»   » ದೀಪಿಕಾ 'Mychoice'ಗೆ ಸೋನಾಕ್ಷಿ ಸಿನ್ಹಾ ತಿರುಗೇಟು

ದೀಪಿಕಾ 'Mychoice'ಗೆ ಸೋನಾಕ್ಷಿ ಸಿನ್ಹಾ ತಿರುಗೇಟು

Posted By:
Subscribe to Filmibeat Kannada

ಇತ್ತೀಚೆಗೆ ಬಿಡುಗಡೆಯಾದ #MyChoice ವಿಡಿಯೋ ಭಾರತೀಯ ಮಹಿಳೆಯರ ಸಮಾನತೆ ಬಗ್ಗೆ ಧ್ವನಿಯೆತ್ತಿತ್ತು. ಆ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ 99 ಮಹಿಳೆಯರು ತಮ್ಮ ಸ್ವಾತಂತ್ರ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು.

ಈ ವಿಡಿಯೋ ಈಗ ವಿವಾದಕ್ಕೂ ಕಾರಣವಾಗಿದ್ದು, ಭಾರಿ ಚರ್ಚೆಗೂ ಗ್ರಾಸವಾಗಿದೆ. ಮಹಿಳೆಯರಲ್ಲಿನ ಸ್ವತಂತ್ರ ಭಾವನೆಗಳನ್ನು ಪ್ರತಿಬಿಂಬಿಸುವ ಈ ಕಿರುಚಿತ್ರಕ್ಕೆ ಬಾಲಿವುಡ್ ನಿರ್ದೇಶಕ ಹೋಮಿ ಅದಜನಿಯಾ ಆಕ್ಷನ್ ಕಟ್ ಹೇಳಿದ್ದಾರೆ. "ನಮ್ಮ ದೇಹ, ನಮ್ಮ ಮನಸ್ಸು, ನಮ್ಮಿಷ್ಟ" ಎನ್ನುತ್ತಾ ಮಹಿಳೆಯರು ನಮಗಿಷ್ಟ ಬಂದಂಗೆ ನಾವಿರುತ್ತೇವೆ ಎಂಬ ಉದ್ಘೋಷ ಕೂಗಿದ್ದಾರೆ. [ಮದುವೆಗೆ ಮುನ್ನ ಸೆಕ್ಸ್ ನನ್ನಿಷ್ಟ: ದೀಪಿಕಾ ಪಡುಕೋಣೆ]

Women Empowerment mean employment strength says Sonakshi

ಮದುವೆಗೂ ಮುನ್ನ ಸೆಕ್ಸ್ ಬೇಕೆ ಬೇಡವೆ, ಹಣೆಗೆ ಕುಂಕುಮ ಇಟ್ಟುಕೊಳ್ಳಬೇಕೆ, ಬಾಯ್ ಫ್ರೆಂಡ್ ಗರ್ಲ್ ಫ್ರೆಂಡ್ ನನಗೆ ಯಾರು ಬೇಕು ಬೇಡ ಎಂಬ ಆಯ್ಕೆ ನಮ್ಮದು. ನಮ್ಮ ಆಯ್ಕೆಯಲ್ಲಿ ಪುರುಷರು ಮೂಗು ತೂರಿಸಬೇಡಿ ಎಂಬುದು ಈ 'ಮೈ ಚಾಯ್ಸ್' ವಿಡಿಯೋದ ಸಂದೇಶ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ, ಮಹಿಳಾ ಸ್ವಾತಂತ್ರ್ಯ ಎಂದರೆ ವಿವಾಹೇತರ ಸಂಬಂಧ, ತನಗಿಷ್ಟವಾದಂತೆ ಬಟ್ಟೆ ಧರಿಸುವುದು, ಇಷ್ಟವಾದವರೊಂದಿಗೆ ರಾಸಲೀಲೆ ಆಡುವುದಲ್ಲ. ಮಹಿಳಾ ಸ್ವಾತಂತ್ರ್ಯ ಎಂದರೆ ಉದ್ಯೋಗ, ಮಾನಸಿಕ ಸ್ಥೈರ್ಯ ಎಂದಿದ್ದಾರೆ.

ಮಹಿಳಾ ಸ್ವಾತಂತ್ರ್ಯ ಎಂಬುದನ್ನು ಯಾರಿಗೆ ಅಗತ್ಯವೋ ಅಂತಹವರಿಗೆ ಕಲ್ಪಿಸಬೇಕೆ ಹೊರತು ವಿಲಾಸಿ ಜೀವನ ನಡೆಸುತ್ತಿರುವ ತಮ್ಮಂತವರಿಗಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನು #MyChoice ವಿಡಿಯೋ ಬಗ್ಗೆ ಪರ ವಿರೋಧ ಕೂಡ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್)

English summary
"Women empowerment is not always about the kind of clothes you wear, not about who you want to have sex with or stuff like that. It's about employment, strength," Sonakshi said here on Tuesday on being asked about her opinion on the 'My Choice' video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada