Celebs » Duniya Vijay » Biography
ಜೀವನಚರಿತ್ರೆ

ದುನಿಯಾ ವಿಜಯ್ ಇವರು ಜನಿಸಿದ್ದು 20 ಜನವರಿ 1974 ಬೆಂಗಳೂರಿನಲ್ಲಿ. ಇವರು ಬಡ ಕುಟುಂಬದಲ್ಲಿ ಬೆಳೆದು ಬಂದವರು. ಇವರಿಗೆ ಕನ್ನಡ ಚಿತ್ರರಂಗದಲ್ಲಿ ನಟನೆ ಮಾಡುವಾಸೆ ಹುಟ್ಟಿಕೊಂಡಿತ್ತು.

ಇವರು ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಚಿಕ್ಕ-ಚಿಕ್ಕ ಪಾತ್ರಗಳಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾ ಬಂದ ವಿಜಯ್. ಜೋಗಿ, ರಂಗ ಎಸ್ಎಸ್ಎಲ್ ಸಿ, ಹೀಗೆ ಅನೇಕ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ತೆರೆಯ ಮೇಲೆ ಕಾಣಿಸಿಕೊಂಡರು.

2007ರಲ್ಲಿ ಸೂರಿ ಅವರ ನಿರ್ದೇಶನದಲ್ಲಿ ಮೂಡಿ ಬಂದ "ದುನಿಯಾ" ಚಿತ್ರದಲ್ಲಿ ನಾಯಕರಾಗಿ ಅಭಿನಹಿಸುವ ಅವಕಾಶ ದೊರೆಯಿತು. ಈ ಚಿತ್ರವು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಒಂದು ಒಳ್ಳೆ ಬಗೆಯ ಚಿತ್ರವಾಗಿ ಹೊರಹೊಮ್ಮಿತು. ಈ ಚಿತ್ರದ ಗೆಲುವಿನ ದಡದಲ್ಲಿ ಇದ್ದ ವಿಜಯ್ ಅವರು ದುನಿಯಾ ವಿಜಯ್ ಆಗಿ ಕನ್ನಡ ಚಿತ್ರ ರಂಗದಲ್ಲಿ ಗುರುತಿಸಿಕೊಂಡರು.

ನಂತರ ಇವರಿಗೆ ಅನೇಕ ಕನ್ನಡ ಚಿತ್ರಗಳು ನಾಯಕನಾಗಿ ಅಭಿನಹಿಸುವ ಅವಕಾಶಗಳು ಬಂದವು. ಜರಾಸಂಧ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ಹೀಗೆ ಹಲವು ಚಿತ್ರಗಳಲ್ಲಿ ಅಭಿನಹಿಸಿ ಕನ್ನಡ ಚಿತ್ರ ರಂಗದಲ್ಲಿ ಸೈ ಎನಿಸಿಕೊಂಡರು ವಿಜಯ್ ಅಲಿಯಾಸ್ ದುನಿಯಾ ವಿಜಯ್.

 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more