Don't Miss!
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- News
ಮಂಗಳೂರಿನಲ್ಲಿ ಚಾಕು ಇರಿತದಿಂದ ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿ ಸಾವು
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022: ಈ ವರ್ಷ ಅತಿ ಹೆಚ್ಚು ಫ್ಲಾಪ್ ಸಿನಿಮಾ ನೀಡಿದ ಸ್ಟಾರ್ ನಟ ಯಾರು?
ಈ ವರ್ಷ ದಕ್ಷಿಣ ಭಾರತ ಚಿತ್ರರಂಗದ ಪಾಲಿಗೆ ಚಿನ್ನದ ವರ್ಷ. ಹಲವು ಅತ್ಯುತ್ತಮ ಸಿನಿಮಾಗಳು ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದಿಂದ ಹೊರಹೊಮ್ಮಿವೆ.
ಆದರೆ ಬಾಲಿವುಡ್‌ಗೆ ಈ ವರ್ಷ ಕರಾಳ ವರ್ಷ. ಒಂದು ಹಿಟ್ ಸಿನಿಮಾ ನೀಡಲು ಬಾಲಿವುಡ್ ಪರದಾಡಿತು. ಸಿನಿಮಾಗಳು ಹಿಟ್ ಆಗದೇ ಇದ್ದಿದ್ದು ಒಂದೆಡೆಯಾದರೆ ಬಾಲಿವುಡ್ ಸಿನಿಮಾ ಪ್ರೇಮಿಗಳು ಬಾಲಿವುಡ್ ಸಿನಿಮಾಗಳನ್ನು ತೊರೆದು ದಕ್ಷಿಣದ ಸಿನಿಮಾಗಳನ್ನು ವೀಕ್ಷಿಸಲು, ಪ್ರಶಂಸಿಸಲು ಆರಂಭಿಸಿದ್ದು ಬಾಲಿವುಡ್‌ನಲ್ಲಿ ದೊಡ್ಡ ಆತಂಕದ ಅಲೆಯನ್ನೇ ಹುಟ್ಟಿಸಿದವು.
ಬಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್ ನಟರೇ ಈ ವರ್ಷ ಮಕಾಡೆ ಮಲಗಿದರು. ಒಂದೇ ಒಂದು ಹಿಟ್ ನೀಡಲು ಇನ್ನಿಲ್ಲದ ಕಸರತ್ತುಗಳನ್ನು ಮಾಡಿದರಾದರೂ ಯಶಸ್ವಿಯಾಗಲಿಲ್ಲ. ಹಾಗಿದ್ದರೆ ಅತಿ ಹೆಚ್ಚು ಫ್ಲಾಪ್ ಸಿನಿಮಾ ನೀಡಿದ ಸ್ಟಾರ್ ನಟ ಯಾರು? ಇಲ್ಲಿದೆ ಪಟ್ಟಿ.
2022ರಲ್ಲಿ ಹೆಚ್ಚು ಫ್ಲಾಪ್ ಸಿನಿಮಾ ನೀಡಿದ ಸ್ಟಾರ್ ನಟರ ಪಟ್ಟಿಯಲ್ಲಿ ಮೊದಲ ಹೆಸರು ಬರುವುದು ಅಕ್ಷಯ್ ಕುಮಾರ್ ಅವರದ್ದು. ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸುವ ಸ್ಟಾರ್ ನಟ ಸಹ ಅಕ್ಷಯ್ ಕುಮಾರ್ ಅವರೇ, 2022 ರಲ್ಲಿ ಅಕ್ಷಯ್ ಕುಮಾರ್ ನಟನೆಯ ಆರು ಸಿನಿಮಾಗಳು ಬಿಡುಗಡೆ ಆಗಿವೆ. ಐದು ಸಿನಿಮಾದಲ್ಲಿ ಮುಖ್ಯ ನಾಯಕನ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದರೆ ಒಂದು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ನಟಿಸಿದ ಎಲ್ಲ ಸಿನಿಮಾಗಳು ಫ್ಲಾಪ್ ಆಗಿವೆ!

ಹೀನಾಯ ಸೋಲು ಕಂಡ ಅಕ್ಷಯ್ ಕುಮಾರ್
'ಬಚ್ಚನ್ ಪಾಂಡೆ', ಭಾರಿ ಬಜೆಟ್‌ನ 'ಸಾಮ್ರಾಟ್ ಪೃಥ್ವಿರಾಜ್', ಕೌಟುಂಬಿಕ ಸಿನಿಮಾ 'ರಕ್ಷಾ ಬಂಧನ್', ಫ್ಯಾಂಟಸಿ ಸಿನಿಮಾ 'ರಾಮ್ ಸೇತು', ಥ್ರಿಲ್ಲರ್ ಸಿನಿಮಾ 'ಕಟ್‌ಪುತ್ಲಿ' ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಇವುಗಳಲ್ಲಿ ಒಂದು ಸಿನಿಮಾ ಸಹ ಗೆಲ್ಲಲಿಲ್ಲ. ಆಯುಷ್ಮಾನ್ ಖುರಾನಾ ನಟಿಸಿದ ಮೊದಲ ಆಕ್ಷನ್ ಸಿನಿಮಾ 'ಆನ್ ಆಕ್ಷನ್ ಹೀರೋ'ನಲ್ಲಿ ಅಕ್ಷಯ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು ಆದರೆ ಆ ಸಿನಿಮಾ ಸಹ ಗೆಲ್ಲಲಿಲ್ಲ ಎಂಬುದು ವಿಪರ್ಯಾಸ.

ಅಮಿತಾಬ್ ಬಚ್ಚನ್‌ಗೆ ಸಹ ಸೋಲು
ನಟ ಅಮಿತಾಬ್ ಬಚ್ಚನ್ ನಟಿಸಿರುವ ಎಂಟು ಸಿನಿಮಾಗಳು ಈ ವರ್ಷ ತೆರೆ ಕಂಡವು. ಇವುಗಳಲ್ಲಿ ಮೂರು ಸಿನಿಮಾಗಳಲ್ಲಿ ಬಚ್ಚನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಚ್ಚನ್ ನಟಿಸಿದ್ದ 'ಝುಂಡ್' ಸಿನಿಮಾ ಸಾಧಾರಣ ಯಶಸ್ಸು ಗಳಿಸಿತು. ಅಜಯ್ ದೇವಗನ್ ನಟನೆಯ 'ರನ್‌ವೇ 34' ಸಿನಿಮಾದಲ್ಲಿ ನಟಿಸಿದರು ಆ ಸಿನಿಮಾ ಫ್ಲಾಪ್ ಆಯಿತು. ಬಳಿಕ ಬಂದ 'ಬ್ರಹ್ಮಾಸ್ತ್ರ' ಸಿನಿಮಾ ಋಣಾತ್ಮಕ ವಿಮರ್ಶೆಗಳ ನಡುವೆಯೂ ಹಿಟ್ ಎನಿಸಿಕೊಂಡಿತು. ಆ ಬಳಿಕ ಬಂದ 'ಗುಡ್‌ಬೈ' ಹಾಗೂ 'ಊಂಚಾಯಿ' ಸಿನಿಮಾಗಳು ಹೇಳ ಹೆಸರಿಲ್ಲದೆ ಸೋತವು. ಇವುಗಳ ಹೊರತಾಗಿ 'ಚುಪ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದರು ಆ ಸಿನಿಮಾ ಹಿಟ್ ಆಯಿತು. 'ರಾಧೆ-ಶ್ಯಾಮ್' ನಲ್ಲಿ ಕತೆ ನರೇಷನ್ ಮಾಡಿದರು ಆ ಸಿನಿಮಾ ಫ್ಲಾಪ್ ಆಯಿತು.

ಆಯುಷ್ಮಾನ್ ಖುರಾನಾ-ರಾಜ್ ಕುಮಾರ್ ರಾವ್
ಆಯುಷ್ಮಾನ್ ಖುರಾನಾ ಹಾಗೂ ರಾಜ್ ಕುಮಾರ್ ರಾವ್ ಬಾಲಿವುಡ್‌ನ ಪ್ರಯೋಗಾತ್ಮಕ ಸಿನಿಮಾಗಳ ನಟರು. ಇವರು ನಟಿಸಿರುವ ತಲಾ ಮೂರು ಸಿನಿಮಾಗಳು ಈ ವರ್ಷ ತೆರೆಗೆ ಬಂದವು. ಇಬ್ಬರ ಸಿನಿಮಾಗಳು ಸಹ ಫ್ಲಾಪ್ ಆದವು. ರಾಜ್ ಕುಮಾರ್ ರಾವ್ ನಟನೆಯ 'ಬದಾಯಿ ದೊ', 'ಹಿಟ್; ದಿ ಫರ್ಸ್ ಕೇಸ್', 'ಮೋನಿಕಾ ಓ ಮೈ ಡಾರ್ಲಿಂಗ್' ಸಿನಿಮಾಗಳು ಬಿಡುಗಡೆ ಆಗಿ ಸೋತವು. ಆಯುಷ್ಮಾನ್ ಖುರಾನಾ ನಟನೆಯ 'ಅನೇಕ್', 'ಡಾಕ್ಟರ್ ಜಿ' ಹಾಗೂ 'ಆನ್ ಆಕ್ಷನ್ ಹೀರೋ' ಸಿನಿಮಾ ಬಿಡುಗಡೆ ಆಗಿ ಸೋತವು.

ಯಶಸ್ಸು ಕಂಡ ನಟ ಅಜಯ್ ದೇವಗನ್
ಈ ವರ್ಷ ಬಾಲಿವುಡ್‌ನಲ್ಲಿ ತುಸು ಯಶಸ್ಸು ಕಂಡ ಸ್ಟಾರ್ ನಟ ಎಂದರೆ ಅದು ಅಜಯ್ ದೇವಗನ್, ಇವರು ನಟಿಸಿದ ಐದು ಸಿನಿಮಾಗಳು ಈ ವರ್ಷ ತೆರೆ ಕಂಡು ಮೂರು ಸಿನಿಮಾಗಳು ಸೂಪರ್ ಹಿಟ್ ಆದವು, ಎರಡು ಸಿನಿಮಾ ಸೋತವು. ಮೊದಲಿಗೆ ತೆರೆಗೆ ಬಂದ 'ಗಂಗೂಬಾಯಿ ಕಾತಿಯಾವಾಡಿ' ಸೂಪರ್ ಹಿಟ್ ಆಯಿತು. ಆ ಬಳಿಕ ಬಂದ 'RRR' ಸಹ ಸೂಪರ್ ಡೂಪರ್ ಹಿಟ್. ಬಳಿಕ ಬಂದ 'ರನ್‌ವೇ 34' ಬಾಕ್ಸ್ ಆಫೀಸ್‌ನಲ್ಲಿ ಸೋತಿತು. ಆ ಬಳಿಕ ಬಿಡುಗಡೆ ಆದ 'ಥ್ಯಾಂಕ್ ಗಾಡ್' ಸಿನಿಮಾ ಹೀನಾಯವಾಗಿ ಸೋತಿತು. ಇತ್ತೀಚೆಗೆ ಬಿಡುಗಡೆ ಆದ 'ದೃಶ್ಯಂ 2' ಸಿನಿಮಾ ಉತ್ತಮ ಪ್ರದರ್ಶನ ಕಂಡು ಹಿಟ್ ಎನಿಸಿಕೊಂಡಿತು.

ಒಂದು ಸಿನಿಮಾ ಮಾಡಿ ಸೋತವರು
ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡ' ಸಿನಿಮಾ ಬಿಡುಗಡೆ ಆಗಿ ಹೀನಾಯ ಸೋಲು ಕಂಡಿತು. ಹೃತಿಕ್ ರೋಷನ್-ಸೈಫ್ ಅಲಿ ಖಾನ್‌ರ 'ವಿಕ್ರಂ ವೇದ' ಸಹ ಸೋತಿತು. ರಣ್ವೀರ್ ಸಿಂಗ್ ನಟನೆಯ 'ಜಯೇಶ್ ಭಾಯ್ ಜೋರ್ಧಾರ್' ಸಿನಿಮಾ ಸಹ ಸೋತಿತು. ಟೈಗರ್ ಶ್ರಾಫ್ ನಟನೆಯ 'ಹೀರೋಪಂತಿ 2', ವರುಣ್ ಧವನ್ ನಟನೆಯ 'ಜುಗ್ ಜುಗ್ ಜಿಯೊ', 'ಬೇಡಿಯಾ' ಸಿನಿಮಾಗಳು ಸೋತವು. ಸಲ್ಮಾನ್ ಖಾನ್ ಹಾಗು ಶಾರುಖ್ ಖಾನ್ ಅವರುಗಳು ನಾಯಕ ನಟರಾಗಿ ನಟಿಸಿದ ಸಿನಿಮಾಗಳು ಈ ವರ್ಷ ಬಿಡುಗಡೆ ಆಗಿಲ್ಲ. 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು ಆ ಸಿನಿಮಾ ದೊಡ್ಡ ಹಿಟ್ ಆಯಿತು.