For Quick Alerts
  ALLOW NOTIFICATIONS  
  For Daily Alerts

  ಡಿಸೆಂಬರ್‌ನಲ್ಲಿ ರಣಬೀರ್ ಕಪೂರ್- ಆಲಿಯಾ ಭಟ್ ವಿವಾಹ!?

  |

  ಕೆಲವು ಪ್ರೇಮಪಕ್ಷಿಗಳು ಸ್ವಚ್ಛಂದವಾಗಿ 'ನೀಲಿ ಬಾನಲಿ ತೇಲಿ ಹೋದೆ ಈ ದಿನ..' ಅಂತ ಹಾಡುತ್ತಾ, ಹಾರುತ್ತಾ ಹಾಯಾಗಿ ಪ್ರಣಯಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಇವರ ಜೋಡಿ ನೋಡಿದ ಪ್ರತಿಯೊಬ್ಬರೂ ಹೇಳುವುದು ಒಂದೇ 'ನಿಮ್ಮ ಜೋಡಿ ಮುದ್ದಾಗಿದೆ. ಬೇಗ ಮದುವೆಯಾಗಿ ಬಿಡಿ'. ಆದರೆ ಜೋಡಿಹಕ್ಕಿ ಕಲ್ಯಾಣದ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಪ್ರೀತಿ-ಪ್ರೇಮ ಅಂತ ಸದಾ ಪ್ರೇಮಯಾನದಲ್ಲಿ ಮುಳುಗಿರುತ್ತಾರೆ.

  ಎಷ್ಟೇ ಪ್ರೀತಿ-ಪ್ರೇಮ ಅಂತ ಸುತ್ತಾಡಿದರು, ಒಂದಲ್ಲಾ ಒಂದು ದಿನ ಮದುವೆ ಆಗಲೇಬೇಕು. ಸಂಸಾರ ಮಕ್ಕಳು ಅಂತ ಮುಂದುವರಿಯಬೇಕು. ಅದಕ್ಕೆ ಇವರಾದರೂ ಮನಸ್ಸು ಮಾಡಬೇಕು ಇಲ್ಲದೇ ಹೋದರೆ ಪ್ರೇಮಿಗಳ ಕುಟುಂಬದವರು, ಹಿತೈಷಿಗಳು, ಸ್ನೇಹಿತರಾದರು ಕೊನೆಗೆ ಮೂಗುದಾರ ಹಾಕಕ್ಕೆ ಮುಂದಾಗಬೇಕು. ಕಳೆದ ಕೆಲವು ವರ್ಷಗಳಿಂದ ಪ್ರೇಮಪಕ್ಷಿಗಳಾಗಿ ಜಗತ್ತನ್ನು ಸುತ್ತಾಡುತ್ತಿರುವ ಬಾಲಿವುಡ್‌ನ ಜೋಡಿಯೊಂದು ಕೊನೆಗೂ ಈಗ ಮದುವೆಯಾಗಲು ಮುಂದಾಗಿದೆ. ಆ ತಾರಾ ಜೋಡಿ ಮತ್ತೆ ಬೇರೆ ಯಾರು ಅಲ್ಲ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್.

  ದೊಡ್ಡ ಸಿನಿಮಾ ಪರಿವಾರದ ಕುಡಿ ಈ ರಣಬೀರ್ ಕಪೂರ್

  ದೊಡ್ಡ ಸಿನಿಮಾ ಪರಿವಾರದ ಕುಡಿ ಈ ರಣಬೀರ್ ಕಪೂರ್

  ರಣಬೀರ್ ಭಾರತೀಯ ಚಿತ್ರರಂಗದ ಶೋ ಮ್ಯಾನ್ ರಾಜ್ ಕಪೂರ್ ಅವರ ಮೊಮ್ಮಗ. ತಂದೆ ರಿಷಿ ಕಪೂರ್ ತಾಯಿ ನೀತು ಸಿಂಗ್ ಕಪೂರ್ ಕೂಡ ಹಿಂದಿ ಚಿತ್ರರಂಗದಲ್ಲಿ ಮಿಂಚಿದವರೆ. ಜೊತೆಗೆ ಅವರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದವರು. ಇನ್ನು ಇಡೀ ಕಪೂರ್ ಪರಿವಾರದ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಶಮ್ಮಿ ಕಪೂರ್, ಶಶಿಕಪೂರ್, ರಾಜೀವ್ ಕಪೂರ್, ಬಬಿತಾ, ಕರಿಷ್ಮಾ, ಕರೀನಾ ಕಪೂರ್ ಹೀಗೆ ಇಡೀ ಕಪೂರ್ ಖಾಂದಾನ್ ಹಿಂದಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದೆ. ಮತ್ತೊಂದು ವಿಶೇಷವೆಂದರೆ ರಾಜ್ ಕಪೂರ್ ಅವರ ತಂದೆ ಪೃಥ್ವಿರಾಜ್ ಕಪೂರ್, 'ಕಪೂರ್ ಕುಟುಂಬ'ಕ್ಕೆ ಸಿನಿಮಾರಂಗದಲ್ಲಿ ಅಡಿಪಾಯ ಹಾಕಿದವರು. ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ರಾಜಕುಮಾರ್, ಜಮುನಾ ಅಭಿನಯಿಸಿದ 'ಸಾಕ್ಷಾತ್ಕಾರ' ಚಿತ್ರದಲ್ಲಿ ರಾಜ್ ಕಪೂರ್ ಅವರ ತಂದೆಯ ಪಾತ್ರದಲ್ಲಿ ಪೃಥ್ವಿರಾಜ್ ಕಪೂರ್ ಕಾಣಿಸಿಕೊಂಡಿದ್ದರು. ಇಂತಹ ಕಪೂರ್ ಕುಟುಂಬದ ಕುಡಿ ರಣಬೀರ್ ಕಪೂರ್ ಸಹಜವಾಗಿಯೇ ಬಾಲಿವುಡ್‌ನ ಬ್ಲೂ ಐಸ್ ಆಗಿ ಸಿನಿಮಾರಂಗದಲ್ಲಿ ಬೆಳೆದವರು.

  ಮಹೇಶ್ ಭಟ್ ಅವರ ಮುದ್ದಿನ ಮಗಳು ಆಲಿಯಾ ಭಟ್

  ಮಹೇಶ್ ಭಟ್ ಅವರ ಮುದ್ದಿನ ಮಗಳು ಆಲಿಯಾ ಭಟ್

  ರಣಬೀರ್ ಕಪೂರ್ ಅವರ ಕಪೂರ್ ಕುಟುಂಬವೇ ಸಿನಿಮಾರಂಗದಲ್ಲಿ ಇದೆ. ಹಾಗಂತ ಅವನ ಪ್ರೇಯಸಿ ಆಲಿಯಾ ಭಟ್ ಅವರ ಕುಟುಂಬವನ್ನು ಕೂಡ ತೆಗೆದು ಹಾಕುವಂತಿಲ್ಲ. ಆಲಿಯಾ ಭಟ್ ತಂದೆ ಕಾಶ್ಮೀರಿ ಪಂಡಿತರ ಕುಟುಂಬದಿಂದ ಬಂದ ಮಹೇಶ್ ಭಟ್ ಒಂದು ಕಾಲದ ಬಾಲಿವುಡ್ ನ ಪ್ರಯೋಗಾತ್ಮಕ ಜೊತೆಗೆ ಸಂವೇದನಶೀಲ ಚಿತ್ರಗಳ ನಿರ್ದೇಶಕರಾಗಿ 'ಆಶಿಕಿ', ದಿಲ್ ಹೈ ಕಿ ಮಂತ ನಹಿ','ಸಡಕ್' 'ಕ್ರಿಮಿನಲ್' 'ಜಕಂ' ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದವರು.

  ಮಹೇಶ್ ಭಟ್ ಅವರ ಹಿರಿಯ ಮಗಳು ಪೂಜಾ ಭಟ್ ಕೂಡ ಒಂದು ಕಾಲದ ಬಾಲಿವುಡ್‌ನ ಪ್ರಖ್ಯಾತ ನಟಿಯರಲ್ಲಿ ಒಬ್ಬರಾಗಿದ್ದರು. ಇನ್ನು ಇವರ ಸೋದರ ವಿಕ್ರಂ ಭಟ್ ಬಾಲಿವುಡ್‌ನ ಖ್ಯಾತ ನಿರ್ಮಾಪಕರಲ್ಲಿ ಒಬ್ಬರು. ಇಂತಹ ಬಾಲಿವುಡ್ ಪ್ರಸಿದ್ಧ 'ಭಟ್ ' ಕುಟುಂಬದಿಂದ ಬಂದವಳು ಈ ಆಲಿಯಾ ಭಟ್.

  ರಣಬೀರ್ ಕಪೂರ್ ಲೈಫ್‌ನಲ್ಲಿ ದೀಪಿಕಾ-ಕತ್ರಿನಾ-ಆಲಿಯಾ

  ರಣಬೀರ್ ಕಪೂರ್ ಲೈಫ್‌ನಲ್ಲಿ ದೀಪಿಕಾ-ಕತ್ರಿನಾ-ಆಲಿಯಾ

  ರಣಬೀರ್ ಕಪೂರ್ ಬದುಕಿನಲ್ಲಿ ಆಲಿಯಾ ಮೊದಲನೆಯ ಗರ್ಲ್ ಫ್ರೆಂಡ್ ಏನಲ್ಲ. ಆಲಿಯಾ ಗೆ ಮೊದಲೇ ಆತನ ಜೀವನದಲ್ಲಿ ಮತ್ತೆರಡು ಹೆಣ್ಣುಗಳ ಪ್ರವೇಶವಾಗಿತ್ತು. 2007ರಲ್ಲಿ ಬಿಡುಗಡೆಯಾದ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ "ಸಾವರಿಯಾ'' ಚಿತ್ರದ ಮೂಲಕ ನಾಯಕ ನಟನಾಗಿ ಸಿನಿಮಾರಂಗಕ್ಕೆ ಅರಂಗ್ರೇಟಂ ಮಾಡಿದ ಈ 39 ವರ್ಷದ ಚೆಲುವಾಂತ ಚೆನ್ನಿಗರಾಯನ ಮನಸ್ಸನ್ನು ಮೊದಲ ಬಾರಿಗೆ ಕದ್ದಿದ್ದು 'ಬಚನ ಹೆ ಹಸೀನೋ' ಚಿತ್ರದ ಕೋ ಸ್ಟಾರ್ ದೀಪಿಕಾ ಪಡುಕೋಣೆ. 2008ರ ಈ ಜೋಡಿ 2009ರ ಹೊತ್ತಿಗೆ ದೂರವಾಯಿತು.

  ಇದರಿಂದ ಒಂದಷ್ಟು ಸಮಯ ರಣಬೀರ್ ಡಿಪ್ರೆಶನ್‌ಗೆ ಒಳಗಾಗಿದ್ದರು. ಆನಂತರ ಅವನ ಜೀವನದಲ್ಲಿ ಬಂದವಳೆ, ಆಗಷ್ಟೇ ಸಲ್ಮಾನ್ ಖಾನ್ ಗೂಡಿನಿಂದ ಹೊರ ಬಂದಿದ್ದ ಕತ್ರಿನಾ ಕೈಫ್ ಎಂಬ ಬಾಲಿವುಡ್ನ ಬ್ಯೂಟಿಫುಲ್ ಹಕ್ಕಿ. 2009ರ 'ಅಜಬ್ ಪ್ರೇಮ್ ಕಿ ಗಜಬ್ ಪ್ರೇಮ ಕಹಾನಿ' ಇಂದ ಇಬ್ಬರು ಪ್ರೇಮಿಗಳಾದರು. ಆನಂತರ ಸುದೀರ್ಘ ಕಾಲ ಇಬ್ಬರು ಡೇಟಿಂಗ್ ಮಾಡಿದರು. ಕಹಾನಿ ಮೇ ಟ್ವಿಸ್ಟ್ ಎಂಬಂತೆ 2016ರಲ್ಲಿ ಕತ್ರಿನಾಗೆ ಕೊನೆಗೂ ಟಾಟಾ ಹೇಳಿದ ರಣಬೀರ್ ಕಪೂರ್. ಇದರ ನಂತರ 'ಬ್ರಹ್ಮಾಸ್ತ್ರ'ದ ಪ್ರಯೋಗ ಆಲಿಯಾ ಭಟ್ ಮೇಲೆ ಯಶಸ್ವಿಯಾಗಿ ಮಾಡಿದ.

  'ಸ್ಟೂಡೆಂಟ್ ಆಫ್ ದ ಇಯರ್' (2012)ಅಂತ ಹೇಳುತ್ತಲೇ ಬೆಳ್ಳಿತೆರೆಗೆ ಬಂದ ಈ ಬ್ಯೂಟಿ ಈಗ 'ಗಂಗೂಬಾಯಿ ಕಾಠಿಯಾವಾಡಿ' ಆಗಿ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾಳೆ. 27 ಹರೆಯದ ಈ ಮುದ್ದಾದ ಗುಬ್ಬಿಯ ಮೇಲೆ ರಣಬೀರ್‌ನ ಬ್ರಹ್ಮಾಸ್ತ್ರ ಪ್ರಯೋಗ 2018ರಲ್ಲಿ ಆಯ್ತು. ಈಗ ಇದು ಮದುವೆಯವರೆಗೂ ಬಂದು ನಿಂತಿದೆ.

  ಡಿಸೆಂಬರ್‌ನಲ್ಲಿ ಈ ತಾರಾ ಜೋಡಿಯ ಮದುವೆ?

  ಡಿಸೆಂಬರ್‌ನಲ್ಲಿ ಈ ತಾರಾ ಜೋಡಿಯ ಮದುವೆ?

  ಬಾಲಿವುಡ್‌ನ ಸರ್ಕ್ಯೂಟ್‌ಗಳಲ್ಲಿ ಕೇಳಿಬರುತ್ತಿರುವ ಸುದ್ದಿಯೆಂದರೆ ಇವರಿಬ್ಬರು ಡಿಸೆಂಬರ್‌ನಲ್ಲಿ ವಿವಾಹವಾಗಲು ನಿರ್ಧರಿಸಿದ್ದಾರಂತೆ. ಹೀಗಾಗಿ ನವೆಂಬರ್ ಹೊತ್ತಿಗೆ ಎಲ್ಲಾ ಚಿತ್ರೀಕರಣಗಳನ್ನು ಮುಗಿಸಿಕೊಟ್ಟು ಡಿಸೆಂಬರ್ ಪೂರ್ತಿಯಾಗಿ ವೆಡ್ಡಿಂಗ್‌ಗಾಗಿ ಮೀಸಲಿಟ್ಟಿದ್ದಾರೆ. ಆದರೆ ತಮ್ಮ ಈ ವಿವಾಹದ ವಿಚಾರವನ್ನು ಅದರಲ್ಲೂ ವೆಡ್ಡಿಂಗ್ ಡೇಟ್ ಅನ್ನು ಅತ್ಯಂತ ಗೌಪ್ಯವಾಗಿ ಕಾಪಾಡಿಕೊಂಡು ಬರುತ್ತಿದ್ದಾರೆ ಅಂತ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತಿದೆ. ಇನ್ನು ಈ ವಿಚಾರವಾಗಿ ಅವರಿಬ್ಬರೂ ಯಾವುದೇ ಪ್ರತಿಕ್ರಿಯೆಯನ್ನು ಕೊಡುತ್ತಿಲ್ಲ.

  ಏಜೆಂಟ್ ಅನ್ನು ಕೇಳಿ ಎಂದ ಆಲಿಯಾ ತಾಯಿ

  ಏಜೆಂಟ್ ಅನ್ನು ಕೇಳಿ ಎಂದ ಆಲಿಯಾ ತಾಯಿ

  ಆದರೆ ಇದೇ ವಿಚಾರವಾಗಿ ಆಲಿಯಾ ಭಟ್ ತಾಯಿ, ಮಹೇಶ್ ಭಟ್ ಅವರ ಎರಡನೇ ಪತ್ನಿ, ಹಿರಿಯ ನಟಿ ಸೋನಿ ರಾಜ್ದಾನ್ ಅವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ "ಅವರ (ರಣಬೀರ್ ಕಪೂರ್- ಆಲಿಯಾ ಭಟ್) ಮದುವೆ ವಿಚಾರವಾಗಿ ನನ್ನ ಹತ್ತಿರ ಯಾವುದೇ ಮಾಹಿತಿ ಇಲ್ಲ. ಮದುವೆ ಅವರಿಬ್ಬರ ನಿರ್ಧಾರ, ಅದನ್ನು ಯಾವಾಗ, ಹೇಗೆ ಎಂಬುದು ಅವರೇ ನಿರ್ಧರಿಸಿಕೊಳ್ಳುತ್ತಾರೆ. ಇಷ್ಟು ಹೊರತಾಗಿ ನಿಮಗೆ ಹೆಚ್ಚಿನ ಮಾಹಿತಿ ಬೇಕೆಂದರೆ ನೀವು ಏಜೆಂಟ್ (ಪ್ರಸ್ತುತ ಆಲಿಯಾ ಭಟ್ call my agent ಚಿತ್ರದಲ್ಲಿ ನಟಿಸುತ್ತಿದ್ದಾರೆ) ರನ್ನು ಕೇಳಬೇಕು, ಏಜೆಂಟ್ ಅವರ ತಾಯಿಯನ್ನು ಅಲ್ಲ. ಅವರ ಕಲ್ಯಾಣದ ಬಗ್ಗೆ ಹೆಚ್ಚಿನ ಮಾಹಿತಿ ನಿಮ್ಮಲ್ಲಿ ಇದ್ದರೆ ಕೊಡಿ ನಾನು ಕೂಡ ಸಂತೋಷಪಡುತ್ತೇನೆ" ಅಂತಿದ್ದಾರೆ ಆಲಿಯಾ ತಾಯಿ.

  2020ರಲ್ಲಿ ಮದುವೆಯಾಗಲು ನಿಶ್ಚಯವಾಗಿತ್ತು: ರಣಬೀರ್ ಕಪೂರ್

  2020ರಲ್ಲಿ ಮದುವೆಯಾಗಲು ನಿಶ್ಚಯವಾಗಿತ್ತು: ರಣಬೀರ್ ಕಪೂರ್

  ಇನ್ನು ಡಿಸೆಂಬರ್‌ನಲ್ಲಿ ಇವರ ವಿವಾಹ ನಡೆಯುವುದರ ಬಗ್ಗೆ ಗುಸುಗುಸು ಗಳು ಕೇಳಿ ಬರುತ್ತಿರುವಾಗಲೇ ರಣಬೀರ್ ಕಪೂರ್ ಕೆಲವು ತಿಂಗಳ ಹಿಂದೆ ಪತ್ರಕರ್ತ ರಾಜೀವ್ ಮಸಂದ್ ಅವರಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ವಿವಾಹದ ಬಗ್ಗೆ ಒಂದು ಆಸಕ್ತಿದಾಯಕ ಸಂಗತಿಯನ್ನು ಹೊರಹಾಕಿದ್ದರು "ನಾನು, ಆಲಿಯಾ 2020ರಲ್ಲಿ ಮದುವೆಯಾಗಲು ನಿರ್ಧಾರ ಮಾಡಿಕೊಂಡಿದ್ವಿ. ಆದರೆ ಕರೋನದ ಕಾರಣದಿಂದ ಅದು ಮುಂದೂಡಲಾಯಿತು" ಅಂತ ಹೇಳಿದ್ದರು. ಒಟ್ಟಲ್ಲಿ ಬಾಲಿವುಡ್ ವರದಿಗಳ ಪ್ರಕಾರ ಇನ್ನು ಗ್ಯಾರೆಂಟಿ ರಣಬೀರ್ ಆಲಿಯಾ ವಿವಾಹ. ಆದರೆ ಅದು ಈ ವರ್ಷದ ಡಿಸೆಂಬರ್ ಅಥವಾ ಮುಂದಿನ ವರ್ಷವೂ ಆಗಬಹುದು.

  English summary
  Ranbir Kapoor and Alia Bhatt to get married in December, revealed by Bollywood sources.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X