನಾಯಕ ಎನ್ನುವ ಬಿರುದು ತಂದು ಕೊಟ್ಟಿತು. ಕೇವಲ ದುರಂತ ಪಾತ್ರಗಳಲ್ಲಿ ನಟಿಸಿದ್ದಕ್ಕೆ ಮಾತ್ರ ಅಂತಲ್ಲ, ಗಂಭೀರ ಪಾತ್ರಗಳಿಂದ ದಿಲೀಪ್ ಕುಮಾರ್ ಖಿನ್ನತೆಗೆ ಒಳಗಾಗಿದ್ದರು. ಬಳಿಕ ಚಿಕಿತ್ಸೆ ಪಡೆದು ನಿಧಾನವಾಗಿ ಖಿನ್ನತೆಯಿಂದ ಹೊರಬಂದರು. ನಂತರ ಗಂಭೀರ ಪಾತ್ರಗಳಿಗೆ ಗುಡ್ ಬೈ ಹೇಳಿ ಸಹಜ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು. ಆದರೆ ಟ್ರ್ಯಾಜಿಡಿ ಕಿಂಗ್ ಎನ್ನುವ ಹೆಸರು ಮಾತ್ರ ದಿಲೀಪ್ ಕುಮಾರ್ ಜೊತೆಯೇ ಸೇರಿಕೊಂಡಿತು.

    ಗಂಭೀರ ಪಾತ್ರಗಳನ್ನು ನಿರ್ವಹಿಸಿದ ಸಿನಿಮಾಗಳೆಂದರೆ 'ಬ್ಯಾಬಿಲೋನ್', ಈ ಸಿನಿಮಾದಲ್ಲಿ ಶ್ರೀಮಂತ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದರು. ಅದೇ ಸಮಯದಲ್ಲಿ 'ದಾಗ್', 'ಮೊಘಲ್ ಇ ಅಜಮ್', 'ದಿದಾರ್', 'ತರಣಾ', 'ದೇವದಾಸ್', 'ನಯಾ ದೌರ್', 'ಜೋವರ್ ಭಾಟಾ', 'ಮಧುಮತಿ' ಇನ್ನು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರಿಂದ ಟ್ರ್ಯಾಜಿಡಿ ಕಿಂಗ್ ಎಂದು ಪ್ರಸಿದ್ಧಿ ಪಡೆದರು.

    ನಟ ದಿಲೀಪ್ 1998ರ ಬಳಿಕ ಮತ್ತೆ ಬಣ್ಣ ಹಚ್ಚಿಲ್ಲ. 1991ರಲ್ಲಿ ಸೌದಾಗರ್ ಸಿನಿಮಾದಲ್ಲಿ ನಟಿಸಿದ್ದ ದಿಲೀಪ್ ಕುಮಾರ್ ಬಳಿಕ 8 ವರ್ಷಗಳ ನಂತರ ಅಂದರೆ 1998ರಲ್ಲಿ 'ಕಿಲ' ಸಿನಿಮಾದಲ್ಲಿ ನಟಿಸಿದರು. ಇದೇ ದಿಲೀಪ್ ಕುಮಾರ್ ಅವರ ಕೊನೆಯ ಸಿನಿಮಾ. ಬಳಿಕ ಮತ್ತೆ ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡಿಲ್ಲ.

    ಬ್ರಿಟೀಷರಿಗಾಗಿ ಅಡುಗೆ ಮಾಡುತ್ತಿದ್ದ ವ್ಯಕ್ತಿ ದಿಲೀಪ್‌ ಕುಮಾರ್ ಆದ ವಿಸ್ಮಯಕಾರಿ ಪಯಣಬ್ರಿಟೀಷರಿಗಾಗಿ ಅಡುಗೆ ಮಾಡುತ್ತಿದ್ದ ವ್ಯಕ್ತಿ ದಿಲೀಪ್‌ ಕುಮಾರ್ ಆದ ವಿಸ್ಮಯಕಾರಿ ಪಯಣ

    English summary
    Dilip Kumar death: Why was Dilip Kumar known as the 'Tragedy King'? Here is the story.
    Wednesday, July 7, 2021, 15:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X