For Quick Alerts
  ALLOW NOTIFICATIONS  
  For Daily Alerts

  ಕರಿಷ್ಮಾ ಕಪೂರ್ ಗೆ ಎರಡನೇ ಮದುವೆ! ತಂದೆ ಹೇಳಿದ್ದೇನು?

  By Suneel
  |

  ಬಾಲಿವುಡ್ಕರಿಷ್ಮಾ ಕಪೂರ್ ಜಗತ್ತಿನ ಅತ್ಯುತ್ತಮ ನಟಿಯರಲ್ಲಿ ಒಬ್ಬರು. ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಏಪ್ರಿಲ್ 13 ರಂದು ಪ್ರಿಯಾ ಸಚ್ದೇವ್ ಅವರನ್ನು ವರಿಸಿದ್ದು, ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.[ಎರಡನೇ ಮದುವೆ ಸಿದ್ಧವಾದ ಕರಿಷ್ಮಾ ಕಪೂರ್]

  ಇದೇ ಹಿನ್ನೆಲೆಯಲ್ಲಿ ಈಗ ಬಿ ಟೌನ್ ನಲ್ಲಿ ಕರಿಷ್ಮಾ ಕಪೂರ್ ತಮ್ಮ ಬಾಯ್‌ ಫ್ರೆಂಡ್ ಸಂದೀಪ್ ತೋಷ್ನಿವಾಲ್ ಜೊತೆ ಎರಡನೇ ಮದುವೆ ಆಗ್ತಾರಾ? ಎಂಬ ಗುಸು ಗುಸು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ನಟಿ ಎಂದೂ ಮಾಧ್ಯಮಗಳ ಮುಂದೆ ತುಟಿ ಬಿಚ್ಚಿರಲಿಲ್ಲ. ಕರಿಷ್ಮಾ ಮಾತನಾಡದಿದ್ರೆ ಏನಂತೆ. ಅವರ ತಂದೆ ಅವರ ಎರಡನೇ ಮದುವೆ ಬಗ್ಗೆ ಮಾತನಾಡಿದ್ದಾರೆ. ಅಸಲಿ ಅವರು ಪರ್ಮಿಶನ್ ಕೊಟ್ಟಿದ್ದಾರಾ ಅಥವಾ ಏನಂದ್ರು ಇಲ್ಲಿದೇ ನೋಡಿ ಕಂಪ್ಲೀಟ್ ಡೀಟೇಲ್ಸ್..

  ಕರಿಷ್ಮಾ ಎರಡನೇ ಮದುವೆ ಬಗ್ಗೆ ರಣಧಿರ್ ಕಪೂರ್ ಹೇಳಿದ್ದೇನು?

  ಕರಿಷ್ಮಾ ಎರಡನೇ ಮದುವೆ ಬಗ್ಗೆ ರಣಧಿರ್ ಕಪೂರ್ ಹೇಳಿದ್ದೇನು?

  "ಕರಿಷ್ಮಾ ಜೀವನದಲ್ಲಿ ತುಂಬ ಸೆಟೆಲ್ಡ್ ಆಗಿ ಸಂತೋಷವಾಗಿದ್ದಾಳೆ. ಮದುವೆ ಬಗ್ಗೆ ನಾನು ಎಂದು ಅವಳ ಜೊತೆ ಮಾತನಾಡಿಲ್ಲ. ಹಾಗಿದ್ದು ಏನಾದರೂ ಅವಳು ಪ್ಲಾನ್ ಮಾಡಿದ್ರೆ.. ನನ್ನ ಆಶೀರ್ವಾದ ಖಂಡಿತ ಇರುತ್ತದೆ' ಎಂದು ರಣಧಿರ್ ಕಪೂರ್ ಡಿಎನ್ಎ ಜೊತೆ ಹೇಳಿದ್ದಾರೆ.[ತಾರೆ ಕರಿಷ್ಮಾ ಕಪೂರ್ ದಾಂಪತ್ಯ ಜೀವನ ನುಚ್ಚುನೂರು]

  ಕರಿಷ್ಮಾ'ಗೆ ಎರಡನೇ ಮದುವೆ ಬೇಡ ಅನಿಸುತ್ತೆ!

  ಕರಿಷ್ಮಾ'ಗೆ ಎರಡನೇ ಮದುವೆ ಬೇಡ ಅನಿಸುತ್ತೆ!

  ತಮ್ಮ ಮಗಳ ಮದುವೆ ಬಗ್ಗೆ ಮಾತು ಮುಂದುವರೆಸಿ "ಕರಿಷ್ಮಾ'ಗೆ ಎರಡನೇ ಮದುವೆ ಬೇಕು ಎನಿಸಿರುವುದನ್ನ ನಾನು ಎಂದೂ ನೋಡಿಲ್ಲ. ಹಾಗೂ ಮದುವೆ ಆಗಬೇಕು ಎಂದು ಬಯಸಿದರೆ ಯಾವಾಗ ಬೇಕಾದರೂ ಆಗಲಿ. ಆದರೆ ಒಬ್ಬಳು ತಾಯಿ ಆಗಿ ಸಂತೋಷವಾಗಿದ್ದಾಳೆ" ಎಂದು ರಣಧಿರ್ ಕಪೂರ್ ಹೇಳಿದ್ದಾರೆ.

  ಸೈಫ್ ಅಲಿಖಾನ್ ಬಗ್ಗೆ ರಣಧಿರ್ ಹೇಳಿದ್ದೇನು?

  ಸೈಫ್ ಅಲಿಖಾನ್ ಬಗ್ಗೆ ರಣಧಿರ್ ಹೇಳಿದ್ದೇನು?

  ಡಿಎನ್‌ಎ'ಗೆ ನೀಡಿದ ಸಂದರ್ಶನದಲ್ಲಿ ಅಳಿಯ ಸೈಫ್ ಅಲಿಖಾನ್ ಬಗ್ಗೆ ರಣಧಿರ್. "ಕರೀನಾ ಕಪೂರ್ ಜೀವನದಲ್ಲಿ ತುಂಬಾ ಸಂತೋಷವಾಗಿದ್ದಾಳೆ. ಅದಕ್ಕೆ ಕಾರಣ ಸೈಫ್ ಆಕೆಯನ್ನು ಅಷ್ಟೊಂದು ಪ್ರೀತಿಸುತ್ತಾರೆ. ನನಗೆ ಆತ ಅದ್ಭುತವಾದ ಅಳಿಯ ಹಾಗೂ ಉತ್ತಮ ವ್ಯಕ್ತಿತ್ವದವರು" ಎಂದಿದ್ದಾರೆ.

  ಮೊಮ್ಮಕ್ಕಳು ನನ್ನ ಲೈಫ್ ಲೈನ್

  ಮೊಮ್ಮಕ್ಕಳು ನನ್ನ ಲೈಫ್ ಲೈನ್

  ಹಿರಿಯ ನಟ ರಣಧಿರ್ ಕಪೂರ್ ತಮ್ಮ ಮೊಮ್ಮಕ್ಕಳಾದ ಸಮೈರಾ, ಕಿಯಾನ್ ಮತ್ತು ತೈಮುರ್ ಅಲಿ ಖಾನ್ ಬಗ್ಗೆ ಹೆಮ್ಮೆ ಪಡುತ್ತಾರೆ. ಅವರೊಂದಿಗಿನ ಅನುಬಂಧದ ಬಗ್ಗೆ "ನನ್ನ ಮೊಮ್ಮಕ್ಕಳು ನನ್ನ ಲೈಫ್ ಲೈನ್" ಎಂದಿದ್ದಾರೆ.

  ಕಪೂರ್ ಗಳೆಲ್ಲಾ ಕೌಟುಂಬಿಕ ಮನಸ್ಸಿನವರು

  ಕಪೂರ್ ಗಳೆಲ್ಲಾ ಕೌಟುಂಬಿಕ ಮನಸ್ಸಿನವರು

  "ಸಮಯ ಸಿಕ್ಕಾಗಲೆಲ್ಲಾ ನಮ್ಮ ಕುಟುಂಬದವರನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇನೆ. ಎಲ್ಲರೂ ಕೌಟುಂಬಿಕ ಮನಸ್ಸಿನವರು. ನಮಗೆ ಫ್ಯಾಮಿಲಿಯವರೆಲ್ಲಾ ಸಂತೋಷವಾಗಿರುವುದೇ ಮುಖ್ಯ. ಪ್ರತಿಯೊಬ್ಬರ ಹುಟ್ಟುಹಬ್ಬಕ್ಕೂ ಮತ್ತು ವಿಶೇಷ ಕಾರ್ಯಕ್ರಮಗಳಿಗೆ ಭೇಟಿ ಆಗುತ್ತಿರುತ್ತೇವೆ" - ರಣಧಿರ್ ಕಪೂರ್, ಬಾಲಿವುಡ್ ಹಿರಿಯ ನಟ

  English summary
  Now, everyone is stumbling upon one question: Will Karisma Kapoor tie her knot for the second time with her beau Sandeep Toshniwal? The actress hasn't opened up about her marital life with media yet, but her father, Randhir Kapoor opens up about her wedding and this is what he has to say:

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X