For Quick Alerts
  ALLOW NOTIFICATIONS  
  For Daily Alerts

  ನಟ ಸಂಜಯ್ ದತ್ ಗೆ ಕ್ಯಾನ್ಸರ್: ಧೈರ್ಯ ತುಂಬಿದ ಕ್ರಿಕೆಟಿಗ ಯುವರಾಜ್ ಸಿಂಗ್

  |

  ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಮಾರಕ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಸಂಜಯ್ ದತ್ ಇತ್ತೀಚಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಕೆಲಸದಿಂದ ಬ್ರೇಕ್ ಪಡೆಯುವುದಾಗಿ ಅನೌನ್ಸ್ ಮಾಡಿದ್ದರು.

  ಆದರೆ ಆಗಸ್ಟ್ 11ರ ಸಂಜೆ ವೇಳೆಗೆ ಸಂಜಯ್ ದತ್ ಗೆ ಕ್ಯಾನ್ಸರ್ ಇದೆ ಎನ್ನುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಈ ವಿಚಾರ ಕೇಳಿ ಸ್ನೇಹಿತರು, ಕುಟುಂಬದವರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಸಂಜಯ್ ದತ್ ಗೆ ಧೈರ್ಯ ತುಂಬುತ್ತಿದ್ದಾರೆ ಮತ್ತು ಬೇಗ ಗುಣಮುಖರಾಗುವಂತೆ ಪ್ರಾರ್ಥನೆ ಮಾಡುತ್ತಿದ್ದಾರೆ. ಮುಂದೆ ಓದಿ...

  ನಟ ಸಂಜಯ್ ದತ್ ಕುಟುಂಬದಲ್ಲೇ ಇದೆ ಮಾರಕ ಕ್ಯಾನ್ಸರ್ ಇತಿಹಾಸನಟ ಸಂಜಯ್ ದತ್ ಕುಟುಂಬದಲ್ಲೇ ಇದೆ ಮಾರಕ ಕ್ಯಾನ್ಸರ್ ಇತಿಹಾಸ

  ಸಂಜಯ್ ದತ್ 'ಫೈಟರ್' ಎಂದ ಯುವರಾಜ್ ಸಿಂಗ್

  ಸಂಜಯ್ ದತ್ 'ಫೈಟರ್' ಎಂದ ಯುವರಾಜ್ ಸಿಂಗ್

  ಸಂಜಯ್ ದತ್ ಗೆ ಖ್ಯಾತ ಕ್ರಿಕೆಟಿಗ ಯವರಾಜ್ ಸಿಂಗ್ ಕೂಡ ಧೈರ್ಯ ತುಂಬಿದ್ದಾರೆ. ಮಾರಕ ಕಾಯಿಲೆಯ ವಿರುದ್ಧ ಹೋರಾಡಿ ಗೆದ್ದಿರುವ ಯುವರಾಜ್ ಸಿಂಗ್, ಸಂಜಯ್ ದತ್ ಬಗ್ಗೆ ಟ್ವೀಟ್ ಮಾಡಿ ಸಂಜಯ್ ದತ್ ಫೈಟರ್ ಎಂದಿದ್ದಾರೆ. ಕ್ಯಾನ್ಸರ್ ಎದುರಿಸುವ ಶಕ್ತಿ ನಿಮ್ಮಲ್ಲಿ ಇದೆ ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.

  ಕ್ಯಾನ್ಸರ್ ನೋವು ನನಗೂ ತಿಳಿದಿದೆ- ಯುವರಾಜ್ ಸಿಂಗ್

  ಕ್ಯಾನ್ಸರ್ ನೋವು ನನಗೂ ತಿಳಿದಿದೆ- ಯುವರಾಜ್ ಸಿಂಗ್

  ಸಂಜಯ್ ಗೆ ಕ್ಯಾನ್ಸರ್ ಇದೆ ಎನ್ನುವ ಸುದ್ದಿ ಗೊತ್ತಾದ ಬಳಿಕ ಟ್ವೀಟ್ ಮಾಡಿರುವ ಯುವರಾಜ್ ಸಿಂಗ್ "ಸಂಜಯ್ ದತ್ ನೀವು ಯಾವಾಗಲು ಫೈಟರ್. ಕ್ಯಾನ್ಸರ್ ಉಂಟುಮಾಡುವ ನೋವು ಏನು ಎಂದು ನನಗೂ ತಿಳಿದಿದೆ. ನೀವು ತುಂಬಾ ಸ್ಟ್ರಾಂಗ್ ಎಂದು ನನಗೆ ಗೊತ್ತು. ಬೇಗ ಗುಣಮುಖರಾಗಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.

  ನಟ ಸಂಜಯ್ ದತ್ ಗೆ ಕ್ಯಾನ್ಸರ್: ಹೆಚ್ಚಿನ ಚಿಕಿತ್ಸೆಗೆ USಗೆ ತೆರಳುತ್ತಿರುವ ದತ್ನಟ ಸಂಜಯ್ ದತ್ ಗೆ ಕ್ಯಾನ್ಸರ್: ಹೆಚ್ಚಿನ ಚಿಕಿತ್ಸೆಗೆ USಗೆ ತೆರಳುತ್ತಿರುವ ದತ್

  ಕ್ಯಾನ್ಸರ್ ಗೆದ್ದು ಬಂದಿರುವ ಯುವರಾಜ್ ಸಿಂಗ್

  ಕ್ಯಾನ್ಸರ್ ಗೆದ್ದು ಬಂದಿರುವ ಯುವರಾಜ್ ಸಿಂಗ್

  2011ರಲ್ಲಿ ಕ್ರಿಕೆಟಿಗ ಯುವರಾಜ್ ಸಿಂಗ್ ಸಹ ಶ್ವಾಸಕೋಶ ಕ್ಯಾನ್ಸರ್ ಗೆ ತುತ್ತಾಗಿದ್ದರು. ಮೊದಲ ಹಂತದಲ್ಲಿಯೇ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಹಾಗಾಗಿ ಬೇಗ ಗಣಮುಖರಾಗಲು ಸಾಧ್ಯವಾಯಿತು. ಮೈದಾನದಲ್ಲಿ ಬ್ಯಾಡ್ ಹಿಡಿದು ಸಿಕ್ಸ್, ಫೋರ್ ಬೀಸುತ್ತಿದ್ದ ಯುವರಾಜ್ ಸಿಂಗ್ ಗೆ ಕ್ಯಾನ್ಸರ್ ಇದೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರು. ಆದರೆ ಯುವರಾಜ್ ಸಿಂಗ್ ಬೇಗ ಗುಣಮುಖರಾಗಿ ಮತ್ತೆ ಮೈದಾನದಲ್ಲಿ ಬ್ಯಾಟ್ ಬೀಸುತ್ತಿರುವುದು ನೋಡಿ ಸಂತಸಪಡುತ್ತಿದ್ದಾರೆ.

  61ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು ದತ್

  61ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು ದತ್

  ಸಂಜಯ್ ದತ್ ಹೆಚ್ಚಿನ ಚಿಕಿತ್ಸೆಗಾಗಿ ಯುಎಸ್ ಗೆ ತೆರಳುತ್ತಿದ್ದಾರೆ. ಇತ್ತೀಚಿಗಷ್ಟೆ ಸಂಜಯ್ ದತ್ 61ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಹುಟ್ಟುಹಬ್ಬದ ದಿನ ಕನ್ನಡದ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಲುಕ್ ರಿಲೀಸ್ ಮಾಡಲಾಗಿದೆ. ಸಂಜಯ್ ದತ್ ಅಧೀರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  English summary
  Cricketer Yuvraj Singh writes note to Sanjay dutt for speedy recovery. He says Sanjay Dutt is Fighter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X