Don't Miss!
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪೊಲೀಸ್ ಸ್ಟೋರಿ' ಮಾಡಿ ಮಾಸ್ ಹೀರೊ ಆಗ್ಬೇಕು ಅಂದ್ಕೊಂಡೆ.. 'ವಿಷ್ಣು' ಚಿತ್ರದಿಂದ ಲಾಸ್ ಆಯ್ತು: ಅಭಿಜಿತ್
90ರ ದಶಕದಲ್ಲಿ ಹೀರೊ ಆಗಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ ಅಭಿಜಿತ್ ನಂತರ ಪೋಷಕ ಕಲಾವಿದರಾಗಿಯೂ ಮಿಂಚಿದ್ದರು. ಆದರೆ 'ವಿಷ್ಣು' ಸಿನಿಮಾ ನಂತರ ಸೈಲೆಂಟ್ ಆಗಿಬಿಟ್ಟಿದ್ದರು. ಇತ್ತೀಚೆಗೆ ಕಿರುತೆರೆ ಧಾರಾವಾಹಿಗಳಲ್ಲಿ ಮತ್ತೆ ಬಣ್ಣ ಹಚ್ಚಿ ನಟಿಸುತ್ತಿದ್ದಾರೆ.
30 ವರ್ಷಗಳ ಹಿಂದೆ ಪುಟ್ಟ ಪಾತ್ರಗಳ ಮೂಲಕ ಚಿತ್ರರಂಗಕ್ಕೆ ಬಂದ ಅಭಿಜಿತ್ ನಂತರ ಹೀರೊ ಕೂಡ ಆಗಿದ್ದರು. ತಮ್ಮ ವಿಭಿನ್ನ ನಟನೆಯಿಂದ ಪ್ರೇಕ್ಷಕರ ಮನಗೆದ್ದಿದ್ದರು. 'ಮಾಂಗಲ್ಯ ಸಾಕ್ಷಿ' ಚಿತ್ರದ 'ಸಾರಾಯಿ ಶೀಶೆಯಲಿ' ಹಾಡನ್ನು ಕನ್ನಡ ಸಿನಿರಸಿಕರು ಇನ್ನು ಮರೆತ್ತಿಲ್ಲ. ಇನ್ನು ಸಾಹಸ ಸಿಂಹ ವಿಷ್ಣುವರ್ಧನ್ ಜೊತೆ ಒಂದಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು. ಸಿನಿಮಾ ನಿರ್ಮಾಣ ಮಾಡಲು ಹೋಗಿ ನಷ್ಟ ಅನುಭವಿಸಿ ಚಿತ್ರರಂಗದಿಂದಲೇ ದೂರ ಉಳಿದುಬಿಟ್ಟಿದ್ದರು.
"ಆ
ಸೋಲು
ರವಿಚಂದ್ರನ್
ಸೋಲು
ಅಲ್ಲ..
ಉದ್ಯಮದ
ಸೋಲು"
ನಿರ್ದೇಶಕ
ಎಸ್
ನಾರಾಯಣ!
ಚಿತ್ರಲೋಕ ಯೂಟ್ಯೂಬ್ ಚಾನಲ್‌ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಚಿತ್ರರಂಗದ ಏಳುಬೀಳಿನ ಬಗ್ಗೆ ನಟ ಅಭಿಜಿತ್ ಮಾತನಾಡಿದ್ದಾರೆ. ಅವಕಾಶಗಳು ಕಮ್ಮಿ ಆಗುತ್ತಿದ್ದಂತೆ ಹೀರೊ ಆಗಿ ಗೆಲ್ಲುವ ಹಠಕ್ಕೆ ಬಿದ್ದು ಸಿನಿಮಾ ನಿರ್ಮಿಸಿ ಕೈಸುಟ್ಟುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ. ತಮಗಾಗಿ 'ಪೊಲೀಸ್ ಸ್ಟೋರಿ' ಕಥೆ ಮಾಡಿದ್ದು ಎಂದು ಹೇಳಿದ್ದಾರೆ.

'ಪೊಲೀಸ್ ಸ್ಟೋರಿ' ಮಾಡ್ಬೇಕಿತ್ತು
'ಪೊಲೀಸ್ ಸ್ಟೋರಿ' ಚಿತ್ರವನ್ನು ನಿರ್ಮಿಸಿ ಹೀರೊ ಆಗಿ ನಟಿಸಿಲು ಅಭಿಜಿತ್ ಮುಂದಾಗಿದ್ದರು. "ಮೊದಲಿಗೆ ಆ ಚಿತ್ರಕ್ಕೆ 'ಪೊಲೀಸ್ ಸ್ಟೋರಿ' ಹೆಸರು ಇರಲಿಲ್ಲ. 'ಬ್ಲ್ಯಾಕ್ ಟೈಗರ್ಸ್' ಹೆಸರಿನಲ್ಲಿ ನಾನು, ಥ್ರಿಲ್ಲರ್ ಮಂಜು ಕಾನಿಷ್ಕಾ ಹೋಟೆಲ್ ಮುಂದೆ ವ್ಯಾನ್‌ನಲ್ಲಿ ಕಥೆ ಮಾಡಿದ್ವಿ. ಆದರೆ ಕೊನೆಗೆ ಬಜೆಟ್ ವಿಚಾರದಲ್ಲಿ ಹಿನ್ನಡೆ ಆಗಿತ್ತು. ಅಂದು ನನಗೆ ಆ ಬಜೆಟ್ ಹೊಂದಿಸಲು ಸಾಧ್ಯವಾಗಿರಲಿಲ್ಲ. ನಂತರ ಬೇರೆ ಸಿನಿಮಾ ಶೂಟಿಂಗ್ ವೇಳೆ ಸಾಯಿಕುಮಾರ್ ಬಂದು ಸ್ವೀಟ್ ಕೊಟ್ಟರು. ಸೋಲೊ ಹೀರೋ ಆಗಿ ಆಕ್ಟ್ ಮಾಡ್ತಿದ್ದೀನಿ. ಥ್ರಿಲ್ಲರ್ ಮಂಜು ಡೈರೆಕ್ಟರ್ ಅಂದರು. ನಾನು ಥ್ರಿಲ್ಲರ್ ಮಂಜುನ ಕೇಳಿದಾಗ, ಹೌದು ನಾವೆಲ್ಲಾ ಸ್ನೇಹಿತರು ಸೇರಿ ಸಿನಿಮಾ ಮಾಡ್ತಿದ್ದೀನಿ ಅಂದರು. ಹಾಗಾಗಿ ಆ ಸಿನಿಮಾ ನನಗೆ ಮಿಸ್ ಆಗಿತ್ತು"
"ಮರದ
ಕೊರಡಿನಂತಿರೋ
ಹೀರೊ
ಅಂತ
ಬರೆದ್ರು..
'ಬಾ
ನಲ್ಲೆ
ಮಧು
ಚಂದ್ರಕೆ'
ಹಿಟ್
ಆಯ್ತು"

40 ಲಕ್ಷ ಬಜೆಟ್ ಬೇಕಿತ್ತು
"ಅಕ್ಕಿ ಮೇಲೆ ತಿನ್ನುವವರ ಹೆಸರು ಬರೆದಿರುತ್ತೆ ಅಂತಾರೆ. ಹಾಗಿ ಸಾಯಿಕುಮಾರ್ ನುಗ್ಗಿ 'ಪೊಲೀಸ್ ಸ್ಟೋರಿ' ಸಿನಿಮಾ ಮಾಡಿದ್ದರು. ಸಿನಿಮಾ ದೊಡ್ಡ ಹಿಟ್ ಆಯಿತು. ಆ ಡೈಲಾಗ್‌ಗಲೂ ಇವತ್ತಿಗೂ ಜನ ನೆನಪಿಸಿಕೊಳ್ತಾರೆ. ನನ್ನ ಕರಿಯರ್‌ನಲ್ಲಿ ಸಿಗದೇ ಇದ್ದ ಪಾತ್ರ ಆಮೇಲೆ ಸಿಕ್ಕಿದೆ. ಸಿಗಬೇಕಿದ್ದ ಪಾತ್ರ ಕಾರಣಾಂತರಗಳಿಂದ ಕಳೆದುಕೊಳ್ಲುವಂತೆ ಆಗಿದೆ. ಆಕ್ಷನ್ ಹೀರೊ ಆಗಬೇಕು ಎನ್ನುವುದು ನನ್ನ ಕನಸಾಗಿತ್ತು. ಅದಕ್ಕಂತಲೇ 'ಬ್ಲ್ಯಾಕ್ ಟೈಗರ್ಸ್' ಕಥೆ ಮಾಡಿದ್ದು. ಅದು ಮಿಸ್ ಆಗಿತ್ತು. ಆದರೆ ದೊಡ್ಡ ಹಿಟ್ ಆಯಿತು. ಅವರು 40 ಲಕ್ಷ ಬಜೆಟ್ ಹೇಳಿದ್ದರು. ನಾನು 25ರಿಂದ 30 ಲಕ್ಷ ಹೊಂದಿಸಲು ಸಿದ್ಧ ಇದ್ದೆ. ಹಾಗಾಗಿ ಅದು ಆಗಲಿಲ್ಲ. 'ಕುಂಕುಮ ಭಾಗ್ಯ' ಸಿನಿಮಾ ಕೂಡ ಕೈ ಜಾರಿತ್ತು." ಎಂದು ಅಭಿಜಿತ್ ಹೇಳಿದ್ದಾರೆ.

ಸಿನಿಮಾ ನಿರ್ಮಿಸಿ ಕೈಸುಟ್ಟುಕೊಂಡೆ
"2002 ಆದಮೇಲೆ ಅವಕಾಶಗಳು ಕಮ್ಮಿ ಆಯಿತು. ಆ ವಯಸ್ಸಿನಲ್ಲೇ ಏನಾದರೂ ಮಾಡಬೇಕು. ಆಕ್ಷನ್ ಹೀರೊ ಆಗಬೇಕು ಎಂದು ಸಿನಿಮಾ ನಿರ್ಮಾಣ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದೆ. ಪತ್ನಿ ಬೇಡ ಅಂದರು. ಆದರೆ ಒಂದು ಆಕ್ಷನ್ ಸಿನಿಮಾ ಮಾಡಿ ಗೆದ್ದರೆ ಮತ್ತೆ ಚಿತ್ರರಂಗ ಕರೆದು ಅವಕಾಶ ಕೊಡುತ್ತೆ ಎನ್ನುವ ಆಸೆ ಇತ್ತು. 'ಸಮರ ಸಿಂಹ ನಾಯ್ಕ' ಲಾಸ್ ಆಗಲಿಲ್ಲ. 'ಜೋಡಿ ನಂಬರ್ 1' ಚೆನ್ನಾಗಿ ಆಯಿತು. ಅದೇ ಸಮಯದಲ್ಲಿ ವಿಷ್ಣು ಸರ್‌ನ ನನ್ನ ವೈಫ್ ಕೇಳಿದ್ರು. ನೀವು ನಮ್ಮ ಬ್ಯಾನರ್‌ನಲ್ಲಿ ನಟಿಸ್ಬೇಕು ಅಂತ. ಅವರು ಒಪ್ಪಿದರು. ಆದರೆ ಸಿನಿಮಾ ಮಾಡೋಣ ಎಂದುಕೊಳ್ಳುವ ವೇಳೆಗೆ ಅವರು ಹೊರಟು ಹೋದರು"

'ವಿಷ್ಣು' ಚಿತ್ರದಿಂದ ಬಹಳ ನಷ್ಟ ಆಯ್ತು
"2010 ಅಲ್ಲಿ 'ವಿಷ್ಣು' ಅಂತ ಟೈಟಲ್ ರಿಜಿಸ್ಟರ್ ಮಾಡ್ಸಿದ್ದೆ. ಆದರೆ ಸಿನಿಮಾ ಮಾಡಲಿಲ್ಲ. ಅದೇ ಸಮಯದಲ್ಲಿ ದ್ವಾರಕೀಶ್ 'ವಿಷ್ಣುವರ್ಧನ' ಸಿನಿಮಾ ಮಾಡಲು ಹೊರಟರು. ಛೇಂಬರ್‌ನಲ್ಲಿ ಒಂದೇ ಟೈಟಲ್ ಕೊಡಲ್ಲ ಅಂದರು. ಹಾಗಾಗಿ ಅನಿವಾರ್ಯವಾಗಿ ಸಿನಿಮಾ ಮಾಡಲೇಬೇಕು ಎನ್ನುವಂತಾಯಿತು. 3 ತಿಂಗಳಲ್ಲಿ ಸಿನಿಮಾ ಮಾಡಬೇಕು ಅಂದರು. ಇಲ್ಲ ಅಂದರೆ ಟೈಟಲ್ ವಾಪಸ್ ತಗೋತಾರೆ ಅನ್ನುವಂತಾಯಿತು. ಟೈಟಲ್ ಬಿಟ್ಟುಕೊಡಬಾರದು ಅನ್ನುವ ಕಾರಣಕ್ಕೆ 'ವಿಷ್ಣು' ಸಿನಿಮಾ ನಿರ್ಮಿಸಿ ನಟಿಸಿದೆ. ನಾವು ಅಂದುಕೊಂಡಿದ್ದಕ್ಕಿಂತ ಬಜೆಟ್ ಜಾಸ್ತಿ ಆಯಿತು. 'ವಿಷ್ಣುವರ್ಧನ' ಸಿನಿಮಾ ಬಂದು ಹಿಟ್ ಆದ ಮುಂದಿನ ವಾರವೇ ನಮ್ಮ ಸಿನಿಮಾ ಬಂತು. ಆದರೆ ಬಂದು ಹೋಗಿದ್ದು ಯಾರಿಗೂ ಗೊತ್ತಾಗಲಿಲ್ಲ. ಬಹಳ ನಷ್ಟ ಆಯಿತು. ಒಂದಷ್ಟು ಪ್ರಾಪರ್ಟಿ, ಎಲ್‌ಐಸಿ, ಚಿಟ್ಸ್ ಎಲ್ಲಾ ಮಾರಿ ನಷ್ಟಭರಿಸುವಂತಾಯಿತು. ಅದರಿಂದ ಆಚೆ ಬರಲು ಏಳೆಂಟು ವರ್ಷ ಬೇಕಾಯಿತು" ಎಂದು ಅಭಿಜಿತ್ ವಿವರಿಸಿದ್ದಾರೆ.