»   » ಐಶ್ವರ್ಯ ರೈ, ಪ್ರಿಯಾಂಕಾರಂತೆ 'ಮಾನುಷಿ ಚಿಲ್ಲರ್'ಗೂ ಅದೃಷ್ಟ.!

ಐಶ್ವರ್ಯ ರೈ, ಪ್ರಿಯಾಂಕಾರಂತೆ 'ಮಾನುಷಿ ಚಿಲ್ಲರ್'ಗೂ ಅದೃಷ್ಟ.!

Posted By:
Subscribe to Filmibeat Kannada
ಐಶ್ವರ್ಯ ರೈ, ಪ್ರಿಯಾಂಕಾರಂತೆ 'ಮಾನುಷಿ ಚಿಲ್ಲರ್'ಗೂ ಅದೃಷ್ಟ | Filmibeat Kannada

1994 ರಲ್ಲಿ ಐಶ್ವರ್ಯ ರೈ ಮತ್ತು 2000 ರಲ್ಲಿ ಪ್ರಿಯಾಂಕಾ ಚೋಪ್ರಾ ಇಬ್ಬರು ವಿಶ್ವ ಸುಂದರಿ ಪಟ್ಟ ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದರು. ನಂತರ ಇವರಿಬ್ಬರು ಬಾಲಿವುಡ್ ಎಂಬ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ರಾಣಿಯರಾಗಿ ಮಿಂಚಿದ್ದಾರೆ.

ಕೇವಲ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ಸಿನಿಮಾಗಳಲ್ಲೂ ಸಂಚಲನ ಸೃಷ್ಟಿಸಿದ್ದಾರೆ. ಇದೀಗ, ಇವರಂತೆ ನೂತನ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಗೂ ಅದೃಷ್ಟ ಒಲಿಯುತ್ತಾ ಎಂಬುದು ಸದ್ಯ ರಂಗೀನ್ ದುನಿಯಾದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ಹಾಗಿದ್ರೆ, ಮಾನುಷಿ ಚಿಲ್ಲರ್ ಸಿನಿ ಲೋಕಕ್ಕೆ ಬರ್ತಾರ? ಸದ್ಯ ಮಿಸ್ ವರ್ಲ್ಡ್ ಏನ್ ಮಾಡ್ತಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಮಾನುಷಿ ಮೆಡಿಕಲ್ ವಿದ್ಯಾರ್ಥಿ

ವಿಶ್ವ ಸುಂದರಿ ಪಟ್ಟ ಗೆದ್ದ ಮಾನುಷಿ ಚಿಲ್ಲರ್ ಅವರ ಪೋಷಕರು ವೃತ್ತಿಯಲ್ಲಿ ಡಾಕ್ಟರ್ಸ್. ಹಾಗಾಗಿ, ಮಾನುಷಿ ಕೂಡ ಹೃದಯ ತಜ್ಞ ಡಾಕ್ಟರ್ ಆಗುವ ಗುರಿ ಹೊಂದಿದ್ದಾರೆ.

ಮಿಸ್ ವರ್ಲ್ಡ್ ಗೋಸ್ ಟು.. ಇಂಡಿಯಾ! ಪ್ರಶಸ್ತಿ ಗೆದ್ದ ಹರ್ಯಾಣದ ಚೆಲುವೆ

20 ವರ್ಷದ ಯುವತಿ

ಸದ್ಯ, ಮಾನುಷಿ ಹರಿಯಾಣದ ಭಗತ್ ಪೂಲ್ ಸಿಂಗ್ ಸರ್ಕಾರಿ ಮೆಡಿಕಲ್ ಕಾಲೇಜ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಬಾಲಿವುಡ್ ಗೆ ಮಾನುಷಿ?

'ಮಿಸ್ ವರ್ಲ್ಡ್' ಗೆದ್ದ ಮೇಲೆ ಸಿನಿಮಾ ಆಫರ್ ಬರುವುದು ಸಾಮಾನ್ಯ. ಈ ಬಗ್ಗೆ ಮಾನುಷಿಗೂ ಕೂಡ ಆಸಕ್ತಿ ಇದ್ದು, ಒಳ್ಳೆ ಸ್ಕ್ರಿಪ್ಟ್ ಸಿಕ್ಕರೇ ಖಂಡಿತಾ ಆಕ್ಟ್ ಮಾಡ್ತಾರೆ ಎಂದು ಸ್ವತಃ ಮಾನುಷಿ ಅವರ ಆಪ್ತರು ತಿಳಿಸಿದ್ದಾರೆ.

ಮಾನುಷಿ ಚಿಲ್ಲರ್ ಬಗ್ಗೆ ಶಶಿ ತರೂರ್ ವ್ಯಂಗ್ಯ: ಮಹಿಳಾ ಮಣಿಗಳ ಆಕ್ರೋಶ

ಬೇಡಿಕೆ ಹೆಚ್ಚಿದೆ

ವಿಶ್ವ ಸುಂದರಿ ಮೇಲೆ ಈಗಾಗಲೇ ಬಾಲಿವುಡ್ ಕಣ್ಣು ಬಿದಿದ್ದು, ನಿರ್ಮಾಪಕರು ಮಾನುಷಿ ಜೊತೆ ಸಿನಿಮಾ ಮಾಡಲು ಮುಂದಾಗುತ್ತಿರುವ ಬಗ್ಗೆ ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.

ಐಶ್, ಪಿಗ್ಗಿ ನಂತರ ಮಾನುಷಿ

ವಿಶ್ವಸುಂದರಿ ಪಟ್ಟ ಗೆದ್ದ ನಂತರ ಐಶ್ವರ್ಯ ರೈ, ಪ್ರಿಯಾಂಕಾ ಚೋಪ್ರಾ ಸಂಪೂರ್ಣವಾಗಿ ಸಿನಿಮಾದಲ್ಲಿ ತೊಡಗಿಕೊಂಡರು. ಅದರಲ್ಲಿ ಯಶಸ್ಸು ಕೂಡ ಕಂಡರು. ಹೀಗಾಗಿ, ಇವರಿಬ್ಬರ ನಂತರ ಮಾನುಷಿ ಕೂಡ ಅದೇ ಮಾರ್ಗವನ್ನ ಅನುಸರಿಸುತ್ತಾರೆ ಎನ್ನಲಾಗಿದೆ.

ಸಮಂತಾ ಬಟ್ಟೆ ಕದ್ದುಬಿಟ್ರಾ ವಿಶ್ವ ಸುಂದರಿ ಮಾನುಷಿ .?

ಶಿಕ್ಷಣ ಮತ್ತು ಸಿನಿಮಾ

ಸದ್ಯ, ಶಿಕ್ಷಣದ ಬಗ್ಗೆ ಯೋಚಿಸಿರುವ ಮಾನುಷಿ, ಸಿನಿಮಾ ಬಗ್ಗೆ ಹೆಚ್ಚಾಗಿ ತಲೆಕೆಡಸಿಕೊಂಡಿಲ್ಲ. ಆದ್ರೆ, ಮಾನುಷಿಗೆ ಸಿನಿಮಾ ಆಫರ್ ಬಂದಾಗ, ಅದನ್ನ ಹೇಗೆ ಸ್ವೀಕರಿಸುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಒಂದೊಳ್ಳೆ ಪಾತ್ರವನ್ನ ಆಯ್ಕೆ ಮಾಡಿಕೊಂಡು ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರ ಅಥವಾ ಸದ್ಯಕ್ಕೆ ಸಿನಿಮಾ ಬೇಡ ಎಂದು ಕಂಪ್ಲೀಟ್ ಆಗಿ ವಿದ್ಯಾಭ್ಯಾಸ ಮುಂದುವರೆಸುತ್ತಾರ ಕಾದುನೋಡಬೇಕಿದೆ.

English summary
After Aishwarya Rai and Priyanka Chopra Will Manushi Chhillar find the same success as Aish and PeeCee? ಐಶ್ವರ್ಯ ರೈ ಬಚ್ಚನ್ ಮತ್ತು ಪ್ರಿಯಾಂಕಾ ಚೋಪ್ರಾ ನಂತರ 'ಮಾನುಷಿ ಚಿಲ್ಲರ್' ಅವರಿಗೂ ಅದೃಷ್ಟ ಸಿಗುತ್ತಾ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada