twitter
    For Quick Alerts
    ALLOW NOTIFICATIONS  
    For Daily Alerts

    ಈ ಮಹಾರಾಜನ ಬಯೋಪಿಕ್ ಮಾಡುವುದಾದರೆ ಬೇಕಾಗುತ್ತಾರೆ 365 ನಾಯಕಿಯರು!

    By ರವೀಂದ್ರ ಕೊಟಕಿ
    |

    ಈಗ ಯಾವುದೇ ಸಿನಿಮಾ ಇಂಡಸ್ಟ್ರಿಯನ್ನು ತೆಗೆದುಕೊಂಡರೂ ಅಲ್ಲಿ ಬಯೋಪಿಕ್‌ಗಳ ಹವಾ ಜೋರಾಗಿದೆ. ಇತ್ತೀಚೆಗಷ್ಟೇ ಹಿಂದಿಯಲ್ಲಿ ಬಿಡುಗಡೆಯಾಗಿರುವ ಕ್ರಾಂತಿಕಾರಿ ಹೋರಾಟಗಾರ ಸರ್ದಾರ್ ಉದಮ್ ಸಿಂಗ್ ಅವರ ಜೀವನ ಆಧಾರಿತ ಕಥೆ 'ಸರ್ದಾರ್ ಉದಮ್' ದೊಡ್ಡ ಯಶಸ್ಸನ್ನು ಕಂಡಿದೆ.

    ಕಳೆದ ಕೆಲವು ವರ್ಷಗಳಿಂದ ದೇಶದ ವಿವಾದಿತ ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ಕ್ರೀಡಾಕಾರರು, ಉದ್ಯಮಿಗಳು ಸೇರಿದಂತೆ ಅನೇಕ ಯಶಸ್ವಿ ವ್ಯಕ್ತಿಗಳು ಬಯೋಪಿಕ್ ಗಳಾಗಿ ನಮ್ಮ ಮುಂದೆ ಬಂದಿದ್ದಾರೆ. ನಮ್ಮಲ್ಲಿ ಹಿಂದಿನಿಂದಲೂ ರಾಜಮಹಾರಾಜರ ಶೌರ್ಯ ಸಾಹಸಗಳ ಗುಣಗಾನ ಮಾಡುವ ಬಯೋಪಿಕ್ ಗಳನ್ನು ತೆಗೆಯುವ ಪರಂಪರೆಯಿದೆ. ಹೀಗೆ ಸಿನಿಮಾ ಮಂದಿ ಎಷ್ಟೇ ರಾಜಮಹಾರಾಜರ ಬಯೋಪಿಕ್ ಗಳನ್ನು ತೆಗೆದರೂ ಕೂಡ ಒಂದು ಮಹಾರಾಜನ ಸಮಗ್ರ ಬದುಕನ್ನ ಅವಲೋಕಿಸುವ ಬಯೋಪಿಕ್ ಮಾತ್ರ ತೆಗೆಯಲು ಸಾಧ್ಯವಿಲ್ಲ. ಏಕೆಂದರೆ ಈ ಮಹಾರಾಜನ ಬಯೋಪಿಕ್ ತೆಗೆಯಬೇಕಾದರೆ ಒಂದಲ್ಲಾ, ಎರಡಲ್ಲಾ ಬರೋಬ್ಬರಿ 365 ನಾಯಕಿಯರು ಬೇಕಾಗುತ್ತಾರೆ!

    ಹೌದು, ನೀವು ಕೇಳುತ್ತಿರುವುದು ನಿಜ, ಒಂದಲ್ಲಾ-ಎರಡಲ್ಲಾ 365 ನಾಯಕಿಯರು ಬೇಕಾಗುತ್ತಾರೆ.

    ಏಕೆಂದರೆ ಈ ಮಹಾರಾಜನಿಗೆ ಇದ್ದದ್ದು ಬರೋಬರಿ 365 ಪತ್ನಿಯರು.

    365 ಪತ್ನಿಯರನ್ನು ಹೊಂದಿದ್ದ ಆ ಮಹಾರಾಜ ಯಾರು?

    365 ಪತ್ನಿಯರನ್ನು ಹೊಂದಿದ್ದ ಆ ಮಹಾರಾಜ ಯಾರು?

    ಇಷ್ಟಕ್ಕೂ ಹೀಗೆ 365 ಪತ್ನಿಯರನ್ನು ಹೊಂದಿದ್ದ ಮಹಾರಾಜರು ಯಾರು? ಅವರು ಬೇರೆ ಯಾರು ಅಲ್ಲ ಭಾರತ ಸಂಸ್ಥಾನಗಳಲ್ಲಿ ಅತ್ಯಂತ ಶ್ರೀಮಂತವಾದ ಪಟಿಯಾಲ ಸಂಸ್ಥಾನದ ಮಹಾರಾಜರಾಗಿದ್ದ ಮಹಾರಾಜ ಭೂಪಿಂಧರ್ ಸಿಂಗ್.ಅಕ್ಟೋಬರ್ 12, 8791 ರಲ್ಲಿ ಜನಿಸಿದ ಭೂಪಿಂಧರ್ ಸಿಂಗ್ ತನ್ನ ಒಂಬತ್ತನೇ ವಯಸ್ಸಿನಲ್ಲಿಯೇ ಪಂಜಾಬಿಗೆ ಸೇರಿದ ಪಟಿಯಾಲ ಪ್ರಾಂತ್ಯದ ಮಹಾರಾಜನಾಗಿ ಸಿಂಹಾಸನವನ್ನು ಏರಿದರು. ಸತತ 38 ವರ್ಷಗಳ ಕಾಲ ರಾಜ್ಯಭಾರ ಮಾಡಿದ ಈ ಮಹಾರಾಜನಿಗೆ ಅಧಿಕೃತವಾಗಿ ಹತ್ತು ರಾಣಿಯರಿದ್ದರು. ಈ ಹತ್ತು ರಾಣಿಯರಿಗೆ 88 ಮಕ್ಕಳಿದ್ದರು. ಅದರಲ್ಲಿ 53 ಮಕ್ಕಳು ಬದುಕುಳಿದಿದ್ದರು. ಈ ಮಹಾರಾಜನ ಮತ್ತೊಂದು ವಿಶೇಷತೆಯೆಂದರೆ ಈತ ದೇಶದ ಮೊಟ್ಟಮೊದಲ ಏರ್ ಕ್ರಾಫ್ಟ್ ಖರೀದಿಸಿದ ವ್ಯಕ್ತಿ. ಅಲ್ಲದೆ ವಿಶ್ವಪ್ರಸಿದ್ಧ ಪಟಿಯಾಲ ನಕ್ಲೇಸ್ ಕೂಡ ಈ ರಾಜನ ಬಳಿಯಲ್ಲೇ ಇದ್ದಿದ್ದು. ಅಲ್ಲದೆ ಈ ಮಹಾರಾಜನಿಗೆ ಕಾರುಗಳ ಖರೀದಿಯಲ್ಲಿ ಹೆಚ್ಚು ವ್ಯಾಮೋಹವಿತ್ತು. ಹೀಗಾಗಿ ವಿಶ್ವಪ್ರಸಿದ್ಧ ಎಲ್ಲಾ ಕಾರುಗಳು ಕಾರುಗಳು ಮನೆಯ ಮುಂದೆ ನಿಂತಿತ್ತು.

    365 ಪತ್ನಿಯರು ಇದ್ದಿದ್ದು ನಿಜವೇ?

    365 ಪತ್ನಿಯರು ಇದ್ದಿದ್ದು ನಿಜವೇ?

    ಪಟಿಯಾಲದ ಈ ಮಹಾರಾಜ ಅಧಿಕೃತವಾಗಿ 10 ಮದುವೆಗಳನ್ನು ಆಗಿದ್ದರು. ಅದರಲ್ಲಿ ಐದು ಪತ್ನಿಯರು ಮಾತ್ರ ಕೊನೆಗೆ ಉಳಿದಿದ್ದು. ಆದರೆ ಇದು ಹೊರತಾಗಿ ಕೂಡ ಈ ಮಹಾರಾಜನಿಗೆ 355 ಉಪಪತ್ನಿಯರು ಇದ್ದರೆಂಬ ಕಥೆಗಳು ಪಂಜಾಬ್ ಪ್ರಾಂತದಲ್ಲಿ ಪ್ರಸಿದ್ಧಿ ಹೊಂದಿದೆ.

    365 ಲ್ಯಾಂಟೀನ್ ಗಳ ಕಥೆ

    365 ಲ್ಯಾಂಟೀನ್ ಗಳ ಕಥೆ

    ಆ ಕಥೆಗಳ ಪ್ರಕಾರ ಮಹಾರಾಜ ಭೂಪಿಂಧರ್ ಸಿಂಗ್ ಮಹಾರಸಿಕನಂತೆ. ಪ್ರತಿ ರಾಣಿಯರ ಹೆಸರುಗಳೊಂದಿಗೆ

    ಬಣ್ಣ ಬಣ್ಣದಲ್ಲಿ ಬಿಡಿಸಲಾದ ಲಾಟೀನುಗಳು ರಾಣಿಯರ ನಿವಾಸಗಳ ಮುಂದೆ ತೂಗು ಹಾಕಲಾಗಿರುತ್ತದೆ. ಯಾವ

    ರಾಣಿಯ ಮನೆಯ ಮುಂದೆ ಲಾಟೀನು ದೀಪವನ್ನು ರಾಜನು ಹೋಗಿ ಉರಿಸಿದರೆ ಆ ರಾತ್ರಿ, ಆ ರಾಣಿಯ ಮನೆಯಲ್ಲಿ ರಾಜನ ಅಧಿಕೃತ ಶಯನ. ಉರಿಯುತ್ತಿರುವ ದೀಪವನ್ನು ಆಧರಿಸಿ ಉಳಿದ ರಾಣಿಯರು ರಾಜನು ಇಂತಹ ರಾಣಿಯ ನಿವಾಸದಲ್ಲಿ ಇದ್ದಾನೆ ಅಂತ ಖಾತ್ರಿ ಪಡಿಸಿಕೊಳ್ಳುತ್ತಿದ್ದರು. ಇದರ ಆಧಾರದ ಮೇಲೆ ಉಳಿದ ರಾಣಿಯರು ತಮ್ಮ ಕೋಣೆಯಲ್ಲಿನ ದೀಪವನ್ನು ಆರಿಸಿ ಮಲಗಬೇಕಾಗಿತ್ತು. ಇದು ರಾಜಾಜ್ಞೆ ಅಂತೆ. ಒಟ್ಟಾರೆ ಇದು ಆ ರಾಜನ ಬಗ್ಗೆ ಹರಡಿಕೊಂಡಿರುವ ಒಂದು ದೊಡ್ಡ ಕಥೆಯಿದು. 365 ಪತ್ನಿಯರು ಇದ್ದಿದ್ದು ಹೌದೋ ಅಲ್ಲವೋ ಗೊತ್ತಿಲ್ಲ ಆದರೆ 10 ಮದುವೆಗಳು ಆಗಿದ್ದ ಮಹಾರಾಜನ ಹಿನ್ನೆಲೆಯನ್ನು ಕೇಳಿದಾಗ ಮಹಾರಸಿಕನೆಂದು ಮಾತ್ರ ಗೊತ್ತಾಗುತ್ತದೆ.

    ಈ ಮಹಾರಾಜನ ಮೊಮ್ಮಗ ದೇಶದ ಪ್ರಮುಖ ರಾಜಕಾರಣಿ!

    ಈ ಮಹಾರಾಜನ ಮೊಮ್ಮಗ ದೇಶದ ಪ್ರಮುಖ ರಾಜಕಾರಣಿ!

    ಇಂತಹ ಮಹಾರಾಜನ ಮೊಮ್ಮಕ್ಕಳ ವಿಷಯಕ್ಕೆ ಬಂದರೆ ಪ್ರಸ್ತುತ ಇವರ ಮೊಮ್ಮಕ್ಕಳ ಪೈಕಿ ಒಬ್ಬರು ನಿಮಗೆಲ್ಲರಿಗೂ ತಿಳಿದಿರುವಂತಹ ವ್ಯಕ್ತಿಯೇ ಆಗಿದ್ದಾರೆ. ಅವರು ಬೇರೆ ಯಾರು ಅಲ್ಲ, ಪಂಜಾಬಿನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್. ಹೌದು, ಪಟಿಯಾಲ ರಾಜವಂಶಕ್ಕೆ ಸೇರಿದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮಹಾರಾಜ ಭೂಪಿಂಧರ್ ಸಿಂಗ್ ಅವರ ಮೊದಲನೆಯ ಮೊಮ್ಮಗ ಕೂಡ ಆಗಿದ್ದಾರೆ.

    ವರ್ಷಾನುಗಟ್ಟಲೆ ನಡೆಯುವ ಮೆಗಾ ಸೀರಿಯಲ್ ಮಾಡಬಹುದು

    ವರ್ಷಾನುಗಟ್ಟಲೆ ನಡೆಯುವ ಮೆಗಾ ಸೀರಿಯಲ್ ಮಾಡಬಹುದು

    ಮಹಾರಾಜ ಭೂಪಿಂಧರ್ ಸಿಂಗ್ ಅವರ ಬಗ್ಗೆ ಸಿನಿಮಾ ಮಾಡುವ ಸಾಹಸ ಯಾರಾದರೂ ಮಾಡಬಹುದೇ? ಅದರಲ್ಲೂ ಅವರ ಒಟ್ಟು ಹತ್ತು ಮಹಾರಾಣಿಯರು ಜೊತೆಗೆ 355 ಪತ್ನಿಯರ ಪಾತ್ರಗಳೊಂದಿಗೆ ಮಹಾರಾಜನ ಸರಸ-ವಿರಸ ಸಲ್ಲಾಪಗಳ ಒಂದು ಸಿನಿಮಾ ಮಾಡುವುದಕ್ಕಿಂತ ವರ್ಷಾನುಗಟ್ಟಲೆ ನಡೆಯುವ ಮೆಗಾ ಸೀರಿಯಲ್ ಮಾಡಬಹುದು ಅನ್ಸುತ್ತೆ ಅಲ್ಲವೇ?

    English summary
    365 heroines needed to make Maharaja Bhupindhar Singh's biopic. He had 365 queens. He is the grand father of Punjab's former CM Amrinder Singh.
    Tuesday, October 26, 2021, 17:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X