For Quick Alerts
  ALLOW NOTIFICATIONS  
  For Daily Alerts

  "ನಾನು ಅಶ್ಲೀಲ ಸಿನಿಮಾಗಳಲ್ಲಿ ನಟಿಸ್ತಿದ್ದೀನಿ ಅಂತ ಇಂಡಸ್ಟ್ರಿಯವ್ರೇ ಬರೆಸಿದ್ರು": ಮಾಧುರಿ

  |

  90ರ ದಶಕದಲ್ಲಿ ಒಂದಷ್ಟು ಚಿತ್ರಗಳಲ್ಲಿ ನಟಿಸಿ ಸಿನಿರಸಿಕರ ಗಮನ ಸೆಳೆದ ನಟಿ ಮಾಧುರಿ ನಂತರ ಸೈಲೆಂಟ್ ಆಗಿಬಿಟ್ಟಿದ್ದರು. ಸದ್ಯ ನಿರ್ದೇಶಕ ರಘುರಾಮ್ ಅವರ 'ನೂರೆಂದು ನೆನಪು' ಯೂಟ್ಯೂಬ್‌ ಕಾರ್ಯಕ್ರಮದಲ್ಲಿ ಮಾಧುರಿ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಎದುರಿಸಿದ ಕಹಿ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.

  ಬೆಂಗಳೂರಿನಲ್ಲಿ ಹುಟ್ಟಿಬೆಳೆದ ಮಾಧುರಿ ತಮ್ಮ ಸೌಂದರ್ಯ ಹಾಗೂ ಅಭಿನಯದಿಂದ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು. ಹೊಟ್ಟೆಪಾಡಿಗಾಗಿ ಬಣ್ಣದ ಲೋಕಕ್ಕೆ ಬಂದ ಚೆಲುವೆ ಕೆಲ ವರ್ಷಗಳ ನಂತರ ಚಿತ್ರರಂಗದಿಂದ ದೂರಾಗಿದ್ದರು. ಕಾಶಿನಾಥ್ ನಿರ್ದೇಶಿಸಿ ನಟಿಸಿದ 'ಅಜಗಜಾಂತರ' ಚಿತ್ರದ ಪುಟ್ಟ ಪಾತ್ರದಲ್ಲಿ ನಟಿಸುವ ಮೂಲಕ ನಟನೆ ಆರಂಭವಾಯಿತು. ಮುಂದೆ 'ಸಿಬಿಐ ಶಿವ', 'ಬಾಂಬೆ ದಾದಾ', 'ಗೂಂಡಾ ರಾಜ್ಯ', 'ಬಹುದ್ಧೂರ್ ಹೆಣ್ಣು', 'ಸ್ಟೇಟ್ ರೌಡಿ', 'ಸೂರ್ಯಪುತ್ರ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ನಾಯಕಿಯಾಗಿ ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದರು.

  'ಪೊಲೀಸ್ ಸ್ಟೋರಿ' ಮಾಡಿ ಮಾಸ್ ಹೀರೊ ಆಗ್ಬೇಕು ಅಂದ್ಕೊಂಡೆ.. 'ವಿಷ್ಣು' ಚಿತ್ರದಿಂದ ಲಾಸ್ ಆಯ್ತು: ಅಭಿಜಿತ್'ಪೊಲೀಸ್ ಸ್ಟೋರಿ' ಮಾಡಿ ಮಾಸ್ ಹೀರೊ ಆಗ್ಬೇಕು ಅಂದ್ಕೊಂಡೆ.. 'ವಿಷ್ಣು' ಚಿತ್ರದಿಂದ ಲಾಸ್ ಆಯ್ತು: ಅಭಿಜಿತ್

  ಜಗ್ಗೇಶ್, ದೇವರಾಜ್, ಟೈಗರ್ ಪ್ರಭಾಕರ್ ಜೊತೆಗೂ ಮಾಧುರಿ ನಟಿಸಿ ಮೋಡಿ ಮಾಡಿದ್ದರು. ಅವತ್ತಿನ ಕಾಲಕ್ಕೆ ಹಿಂದಿ ಧಾರಾವಾಹಿಗಳಲ್ಲೂ ನಟಿಸುತ್ತಿದ್ದರು. ಚಿತ್ರರಂಗದಲ್ಲಿ ತಮ್ಮ ಏಳಿಗೆಯನ್ನು ಸಹಿಸದೇ ಕೆಲವರು ಪಿತೂರಿ ನಡೆಸಿದ್ದರು ಎಂದು ಮಾಧುರಿ ಬೇಸರ ವ್ಯಕ್ತಪಡಿಸಿದ್ದಾರೆ.

  ಅಶ್ಲೀಲ ಚಿತ್ರಗಳಲ್ಲಿ ನಟಿಸ್ತೀನಿ ಎಂದಿದ್ರು

  ಅಶ್ಲೀಲ ಚಿತ್ರಗಳಲ್ಲಿ ನಟಿಸ್ತೀನಿ ಎಂದಿದ್ರು

  "ನಾನು ಆಗ ಹಿಂದಿಯಲ್ಲಿ ನಟಿಸ್ತಿದ್ದೆ. ಅದಕ್ಕೆ ಟ್ವಿಸ್ಟ್ ಕೊಟ್ಟು ನಾನು ಅಶ್ಲೀಲ ಸಿನಿಮಾಗಳಲ್ಲಿ ನಟಿಸ್ತೀನಿ, ಒಂದು ಚಿತ್ರಕ್ಕೆ ಒಂದೂವರೆ ಲಕ್ಷ ತಗೋತ್ತೀನಿ ಎಂದು ಇಂಡಸ್ಟ್ರಿಯಲ್ಲೇ ಒಬ್ಬರು ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಬರೆಸಿದ್ದರು. ಟ್ಯಾಬ್ಲಾಯ್ಡ್ ಪತ್ರಿಕೆಯಲ್ಲಿ ಆ ರೀತಿ ಬರೆದಾಗ ನನ್ನ ಪತಿ ನನ್ನ ಬೆಂಬಲಕ್ಕೆ ನಿಂತರು. ಇಲ್ಲದೇ ಇದ್ದಿದ್ದರೆ ಅಂದು ನಾನು ಏನಾದರೂ ಮಾಡಿಕೊಂಡಿ ಸಾಯಬೇಕಿತ್ತು. ನಾನು ಇಂದು ನಿಮ್ಮ ಮುಂದೆ ಇರುತ್ತಿರಲಿಲ್ಲ. ನನ್ನ ಪತಿ ನನನಗೆ ಬೆನ್ನೆಲುಬಾಗಿ ನಿಂತಿದ್ದರು. ನಾನು ನಿನ್ನನ್ನು ನಂಬುತೇನೆ. ಯಾರು ಏನಾದರೂ ಮಾತಾಡಲಿ ನಾನು ಜೊತೆಗಿದ್ದೇನೆ ಎಂದಿದ್ದರು. ಅದಕ್ಕಿಂತಲೂ ನೋವು ಅನುಭವಿಸಿ ಬಂದವಳು ನಾನು. ಆದರೂ ಮೊದಲ ಬಾರಿ ಸುದ್ದಿ ಕೇಳಿದ್ದಾಗ ಶಾಕ್ ಆಗಿತ್ತು."

  "ಆ ಸೋಲು ರವಿಚಂದ್ರನ್ ಸೋಲು ಅಲ್ಲ.. ಉದ್ಯಮದ ಸೋಲು" ನಿರ್ದೇಶಕ ಎಸ್‌ ನಾರಾಯಣ!

  ಒಬ್ಬ ಲೇಡಿ ಆ ರೀತಿ ಬರೆಸಿದ್ದಳು

  ಒಬ್ಬ ಲೇಡಿ ಆ ರೀತಿ ಬರೆಸಿದ್ದಳು

  "ಯಾರು ಬರೆಸಿದ್ದು ಎಂದು ನಂತರ ಅವ್ರು ಹೇಳಿದ್ರು. ಇಂತಹ ವ್ಯಕ್ತಿ ಬರೆಸಿದರು ಎಂದು ಹೇಳಿದರು. ನಮ್ಮವರೇ, ನಮ್ಮ ಇಂಡಸ್ಟ್ರಿಯವರೇ ಬರೆಸಿದ್ದು. ಅದು ಕೂಡ ಒಬ್ಬ ಲೇಡಿ. ನಂತರ ಅದೇ ಪತ್ರಿಕೆಯಲ್ಲಿ ಮತ್ತೊಂದು ಸುಳ್ಳು ಸುದ್ದಿ ಬರೆಸಿದ್ದರು. ನಾನು ಏರ್‌ಪೋರ್ಟ್‌ನಲ್ಲಿ ನಟನೊಬ್ಬರನ್ನು ಅಚಾನಕ್‌ ಆಗಿ ಭೇಟಿ ಮಾಡಿದ್ದೆ. ಅದಕ್ಕೆ ಮತ್ತಷ್ಟು ಬಣ್ಣ ಕಟ್ಟಿ, ಮಿನಿಸ್ಟರ್ ಒಬ್ಬರ ಜೊತೆ ಹೆಸ್ರು ಸೇರಿಸಿ, ಮಾಧುರಿ ಕುಂತಲ್ಲೇ ಐಎಎಸ್ ಆಫೀಸರ್‌ನ ಟ್ರಾನ್ಸ್‌ಫರ್ ಮಾಡಿಸುತ್ತಾಳೆ ಅಂತೆಲ್ಲಾ ಬರೆಸಿದ್ದರು. ನಂತರ ಮತ್ತೊಂದು ಪತ್ರಿಕೆ ಅವರು ಬಂದು ನಿಮ್ಮ ಪ್ರತಿಕ್ರಿಯೆ ಕೊಡಿ ನಾವು ಬರೆಯುತ್ತೇವೆ ಎಂದರು. ನಾನು ಬೇಡವೇ ಬೇಡ ಅದರ ಸಹವಾಸ ಎಂದು ಸುಮ್ಮನಾಗಿದ್ದೆ" ಎಂದಿದ್ದಾರೆ.

  ಇಂಡಸ್ಟ್ರಿಯಿಂದ ದೂರಾಗಿದ್ದು ಯಾಕೆ?

  ಇಂಡಸ್ಟ್ರಿಯಿಂದ ದೂರಾಗಿದ್ದು ಯಾಕೆ?

  "ನಮ್ಮ ಪತಿ ಆ ಪತ್ರಿಕೆಯ ಸಂಪಾದಕರನ್ನು ಹೋಗಿ ಕೇಳಿದ್ದರು. ಸುಳ್ಳು ಸುದ್ದಿ ಯಾಕೆ ಬರೀತ್ತೀರಾ ಅಂತ. ನಮ್ಮ ಪತಿ ಮತ್ತು ಕೆಲ ಸ್ನೇಹಿತರು ನಮ್ಮ ಬೆಂಬಲಕ್ಕೆ ನಿಂತರು. ಹಾಗಾಗಿ ನಾನು ಆ ದಿನಗಳನ್ನೆಲ್ಲಾ ಎದುರಿಸಿ ಬಂದೆ. ಮಗ ಹುಟ್ಟಿದ ಮೇಲೆ ಇಂಡಸ್ಟ್ರಿಯಿಂದ ದೂರಾಗಿದ್ದೆ. 'ಕನ್ಯಾದಾನ' ಧಾರಾವಾಹಿಯಲ್ಲಿ ನಟಿಸುತ್ತಿದ್ದ ಸಮಯದಲ್ಲಿ ಮಗನ ಲಾಲನೆ ಪಾಲನೆಗಾಗಿ ನಟಿಸುವುದನ್ನು ನಿಲ್ಲಿಸಿದೆ. ಧಾರಾವಾಹಿ ತಂಡ ನಟಿಸುವಂತೆ ಬಹಳ ರಿಕ್ವೆಸ್ಟ್ ಮಾಡಿಕೊಂಡಿದ್ದರು. ಆದರೆ ಯಾಕೋ ಮಾಡಲು ಇಷ್ಟ ಇರಲಿಲ್ಲ ಬಿಟ್ಟೆ" ಎಂದು ವಿವರಿಸಿದ್ದಾರೆ.

  "ಮರದ ಕೊರಡಿನಂತಿರೋ ಹೀರೊ ಅಂತ ಬರೆದ್ರು.. 'ಬಾ ನಲ್ಲೆ ಮಧು ಚಂದ್ರಕೆ' ಹಿಟ್ ಆಯ್ತು"

  ಪತಿಗೆ ಇಂಡಸ್ಟ್ರಿಯಲ್ಲಿ ನಷ್ಟ ಆಗಿತ್ತು

  ಪತಿಗೆ ಇಂಡಸ್ಟ್ರಿಯಲ್ಲಿ ನಷ್ಟ ಆಗಿತ್ತು

  ಐಎಎಸ್ ಆಫೀಸರ್ ಆಗುವ ಕನಸು ಕಂಡಿದ್ದ ಮಾಧುರಿ ಅವರು ಚಿತ್ರರಂಗಕ್ಕೆ ಬಂದಿದ್ದರು. ಮನೆಯಲ್ಲಿದ್ದ ಬಡತನ ಅವರನ್ನು ಇಂಡಸ್ಟ್ರಿಗೆ ಕರೆದುಕೊಂಡು ಬಂದಿತ್ತು. ಇನ್ನು ಮಾಧುರಿ ಅವರ ಪತಿ ಮಂಜುನಾಥ ಹೆಗ್ಡೆ ದೊಡ್ಮನೆ ಕೂಡ ಚಿತ್ರರಂಗದವರೇ. ಫೈನಾನ್ಶಿಯರ್, ಪ್ರೊಡ್ಯೂಸರ್ ಕೂಡ ಆಗಿದ್ದರು. ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. 'ಗೌರಿ ಶಂಕರ' ಸಿನಿಮಾದಲ್ಲಿ ನಾಯಕ- ನಾಯಕಿಯಾಗಿ ಇಬ್ಬರು ನಟಿಸಿದ್ದರು. ಮುಂದೆ ಇಬ್ಬರು ಒಪ್ಪಿ ಮದುವೆ ಕೂಡ ಆದರು. ತಮ್ಮದೇ ಬ್ಯಾನರ್‌ನಲ್ಲಿ 'ಭಾರತಿ' ಎನ್ನುವ ಸಿನಿಮಾ ನಿರ್ಮಿಸಿ, ನಿರ್ದೇಶನ ಮಾಡಲು ಹೋಗಿದ್ದರು. ಆ ಸಿನಿಮಾದಿಂದ ಸಾಕಷ್ಟು ನಷ್ಟವಾಯಿತು. ಆ ನಂತರ ಪತಿ ಮಂಜು ಇಂಡಸ್ಟ್ರಿಯಿಂದ ದೂರಾಗಿದ್ದರು." ಎಂದು ಮಾಧುರಿ ತಮ್ಮ ಲೈಫ್‌ಸ್ಟೋರಿ ಬಿಚ್ಚಿಟ್ಟಿದ್ದಾರೆ.

  English summary
  Madhuri, is an Indian actress who has primarily featured in Kannada, and Hindi films and TV series. know more.
  Friday, January 6, 2023, 13:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X