For Quick Alerts
  ALLOW NOTIFICATIONS  
  For Daily Alerts

  ಕಾಡುಗಳ್ಳ ವೀರಪ್ಪನ್ ಮೀಸೆ ತಡವಿ ಬಂದಿದ್ದರು ಡಾ. ರಾಜ್ ಕುಮಾರ್

  |

  ವರನಟ ಡಾ. ರಾಜ್ ಕುಮಾರ್ ಅವರ ಕುರಿತು ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಹೇಳಿದ ಮಾತುಗಳ ಆಡಿಯೋವನ್ನು ಇತ್ತೀಚೆಗೆ ನಟ ರಾಘವೇಂದ್ರ ರಾಜ್ ಕುಮಾರ್ ಹಂಚಿಕೊಂಡಿದ್ದರು. ಯೋಗರಾಜ್ ಭಟ್ ಅವರ ಮಾತುಗಳಲ್ಲಿನ ಕೆಲವು ಆಯ್ದ ಭಾಗಗಳು ಇಲ್ಲಿವೆ.

  ಅಣ್ಣಾವ್ರ ಹುಟ್ಟುಹಬ್ಬದಂದು ಸಮಾಧಿಗೆ ಗೌರವ ಸಲ್ಲಿಸಿದ ಶಿವಣ್ಣ | RajKumar | Shivaraj kumar

  ಡಾ. ರಾಜ್ ಕುಮಾರ್ ಅವರದು ತುಂಬಾ ದೊಡ್ಡ ವ್ಯಕ್ತಿತ್ವ, ತುಂಬಾ ದೊಡ್ಡ ಸ್ಫೂರ್ತಿ. ಅವರಿಗೊಂದು ದೀರ್ಘದಂಡ ನಮಸ್ಕಾರ. ಸರಿಸುಮಾರು ಐನೂರು ವರ್ಷಗಳ ಹಿಂದೆ, ಸುಮಾರು ಸಾವಿರಾರು ವರ್ಷದ ಮುಂದೆ ಯಾರೂ ನೋಡಲಾಗದ, ಹೋಲಿಸಲಾಗದ ಪರಮಾದ್ಭುತ ಕನ್ನಡ ಚೈತನ್ಯ ರಾಜ್ ಕುಮಾರ್. ಮೇರು ವ್ಯಕ್ತಿತ್ವ, ಮೇರು ಪ್ರತಿಭೆ... ಮಾತಿಗಾಗಿ ಮೇರು ಪದ ಬಳಿಸಿ ಹೇಳಿದರೂ, ಸಾಕಷ್ಟು ವಿಚಾರ ಹೇಳದೆ ಹಾಗೆಯೇ ಇರುವಷ್ಟು ವಿಸ್ತಾರ ಬದುಕು ಅವರದು.

  ಮೇರು ಪ್ರತಿಭೆಯ ಪ್ರಭೆ ಮೀರಿದರು

  ಮೇರು ಪ್ರತಿಭೆಯ ಪ್ರಭೆ ಮೀರಿದರು

  ಒಬ್ಬ ಸಾಮಾನ್ಯ ಮುತ್ತುರಾಜ್ ಅನ್ನೋ ವ್ಯಕ್ತಿ, ಡಾ. ರಾಜ್ ಕುಮಾರ್ ಆಗಿ ಒಂದು ರಾಜ್ಯವನ್ನು ಅವರ ಹೆಸರಿನ ಜತೆಗೆ ಗುರುತಿಸಿ ಪ್ರತಿನಿಧಿಸುವವಷ್ಟು ಮಟ್ಟಕ್ಕೆ ಬೆಳೆಯುವುದು ಸುಲಭದ ಮಾತಲ್ಲ. ಹಾಗೆಯೇ ಮುತ್ತುರಾಜ್ ಎಂಬ ಸಾಮಾನ್ಯ ವ್ಯಕ್ತಿ ಡಾ. ರಾಜ್ ಎಂಬ ಮೇರು ಪ್ರತಿಭೆಯ ಪ್ರಭೆಯನ್ನು ತಡೆದುಕೊಂಡು ತೀರಾ ಜನಸಾಮಾನ್ಯನಾಗಿಯೇ ಅವರ ಅಂತರಂಗದಲ್ಲಿ ಇದ್ದ ಎನ್ನಬಹುದು. ಅದಕ್ಕಾಗಿಯೇ 8೦ರ ಆಸುಪಾಸಿನ ವಯಸ್ಸಿನಲ್ಲಿಯೂ ಪುಟ್ಟ ಮಗು ಮಾತನಾಡಿದಂತೆ ಅನಿಸುತ್ತತ್ತು.

  ನನ್ನದು ಬಿಡುಗಡೆ ಆಯ್ತು, ನಿನ್ನದು ಯಾವಾಗ?

  ನನ್ನದು ಬಿಡುಗಡೆ ಆಯ್ತು, ನಿನ್ನದು ಯಾವಾಗ?

  ಅವರ ಬಗ್ಗೆ ಒಂದು ಕಥೆ ಸದಾ ನೆನಪಾಗುತ್ತದೆ. ರಾಜ್ ಕುಮಾರ್ ಅವರನ್ನು ವೀರಪ್ಪನ್ ಕಾಡಿಗೆ ಕರೆದುಕೊಂಡು ಹೋಗಿ ವಾಪಸ್ ಕಳಿಸುವಾಗ ನಡೆದಿದ್ದಂತೆ ಇದು. ಅವರ ಬಿಡುಗಡೆ ಕೊನೆಯ ಗಳಿಗೆಯಲ್ಲಿ ಅವರು 'ವೀರಪ್ಪ ನಾನು ಹೊರಟೆ, ನನ್ನದು ಬಿಡುಗಡೆಯಾಯ್ತು. ಆದರೆ ನಿನ್ನದು ಯಾವಾಗಲೋ' ಎಂದು ಕೇಳಿದ್ದರಂತೆ. ವೀರಪ್ಪ ನಗುತ್ತಾ ತಮಿಳಿನಲ್ಲಿ ಏನೋ ಅಂದನಂತೆ.

  ವೀರಪ್ಪನ್ ಮೀಸೆ ತಡವಿದ್ದರು

  ವೀರಪ್ಪನ್ ಮೀಸೆ ತಡವಿದ್ದರು

  ರಾಜ್ ಕುಮಾರ್ ಕಾರು ಹತ್ತಲು ಹೊರಟರು. ಕಾರು ಹತ್ತುವ ಮೊದಲು 'ವೀರಪ್ಪ ನಿನ್ನ ಮೀಸೆ ಭಾರಿ ಮಜಾ ಇದೆ ಕಣೋ. ಒಮ್ಮೆಮುಟ್ಟಲಾ' ಎಂದು ಕೇಳಿದರಂತೆ. ಅವನು ತುಂಬಾ ಸಂತೋಷದಿಂದ ಹಾರಾಡಿ ಮುಟ್ಟಿಸಿಕೊಂಡನಂತೆ. ಇವರು ಮೀಸೆ ತಡವಿ ಕಾರು ಹತ್ತಿ ಬಂದರಂತೆ.

  ಸಮಾಜ ಹೇಳೋದು ವೀರಪ್ಪನ್ ಘಾತಕ ಎಂದು. ಆದರೆ ರಾಜ್‌ಕುಮಾರ್ ಕಣ್ಣಿಗೆ ಆತ ಘಾತಕ ಅಲ್ಲ ಆ ಕ್ಷಣಕ್ಕೆ. ಆ ಕ್ಷಣಕ್ಕೆ ಅವರಿಬ್ಬರೂ ಪುಟ್ಟ ಮಕ್ಕಳಂತೆ ಮಾತಾಡಿದ್ದಾರೆ. ಅತ್ಯಂತ ಉದಾತ್ತ ಮನೋಭಾವ ಇದ್ದಾಗಲಷ್ಟೇ ಒಬ್ಬ ವರನಟ ಒಬ್ಬ ಕಳ್ಳನನ್ನು ಹಾಗೆ ಮಾತಾಡಿಸಲು ಸಾಧ್ಯವೇನೋ. ಆ ಮನೋಭಾವದಿಂದಲೇ ಎಂಥಹವರಿಗೂ ತೀರಾ ಬೇಕಾಗುತ್ತಿದ್ದರೋ ಏನೋ.

  ಭಾಷೆಯ ಬಗ್ಗೆ ಅಪಾರ ಜ್ಞಾನ

  ಭಾಷೆಯ ಬಗ್ಗೆ ಅಪಾರ ಜ್ಞಾನ

  ರಾಜ್ ಕುಮಾರ್ ದೊಡ್ಡ ಭಾಷಾವಿಜ್ಞಾನಿಯಾಗಿದ್ದರು ಎಂದು ನನಗನ್ನಿಸುತ್ತದೆ. ಹಾಗೆ ಅನಿಸಿದರೆ ತಪ್ಪಿಲ್ಲ. ಕವಿರತ್ನ ಕಾಳಿದಾಸ ಚಿತ್ರದಲ್ಲಿ ಅವರ ನಾಲಿಗೆ ಮೇಲೆ ಕಾಳಿ ಮಾತೆ ತ್ರಿಶೂಲದಲ್ಲಿ ಬರೆದ ದೃಶ್ಯವೊಂದಿದೆ. ಅದಕ್ಕೂ ಮುನ್ನ ಅವರು ನಾಟಕ ರಂಗದಲ್ಲಿದ್ದಾಗ ಕೂಡ ಅಪ್ಪಿ ತಪ್ಪಿ ಅರೆಪ್ರಜ್ಞಾವಸ್ಥೆಯಲ್ಲಿಯೂ ಕನ್ನಡವನ್ನು ತಪ್ಪಾಗಿ ಮಾತಾಡಿದವರಲ್ಲ. ಹಾಗೆಂದು ಹೇಳ್ತಾರೆ. ಮಹಾಪ್ರಾಣವನ್ನು ಅಸ್ಖಲಿತವಾಗಿ ಹೇಳುವ ಪಾಂಡಿತ್ಯ ಆ ನಾಲಿಗೆಗೆ ಇತ್ತು. ಅಲ್ಪಪ್ರಾಣಗಳಲ್ಲಿ ಪರಮ ಅಚ್ಚುಕಟ್ಟುತನವಿತ್ತು.

  ಕನ್ನಡ ಭಾಷೆಗೆ ಉದಾಹರಣೆ ಅವರು

  ಕನ್ನಡ ಭಾಷೆಗೆ ಉದಾಹರಣೆ ಅವರು

  ಎಲ್ಲ ಕಾರಣಗಳಿಗೆ ಕನ್ನಡ ಮಾತಾಡಲು ಅಪ್ರತಿಮ ಉದಾಹರಣೆಯಂತೆ ಅವರ ಧ್ವನಿ ಬಂದು ಕೂರುತ್ತಿತ್ತು. ಹಿಂದೆ ಒಮ್ಮೆ ಅವರು ಉಚ್ಚಾರಣೆ ಎಂದು ಒಂದು ಸಂದರ್ಭದಲ್ಲಿ ಹೇಳಿದ್ದರು. ಅದು 'ಉಚ್ಛಾರಣೆ' ಎಂಬುದು ನನ್ನ ತಲೆಯಲ್ಲಿ ಅದುವರೆಗೂ ಕುಳಿತಿತ್ತು. ಆದರೆ ಅದು ಅಲ್ಪಪ್ರಾಣವಾಗಿತ್ತು. ಅಷ್ಟು ನೀಟಾಗಿ ಹೇಗೆ ಫಾಲೋಅಪ್ ಮಾಡಿ ತಿಳಿದುಕೊಳ್ಳುತ್ತಿದ್ದರೋ ಎಂದು ಆಶ್ಚರ್ಯವಾಗುತ್ತದೆ.

  ಸಾಧಕರನ್ನೂ ಮೀರಿದ ಭಾವಪೂರ್ಣತೆ

  ಸಾಧಕರನ್ನೂ ಮೀರಿದ ಭಾವಪೂರ್ಣತೆ

  ಹಾಗೆಯೇ ಅವರ ಗಾಯನ ಸಿಕ್ಕಾಪಟ್ಟೆ ಉನ್ನತ ಮಟ್ಟದ್ದು. 20-30 ವರ್ಷ ಕಟು ಸಾಧನೆ ಮಾಡಿದ ಸಾಧಕ ಕೂಡ ಅಂತಹ ಕರಾರುವಕ್ ಭಾವಪೂರ್ಣತೆ ಮೆರೆಯಲು ಆಗುವುದಿಲ್ಲ. ಹಾಗಿತ್ತು ಆ ಕಂಠ ಮಾಧುರ್ಯ. ತೀವ್ರ ಪಳಗಿದ ಶಾರೀರ ಎನ್ನುತ್ತಾರೆ. 'ನಾದಮಯ' ಹಾಡಿನಲ್ಲಿ 'ನಾದ' ಎಂಬ ಪದ ಕೇವಲ ಪದವಾಗಿ ಕೇಳಿಸೊಲ್ಲ. ನೈಜ ನಾದ ನಮ್ಮನ್ನು ಆ ಕ್ಷಣ ಆವರಿಸಿಕೊಳ್ಳುತ್ತದೆ. ಸಂಗೀತದ ಸ್ವರದ ತಲೆಯ ಮೇಲೆ ನಿಂತು ಭದ್ರವಾಗಿ ಕಾಲೂರಿ ಅಕ್ಷರಗಳನ್ನು ಆಚೆ ಬಿಡುತ್ತಿದ್ದರು.

  ಮೊದಲ ಬಾರಿ ರಾಜ್ ಕುಮಾರ್ ನೋಡಿದ್ದು

  ಮೊದಲ ಬಾರಿ ರಾಜ್ ಕುಮಾರ್ ನೋಡಿದ್ದು

  ನಾನು ರಾಜ್‌ ಕುಮಾರ್ ಅವರನ್ನು ಮೊದಲ ಬಾರಿ ನೋಡಿದ್ದು ಚಾಮುಂಡೇಶ್ವರಿ ರೆಕಾರ್ಡಿಂಗ್ ಸ್ಟುಡಿಯೋಸ್‌ನಲ್ಲಿ. ಸ್ಟುಡಿಯೋದಿಂದ ಮೆಟ್ಟಿಲಿಂದ ಗೇಟ್ ವರೆಗೂ ಜನರು ರಾಜ್ ಕುಮಾರ್ ಅವರನ್ನು ನೋಡಲು ಸಾಲು ಸಾಲು ನಿಂತಿದ್ದರು. ನಾನು ಎದ್ದೋ ಬಿದ್ದೋ ಹಂಸಲೇಖ ಕೈಕಾಲು ಹಿಡಿದು ಒಳಗೆ ಹೋಗಿದ್ದೆ. ಆಗ ನಾನಿನ್ನೂ ಹೊಸಬ. ಹಂಸಲೇಖ ಅವರ ಹಾಡನ್ನು ಹಾಡಲು ಬಂದಿದ್ದರು. ಸೆಮಿ ಕ್ಲಾಸಿಕಲ್ ಟಚ್ ಇದ್ದ ಹಾಡು. ಬಹಳ ಚೆನ್ನಾಗಿ ಹಂಸಲೇಖ ಬರೆದಿದ್ದರು. ಆದರೆ ಏನೋ ಸಮಸ್ಯೆಯಾಗಿದ್ದರಿಂದ ಎಂಜಿನಿಯರ್ಸ್ ಮಾತಾಡಿ ಇಂದು ಹಾಡಿಸೋದು ಬೇಡ, ರಿಪೇರಿ ಇದೆ ಎನ್ನುತ್ತಿದ್ದರು.

  ದೀಪ ನೋಡುತ್ತಾ ನಿಂತರು

  ದೀಪ ನೋಡುತ್ತಾ ನಿಂತರು

  ಸ್ಟುಡಿಯೋದ ಒಳಗೆ ಇದ್ದ ರಾಜ್‌ಕುಮಾರ್ ಇಯರ್ ಫೋನ್ ತೆಗೆದು ಇರಿಸಿದರು. ಸ್ಟುಡಿಯೋದ ಮುಂದೆ ಕಾಳಿ ಮಾತೆಯ ವಿಗ್ರಹ ಇದೆ. ಆ ವಿಗ್ರಹದ ಮುಂದೆ ಕೆಲಸಗಾರ ದೀಪ ಹಚ್ಚುತ್ತಿದ್ದ. ಅವರಿಗೆ ಅದು ಕಾಣಿಸಿತೋ ಏನೋ. ಅಲ್ಲಿಗೆ ಬಂದು ಕಾಳಿ ಮಾತೆ ವಿಗ್ರಹದ ಎದುರು ದೀಪ ನೋಡುತ್ತಾ ನಿಂತರು.

  ನಾನು ಅವರನ್ನೇ ನೋಡುತ್ತಾ ಇದ್ದೆ. ಸುಮಾರು 15 ನಿಮಿಷ ಹಾಗೆಯೇ ಬಂದು ನಿಂತಿದ್ದರು. ಹಂಸಲೇಖ ಸರ್ ಬಂದು ಸಮಸ್ಯೆಯ ಬಗ್ಗೆ ಹೇಳಿ ಇಂದು ಹಾಡಿಸಲು ಆಗುವುದಿಲ್ಲ ಎಂದರು. ಅಲ್ಲಿಂದ ಹೊರಡಿ ಎಂದು ನಮ್ಮೆಲ್ಲರನ್ನೂ ಕಳಿಸಿದರು. ನಾನು ಕೆಳಗೆ ಹೋದವನು ಅವರು ಬರುತ್ತಾರೆ ಎಂದು ಕಾದೆ. ಆದರೆ ಹೊರಗೆ ಬರಲೇ ಇಲ್ಲ. ಸುಮಾರು ಅರ್ಧ ಗಂಟೆ ಅವರು ಅಲ್ಲಿಯೇ ನಿಂತಿದ್ದರಂತೆ.

  English summary
  Director Yogaraj Bhat has shared his words about Dr Rajkumar. Here is selected parts of his audio speech.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X