For Quick Alerts
  ALLOW NOTIFICATIONS  
  For Daily Alerts

  ತನ್ನ ಬಯೋಪಿಕ್‌ಗೆ ಕೇವಲ 1 ರೂ. ಪಡೆದಿದ್ದ ಮಿಲ್ಖಾ ಸಿಂಗ್; ಆ ಹಣದ ವಿಶೇಷತೆ ಏನು ಗೊತ್ತಾ?

  |

  ಭಾರತದ ಹೆಮ್ಮೆಯ ಅಥ್ಲೀಟ್, ಫ್ಲೈಯಿಂಗ್ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನು ನೆನಪು ಮಾತ್ರ. 91 ವರ್ಷದ ಲೆಜೆಂಡ್ ಅಥ್ಲೀಟ್ ಮಿಲ್ಖಾ ಸಿಂಗ್ ಕೊರೊನಾದಿಂದ ಶುಕ್ರವಾರ ರಾತ್ರಿ ಕೊನೆಯುಸಿರೆಳಿದ್ದಾರೆ. ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತ ಮೊದಲ ಕ್ರೀಡಾಪಟು ಎನ್ನುವ ದಾಖಲೆ ನಿರ್ಮಿಸಿದ್ದರು.

  ದಾಖಲೆಗಳ ವೀರ ಮಿಲ್ಖಾ ಸಿಂಗ್ ಅನೇಕರಿಗೆ ಸ್ಫೂರ್ತಿ. ಅಪ್ರತಿಮ ಸಾಧನೆ ಮಾಡಿರುವ ಮಿಲ್ಖಾ ಸಿಂಗ್ ಅವರ ಜೀವನ ಸಿನಿಮಾ ಆಗಿ ತೆರೆಮೇಲೆ ಬಂದಿದೆ. ರಾಕೇಶ್ ಓಂ ಪ್ರಕಾಶ್ ಮೆಹ್ರಾ ಅವರ ಸಾರಥ್ಯದಲ್ಲಿ ಮೂಡಿಬಂದ ಮಿಲ್ಖಾ ಸಿಂಗ್ ಬಯೋಪಿಕ್ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. 2013ರಲ್ಲಿ ಬಿಡುಗಡೆಯಾದ ಮಿಲ್ಖಾ ಸಿಂಗ್ ಬಯೋಪಿಕ್, 'ಭಾಗ್ ಮಿಲ್ಖಾ ಭಾಗ್' ಚಿತ್ರದಲ್ಲಿ ಮಿಲ್ಖಾ ಸಿಂಗ್ ಆಗಿ ಖ್ಯಾತ ನಟ ಫರಾನ್ ಅಖ್ತಾರ್ ಮಿಂಚಿದ್ದರು. ಈ ಸಿನಿಮಾ ಮಾಡಲು ಅನುಮತಿ ನೀಡಿದ್ದ 'ಫ್ಲೈಯಿಂಗ್ ಸಿಖ್' ಪಡೆದ ಹಣ ನಿಜಕ್ಕೂ ಅಚ್ಚರಿ ಮೂಡಿಸುತ್ತೆ. ಮುಂದೆ ಓದಿ...

  ಬಯೋಪಿಕ್ ನಿರ್ಮಾಣಕ್ಕೆ 1 ರೂ. ಪಡೆದಿದ್ದ ಸಿಂಗ್

  ಬಯೋಪಿಕ್ ನಿರ್ಮಾಣಕ್ಕೆ 1 ರೂ. ಪಡೆದಿದ್ದ ಸಿಂಗ್

  ತನ್ನದೆ ಬಯೋಪಿಕ್ ನಿರ್ಮಾಣ ಮಾಡಲು ಅತೀ ಕಡಿಮೆ ಹಣ ತೆಗೆದುಕೊಳ್ಳುವ ಮೂಲಕ ಉದಾರತೆ ಮೆರೆದಿದ್ದರು ಮಿಲ್ಖಾ ಸಿಂಗ್. ಸರಳ ವ್ಯಕ್ತಿತ್ವದ ಮೂಲಕವೇ ಎಲ್ಲರ ಹೃದಯ ಗೆದ್ದಿದ್ದ ಮಿಲ್ಖಾ ಸಿಂಗ್ ತನ್ನ ಬಯೋಪಿಕ್ ಮಾಡಲು ಪಡೆದ ಹಣ ನಿಜಕ್ಕೂ ಅಚ್ಚರಿ ಮೂಡಿಸಿತ್ತು. ಮಿಲ್ಖಾ ಸಿಂಗ್ ಕೇವಲ 1 ರೂ. ಪಡೆಯುವ ಮೂಲಕ ತನ್ನ ಜೀವನವನ್ನು ತೆರೆಮೇಲೆ ತರಲು ಅನುಮತಿ ನೀಡಿದ್ದರು.

  ಈ 1 ರೂಪಾಯಿಯ ವಿಶೇಷತೆ ಏನು?

  ಈ 1 ರೂಪಾಯಿಯ ವಿಶೇಷತೆ ಏನು?

  ಮಿಲ್ಖಾ ಸಿಂಗ್ ಪಡೆದ 1 ರೂಪಾಯಿನಲ್ಲಿ ವಿಶೇಷತೆ ಅಡಗಿತ್ತು. 'ಫ್ಲೈಯಿಂಗ್ ಸಿಖ್' ಪಡೆದ 1 ರೂಪಾಯಿಯನ್ನು 1958ರಲ್ಲಿ ಮುದ್ರಿಸಲಾಗಿತ್ತು. 1958ರ ವಿಶೇಷತೆ ಎಂದರೆ ಮಿಲ್ಖಾ ಸಿಂಗ್ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕಾಗಿ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದ ಸುವರ್ಣ ವರ್ಷವದು. ಆ ವರಷದ 1 ರೂ. ನೋಟನ್ನು ಮಿಲ್ಖಾ ಸಿಂಗ್ ಅವರಿಗೆ ಚಿತ್ರತಂಡ ನೀಡಿತ್ತು.

  ನಿರ್ದೇಶಕರು ಹೇಳಿದ್ದೇನು?

  ನಿರ್ದೇಶಕರು ಹೇಳಿದ್ದೇನು?

  ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಮೆಹ್ರಾ, "ನಮ್ಮ ಚಿತ್ರದಲ್ಲಿ ಅವರ ಕಥೆ ಹೇಳಲು ಅವಕಾಶ ಮಾಡಿಕೊಟ್ಟ ಮಿಲ್ಖಾಜಿ ಅವರಿಗೆ ಅಮೂಲ್ಯವಾದ ಮೆಚ್ಚುಗೆಯ ಸಂಕೇತ ನೀಡಲು ಬಯಸಿದ್ದೇವೆ. ವಿಶೇಷವಾದುದ್ದನ್ನು ಕೊಡಲು ಬಹಳ ಸಮಯ ಹುಡುಕಿದ್ದೆವು. ಅಂತಿಮವಾಗಿ ಸಿಕ್ಕಿದೆ. 1958ರಲ್ಲಿ ಮುದ್ರಿತವಾದ ವಿಶೇಷ 1 ರೂ. ನೋಟನ್ನು ನೀಡಿದ್ದೇವೆ" ಎಂದು ಹೇಳಿದ್ದರು.

  ಯುವಕರಿಗೆ ಈ ಸಿನಿಮಾ ಪ್ರೇರಣೆಯಾಗಬೇಕು

  ಯುವಕರಿಗೆ ಈ ಸಿನಿಮಾ ಪ್ರೇರಣೆಯಾಗಬೇಕು

  ಮಿಲ್ಖಾ ಸಿಂಗ್ ಅವರಿಗೆ ಹಣ ಮುಖ್ಯವಾಗಿರಲ್ಲ. ಮೆಹ್ರಾ ಸಿನಿಮಾ ಮಾಡುವುದನ್ನು ಮಾತ್ರ ಬಯಸಿದ್ದರು. "ಈ ಸಿನಿಮಾ ಹೇಗೆ ತಯಾರಾಗಬೇಕು ಎಂದರೆ ಹೆಚ್ಚು ಯುವಕರು ಅಥ್ಲೀಟ್ ನಲ್ಲಿ ಪದಕಗಳನ್ನು ಗೆಲ್ಲಲು ಪ್ರೇರೇಪಿಸುವ ಹಾಗೆ ಇರಬೇಕು" ಎಂದು ಮಿಲ್ಖಾ ಸಿಂಗ್ ನಿರ್ಮಾಪಕರ ಬಳಿ ಹೇಳಿದ್ದರಂತೆ.

  ಅತೀ ಹೆಚ್ಚು ಕಲೆಕ್ಷನ್ ಮಾಡಿದ್ದ ಬಯೋಪಿಕ್

  ಅತೀ ಹೆಚ್ಚು ಕಲೆಕ್ಷನ್ ಮಾಡಿದ್ದ ಬಯೋಪಿಕ್

  ಸಿನಿಮಾದ ಲಾಭದ ಶೇರನ್ನು ಮಿಲ್ಖಾ ಸಿಂಗ್ 2003ರಲ್ಲಿ ಬಡ ಮತ್ತು ನಿರ್ಗತಿಕ ಕ್ರೀಡಾಪಟುಗಳಿಗಾಗಿ ಸ್ಥಾಪಿಸಿದ್ದ ಚಾರಿಟೆಬಲ್ ಟ್ರಸ್ಟ್ ಗೆ ನೀಡಬೇಕೆಂದು ಸಿಂಗ್ ಹೇಳಿದ್ದರು ಎನ್ನುವ ಮಾತು ಕೂಡ ಕೇಳಿಬಂದಿತ್ತು. 2013ರಲ್ಲಿ ಬಿಡುಗಡೆಯಾದ ಭಾಗ್ ಮಿಲ್ಖಾ ಭಾಗ್ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಅಲ್ಲದೇ ಕೋಟಿ ಕೋಟಿ ಹಣ ಕಲೆಕ್ಷನ್ ಮಾಡಿತ್ತು. ಸುಮಾರು 200 ಕೋಟಿಗೂ ಅಧಿಕ ಹಣ ಕಲೆಕ್ಷನ್ ಮಾಡಿದೆ.

  English summary
  Milka Singh charged only Rs 1 for his biopic Bhaag milkha Bhaag. What's special about Rs 1 note.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X