Just In
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2020 ರಲ್ಲಿ ಬಾಲಿವುಡ್ ಕಳೆದುಕೊಂಡ ತಾರೆಗಳೆಷ್ಟು? ಇಲ್ಲಿದೆ ಪಟ್ಟಿ
ವಿಶ್ವವನ್ನೇ ಸಂಕಷ್ಟಕ್ಕೆ ತಳ್ಳಿದ್ದ 2020 ಇನ್ನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ವಿಶ್ವಯುದ್ಧಗಳ ನಂತರ ಇಡೀಯ ವಿಶ್ವವನ್ನೇ ಬಾಧಿಸಿದ ಅತ್ಯಂತ ಕರಾಳ ವರ್ಷ 2020.
2020 ರ ಆರಂಭದಲ್ಲಿ ಇದ್ದ 15 ಲಕ್ಷಕ್ಕೂ ಹೆಚ್ಚು ಜನ ಇಂದು ಜೀವಂತವಿಲ್ಲ, ಕಾರಣ ಕೊರೊನಾ. ಭಾರತವೊಂದರಲ್ಲಿಯೇ ಕೊರೊನಾದಿಂದ 1.40 ಲಕ್ಷ ಜನ ಸಾವನ್ನಪ್ಪಿದ್ದಾರೆ.
2020ನೇ ವರ್ಷದಲ್ಲಿ ಇಹಲೋಕ ತ್ಯಜಿಸಿದ 26 ಸ್ಯಾಂಡಲ್‌ವುಡ್ ತಾರೆಯರು
ಸಾಮಾನ್ಯರು, ಜನಪ್ರಿಯರು ಎಷ್ಟೋ ಮಂದಿ ಇಲ್ಲವಾಗಿದ್ದಾರೆ ಈ ವರ್ಷದಲ್ಲಿ. ಭಾರತವು ಹಲವಾರು ಮಂದಿ ಸಜ್ಜನರನ್ನು, ಸೆಲೆಬ್ರಿಟಿಗಳನ್ನು ಈ ವರ್ಷ ಕಳೆದುಕೊಂಡಿದೆ. ಅದರಲ್ಲಿಯೂ ಮನೊರಂಜನಾ ಕ್ಷೇತ್ರದಲ್ಲಿ ಸಾವಿನ ಸಂಖ್ಯೆ ಹೆಚ್ಚೇ ಎಂದು ಹೇಳಬಹುದು. ಸದಾ ಝಗಮಗಾಯಿಸುತ್ತಿದ್ದ ಬಾಲಿವುಡ್‌ನಲ್ಲಿ ಈ ವರ್ಷ ಸತತ ಸೂತಕದ ಛಾಯೆ. ಈ ವರ್ಷ ಬಾಲಿವುಡ್ ಕಳೆದುಕೊಂಡ ತಾರೆಗಳ ಪಟ್ಟಿ ಇಲ್ಲಿದೆ.

ಪ್ರತಿಭೆಯ ಖಜಾನೆ ಇರ್ಫಾನ್ ಖಾನ್
ಬಾಲಿವುಡ್ ಮಾತ್ರವಲ್ಲದೆ ಹಾಲಿವುಡ್‌ನಲ್ಲೂ ತಮ್ಮ ಅಪರೂಪದ ನಟನಾ ಪ್ರತಿಭೆಯಿಂದ ಖ್ಯಾತಿ ಗಳಿಸಿದ್ದ ನಟ ಇರ್ಫಾನ್ ಖಾನ್ ಏಪ್ರಿಲ್ 29 ರಂದು ನಿಧನಹೊಂದಿದರು. ಅವರ ಅಗಲಿಕೆಗೆ ಇಡೀಯ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿತ್ತು. ಅಪರೂಪದ ಖಾಯಿಲೆಯೊಂದಕ್ಕೆ ತುತ್ತಾಗಿದ್ದ ಅವರು ನಿಧನಹೊಂದಿದರು.

ಇರ್ಫಾನ್ ಖಾನ್ ಹಿಂದೆಯೇ ಹೋದ ರಿಶಿ ಕಪೂರ್
ಇರ್ಫಾನ್ ಖಾನ್ ಬೆನ್ನ ಹಿಂದೆಯೇ ಹೋದವರು ನಟ ರಿಶಿ ಕಪೂರ್. ಇರ್ಫಾನ್ ಸಾವಿನ ಸುದ್ದಿ ಅರಗಿಸಿಕೊಳ್ಳುವ ಮುನ್ನವೇ ಏಪ್ರಿಲ್ 30 ರಂದು ಇಹಲೋಕ ತ್ಯಜಿಸಿದರು ರಿಶಿ ಕಪೂರ್. ಸುರಸುಂದರರಾಗಿದ್ದ ರಿಶಿ ಸಿನಿಮಾಗಳ ಮೂಲಕ 80-90 ರ ದಶಕದಲ್ಲಿ ಮೋಡಿ ಮಾಡಿದ್ದರು. ಅಪಾರ ಜೀವನ ಪ್ರೀತಿ ಹೊಂದಿದ್ದ ಅವರು ಬೇಗನೇ ಇಹಲೋಕ ತ್ಯಜಿಸಿಬಿಟ್ಟರು.
2020 ಫ್ಲ್ಯಾಶ್ ಬ್ಯಾಕ್: ಈ ವರ್ಷ ಚಂದನವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರೆಯರು

ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್
ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕರಲ್ಲೊಬ್ಬರು ವಾಜಿದ್ ಖಾನ್. ಸಲ್ಮಾನ್ ಖಾನ್ ಆರಂಭದ ಸಿನಿಮಾಗಳಿಂದ ಹಿಡಿದು, ಇತ್ತೀಚಿನ ಸಿನಿಮಾಗಳ ವರೆಗೂ ಬಹುತೇಕ ಸಿನಿಮಾಗಳಿಗೆ ಸಂಗೀತ ನೀಡಿರುವುದು ವಾಜಿದ್ ಖಾನ್. ವಾಜಿದ್ ಖಾನ್ ಜೂನ್ 4 ರಂದು ಹೃದಯಾಘಾತದಿಂದ ಮೃತಪಟ್ಟರು.

ಬಾಲಿವುಡ್ ದಿಕ್ಕು ಬದಲಿಸಿದ ಸುಶಾಂತ್ ಸಿಂಗ್ ರಜಪೂತ್
ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಭರಸಿಡಿಲಿನಂತೆ ಬಾಲಿವುಡ್ ಅನ್ನು ಅಪ್ಪಳಿಸಿತು. ಸುಶಾಂತ್ ಸಾವಿನ ನಂತರದ ಪರಿಣಾಮದಿಂದ ಬಾಲಿವುಡ್ ಈಗಲೂ ಹೊರಬಂದಿಲ್ಲ, ಮುಂದೆಯೂ ಹೊರಬರುವುದು ಕಷ್ಟವೇ ಎನಿಸುತ್ತಿದೆ. ಈ ಸಾವು ಬಾಲಿವುಡ್‌ನ ಹಲವಾರು ಮಂದಿಯ ಜೀವನ ಬದಲಿಸಿಬಿಟ್ಟಿತು. ಜೂನ್ 14 ರಂದು ಸುಶಾಂತ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯಿತು. ಸುಶಾಂತ್ ಸಾವಿನ ನಂತರ ಬಾಲಿವುಡ್‌ನಲ್ಲಿ ಸುನಾಮಿಯೇ ಎದ್ದಿತು. ಹಲವು ನಟ-ನಟಿ, ನಿರ್ಮಾಪಕ, ನಿರ್ದೇಶಕರ ಜೀವನ ತಲೆಕೆಳಗಾಯಿತು. ಸುಶಾಂತ್ ಸಾವಿನ ತನಿಖೆಯನ್ನು ಸಿಬಿಐ ನಡೆಸುತ್ತಿದೆ.

ಹಿರಿಯ ನಟಿ ನಿಮ್ಮಿ ನಿಧನ
ಹಿಂದಿ ಚಿತ್ರರಂಗದ ಹಿರಿಯ ನಟಿ ನಿಮ್ಮಿ 2020 ರ ಮಾರ್ಚ್ ತಿಂಗಳಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ನವಾಬ್ ಬಾನು ಹೆಸರಿನ ಅವರು ಹಿಂದಿ ಸಿನಿಮಾರಂಗದಲ್ಲಿ ನಿಮ್ಮಿ ಎಂದೇ ಖ್ಯಾತರಾಗಿದ್ದರು. 1949 ರಿಂದ 1986 ರ ವರೆಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು ನಿಮ್ಮಿ.
2020ರಲ್ಲಿ ಹೆಚ್ಚು ಹುಡುಕಲ್ಪಟ್ಟ 10 ನಟಿಯರು: ಸನ್ನಿ ಲಿಯೋನ್‌ಗೆ ಎಷ್ಟನೇ ಸ್ಥಾನ?

ನಿರ್ದೇಶಕ ನಿಶಿಕಾಂತ್ ಕಾಮತ್
ಹಿಂದಿ ಹಾಗೂ ಮರಾಠಿಯಲ್ಲಿ ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ನಿಶಿಕಾಂತ್ ಕಾಮತ್ ಇದೇ ವರ್ಷದ ಆಗಸ್ಟ್ 17 ರಂದು ನಿಧನಹೊಂದಿದರು. ಅವರಿಗೆ 50 ವರ್ಷ ವಯಸ್ಸಾಗಿತ್ತು. ಅವರು ಬಹುದಿನಗಳಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ರಾಕಿ ಹ್ಯಾಂಡ್ಸಮ್, ಹಿಂದಿ ದೃಶ್ಯಂ, ಫೋರ್ಸ್, ಮದಾರಿ ಇನ್ನೂ ಅನೇಕ ಹಿಟ್ ಸಿನಿಮಾಗಳನ್ನು ನಿಶಿಕಾಂತ್ ಕಾಮತ್ ನೀಡಿದ್ದರು.

ನೃತ್ಯ ಸಂಯೋಜಕಿ ಸರೋಜ್ ಖಾನ್
ಖ್ಯಾತ ನೃತ್ಯ ನಿರ್ದೇಶಕಿ ಸರೋಜ್ ಖಾನ್ ಜುಲೈ 3 ರಂದು ಹೃದಯಾಘಾತದಿಂದ ಮುಂಬೈನ ತಮ್ಮ ನಿವಾಸದಲ್ಲಿ ಮೃತಪಟ್ಟರು. ಬಾಲಿವುಡ್‌ನಲ್ಲಿ 40 ವರ್ಷ ಕೆಲಸ ಮಾಡಿದ್ದ ಸರೋಜ್ ಖಾನ್, ಸುಮಾರು 2000 ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದರು. ಎಕ್ ದೋ ತೀನ್, ಚೋಲಿ ಕೆ ಪೀಚೆ ಕ್ಯಾ ಹೈ, ಧಕ್ ಧಕ್ ಕರನೇ ಲಗಾ ಸೇರಿ ಇನ್ನೂ ಹಲವಾರು ಹಿಟ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ ಸರೋಜ್ ಖಾನ್.

ಖ್ಯಾತ ನಿರ್ದೇಶಕ ಬಸು ಚಟರ್ಜಿ
ಹಿಂದಿ ಸಿನಿಮಾರಂಗದ ಖ್ಯಾತ ಸಿನಿಮಾ ನಿರ್ದೇಶಕ ಬಸು ಚಟರ್ಜಿ ಇದೇ ವರ್ಷದ ಜನವರಿ 10 ರಂದು ನಿಧನ ಹೊಂದಿದರು. 50 ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದ ಬಸು ಚಟರ್ಜಿ, ಹಿಂದಿ ಮಾತ್ರವಲ್ಲದೆ ಕೆಲವು ಬೆಂಗಾಳಿ ಸಿನಿಮಾಗಳನ್ನೂ ನಿರ್ದೇಶಿಸಿದ್ದರು. ಅವರಿಗೆ ಎರಡು ರಾಷ್ಟ್ರೀಯ ಪ್ರಶಸ್ತಿ, ಹಲವು ಫಿಲಮ್‌ಫೇರ್ ಪ್ರಶಸ್ತಿಗಳು ದೊರೆತಿದ್ದವು.

ಬೆಂಗಳೂರಿನಲ್ಲಿ ಕೊನೆಯುಸಿರೆಳೆದ ಫರಾಜ್ ಖಾನ್
ಹಲವು ವರ್ಷಗಳ ಕಾಲ ಸಾವಿನೊಂದಿಗೆ ಸೆಣಸಾಡಿ ನವೆಂಬರ್ 4 ರಂದು ನಟ ಫರಾಜ್ ಖಾನ್ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಫರೇಬ್, ಪೃಥ್ವಿ ಅಂಥಹಾ ಸಿನಿಮಾಗಳಲ್ಲಿ ನಟಿಸಿದ್ದ ಫರಾಜ್ ಖಾನ್, ಹಲವು ಟಿವಿ ಧಾರಾವಾಹಿಗಳಲ್ಲಿ ಸಹ ನಟಿಸಿದ್ದರು. ಆರ್ಥಿಕವಾಗಿ ಪೂರ್ಣ ಜರ್ಜರಿತವಾಗಿದ್ದ ಫರಾಜ್ ಅವರಿಗೆ ಸಲ್ಮಾನ್ ಖಾನ್ ಆರ್ಥಿಕ ಸಹಾಯ ನೀಡಿದ್ದರು.

ಅಜಯ್ ದೇವಗನ್ ಸಹೋದರ ಅನಿಲ್ ದೇವಗನ್
ಖ್ಯಾತ ನಟ ಅಜಯ್ ದೇವಗನ್ ಸಹೋದರ ಅನಿಲ್ ದೇವಗನ್ ಅಕ್ಟೋಬರ್ 5 ರಂದು ಮೃತರಾದರು. ಸಹಾಯದ ನಿರ್ದೇಶಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ರಾಜುಚಾಚ, ಬ್ಲ್ಯಾಕ್‌ಮೇಲ್, ಹಾಲ್ ಎ ದಿಲ್ ಸಿನಿಮಾಗಳನ್ನು ನಿರ್ದೇಸಿದ್ದರು.

ಆಸ್ಕರ್ ವಿಜೇತೆ ಭಾನು ಅಥೈಯಾ
ಭಾರತದ ಮೊದಲ ಆಸ್ಕರ್ ವಿಜೇತೆ ಭಾನು ಅಥೈಯಾ ಇದೇ ವರ್ಷದ ಅಕ್ಟೋಬರ್ 15 ರಂದು ಮೃತರಾದರು. ಬಾಲಿವುಡ್‌ನ ಪ್ರಖ್ಯಾತ ವಸ್ತ್ರ ವಿನ್ಯಾಸಕಿ ಆಗಿದ್ದ ಭಾನು ಅಥೈಯಾಗೆ 1983 ರ ಗಾಂಧಿ ಸಿನಿಮಾದ ವಸ್ತ್ರ ವಿನ್ಯಾಸಕ್ಕಾಗಿ ಆಸ್ಕರ್ ಲಭಿಸಿತ್ತು. ಆ ನಂತರವೂ ಅವರು ಗುರುದತ್ ಅವರ ಪ್ಯಾಸಾ, ಮೇರಾ ನಾಮ್ ಜೋಕರ್, ಚಾಂದಿನಿ, 1942; ಎ ಲವ್ ಸ್ಟೋರಿ, ಲಗಾನ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು.