For Quick Alerts
  ALLOW NOTIFICATIONS  
  For Daily Alerts

  ನಟನೆಯತ್ತ ಮುಖ ಮಾಡಿದ ಟೀಂ ಇಂಡಿಯಾದ ಖ್ಯಾತ ಮಾಜಿ ಆಟಗಾರ

  |

  ಕ್ರಿಕೆಟ್ ಮೈದಾನದಲ್ಲಿ ಅಬ್ಬರಿಸುತ್ತಿದ್ದ ಆಟಗಾರರು ಈಗ ನಟನೆಯತ್ತ ಮುಖಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ತಮಿಳು ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದರ ಬೆನ್ನಲ್ಲೆ ಈಗ ಮತ್ತೊಬ್ಬ ಸ್ಟಾರ್ ಕ್ರಿಕೆಟರ್ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ.

  ಹೌದು, ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಈಗ ನಟನೆಯತ್ತ ಮುಖಮಾಡಿದ್ದಾರೆ. ಕ್ರಿಕೆಟ್ ಬದುಕಿನಿಂದ ನಿವೃತ್ತಿ ಪಡೆದಿರುವ ಯುವರಾಜ್ ಸಿಂಗ್ ನಟನೆ ಮೂಲಕ ಹೊಸ ಇನಿಂಗ್ಸ್ ಪ್ರಾರಂಭಿಸಿದ್ದಾರೆ. ಅಂದ್ಹಾಗೆ ಯುವರಾಜ್ ಸಿಂಗ್ ಸಿನಿಮಾದಲ್ಲಿ ಬಣ್ಣಹಚ್ಚುತ್ತಿಲ್ಲ. ಬದಲಿಗೆ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಯುವರಾಜ್ ಸಿಂಗ್ ಬಗ್ಗೆ ಸ್ಫೂರ್ತಿದಾಯಕ ಟ್ವೀಟ್ ಮಾಡಿದ ಸುದೀಪ್ಯುವರಾಜ್ ಸಿಂಗ್ ಬಗ್ಗೆ ಸ್ಫೂರ್ತಿದಾಯಕ ಟ್ವೀಟ್ ಮಾಡಿದ ಸುದೀಪ್

  ಪತ್ನಿ ಹಜೇಲ್ ಕೀಜ್ ಮತ್ತು ಸಹೋದರ ಜೋರಾವರ್ ಸಿಂಗ್ ರೊಂದಿಗೆ ವೆಬ್ ಸರಣಿಯಲ್ಲಿ ನಟಿಸಲು ಮುಂದಾಗಿದ್ದಾರೆ. ಅಸ್ಸಾಂನ ಡ್ರೀಮ್ ಹೌಸ್ ಪ್ರೋಡಕ್ಷನ್ ನಿರ್ಮಾಣ ಮಾಡುತ್ತಿದೆ. ಇನ್ನು ವಿಶೇಷ ಅಂದರೆ ಈ ವೆಬ್ ಸರಣಿಯಲ್ಲಿ ಯುವರಾಜ್ ಸಿಂಗ್ ತಾಯಿ ಶಬ್ನಮ್ ಕೂಡ ಅಭಿನಯಿಸುತ್ತಿದ್ದಾರಂತೆ.

  ಕ್ರಿಕೆಟ್ ನಿಂದ ನಟನೆಯತ್ತ ಬರುತ್ತಿರುವ ಯುವರಾಜ್ ಸಿಂಗ್ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಯುವಿ ಹೇಗೆ ಅಭಿನಯಿಸಲಿದ್ದಾರೆ. ಯಾವ ಪಾತ್ರದಲ್ಲಿ ಮಿಂಚಲಿದ್ದಾರೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ. ಜೊತೆಗೆ ಯುವರಾಜ್ ಸಿಂಗ್ ಬಯೋಪಿಕ್ ಕೂಡ ತಯಾರಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

  English summary
  Cricketer Yuvraj Singh entered to web series with his wife Hezal Keech.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X