»   » ಎರಡನೇ ಮದುವೆ ಸಿದ್ಧವಾದ ಕರಿಷ್ಮಾ ಕಪೂರ್

ಎರಡನೇ ಮದುವೆ ಸಿದ್ಧವಾದ ಕರಿಷ್ಮಾ ಕಪೂರ್

By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ತಾರೆ ಕರಿಷ್ಮಾ ಕಪೂರ್ ಅವರು ತನ್ನ ಪತಿ ಸಂಜಯ್ ಕಪೂರ್ ಅವರಿಗೆ ವಿಚ್ಛೇದನ ಕೊಡಲು ನಿರ್ಧರಿಸಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಪರಸ್ಪರ ವಿಚ್ಛೇದನ ಕೋರಿ ಇಬ್ಬರೂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಹಿನ್ನೆಲೆಯಲ್ಲಿ ಕರಿಷ್ಮಾ ಕುರಿತು ತಾಜಾ ಸುದ್ದಿಯೊಂದು ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ.

ತನ್ನ ಪತಿಯಿಂದ ಸಂಬಂಧ ಕಡಿದುಕೊಳ್ಳುತ್ತಿರುವ ಕರೀಷ್ಮಾ ಈಗಾಗಲೆ ಮತ್ತೊಬ್ಬ ವಿಚ್ಛೇದಿತ ವ್ಯಕ್ತಿಯನ್ನು ಮದುವೆಯಾಗುಲು ಸಿದ್ಧವಾಗುತ್ತಿದ್ದಾರಂತೆ. ಬಾಲಿವುಡ್ ಸಮಾಚಾರದ ಪ್ರಕಾರ, ಕರಿಷ್ಮಾ ಕೈ ಹಿಡಿಯಲಿರುವುದು ಸಂದೀಪ್ ತೋಷ್ನಿವಾಲ್ ಎಂಬುವವರನ್ನು.[ಸ್ತ್ರೀಲೋಲ ಪತಿಗೆ ಕರಿಷ್ಮಾ ಕಪೂರ್ ಸೋಡಾ ಚೀಟಿ]


ಸಂದೀಪ್ ಅವರು ಸಕ್ಸಸ್ ಫುಲ್ ಫಾರ್ಮಾಸಿ ಕಂಪನಿಯ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರಿಷ್ಮಾ ತರಹ ಸಂದೀಪ್ ಕೂಡ ತನ್ನ ಪತ್ನಿಯಿಂದ ವಿಚ್ಛೇದನ ಪಡೆದಿದ್ದು ಇಬ್ಬರು ಮಕ್ಕಳ ತಂದೆ. ಕರಿಷ್ಮಾ ಹಾಗೂ ಅವರ ಪತಿ ಸಂಜಯ್ ವಿಚ್ಛೇದನ ತಕರಾರು ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.

ಅಷ್ಟರಲ್ಲಾಗಲೇ ಕರಿಷ್ಮಾ ಎರಡನೇ ಮದುವೆ ಬಗ್ಗೆ ಸುದ್ದಿ ಹರಿದಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಕರೀಷ್ಮಾ ಕಪೂರ್ ಅವರ ಹಾಲಿ ಪತಿ ಸಂಜಯ್ ಕಪೂರ್ ಈ ಹಿಂದೆಯೇ ವಿಚ್ಛೇದನ ಪಡೆದು ಕರೀಷ್ಮಾ ಕೈಹಿಡಿದ್ದರು.

ಈಗ ಕರಿಷ್ಮಾ ಮತೊಬ್ಬ ವಿಚ್ಛೇದಿತನ ಕೈಹಿಡಿಯಲು ಮುಂದಾಗಿದ್ದಾರೆ. ಒಂದು ವೇಳೆ ಸಂದೀಪ್ ಅವರನ್ನು ಕರಿಷ್ಮಾ ವರಿಸಿದ್ದೇ ಆದರೆ ಇಬ್ಬರು ವಿಚ್ಛೇದಿತರನ್ನು ವರಿಸಿದ ತಾರೆಯಾಗಿ ಹೊಸ ದಾಖಲೆಗೆ ಕಾರಣರಾಗಲಿದ್ದಾರೆ. ಇಷ್ಟಕ್ಕೂ ಸಂಬಂಧಗಳು, ಮದುವೆಗಳು ಇರುವುದು ದಾಖಲೆ ಮಾಡಲು ಅಲ್ಲವೇ ಅಲ್ಲ ಅಲ್ಲವೇ?

English summary
Actress Karisma Kapoor, who has filed for divorce from her Delhi-based husband Sunjay Kapur recently, has moved on in her life. If rumours are to be believed, the pretty actress is all set to tie the knot with another man, who is also a divorcee.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada