Don't Miss!
- News
Assembly election 2023: ಇನ್ನೊಂದು ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ: ಎಚ್.ಡಿ.ಕೆ
- Automobiles
ಹೋಂಡಾ ಆಕ್ಟೀವಾ 6Gಗೆ ಸೆಡ್ಡು ಹೊಡೆಯಲು ಮಾರುಕಟ್ಟೆಗಿಳಿದ ಹೀರೋ Xoom... ಏನಿದರ ವಿಶೇಷತೆ!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Technology
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರವಿಚಂದ್ರನ್ ವಿರುದ್ಧ ಭುಗಿಲೆದ್ದಿದ್ದ ಪ್ರತಿಭಟನೆ ತಣ್ಣಗಾಗಿಸಿದ ಅಣ್ಣಾವ್ರು
ಚಿತ್ರರಂಗಕ್ಕೆ ಹಿರಿಯರು, ನಾಯಕರು ಎನ್ನುವವರು ಇರಬೇಕು. ಯಾವುದೇ ಸಮಸ್ಯೆ, ಸಂಘರ್ಷಗಳು, ವಿವಾದಗಳು ನಡೆದಾಗ ಹಿರಿಯರ ಹಾಗೂ ನಾಯಕರ ಮಾರ್ಗದರ್ಶನ ಮತ್ತು ನಿರ್ಧಾರಗಳು ಮಹತ್ವದಾಗಿರುತ್ತದೆ. ಈಗ, ಕನ್ನಡ ಇಂಡಸ್ಟ್ರಿಗೆ ಅಂತಹದೊಂದು ಕೊರತೆ ಇದೆ ಎನ್ನುವುದು ತಿಳಿದಿರುವ ವಿಚಾರ. ನಾಯಕ ಅಥವಾ ನಾಯಕತ್ವಕ್ಕೆ ಸಂಬಂಧಪಟ್ಟಂತೆ ಘಟನೆಯೊಂದನ್ನು ಸ್ಮರಿಸುವುದಾದರೆ ರವಿಚಂದ್ರನ್ ವಿಚಾರದಲ್ಲಿ ನಡೆದ ಆ ವಿವಾದದ ಬಗ್ಗೆ ತಿಳಿಯಲೇಬೇಕು.
Recommended Video
ಅದು 1989, ಕ್ರೇಜಿಸ್ಟಾರ್ ರವಿಚಂದ್ರನ್ ನೋಡು ನೋಡುತ್ತಲೇ ಸ್ಟಾರ್ ಆಗಿ ಬೆಳೆದರು. ಕನ್ನಡ ಚಿತ್ರರಂಗದ ಅಂದಿನ ನಿರ್ಮಾಪಕ ವೀರಾಸ್ವಾಮಿ ಅವರ ಪುತ್ರ ರವಿಚಂದ್ರನ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಕೊಟ್ಟು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಪ್ರೇಮಲೋಕ, ರಣಧೀರ, ಅಂಜದಗಂಡು, ಯುದ್ಧಕಾಂಡ, ಯುಗಪುರುಷ ಅಂತಹ ಸಿನಿಮಾಗಳು ರಿಲೀಸ್ ಆಗಿ ಯಶಸ್ಸು ಕಂಡಿದ್ದವು. ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿದ್ದರು.
'ಕಿಂದರಿ ಜೋಗಿ', 'ಶಾಂತಿ ಕ್ರಾಂತಿ' ಸಿನಿಮಾಗಳು ತಯಾರಾಗುತ್ತಿದ್ದ ಸಮಯ ಅದು. ಈ ಸಂದರ್ಭದಲ್ಲಿ ನಟ ರವಿಚಂದ್ರನ್ ವಿರುದ್ಧ ಕರ್ನಾಟಕದಾದ್ಯಂತ ದೊಡ್ಡ ಪ್ರತಿಭಟನೆ ನಡೆಯುತ್ತದೆ. ಕನ್ನಡ ಭಾಷೆಗೆ ರವಿಚಂದ್ರನ್ ಅವಮಾನ ಮಾಡಿದ್ರು ಎಂದು ರಾಜ್ಯ ಹಲವು ಕಡೆ ಕನ್ನಡಪರ ಸಂಘಟನೆಗಳು, ಜನರು ಪ್ರತಿಭಟನೆ ಮಾಡ್ತಾರೆ. ರವಿಚಂದ್ರನ್ ಮನೆ ಬಳಿಯೂ ಜನ ಜಮಾಯಿಸಿ ಆಕ್ರೋಶ ಹೊರಹಾಕ್ತಾರೆ. ಆ ಸಂದಿಗ್ಧ ಪರಸ್ಥಿತಿಯಲ್ಲಿ ಅಣ್ಣಾವ್ರು ಬರೆದ ಬಹಿರಂಗ ಪತ್ರ ಇಡೀ ಪ್ರತಿಭಟನೆಯನ್ನು ಕ್ಷಣದಲ್ಲಿ ತಣ್ಣಗಾಗಿಸಿತು. ಏನಿದು ಘಟನೆ ಮುಂದೆ ಓದಿ....

ಕನ್ನಡದ ಬಗ್ಗೆ ಉಪೇಕ್ಷೆ?
''ಬಹುಬೇಗ ಸ್ಟಾರ್ ಆದ ರವಿಚಂದ್ರನ್ ಕನ್ನಡದ ಜೊತೆ ತೆಲುಗು, ತಮಿಳಿನಲ್ಲಿ ಸಿನಿಮಾ ಮಾಡಲು ಆರಂಭಿಸಿದರು. ಬೆಳಗಾವಿಗೆ ಕಾರ್ಯಕ್ರಮಕ್ಕೆಂದು ಹೋದಂತ ಸಂದರ್ಭದಲ್ಲಿ ಮಾಧ್ಯಮದವರು ರವಿ ಸರ್ ಬಳಿ ಚರ್ಚಿಸಿದರು. ಬೇರೆ ಭಾಷೆಯಲ್ಲಿ ಸಿನಿಮಾ ಮಾಡುತ್ತಿರುವ ಬಗ್ಗೆ ಮಾತನಾಡಿದ ರವಿಚಂದ್ರನ್ 'ಕನ್ನಡ ಚಿತ್ರವನ್ನು ಬೇರೆ ಕಡೆಯೂ ತೆಗೆದುಕೊಂಡು ಹೋಗುವ ಕೆಲಸ ಇದಾಗಿದೆ' ಎನ್ನುವ ರೀತಿ ಹೇಳಿದ್ದಾರೆ. ಆದರೆ ಮರುದಿನ ರವಿಚಂದ್ರನ್ ಕನ್ನಡ ಭಾಷೆ ಬಗ್ಗೆ ಅವಮಾನ ಮಾಡಿದ್ರು ಎಂದು ಅಂದಿನ ಕೆಲವು ಪತ್ರಿಕೆಗಳಲ್ಲಿ ಸುದ್ದಿ ಬಂತು. ಇದು ರವಿಚಂದ್ರನ್ ವಿರುದ್ಧವಾಗಿ ಪ್ರತಿಭಟನೆಗೆ ಕಾರಣ ಆಯಿತು'' ಎಂದು ಕ್ರೇಜಿಸ್ಟಾರ್ ಆಪ್ತರೊಬ್ಬರು ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದರು.

ಅಣ್ಣಾವ್ರ ಮಧ್ಯ ಪ್ರವೇಶ
ವೀರಾಸ್ವಾಮಿ ಮತ್ತು ರವಿಚಂದ್ರನ್ ವಿರುದ್ಧ ತೀವ್ರ ಪ್ರತಿಭಟನೆ ಉಂಟಾದ ಹಿನ್ನೆಲೆ ಡಾ ರಾಜ್ ಕುಮಾರ್ ಅವರು ಈ ಬೆಳವಣಿಗೆಯಲ್ಲಿ ಮಧ್ಯಪ್ರವೇಶಿಸಿ ಪ್ರತಿಭಟನೆಕಾರರನ್ನು ಸಮಾಧಾನ ಪಡಿಸುವ ಕೆಲಸ ಆಯಿತು. ರವಿಚಂದ್ರನ್ ಪರವಾಗಿ ರಾಜ್ ಕುಮಾರ್ ಅವರ ಬಹಿರಂಗ ಪತ್ರ ಬರೆದು ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಆ ಪತ್ರ ಈಗ ವೈರಲ್ ಆಗಿದೆ.

ಏನಿದೆ ಅಣ್ಣಾವ್ರು ಬರೆದ ಆ ಪತ್ರದಲ್ಲಿ?
ಕನ್ನಡ ಚಿತ್ರರಂಗದಲ್ಲಿ ಶ್ರೀ ಎನ್ ವೀರಾಸ್ವಾಮಿಯವರು ಹಿರಿಯ ವಿತರಕರು, ನಿರ್ಮಾಪಕರು. ಕನ್ನಡ ನೆಲದಲ್ಲೇ ಬೆಳೆದು ಸ್ಥಾನಮಾನ ಗಳಿಸಿದವರು. ಇದಕ್ಕೆ ಕನ್ನಡಿಗರ ಅಭಿಮಾನ ಪ್ರೋತ್ಸಾಹಗಳೇ ಕಾರಣ. ಇವರ ಮಗನಾದ ಉದಯೋನ್ಮುಖ ನಟ ರವಿಚಂದ್ರನ್ ಕನ್ನಡದ ಬಗ್ಗೆ ಉಪೇಕ್ಷೆಯಿಂದ ಮಾತನಾಡಿದನೆಂಬ ವರದಿಯ ಪರಿಣಾಮವಾಗಿ ರಾಜ್ಯದ ನಾನಾ ಕಡೆ ಪ್ರತಿಭಟನೆಗಳಾಗುತ್ತಿವೆ. ನಮ್ಮ ನಡುವೆಯೇ ಬೆಳೆದ ಈ ತರುಣ ಕನ್ನಡಕ್ಕೆ ಅವಹೇಳನವಾಗುವಂತಥ ಮಾತನಾಡಿರುವುದನೆಂದರೆ ನಂಬುವುದು ಕಷ್ಟ. ಆದರೆ ಯಾವುದೋ ಉದ್ವೇಗದ ಸಂದರ್ಭದಲ್ಲಿ ಹಾಗೆ ಹೇಳಿರುವುದು ನಿಜವೇ ಆಗಿದ್ದಲ್ಲಿ ಉದಾರಹೃದಯಿಗಳೂ, ಕ್ಷಮಾಶೀಲರೂ, ಸುಸಂಸ್ಕೃತರೂ ಆದ ಕನ್ನಡಿಗರು ಈ ಯುವಕನನ್ನು ಕ್ಷಮಿಸಿ, ಈಗಿನ ಹಗರಣವನ್ನು ಮುಕ್ತಾಯಗೊಳಿಸುವುದು ಕನ್ನಡ ಚಿತ್ರರಂಗದ ಹಿತದೃಷ್ಟಿಯಿಂದ ಒಳ್ಳೆಯದು. ಕನ್ನಡಿಗರು ಹೀಗೆ ಮಾಡುವರೆಂದುನಂಬಿ ರವಿಚಂದ್ರನ್ ಮತ್ತು ವೀರಾಸ್ವಾವಿಯವರಿಗೆ ಶುಭವಾಗಲಿ ಎಂದು ಆಶಿಸುವ - ರಾಜಕುಮಾರ

ಇಂದಿನ ಚಿತ್ರರಂಗದ ಪರಿಸ್ಥಿತಿ ಏನು?
ಡಾ ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಅಂತಹ ಮೇರು ಕಲಾವಿದರು ಹೋದ ಮೇಲೆ ಚಿತ್ರರಂಗದಲ್ಲಿ ನಾಯಕತ್ವದ ಕೊರತೆ ಉಂಟಾಗಿದೆ. ರವಿಚಂದ್ರನ್, ಶಿವರಾಜ್ ಕುಮಾರ್, ಜಗ್ಗೇಶ್ ಅಂತಹ ಹಿರಿಯ ಕಲಾವಿದರು ಇದ್ದರೂ, ಇಂದಿನ ಬೆಳವಣಿಗೆಯಲ್ಲಿ ಇಂಡಸ್ಟ್ರಿಯನ್ನು ಒಗ್ಗೂಡಿಸಿಕೊಂಡು ಹೋಗುವುದು ಸವಾಲಾಗಿದೆ. ಅಣ್ಣಾವ್ರ ಸಮಯದಲ್ಲಿ ಎಷ್ಟೋ ದೊಡ್ಡ ವಿವಾದ-ಗಲಾಟೆಗಳು ಆದರೂ ದೊಡ್ಮನೆಯಲ್ಲಿ ಕೂತು ಬಗೆಹರಿಯತ್ತಿತ್ತು. ಆದ್ರೀಗ, ಬೀದಿ ಜಗಳವಾಗಿ ಕಲಾವಿದರು ಕಚ್ಚಾಡುವ ಪರಿಸ್ಥಿತಿ ಬಂದಿದೆ ಎನ್ನುವುದು ವಿಪರ್ಯಾಸ