twitter
    For Quick Alerts
    ALLOW NOTIFICATIONS  
    For Daily Alerts

    ಇಂದಿನ ಕಾಲದಲ್ಲಿ ನಿಜವಾಗಿಯೂ ಒಂದು ಸಿನಿಮಾ ಶತದಿನಗಳನ್ನು ಪೂರೈಸುತ್ತಾ?

    |

    ನಮ್ ಸಿನಿಮಾ 50 ದಿನ ಆಯ್ತು... ನಮ್ ಸಿನಿಮಾ 100 ಡೇಸ್ ಓಡಿದೆ... ಹೀಗೆ ಹೇಳಿಕೊಂಡು ಓಡಾಡುವ ಮಂದಿ ಸ್ಯಾಂಡಲ್ ವುಡ್ ಹೆಚ್ಚಾಗಿದ್ದಾರೆ. ಆದರೆ, ಅವರ ಸಿನಿಮಾ ಎಲ್ಲಿ ನೂರು ದಿನ ಪ್ರದರ್ಶನ ಕಂಡಿದೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

    ಇಂದಿನ ಕಾಲದಲ್ಲಿ ಜನ ಚಿತ್ರಮಂದಿರಕ್ಕೆ ಬರುವುದೇ ಕಷ್ಟವಾಗಿದೆ. ಗಾಂಧಿನಗರದಲ್ಲಿ ಬಿಡುಗಡೆಯಾದ ಮೊದಲ ದಿನವೇ ಹೌಸ್ ಆಗುವುದು ಅಪರೂಪವಾಗಿದೆ. ಸಿನಿಮಾ ರಿಲೀಸ್ ಆದ ಎರಡೇ ತಿಂಗಳಿಗೆ ಟಿವಿಯಲ್ಲಿ ಬರುತ್ತಿದೆ. ಡಿಜಿಟಲ್ ಫ್ಲಾಟ್ ಫಾಮ್ ನಲ್ಲಿಯೂ ವೇಗವಾಗಿ ಕಾಲಿಡುತ್ತಿದ್ದೆ. ಇಷ್ಟೆಲ್ಲ ಇದ್ದ ಮೇಲೆ ಒಂದು ಸಿನಿಮಾ ಇಂದು ''ಜನಭರಿತ'' ನೂರು ದಿನ ಪ್ರದರ್ಶನ ಕಾಣಲು ಸಾಧ್ಯವೇ?.

    'ಭಕ್ತ ಧ್ರುವ'ನಿಂದ ಥಿಯೇಟರ್ ನಲ್ಲಿ ಮೂರ್ಛೆಗೊಂಡಿದ್ದ ಮಹಿಳೆಯರು.!'ಭಕ್ತ ಧ್ರುವ'ನಿಂದ ಥಿಯೇಟರ್ ನಲ್ಲಿ ಮೂರ್ಛೆಗೊಂಡಿದ್ದ ಮಹಿಳೆಯರು.!

    100 ದಿನಗಳು, 150 ದಿನಗಳು, 200 ದಿನಗಳು, 25 ವಾರಗಳು, 1 ವರ್ಷ ಹೀಗೆ 'ಯಶಸ್ವಿ ಪ್ರದರ್ಶನ' ಕಂಡ ಎಷ್ಟೋ ಸಿನಿಮಾಗಳು ಕನ್ನಡದಲ್ಲಿ ಇವೆ. ಆದ್ರೆ ಅದು ಆ ಕಾಲದಲ್ಲಿ. ಬಹಳ ಹಿಂದೆ.

    ಆದರೆ, ಈಗಲೂ ತಮ್ಮ ಸಿನಿಮಾ ಪೋಸ್ಟರ್ ಮೇಲೆ 100 ಡೇಸ್ ಎಂದು ಬರಬೇಕು ಎಂಬ ಕಾರಣಕ್ಕೆ ನಿರ್ದೇಶಕರು, ನಿರ್ಮಾಪಕರು ಏನೋನೋ ಗಿಮಿಕ್ ಮಾಡುತ್ತಿದ್ದಾರೆ. ಜನರ ತಿರಸ್ಕಾರ ಮಾಡಿದರೂ, ತಾವೇ ನೂರು ದಿನ ಓಡಿಸುತ್ತಿದ್ದಾರೆ.

    ಪ್ರಾಮಾಣಿಕವಾಗಿ 100 ಡೇಸ್ ಆಗುವ ಸಿನಿಮಾ ತೀರ ಕಡಿಮೆ

    ಪ್ರಾಮಾಣಿಕವಾಗಿ 100 ಡೇಸ್ ಆಗುವ ಸಿನಿಮಾ ತೀರ ಕಡಿಮೆ

    ಇಂದಿನ ಕಾಲದಲ್ಲಿ ಒಂದು ಸಿನಿಮಾ 50 ದಿನ ಪೂರೈಸಿದರೆ, ಅದೇ ದೊಡ್ಡದು. ಹೀಗಿರುವಾಗ ಒಂದು ಸಿನಿಮಾ ನೂರು ದಿನ ಪೂರೈಸುತ್ತದೆ ಎನ್ನುವುದು ಬಹಳ ಕಷ್ಟದ ಮಾತು. ಚಿತ್ರತಂಡದ ಕೈವಾಡ ಇಲ್ಲದೆ ಪ್ರಾಮಾಣಿಕವಾಗಿ ಇಂದು ಒಂದು ಸಿನಿಮಾ 100 ಡೇಸ್ ಆಗುವುದು ತೀರಾ ಕಡಿಮೆ. ಒಂದು ವರ್ಷದಲ್ಲಿ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ನೂರು ದಿನ ಪೂರೈಸಬಹುದು.

    4 ವಾರ ಸಿನಿಮಾ ಓಡಿದರೆ ಸಾಕು.. ಅದೇ ಹಿಟ್

    4 ವಾರ ಸಿನಿಮಾ ಓಡಿದರೆ ಸಾಕು.. ಅದೇ ಹಿಟ್

    ಚಿತ್ರರಂಗದ ನಿರ್ದೇಶಕರೊಬ್ಬರು 100 ಡೇಸ್ ಕಾಯಿಲೆ ಬಗ್ಗೆ ಫಿಲ್ಮಿಭೀಟ್ ಕನ್ನಡದ ಜೊತೆಗೆ ಮಾತನಾಡಿದರು. ಈ ವೇಳೆ ಇಂಧಿನ ದಿನ ಸಿನಿಮಾಗಳು 4 ವಾರ ಸಿನಿಮಾ ಓಡಿದರೆ ಸಾಕು ಅದೇ ಸೂಪರ್ ಹಿಟ್. ಚಿತ್ರಮಂದಿರಗಳು ಸಂಖ್ಯೆ, ಪ್ರೇಕ್ಷಕರ ಸಂಖ್ಯೆ ಇಂದು ಹೆಚ್ಚಿದೆ. ಹೀಗಾಗಿ ಒಂದು ಸಿನಿಮಾ ಎಲ್ಲ ಕೇಂದ್ರಗಳಲ್ಲಿಯೂ ಸರಿಯಾಗಿ ನಾಲ್ಕು ವಾರ ಓಡಿದರೂ ದೊಡ್ಡ ಕಲೆಕ್ಷನ್ ಮಾಡುತ್ತದೆ ಎಂದರು.

    'ರಾಜ್'ಗೂ ಮೊದಲು 'ಕಸ್ತೂರಿ ನಿವಾಸ' ಈ ನಟ ಮಾಡಬೇಕಿತ್ತು! ಆ ಹೀರೋ ರಿಜೆಕ್ಟ್ ಮಾಡಿದ್ದೇಕೆ?'ರಾಜ್'ಗೂ ಮೊದಲು 'ಕಸ್ತೂರಿ ನಿವಾಸ' ಈ ನಟ ಮಾಡಬೇಕಿತ್ತು! ಆ ಹೀರೋ ರಿಜೆಕ್ಟ್ ಮಾಡಿದ್ದೇಕೆ?

    ನೂರು ದಿನ ಮುಟ್ಟಲು ಚಿತ್ರತಂಡಗಳ ತಂತ್ರ

    ನೂರು ದಿನ ಮುಟ್ಟಲು ಚಿತ್ರತಂಡಗಳ ತಂತ್ರ

    ಅನೇಕ ಸಿನಿಮಾಗಳನ್ನು ಇಂದು ಜನರು 100 ಡೇಸ್ ಮಾಡುವುದಿಲ್ಲ. ಚಿತ್ರತಂಡಗಳೇ ಮಾಡಿಕೊಳ್ಳುತ್ತವೆ. ನೂರು ದಿನ ಎಂದು ಬೋರ್ಡ್ ಹಾಕಿಕೊಳ್ಳಲು ಏನೇನೋ ತಂತ್ರ ಬಳಸುತ್ತಾರೆ. ಉಚಿತ ಟಿಕೆಟ್ ಕೊಟ್ಟು ಖಾಲಿ ಚಿತ್ರಮಂದಿರವನ್ನು ತುಂಬಿಸುತ್ತಾರೆ. ತಮ್ಮ ಸಿನಿಮಾ ನೂರು ದಿನ ಆದ್ರೆ, ಮುಂದಿನ ಚಿತ್ರಕ್ಕೆ ನಿರ್ಮಾಪಕರು ಸುಲಭವಾಗಿ ಸಿಗುತ್ತಾರೆ ಎನ್ನುವುದು ನಿರ್ದೇಶಕರ ಪ್ಲಾನ್ ಆಗಿದೆ. ನಿರ್ಮಾಣ ಸಂಸ್ಥೆಗೆ 100 ಡೇಸ್ ಆಗುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ.

    ಸ್ವಪ್ನ, ಮೇನಕಾ ಚಿತ್ರಮಂದಿರಗಳ ಆಸರೆ

    ಸ್ವಪ್ನ, ಮೇನಕಾ ಚಿತ್ರಮಂದಿರಗಳ ಆಸರೆ

    ಒಂದು ಸಿನಿಮಾ ಬಿಡುಗಡೆಯಾದ ಕೇಂದ್ರದಲ್ಲಿಯೇ ನೂರು ದಿನ ಪೂರೈಸಿದರೆ, ಅದು 100 ಡೇಸ್ ಆಗುತ್ತದೆ. ಆದರೆ, ಈಗ ಅನೇಕ ಸಿನಿಮಾಗಳು ಮೊದಲು ಬೇರೆ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದು, ನಂತರ ಸ್ವಪ್ನ, ಮೇನಕಾದಂತಹ ಚಿತ್ರಮಂದಿರಗಳಿಗೆ ಶಿಫ್ಟ್ ಆಗುತ್ತದೆ. ಗಾಂಧಿನಗರದ ಒಳ್ಳೆಯ ಚಿತ್ರಮಂದಿರಗಳ ವಾರದ ಬಾಡಿಗೆ 4 ಲಕ್ಷದ 25 ಸಾವಿರ ಬಾಡಿಗೆ ಇದೆ. ಆದರೆ, ಸ್ವಪ್ನ, ಮೇನಕಾದಲ್ಲಿ ವಾರಕ್ಕೆ 50 ಸಾವಿರ ಕೊಟ್ಟು ದಿನಕ್ಕೆ ಒಂದು ಪ್ರದರ್ಶನ ಓಡಿಸುತ್ತಾರೆ.

    ಮಹಿಳೆ ಎಂಬ ಕಾರಣಕ್ಕೆ ಸುಮನಾ ಕಿತ್ತೂರುಗೆ ಅಗೌರವ ತೋರಿದ 'ಆ' ನಟ ಯಾರು.?ಮಹಿಳೆ ಎಂಬ ಕಾರಣಕ್ಕೆ ಸುಮನಾ ಕಿತ್ತೂರುಗೆ ಅಗೌರವ ತೋರಿದ 'ಆ' ನಟ ಯಾರು.?

    ಈ ಹಠ ಬಿಡಬೇಕು

    ಈ ಹಠ ಬಿಡಬೇಕು

    ಒಂದು ಕನ್ನಡ ಸಿನಿಮಾ ನೂರು ದಿನ ಓಡುವುದು ನಿಜಕ್ಕೂ ಖುಷಿ ವಿಷಯ. ಆದರೆ, ಒಂದು ಸಿನಿಮಾವನ್ನು ಜನ ಕೈಬಿಟ್ಟರೂ, ಕಳ್ಳದಾರಿಯಲ್ಲಿ ಚಿತ್ರತಂಡಗಳು ನೂರು ದಿನ ಎಂದು ಹೇಳಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ. ಅಲ್ಲದೆ ಚಿತ್ರತಂಡಗಳ ಈ ಹಠದಿಂದ ಎಷ್ಟೋ ಸಿನಿಮಾಗಳಿಗೆ ಸರಿಯಾಗಿ ಚಿತ್ರಮಂದಿಗಳು ಸಿಗುತ್ತಿಲ್ಲ.

    English summary
    A special story about 100 days celebration of kannada movies.
    Monday, February 3, 2020, 13:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X