Don't Miss!
- News
Breaking: ಭವಾನಿ ರೇವಣ್ಣಗೆ ಹಾಸನದಿಂದ ಟಿಕೆಟ್ ನೀಡುವಂತೆ ಪ್ರತಿಭಟನೆ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Technology
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಐಶ್ವರ್ಯ ರೈ-ಅಭಿಷೇಕ್ ಮೊದಲ ಭೇಟಿ ಕಥೆ ಇಲ್ಲಿದೆ: 'ಬಚ್ಚನ್ ಮಗ ಆಗಿನ್ನು ಪ್ರೊಡಕ್ಷನ್ ಬಾಯ್'
ಬಾಲಿವುಡ್‌ನ ಸುಂದರ ದಂಪತಿಗಳಲ್ಲಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಜೋಡಿ ಸಹ ಒಂದು. ಏಪ್ರಿಲ್ 20 ರಂದು ತಮ್ಮ 14ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಅಭಿಷೇಕ್-ಐಶ್ ದಂಪತಿಗೆ ಆರಾಧ್ಯ ಎಂಬ ಮುದ್ದಾದ ಮಗಳಿದ್ದಾರೆ.
2005ರಲ್ಲಿ ಅಮಿತಾಭ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ನಟಿಸಿದ್ದ 'ಬಂಟಿ ಅಂಡ್ ಬಬ್ಲಿ' ಸಿನಿಮಾದ ಹಾಡೊಂದರಲ್ಲಿ ಐಶ್ವರ್ಯ ರೈ ಅತಿಥಿ ಪಾತ್ರ ಮಾಡಿದ್ದರು. ಈ ಹಾಡಿನ ಚಿತ್ರೀಕರಣದ ವೇಳೆ ಅಭಿಷೇಕ್-ಐಶ್ವರ್ಯ ನಡುವೆ ಸ್ನೇಹ ಬೆಳೆಯಿತು. ಆ ಸ್ನೇಹ ಪ್ರೀತಿಗೆ ತಿರುಗಿ ಹಿರಿಯರ ಒಪ್ಪಿಗೆ ಪಡೆದು ವಿವಾಹವೂ ಆಯಿತು.
ಪತ್ನಿ
ಐಶ್ವರ್ಯಾ
ರೈ
ಗಾಗಿ
ಉಪವಾಸ
ವ್ರತ
ಆಚರಿಸಿದ
ಅಭಿಷೇಕ್
ಬಚ್ಚನ್!
ಅದಕ್ಕೂ ಮುಂಚೆ ಐಶ್ವರ್ಯ ರೈ ಅವರನ್ನು ಅಭಿಷೇಕ್ ಮೊದಲ ಎಲ್ಲಿ ಭೇಟಿ ಮಾಡಿದ್ದರು. ಅವರಿಬ್ಬರ ನಡುವೆ ಪರಿಚಯ ಮೂಡಿದ್ದು ಹೇಗೆ ಎಂದು ಸ್ವತಃ ಅಭಿಷೇಕ್ ಬಚ್ಚನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಮುಂದೆ ಓದಿ...

ಸ್ವಿಜರ್ಲ್ಯಾಂಡ್‌ನಲ್ಲಿ ಮೊದಲ ಭೇಟಿ
ಐಶ್ವರ್ಯ ರೈ ಅವರನ್ನು ಅಭಿಷೇಕ್ ಬಚ್ಚನ್ ಮೊದಲ ಸಲ ಸ್ವಿಜರ್ಲ್ಯಾಂಡ್‌ನಲ್ಲಿ ಭೇಟಿ ಮಾಡಿದ್ದರು ಎಂದು ಯೂಟ್ಯೂಬರ್ ರಣ್ವೀರ್ ಅಲ್ಲಾಬಾದಿಯಾ ಅವರ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಬಾಬಿ ಡಿಯೋಲ್ ನಟಿಸಿದ ಮೊದಲ ಸಿನಿಮಾ ಔರ್ ಪ್ಯಾರ್ ಹೋ ಗಯಾ ಚಿತ್ರಕ್ಕಾಗಿ ಐಶ್ವರ್ಯ ಸ್ವಿಜರ್ಲ್ಯಾಂಡ್‌ನಲ್ಲಿದ್ದರು. ಅದೇ ಸಮಯದಲ್ಲಿ ಅಭಿಷೇಕ್ ಬಚ್ಚನ್ ಸಹ ತಮ್ಮ ತಂದೆಯವರ ಸಿನಿಮಾ ಕಾರಣಕ್ಕಾಗಿ ಸ್ವಿಜರ್ಲ್ಯಾಂಡ್‌ನಲ್ಲಿದ್ದರು.

ಪ್ರೊಡಕ್ಷನ್ ಬಾಯ್ ಆಗಿದ್ದ ಅಭಿಷೇಕ್
ಅಮಿತಾಭ್ ಬಚ್ಚನ್ ನಟಿಸುತ್ತಿದ್ದ 'ಮೃತ್ಯುದಾತ' ಸಿನಿಮಾದ ಚಿತ್ರೀಕರಣ ಸ್ವಿಜರ್ಲ್ಯಾಂಡ್‌ನಲ್ಲಿ ನಡೆಯುತ್ತಿತ್ತು. ಈ ಚಿತ್ರವನ್ನು ಸ್ವತಃ ಬಿಗ್ ಬಿ ನಿರ್ಮಿಸುತ್ತಿದ್ದರು. ಈ ಪ್ರಾಜೆಕ್ಟ್‌ನಲ್ಲಿ ಅಭಿಷೇಕ್ ಬಚ್ಚನ್ ಪ್ರೊಡಕ್ಷನ್ ಬಾಯ್ ಆಗಿ ಕೆಲಸ ಮಾಡ್ತಿದ್ದರು. ಸ್ವಿಜರ್ಲ್ಯಾಂಡ್‌ನಲ್ಲಿ ಶಿಕ್ಷಣ ಅಭ್ಯಾಸ ಮಾಡಿದ್ದ ಅಭಿಷೇಕ್‌ಗೆ ಶೂಟಿಂಗ್‌ಗೆ ಅಗತ್ಯವೆನಿಸುವ ಉತ್ತಮ ಸ್ಥಳಗಳನ್ನು ತೋರಿಸಬಲ್ಲರು ಎಂಬ ಕಾರಣಕ್ಕಾಗಿ ಈ ಜವಾಬ್ದಾರಿ ಅಭಿಷೇಕ್‌ಗೆ ವಹಿಸಲಾಗಿತ್ತು. ಆ ಕೆಲಸದ ನಿಮಿತ್ತ ಆ ಸಮಯದಲ್ಲಿ ಅಭಿಷೇಕ್ ಸಹ ಸ್ವಿಜರ್ಲ್ಯಾಂಡ್‌ನಲ್ಲಿದ್ದರು.
ಸಲ್ಮಾನ್
ಕುಡಿದು
ಹಿಂಸೆ
ನೀಡುತ್ತಿದ್ದ
ಕೆಟ್ಟ
ಸಮಯದಲ್ಲೂ
ಜೊತೆಗಿದ್ದೆ:
ಬ್ರೇಕಪ್
ಬಗ್ಗೆ
ಐಶ್ವರ್ಯಾ
ಮಾತು

ಡಿನ್ನರ್‌ಗೆ ಕರೆದ ಬಾಬಿ ಡಿಯೋಲ್
''ಲೋಕೇಶನ್ ಹುಡುಕುವ ಕೆಲಸದ ಕಾರಣ ಎರಡ್ಮೂರು ದಿನ ನಾನು ಸ್ವಿಜರ್ಲ್ಯಾಂಡ್‌ನಲ್ಲಿದ್ದೆ. ಆ ವಿಚಾರವನ್ನು ಹೇಗೋ ತಿಳಿದುಕೊಂಡ ನನ್ನ ಬಾಲ್ಯ ಸ್ನೇಹಿತ ಬಾಬಿ ಡಿಯೋಲ್ ''ಹೇ ನೀನು ಏಕೆ ಊಟಕ್ಕೆ ನಮ್ಮ ಜೊತೆ ಬರಬಾರದು'' ಎಂದು ಕರೆದ. ಆ ಮೇಲೆ ನಾನು ಊಟಕ್ಕೆ ಹೋದೆ. ಅಲ್ಲಿಯೇ ಮೊದಲ ಸಲ ಐಶ್ವರ್ಯ ರೈ ಅವರನ್ನು ಭೇಟಿ ಮಾಡಿದೆ'' ಎಂದು ಅಭಿಷೇಕ್ ಬಚ್ಚನ್ ಹಳೆಯದನ್ನು ನೆನೆಪಿಸಿಕೊಂಡಿದ್ದಾರೆ.

ಐಶ್ವರ್ಯ ನೋಡಿದ್ರೆ ಯಾರಿಗೆ ಕ್ರಶ್ ಆಗಲ್ಲಾ?
ಮೊದಲ ಭೇಟಿಯಲ್ಲಿ ಐಶ್ವರ್ಯ ರೈ ಅವರನ್ನು ನೋಡಿದಾಗ ನಿಮಗೆ ಕ್ರಶ್ ಆಗಿಲ್ವಾ ಎಂದು ಪ್ರಶ್ನಿಸಿದ್ದಕ್ಕೆ, ''ಅವರನ್ನು ನೋಡಿದ್ರೆ ಯಾರಿಗೆ ಕ್ರಶ್ ಆಗಲ್ಲ? ಎಂದು ಹೇಳುವ ಮೂಲಕ ಮೊದಲ ನೋಟದಲ್ಲೇ ಐಶ್‌ಗೆ ಫಿದಾ ಆಗುದ್ದನ್ನು ಒಪ್ಪಿಕೊಂಡಿದ್ದಾರೆ. ನಂತರ ಅಭಿಷೇಕ್ ಬಚ್ಚನ್ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ತಮ್ಮ ಮೂರನೇ ಚಿತ್ರದಲ್ಲೇ ಐಶ್ವರ್ಯ ಜೊತೆ ನಟಿಸುವ ಅವಕಾಶ ಪಡೆದುಕೊಂಡರು. ಅದಾದ ನಂತರ ಹಲವು ಸಿನಿಮಾಗಳಲ್ಲಿ ಅಭಿಷೇಕ್-ಐಶ್ವರ್ಯ ಒಟ್ಟಿಗೆ ಕಾಣಿಸಿಕೊಂಡರು.