For Quick Alerts
  ALLOW NOTIFICATIONS  
  For Daily Alerts

  ಯೋಗಿಬಾಬು ಭೇಟಿ ಮಾಡಿ ಉಡುಗೊರೆ ನೀಡಿದ ಕ್ರಿಕೆಟಿಗ ನಟರಾಜನ್

  |

  ಐಪಿಎಲ್ ಟೂರ್ನಿಯಲ್ಲಿ ನೀಡಿದ ಅದ್ಭುತ ಪ್ರದರ್ಶನದಿಂದ ನಟರಾಜನ್ ದೊಡ್ಡ ಮಟ್ಟದಲ್ಲಿ ಗಮನ ಸೆಳೆದರು. ಟೀಂ ಇಂಡಿಯಾಕ್ಕೂ ಆಯ್ಕೆಯಾಗಿ ಅಲ್ಲಿಯೂ ಮಿಂಚಿದರು. ಪ್ರಸ್ತುತ, ನಟರಾಜನ್ ಭಾರತದ ಕ್ರಿಕೆಟ್ ತಂಡದ ಭವಿಷ್ಯದ ತಾರೆ ಎನಿಸಿಕೊಂಡಿದ್ದಾರೆ.

  ಇದೀಗ, ತಮಿಳು ಹಾಸ್ಯ ನಟ ಯೋಗಿಬಾಬು ಅವರನ್ನು ಭೇಟಿ ಮಾಡಿದ ನಟರಾಜನ್ ಈ ಸ್ಮರಣಾರ್ಥ ವಿಶೇಷವಾದ ಉಡುಗೊರೆ ನೀಡಿದ್ದಾರೆ. ಯೋಗಿಬಾಬು ಅವರನ್ನು ಭೇಟಿ ಮಾಡಿರುವ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ನಟರಾಜನ್, ''ಈ ದಿನ ಬಹಳ ಸ್ಮರಣೀಯವಾಗಿ ಉಳಿಯಲಿದೆ'' ಎಂದು ಕ್ಯಾಪ್ಷನ್ ಹಾಕಿದ್ದಾರೆ.

  ರೆಸ್ಟೋರೆಂಟ್‌ವೊಂದರಲ್ಲಿ ಯೋಗಿಬಾಬು ಮತ್ತು ನಟರಾಜನ್ ಭೇಟಿ ಮಾಡಿದ್ದು, ಈ ವೇಳೆ ಹಾಸ್ಯನಟನಿಗೆ ಮುರುಗ (ಶನ್ಮುಖ) ದೇವರ ವಿಗ್ರಹ ಉಡುಗೊರೆಯಾಗಿ ನೀಡಿದ್ದಾರೆ.

  ಯೋಗಿಬಾಬು ನಟನೆ ಮೆಚ್ಚಿದ ಶ್ರೀವತ್ಸ ಗೋಸ್ವಾಮಿ

  ಈ ಹಿಂದೆ ಯೋಗಿಬಾಬು ನಟನೆಯ 'ಮಂಡೇಲಾ' ಸಿನಿಮಾ ನೋಡಿ ಕ್ರಿಕೆಟಿಗ ಶ್ರೀವತ್ಸ ಗೋಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಳಿಕ, ನಟರಾಜನ್ ವಿಡಿಯೋ ಕಾಲ್ ಮೂಲಕ ಯೋಗಿಬಾಬು ಜೊತೆ ಶ್ರೀವತ್ಸರನ್ನು ಮಾತನಾಡಿಸಿದ್ದರು.

  ವಿಜಯ್ 65ನೇ ಚಿತ್ರದಲ್ಲಿ ಯೋಗಿಬಾಬು

  ದಳಪತಿ ವಿಜಯ್ ನಟನೆಯ 'ಬೀಸ್ಟ್' ಚಿತ್ರದಲ್ಲಿ ಪ್ರಮುಖ ಹಾಸ್ಯನಟನಾಗಿ ಅಭಿನಯಿಸುತ್ತಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ಈ ಚಿತ್ರ ನಿರ್ದೇಶಿಸುತ್ತಿದ್ದು, ಈ ಹಿಂದೆ 'ಕೋಲಮಾವು ಕೋಕಿಲಾ' ಸಿನಿಮಾ ಮಾಡಿದ್ದರು. ಈ ಚಿತ್ರದಲ್ಲಿ ಯೋಗಿಬಾಬು ಪ್ರಮುಖ ನಟನಾಗಿ ಕಾಣಿಸಿಕೊಂಡಿದ್ದರು.

  ಯೋಗಿಬಾಬು ಮುಂದಿನ ಸಿನಿಮಾಗಳು

  ನಿಖಿಲ್ ದಂಪತಿಗೆ ಹುಟ್ಟೋ ಮಗುವಿನ ಬಗ್ಗೆ ಭವಿಷ್ಯ ನುಡಿದ ವಿನಯ್ ಗುರೂಜಿ | Filmibeat Kannada

  ಹಾಸ್ಯನಟ ಯೋಗಿಬಾಬು ತಮಿಳು ಇಂಡಸ್ಟ್ರಿಯ ಬಹುಬೇಡಿಕೆಯ ಕಲಾವಿದ. ಬೀಸ್ಟ್, ಅರನ್‌ಮನೈ 3, ಚದುರಂಗ ವೇಟೈ, ಜಗಜಾಲ ಖಿಲಾಡಿ, ಪಣ್ಣಿ ಕುಟ್ಟಿ, ಕಡೈಸಿ ವ್ಯವಸಾಯಿ, ಡಾಕ್ಟರ್, ವಾಲಿಮೈ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಗಳೆಲ್ಲವೂ ಬಿಡುಗಡೆಯಾಗಬೇಕಿದೆ.

  English summary
  Tamil Comedy actor Yogi Babu has meet team india Cricketer T Natarajan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X