For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಗೆ ಮತ್ತೆ ಯಶಸ್ಸು ತಂದು ಕೊಡುವುದೇ 'ರಂಜಾನ್'.?

  By Harshitha
  |
  ಸಲ್ಮಾನ್ ಸಿನಿಮಾಗೂ ರಂಜಾನ್ ಹಬ್ಬಕ್ಕು ಇದೆ ಒಂದು ನಂಟು..!

  'ರಂಜಾನ್' ಹಬ್ಬದ ಸಡಗರದಲ್ಲಿ ಚಿತ್ರಗಳನ್ನು ರಿಲೀಸ್ ಮಾಡಿದರೆ, ಬಾಕ್ಸ್ ಆಫೀಸ್ ಬ್ಲಾಸ್ಟ್ ಆಗುತ್ತೆ ಅನ್ನೋದು ಸಲ್ಮಾನ್ ಖಾನ್ ನಂಬಿಕೆ. ಯಾಕಂದ್ರೆ, 'ವಾಂಟೆಡ್', 'ದಬ್ಬಂಗ್', 'ಬಾಡಿಗಾರ್ಡ್', 'ಏಕ್ ಥಾ ಟೈಗರ್', 'ಕಿಕ್', 'ಭಜರಂಗಿ ಭಾಯ್ ಜಾನ್' ಹಾಗೂ 'ಸುಲ್ತಾನ್'... ಸಲ್ಮಾನ್ ಖಾನ್ ರವರ ಈ ಎಲ್ಲ ಹಿಟ್ ಸಿನಿಮಾಗಳು ಬಿಡುಗಡೆ ಆಗಿದ್ದು ಈದ್ ಸಂದರ್ಭದಲ್ಲಿ.!

  ಇದೀಗ 'ರೇಸ್-3' ಸಿನಿಮಾ ಕೂಡ ರಂಜಾನ್ ಹಬ್ಬದ ಸಂಭ್ರಮದ ಜೊತೆಗೆ ತೆರೆಗೆ ಅಪ್ಪಳಿಸುತ್ತಿದೆ. ಈ ಹಿಂದೆ ಈದ್ ಸಂದರ್ಭದಲ್ಲಿ ಬಿಡುಗಡೆ ಆದ ಚಿತ್ರಗಳು ಹೇಗೆ ಸೂಪರ್ ಹಿಟ್ ಆಗಿದ್ವೋ, ಅದೇ ರೀತಿ ಈ ಬಾರಿಯೂ 'ರೇಸ್-3' ಸಿನಿಮಾ ಹಿಟ್ ಆಗುತ್ತಾ.? ಎಂಬ ಪ್ರಶ್ನೆ ಸದ್ಯ ಎಲ್ಲರನ್ನೂ ಕಾಡುತ್ತಿದೆ.

  ಒಂದ್ಕಡೆ ಅಲ್ಲಾಹು ಮೇಲೆ ನಂಬಿಕೆ, ಇನ್ನೊಂದು ಕಡೆ ಮೂರು ದಿನಗಳ ಸಾಲು ಸಾಲು ರಜೆ... ಈ ಎರಡು ಕಾರಣಗಳಿಂದ ಸಲ್ಮಾನ್ ಖಾನ್, ರೇಮೋ ಡಿಸೋಜಾ ನಿರ್ದೇಶನದ 'ರೇಸ್-3' ಚಿತ್ರವನ್ನ ಈದ್ ಸಂದರ್ಭದಲ್ಲಿಯೇ ಬಿಡುಗಡೆ ಆಗುವಂತೆ ನೋಡಿಕೊಂಡಿದ್ದಾರೆ. ಮುಂದೆ ಓದಿರಿ...

  ರೆಕಾರ್ಡ್ ಬ್ರೇಕ್ ಮಾಡುತ್ತಾ 'ರೇಸ್-3'

  ರೆಕಾರ್ಡ್ ಬ್ರೇಕ್ ಮಾಡುತ್ತಾ 'ರೇಸ್-3'

  2016 ರಲ್ಲಿ ಈದ್ ಸಂದರ್ಭದಂದು ಸಲ್ಮಾನ್ ಖಾನ್ ಅಭಿನಯದ 'ಸುಲ್ತಾನ್' ಚಿತ್ರ ತೆರೆಗೆ ಬಂದಿತ್ತು. ಬಿಡುಗಡೆ ಆದ ದಿನವೇ 'ಸುಲ್ತಾನ್' ಚಿತ್ರ 36 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ರೆಕಾರ್ಡ್ ನ 'ರೇಸ್-3' ಸಿನಿಮಾ ಬ್ರೇಕ್ ಮಾಡುತ್ತಾ ಅನ್ನೋದೇ ಸದ್ಯದ ಕುತೂಹಲ.

  ಸಲ್ಲುಗೆ ಮಾತ್ರ ಯಾಕೆ? ನಂಗೂ ಇರಲಿ! ಎಂದ ಶಾರುಖ್ಸಲ್ಲುಗೆ ಮಾತ್ರ ಯಾಕೆ? ನಂಗೂ ಇರಲಿ! ಎಂದ ಶಾರುಖ್

  ಸ್ಪರ್ಧೆ ಇಲ್ಲವೇ ಇಲ್ಲ.!

  ಸ್ಪರ್ಧೆ ಇಲ್ಲವೇ ಇಲ್ಲ.!

  ರಂಜಾನ್ ಹಬ್ಬದಂದು 'ರೇಸ್-3' ಚಿತ್ರದ ಜೊತೆಗೆ ಯಾವುದೇ ಬಹು ನಿರೀಕ್ಷಿತ ಸಿನಿಮಾಗಳು ತೆರೆಗೆ ಬರುತ್ತಿಲ್ಲ. 'ರೇಸ್-3' ಚಿತ್ರಕ್ಕೆ ಸ್ಪರ್ಧೆ ಒಡ್ಡುವ ಯಾವುದೇ ಚಿತ್ರಗಳು ಇಲ್ಲದ ಕಾರಣ, ಈ ಸಿನಿಮಾ ಈ ಬಾರಿ ದಾಖಲೆ ಬರೆದರೂ ಅಚ್ಚರಿ ಇಲ್ಲ.

  ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಸಕ್ಸಸ್ ಹಿಂದಿನ ಸೂತ್ರಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಸಕ್ಸಸ್ ಹಿಂದಿನ ಸೂತ್ರ

  ಸಲ್ಮಾನ್ ಗೆ ಮರುಜೀವ ನೀಡಿದ್ದು ರಂಜಾನ್

  ಸಲ್ಮಾನ್ ಗೆ ಮರುಜೀವ ನೀಡಿದ್ದು ರಂಜಾನ್

  ಒಂದ್ಕಾಲದಲ್ಲಿ ಬಾಲಿವುಡ್ ನಲ್ಲಿ ಸೋತು ಸಣ್ಣವಾಗಿದ್ದ ಸಲ್ಮಾನ್ ಖಾನ್ ಗೆ ಮರುಜೀವ ನೀಡಿದ್ದು ಇದೇ ರಂಜಾನ್. 2009 ರಿಂದ ಈದ್ ಸಂದರ್ಭದಲ್ಲಿ ಬಿಡುಗಡೆ ಆದ ಸಲ್ಮಾನ್ ಖಾನ್ ಅಭಿನಯದ ಎಲ್ಲ ಚಿತ್ರಗಳು ಹಿಟ್ ಆಗಿವೆ.

  'ರೇಸ್-3' ಕುರಿತು...

  'ರೇಸ್-3' ಕುರಿತು...

  ಸಲ್ಮಾನ್ ಖಾನ್, ಜಾಕ್ವೆಲಿನ್ ಫರ್ನಾಂಡಿಸ್, ಅನಿಲ್ ಕಪೂರ್, ಬಾಬಿ ಡಿಯೋಲ್ ಅಭಿನಯದ ಚಿತ್ರ 'ರೇಸ್-3'. ಈ ಚಿತ್ರಕ್ಕೆ ರೆಮೋ ಡಿಸೋಜಾ ಆಕ್ಷನ್ ಕಟ್ ಹೇಳಿದ್ದಾರೆ. 'ರೇಸ್' ಸರಣಿಯ ಮೊದಲೆರಡು ಅವತರಣಿಕೆಗಳು ಯಶಸ್ವಿ ಆಗಿತ್ತು. ಈಗ 'ರೇಸ್-3' ಮೇಲೆ ಎಲ್ಲರ ಕಣ್ಣಿದೆ.

  English summary
  Will Race-3 break collection records of Salman Khan's previous Eid Releases.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X