ರಕ್ಷಾ ಸೋಮಶೇಖರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಯುವನಟಿ. ಬಾಲ್ಯದಲ್ಲಿಯೇ ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಭರತನಾಟ್ಯ ಪ್ರವೀಣೆ ಕೂಡ ಹೌದು..
ರಕ್ಷಾ ಸೋಮಶೇಖರ್ ಪೋಟೊಗಳು
ಬಾಲ್ಯದಲ್ಲಿ ತಂದೆ-ತಾಯಿಗಳ ಮುಖಾಂತರ ರಂಗಭೂಮಿ ಪರಿಚಯ ಕೂಡ ಆಯಿತು. ಕಾಲೇಜು ದಿನಗಳಲ್ಲಿಯೇ ಸಿನಿಮಾ ಆಫರ್ ಗಳು ಬರತೊಡಗಿದರೂ ಡಿಗ್ರಿ ಮುಗಿಸುವವರಗೂ ಕಾದರು. BBM ಪದವಿ ಪಡೆದ ಇವರು, ಕೆಲ ಕಾಲ ಉದ್ಯೋಗ ಕೂಡ ಮಾಡಿದರು. ನಂತರ ಉದ್ಯೋಗ ತೊರೆದು, ಚಿತ್ರರಂಗದಲ್ಲಿ ತೊಡಗಿಸಿಕೊಳ್ಳಬೇಕೆಂದು ನಿರ್ಧರಿಸಿದರು. ಜಯರಾಮ್ ಕಾರ್ತಿಕ್ ರ ಮೇ 1st ಚಿತ್ರದ ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸಿದರು.
ಕನ್ನಡ ಬಿಗ್ ಬಾಸ್ ಸೀಸನ್ 7
ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ 7 ನಲ್ಲಿ ಏಳನೇ ವಾರದ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದರು.